Home Posts tagged #mangaluru (Page 21)

ಮಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಬಗ್ಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹುಕ್ಕಾ ಬಾರ್‍ಗಳಿಂದ ತೊಂದರೆ ಆಗುತ್ತಿದೆ. ಸಾರ್ವಜನಿಕರಿಗೆ ಆನಾರೋಗ್ಯ ಕಾಡುತ್ತಿದೆ. ಕಾಯ್ದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧದ ಬಗ್ಗೆ ಚಿಂತನೆ ನಡೆಸಲಾಗಿದೆ.

ಮಂಗಳಾ ಸಭಾಂಗಣದಲ್ಲಿಯೇ ವಿಶ್ವವಿದ್ಯಾಲಯದ ಗಣೇಶೋತ್ಸವ: ಹಿಂದೂ ಸಮಾಜದ ಹೋರಾಟಕ್ಕೆ ಸಿಕ್ಕ ಜಯ: ಶಾಸಕ ಕಾಮತ್

ಮಂಗಳೂರು ವಿಶ್ವವಿದ್ಯಾಲಯದ ಗಣೇಶೋತ್ಸವ ವಿಚಾರದಲ್ಲಿ ವಿನಾಕಾರಣ ಉಂಟಾಗಿದ್ದ ಗೊಂದಲಕ್ಕೆ ಸಂಬಂಧಿಸಿ “ಈ ಹಿಂದಿನಂತೆ ಗಣೇಶೋತ್ಸವ ಮುಂದುವರಿಸಿಕೊಂಡು ಹೋಗುವಂತೆ ಬಂದಿರುವ ಆದೇಶವು ಇಷ್ಟು ದಿನ ವಿವಾದ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ಧವರಿಗೆ ಸ್ಪಷ್ಟ ಸಂದೇಶವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು. ಯಾವುದೇ ಗೊಂದಲಕ್ಕೂ ಆಸ್ಪದ ನೀಡದೇ ಈ ಹಿಂದಿನಂತೆ ಗಣೇಶೋತ್ಸವ ನಡೆಸುವ ಬಗ್ಗೆ ಬಂದಿರುವ ಆದೇಶವು ಇಡೀ ಹಿಂದೂ ಸಮಾಜದ ಹೋರಾಟಕ್ಕೆ

ಮಂಗಳೂರು: ಸೆ.27ರಿಂದ 30ರ ವರೆಗೆ ದಿ. ಲೋಕನಾಥ್ ಬೋಳಾರ್ ಸ್ಮರಣಾರ್ಥ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ, ಆಮಂತ್ರಣ ಪತ್ರಿಕೆ ಬಿಡುಗಡೆ

ಕರ್ನಾಟಕ ರಾಜ್ಯ ಮತ್ತು ದ.ಕ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‍ನ ಸಹಯೋಗದಲ್ಲಿ ದಿವಂಗತ ಲೋಕನಾಥ್ ಬೋಳಾರ್ ಸ್ಮರಣಾರ್ಥ ಸೆಪ್ಟಂಬರ್ 27ರಿಂದ 30ರ ವರೆಗೆ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನಲ್ಲಿ ಜರಗಿತು. ಮುಂಬೈಯ ಮೊಗವೀರ ವ್ಯವಸ್ಥಾಪಕ ಮಂಡಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಶಾಖೆ, ಮಂಗಳೂರು ಬಂದರ್ ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನೇತೃತ್ವದಲ್ಲಿ

ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆ

ಮಂಗಳೂರಿನ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ- 2020 ರ ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆಯು ಸೆ.14ರಂದು ನಗರದ ಕೆನರಾ ಹೈಸ್ಕೂಲ್ ಆವರಣದ ಶ್ರೀ ಭುವನೇಂದ್ರ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಮಂಗಳೂರಿನ ಸಂಚಾಲಕರಾದ ಪ್ರೋ.ರಾಜಶೇಖರ ಹೆಬ್ಬಾರ್ ಮಾಹಿತಿ ನೀಡಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಎನ್‍ಇಪಿ ಶಿಕ್ಷಣ

ಮಂಗಳೂರು: ಬಿಎನ್‍ಐ ಮಂಗಳೂರಿನಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ-2023

ಬಿಎನ್‍ಐ ಮಂಗಳೂರು ವತಿಯಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ-2023ನ್ನು ಸೆಪ್ಟಂಬರ್ 30ರಿಂದ ಅಕ್ಟೋಬರ್ 2ರ ವರೆಗೆ ನಗರದ ಡಾ. ಟಿ.ಎಂ.ಎ.ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸಲಾಗಿದೆ ಎಂದು ಬಿಎನ್‍ಐ ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಗಣೇಶ್ ಎನ್. ಶರ್ಮ ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಬಿಎನ್‍ಐ ಮಂಗಳೂರು

ದ.ಕ. ವೈನ್ ಮರ್ಚೆಂಟ್ಸ್ ಎಸೋಸಿಯೇಷನ್‍ನಿಂದ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ಸಮ್ಮಾನ

ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ಸ್ ಎಸೋಸಿಯೇಷನ್ ವತಿಯಿಂದ ಎಸೋಸಿಯೇಷನ್ ಗೌರವಾಧ್ಯಕ್ಷರಾದ, ಕುವೆಂಪು ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪುರಸ್ಕøತರಾದ ಡಾ. ಎ. ಸದಾನಂದ ಶೆಟ್ಟಿ ಅವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು. ಸಮ್ಮಾನ ಕಾರ್ಯಕ್ಕೆ ಕೃತಜ್ನತೆ ವ್ಯಕ್ತಪಡಿಸಿದ ಸದಾನಂದ ಶೆಟ್ಟಿ ಅವರು ಯಾವುದೇ ಸಂಘ ಸಂಸ್ಥೆಯಿರಲಿ, ಸಹಮತದ ಮೂಲಕ ಪರಸ್ಪರ ಒಗ್ಗಟ್ಟಿನಿಂದ ಇದ್ದಾಗ ಯಾವುದೇ ಸಮಸ್ಯೆ ಬಂದರೂ ಎದುರಿಸಬಹುದಾಗಿದೆ ಎಂದರು. ಎಸೋಸಿಯೇಷನ್ ಅಧ್ಯಕ್ಷ ಎಂ.

ಮಂಗಳೂರು: ತಿರುವೈಲ್‍ನ ಸರ್ಕಾರಿ ಶಾಲೆಗೆ ಆಧುನಿಕತೆಯ ಮೆರಗು

ಸರಕಾರಿ ಶಾಲೆಗಳೆಂದರೆ ಅಸಡ್ಡೆಯೇ ಜಾಸ್ತಿ. ಯಾಕೆಂದರೆ ಆ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಸಹಿತ ಹೆಚ್ಚಿನ ವ್ಯವಸ್ಥೆಗಳು ಸರಿಯಾಗಿರುವುದಿಲ್ಲ. ಆದರೆ ಈ ಮಾತನ್ನು ಸುಳ್ಳಾಗಿಸುತ್ತಿದೆ ಮಂಗಳೂರು ಹೊರ ವಲಯದ ಈ ಶಾಲೆ. ಅಷ್ಟಕ್ಕೂ ಆ ಶಾಲೆ ಯಾವುದು? ಅಲ್ಲಿನ ವಿಶೇಷತೆಗಳೇನು? ಈ ಸ್ಟೋರಿ ನೋಡಿ… ಸುಸಜ್ಜಿತ ಕಟ್ಟಡ. ಗುಣಮಟ್ಟದ ಪೀಠೋಪಕರಣಗಳು. ಆಕರ್ಷಣೀಯ ಕ್ಲಾಸ್ ರೂಂ….. ಶಿಸ್ತಿನ ಸಿಪಾಯಿಗಳಂತಿರುವ ವಿದ್ಯಾರ್ಥಿಗಳು…. ಇವೆನ್ನೆಲ್ಲಾ ನೋಡುತ್ತಾ ಇದ್ಯಾವುದೋ ಖಾಸಗಿ ಆಂಗ್ಲ

ನನ್ನಜ್ಜ ಕಣ್ಣಪ್ಪ ನನ್ನ ಬರವಣಿಗೆಗೆ ಪ್ರಥಮ ಪ್ರೇರಣೆ – ಶ್ಯಾಮಲಾ ಮಾಧವ

“ನಾವೆಲ್ಲರೂ ಕಾನಾಟಿ (ಅರ್ಥಾತ್ ದಪ್ಪ ಕನ್ನಡಕ ಧರಿಸುವ) ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್‌ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ

ಮಂಗಳೂರು: ಡಾ.ಶಂಸುಲ್ ಇಸ್ಲಾಂ ಉಪನ್ಯಾಸಕ್ಕೆ ವಿರೋಧ-ಎಬಿವಿಪಿ ಕಾರ್ಯಕರ್ತರ ಬಂಧನ

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಬಿ.ವಿ ಕಕ್ಕಿಲ್ಲಾಯ ಪ್ರತಿಷ್ಠಾನ ಆಯೋಜಿಸಿರುವ ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಶಂಸುಲ್ ಇಸ್ಲಾಂ ಅವರ ಉಪನ್ಯಾಸ ಕಾರ್ಯಕ್ರಮವನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಹೊರತಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾರ್ಯಕ್ರಮದ ವಿರುದ್ಧ ಘೋಷಣೆ ಕೂಗಿದ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ

ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವು ನಗರದ ಡಾ. ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕರಾದ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. ತದ ಬಳಿಕ ಮಾತನಾಡಿ ಅವರು, ಮಕ್ಕಳಿಗೆ ಶಿಕ್ಷಣದ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸ ಸಾಕ್ಷರತೆಯ ಮೂಲಕ ನಡೆಯುತ್ತಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಡಯೆಟ್‍ನಾ ಪ್ರಾಂಶುಪಾಲಾರದ ರಾಜಲಕ್ಷ್ಮಿ, ಜನ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಶೀನ ಶೆಟ್ಟಿ, ವಯಸ್ಕರ ಶಿಕ್ಷಣಧಿಕಾರಿ