ಮಂಗಳೂರಿನ ಅದ್ಯಪಾಡಿ ಶ್ರೀ ಬೀಬಿಲಚ್ಚಿಲ್ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಗೋಪಾಲ ಕೃಷ್ಣ ಭಟ್ ಹಾಗೂ ಪ್ರಸಾದ್ ಭಟ್ ಅವರು, ಪೂಜ ವಿಧಿ ವಿಧಾನ ನೆರವೇರಿಸಿದರು. ಊರ ಪರ ವೂರ ಹಾಗೂ ಬೈಲು ಮಾಗಣೆಯ ಸಮಸ್ತ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಕ್ಷೇತ್ರದ ಆಡಳಿತ ಮಂಡಳಿಯವರು ಹಾಗೂ
ಮಂಗಳೂರು: ರಾಯಿ ಗ್ರಾಮ ಪಂಚಾಯತ್‍ನಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು ಒಂದು ವಾರದಲ್ಲೇ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಈ ಗ್ರಾ.ಪಂ.ವ್ಯಾಪ್ತಿಯ ಕೊಯಿಲ ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಪೂಜಾರಿ ಗುರುವಾರ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಕೊಯಿಲ ಒಂದನೇ ವಾರ್ಡಿನ ಬೂತ್ ಸಂಖ್ಯೆ 27ರಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯೆಯಾಗಿದ್ದು, ನನ್ನ ವಾರ್ಡಿನಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು
ಮಂಗಳೂರು: ಕೋವಿಡ್ ಸಂದರ್ಭ ಹತ್ತು ಸಾವಿರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಿತ ಹಲವು ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸುತ್ತಿರುವ ಡಾ. ಅಬ್ದುಲ್ ಶಕೀಲ್ ಅವರು ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ಕೊಲಂಬೊ ಮತ್ತು ಹೈ ಕಮಿಷನ್ ಆಫ್ ಇಂಡಿಯಾ ಕೊಲಂಬೊ ಕೊಡಮಾಡುವ ಏಷ್ಯಾ ಅಚೀವರ್ಸ್
ಮಂಗಳೂರು ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ವತಿಯಿಂದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ವರವರಿಗೆ ಸನ್ಮಾನಿಸಲಾಯಿತು. ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ಯು.ಟಿ ಖಾದರ್ ರವರು ಸರ್ವ ಧರ್ಮಿಯರಿಗೆ ಪ್ರೀತಿಪಾತ್ರರಾಗಿದ್ದು. ಸರ್ವರ ಮನ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಎನ್.ಎಸ್ ಕರೀಂ, ಉಪಾಧ್ಯಕ್ಷ ಶಬರೀಶ್ ಶೆಟ್ಟಿ, ಕೋಶಾಧಿಕಾರಿ
ಮಂಗಳೂರು: ಸೆ.17ರಂದು ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆ- ಸಾಂಸ್ಕ್ರತಿಕ ಕಾರ್ಯಕ್ರಮ ಮಂಗಳೂರು: ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆಯು ಸೆ.17ರಂದು ಬೆಳಿಗ್ಗೆ 10ಗಂಟೆಗೆ ಪುಣೆಯ ಡಾ.ಶ್ಯಾಮ್‍ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‍ನಲ್ಲಿ ನಡೆಯಲಿದೆ. ಬೆಳಿಗ್ಗೆ ಸಾಂಸ್ಕ್ರತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಲೆಕ್ಕಪತ್ರ ಮಂಡನೆ, ಗೌರವಾರ್ಪಣೆ, ಮಧ್ಯಾಹ್ನ ಭೋಜನ, ನಂತರ ನೆಲ್ಯಾಡಿ ವನಶ್ರೀ ಕಲಾವಿದರಿಂದ ಕುಸಾಲ್ದ
ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ನ ಮಾಜಿ ನಿರ್ದೇಶಕ ರೆ. ರೆವ್. ಬ್ಯಾಪ್ಟಿಸ್ಟ್ ಮೆನೆಜಸ್ ಅವರು ಬುಧವಾರ ನಿಧನರಾದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ, ಅಗ್ರಾರ್‌ನ ಮೋಸ್ಟ್ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ, ಮಂಗಳೂರಿನ ಸೇಂಟ್ ಆಂಟೋನಿ ಚಾರಿಟೇಬಲ್ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಬ್ಯಾಪ್ಟಿಸ್ಟ್ ಮೆನೆಜಸ್ ಅವರು ೧೯೭೭ರಲ್ಲಿ ರೋಮ್‌ನಲ್ಲಿ ನೈತಿಕ ಥಿಯಾಲಜಿ ಮತ್ತು 1982ರಲ್ಲಿ
ಮಂಗಳೂರಿನ ನಂತೂರಿನಿಂದ ಮೂಡುಬಿದರೆಯ ತನಕ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿದ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಆರೋಪಿಸಿ ಎನ್.ಎಚ್. 169 ಭೂ ಮಾಲೀಕರ ಹೋರಾಟ ಸಮಿತಿ ವತಿಯಿಂದ ನಂತೂರಿನ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭೂ ಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅವರು, ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ
ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಂಟರ್ ಸಿಟಿ ಕಟ್ಟಡಲ್ಲಿ ಶುಭಾರಂಭಗೊಂಡಿತು. ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮತ್ತು ಸಫ್ವಾನ್ ಇಸ್ಮಾಯಿಲ್ ಮಾಲಕತ್ವ ಪೆಟ್ ಝೋನ್ ಮಳಿಗೆಯನ್ನು ಉದ್ಯಮಿ ಕೆ.ಇಸ್ಮಾಯಿಲ್ ಸಂತೋಷ ನಗರ ಉದ್ಘಾಟಿಸಿದರು. 6 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ಧೇವೆ. ನಮ್ಮಲ್ಲಿ ದೇಶ ವಿದೇಶಿದ ಸಾಕು ಪಕ್ಷಿ, ಬೆಕ್ಕು Tropical fish monster fish, exotic
ಸ್ಪಂದನ ಫ್ರೆಂಡ್ಸ್ ಅಶೋಕನಗರ ಮಂಗಳೂರು ಇದರ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಮ ಕಿರೋಡಿಯನ್ ರಸ್ತೆಯ ಮುಂಭಾಗದಲ್ಲಿ ಆಚರಿಸಲಾಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಜೋಸ್ಸಿ ಸೋನ್ಸ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಮ ಕಿರೋಡಿಯನ್ ರಸ್ತೆ ಅಶೋಕ ನಗರ ಇಲ್ಲಿಯ 2 ತಿರುವುಗಳಲ್ಲಿ ವಾಹನ ಚಾಲಕರ ಹಾಗೂ ಸಾರ್ವಜನಿಕರ
ಮಂಗಳೂರು: ಆಟಿ ಆಚರಣೆಯಲ್ಲ, ಅದು ಪ್ರಕೃತಿ ಸಹಜ ಬದುಕು. ಅಂದಿನ ಬಡತನದ ಬದುಕನ್ನು ಇಂದು ಕೆಲವೆಡೆ ಆಚರಣೆಯ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಅಂದಿನ ಆಟಿಯ ಬಡತನದ ಬದುಕಿನ ಹಿಂದಿರುವ ವಾಸ್ತವಾಂಶವನ್ನು ಇಂದಿನ ಜನಾಂಗಕ್ಕೆ ತಿಳಿಯಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರಕೃತಿಯೆಡೆಗೆ ಮುಖ ಮಾಡಿ ಬದುಕಿದರೆ ಮಾತ್ರ ಮಾನವನ ಎಲ್ಲಾ ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಪರಿಹಾರ ಇದೆ ಎಂಬ ಸಂದೇಶವನ್ನು ಅಂದಿನ ಆಟಿಯ ಬದುಕು ನಮಗೆ ನೀಡುತ್ತದೆ ಎಂದು ಕರ್ನಾಟಕ ತುಳು