ಆಮ್ ಆದ್ಮಿ ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಂತೋಷ್ ಕಾಮತ್ ಅವರು ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ಮಂಗಳಾದೇವಿ ದೇವಳದಲ್ಲಿ ಕುಟುಂಬಿಕರು, ಪಕ್ಷದ ಮುಖಂಡರುಗಳು ಹಾಗೂ ಅಭಿಮಾನಿಗಳ ಜತೆಗೂಡಿ ಪೂಜೆ ಸಲ್ಲಿಸಿದ್ರು. ತದ ಬಳಿಕ ನಗರದ ಬಳ್ಳಾಲ್‍ಬಾಗ್‍ನಿಂದ ಮಹಾನಗರಪಾಲಿಕೆಯ ಚುನಾವಣಾಧಿಕಾರಿ
ಮಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಂಗಳವಾರ ವಿವಿಧ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕೊಲ್ಲೂರು ಮುಕಾಂಬಿಕೆ ದೇವಸ್ಥಾನ, ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತದ ಬಿಷಪ್, ಬಂದರು ಕೇಂದ್ರ ಜುಮ್ಮಾ ಮಸೀದಿ ದರ್ಗಾಕ್ಕೆ ಭೇಟಿ ನೀಡಿ ಅವರು ಪ್ರಾರ್ಥನೆ ಸಲ್ಲಿಸಿದರು.
ಮಂಗಳೂರಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ ಆರಾಧ್ಯ ಮಳಿಗೆಯಲ್ಲಿ ಶುಭ ಸಮಾರಂಭ ಹಾಗೂ ಹಬ್ಬಗಳ ಖರೀದಿಗಾಗಿ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಆರಾಧ್ಯ ವಸ್ತ್ರಮಳಿಗೆಯಲ್ಲಿ ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ. ಸಿಲ್ಕ್‍ಸಾರೀಸ್, ಫ್ಯಾನ್ಸಿಸಾರೀಸ್ ಮತ್ತು ಕುರ್ತಾ ವಸ್ತ್ರಗಳಿಗೆ ಶೇ.15 ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಏಪ್ರಿಲ್ 30ರ ವರೆಗೆ ಲಭ್ಯವಿದೆ. ಇಂದೇ ಮಳಿಗೆಗೆ ಭೇಟಿ ನೀಡಿ ನಿಮಗೆ ಇಷ್ಟವಾದ
ಮಂಗಳೂರು ವಿಧಾನಸಭಾ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಅವರು ನಾಮಪತ್ರ ಸಲ್ಲಿಸಿದರು. ಅವರು ತೊಕ್ಕೊಟ್ಟುವಿನ ಮೈದಾನದಲ್ಲಿ ಜರಗಿದ ಎಸ್‍ಡಿಪಿಐ ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯ ವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತಲ್ಲದೆ, ಗ್ಯಾಸ್ ಸಿಲಿಂಡರ್ ಮತ್ತು ಕಟ್ಟಿಗೆಯ ಅಣಕು ಶವ ಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ `ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾದರೂ ಕೂಡ ಬಿಜೆಪಿಗರು ತಲೆ
ಮಂಗಳೂರು: ರಾಷ್ಟ್ರೀಯ ಮತದಾರರ ದಿನಾಚರಣೆಯ (2023) ಅಂಗವಾಗಿ ವಿವಿಧ ವಿಭಾಗಗಳಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಗಾಗಿ ದ.ಕ. ಜಿಪಂ ಸಿಇಒ ಡಾ. ಕುಮಾರ್ ಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಜ.25ರ ಬೆಳಗ್ಗೆ 11:30ಕ್ಕೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ
ರಾಜ್ಯದ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದಿಂದ ವಿದೇಶಿ ಹೂಡಿಕೆದಾರರು ಪ್ರಭಾವಿತರಾಗಿದ್ದು, ಅದರ ಫಲವಾಗಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳಾಗಿರುವುದು ಹೆಮ್ಮೆಯ ವಿಷಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಹರ್ಷ ಪಿ.ಎಸ್. ಅವರು ಹರ್ಷ ವ್ಯಕ್ತ ಪಡಿಸಿದರು. ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಎನ್.ಎಂ.ಪಿ.ಎಯ ಬಿ.ಡಿ.ಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ
ರಾಜ್ಯದ ಬಿಜೆಪಿ ಸರ್ಕಾರ ಜನಸಂಕಲ್ಪ ಯಾತ್ರೆಯನ್ನು ಆರಂಭಿಸಿದ್ದು, ಇದು ಜನ ಸಂಕಲ್ಪ ಯಾತ್ರೆ ಅಲ್ಲ ಇದು ಜನ ಸಂಕಟ ಯಾತ್ರೆ. ಜನ್ರ ಮುಂಗಡ ಪತ್ರದಲ್ಲಾಗಲಿ ಹೇಳಿದ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಸರ್ಕಾರದ ವೈಫಲ್ಯ ಮರೆಮಾಚಲು ಈ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ. ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಡಬಲ್ ಇಂಜಿನ್
ಮಂಗಳೂರು ಪಾಲಿಕೆ ವ್ಯಾಪ್ತಿಯ ಮೂಡುಶೆಡ್ಡೆ-ಬೋಂದೆಲ್ ಸಂಪರ್ಕ ರಸ್ತೆ ಮಧ್ಯೆ ಕಿಡಿಗೇಡಿಕಗಳು ತ್ಯಾಜ್ಯ ತಂದು ಸುರಿದಿದ್ದು, ತ್ಯಾಜ್ಯ ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಿಡಿಗೇಡಿಗಳ ಕೃತ್ಯದ ವಿರುದ್ಧ ಇಲಾಖೆಗೆ ದೂರು ನೀಡಿದ್ದು, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ ಆಗ್ರಹಿಸಿದ್ದಾರೆ.
ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆಯು ಅತ್ಯಂತ ವಿಜೃಂಭಣೆಯಿಂದ ಜರಗಿತು. ಈ ಒಂದು ಕಾರ್ಯಕ್ರಮವು ಪೃಥ್ವಿ ಟ್ರಸ್ಟ್ ಸಹಭಾಗಿತ್ವದಲ್ಲಿ ಜರಗಿತ್ತು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕರು ದಕ್ಷಿಣ ಕ್ಷೇತ್ರ ಮಂಗಳೂರು ಶ್ರೀ ಜೆ ಆರ್ ಲೋಬೊ ಉಪಸ್ಥಿತರಿದ್ದರು.ಇವರು ಐಕ್ಯಮ್ ಶಾಲೆಯ ಮಕ್ಕಳೊಂದಿಗೆ ದೀಪವನ್ನು ಬೆಳಗಿಸಿದರ ಮೂಲಕ ಈ ಕಾರ್ಯಕ್ರಮವನ್ನು ಆರಂಭಿಸಿದರು.ಆ ನಂತರ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಕುರಿತು ಮಾತನಾಡಿದರು.ಇದೇ ವೇಳೆ ಐಕ್ಯಂ ಸಂಸ್ಥೆಯ




























