Home Posts tagged #manjeshwara (Page 8)

ಕೇಂದ್ರ ಬಜೆಟ್‍ನ ಜನವಿರೋಧಿ ನಿರ್ದೇಶನ ಕೂಡಲೇ ಹಿಂಪಡೆಯಬೇಕು : ಮಂಜೇಶ್ವರ ವಲಯ ಸಿಪಿಐ ಸಮಿತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಅದಾನಿ ಗ್ರೂಪಿನ ಕಾನೂನು ಬಾಹಿರವಾದ ಚಟುವಟಿಕೆಗಳನ್ನು ಸಂಯುಕ್ತ ಪಾರ್ಲಿಮೆಂಟರಿ ಸಮಿತಿ ತನಿಖೆ ನಡೆಸಬೇಕು, ಕೇಂದ್ರ ಸರ್ಕಾರದ ಬಜೆಟಿನ ಜನ ವಿರೋಧಿ ನಿರ್ದೇಶನಗಳನ್ನು ಕೂಡಲೇ ಹಿಂಪಡೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐ ಮಂಜೇಶ್ವರ ವಲಯ ಸಮಿತಿಯ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್

ಕ್ರೀಡಾರಂಗದ ಸಾಧಕ ವಿದ್ಯಾರ್ಥಿ ಆಕಾಶ್ ಗೆ ಶಾಲಾವತಿಯಿಂದ ಸನ್ಮಾನ

ಮಂಜೇಶ್ವರ: ಸರಕಾರಿ ವೃತ್ತಿಪರ ಉನ್ನತ ಪ್ರೌಢಶಾಲೆ ಕುಂಜತ್ತೂರು ಇಲ್ಲಿನ ವಿದ್ಯಾರ್ಥಿ ಆಕಾಶ್ ಕ್ರೀಡಾರಂಗದಲ್ಲಿ ಮಾಡಿದ ಸಾಧನೆಗೆ ಶಾಲಾವತಿಯಿಂದ ಸನ್ಮಾನ ಸಮಾರಂಭವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. 2022 -23ನೇ ಸಾಲಿನ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡೋತ್ಸವದಲ್ಲಿ ನಡೆದ ಕಬಡ್ಡಿಯಲ್ಲಿ ಕಾಸರಗೋಡು ಜಿಲ್ಲೆಯ ತಂಡದ ನಾಯಕನಾಗಿ ಆಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ, ಹಾಗೂ ಇವರ ಸಾಧನೆಯನ್ನು ಪರಿಗಣಿಸಿ

ಗ್ರೈಂಡರ್‍ ಗೆ ಶಾಲು ಸಿಲುಕಿ ಯುವತಿ ದಾರುಣ ಸಾವು

ಮಂಜೇಶ್ವರ: ಹುಟ್ಟು ಹಬ್ಬದಂದೇ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ತೂಮಿನಾಡು ಲಕ್ಷಂ ವೀಡು ಕಾಲನಿ ನಿವಾಸಿ ರಂಜನ್ ಕುಟ್ಟ ಎಂಬವರ ಪತ್ನಿ ಜಯಶೀಲ ಚುಮ್ಮಿ (20) ಸಾವನ್ನಪ್ಪಿದ ದುರ್ದೈವಿ. ಈಕೆ ತೂಮಿನಾಡಿನಲ್ಲಿರುವ ಬೇಕರಿಯೊಂದರ ನೌಕರಿಯಾಗಿದ್ದು ಎಂದಿನಂತೆ ಬೇಕರಿಗೆ ತೆರಳಿ ಗ್ರೈಂಡರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ಶಾಲು ಗ್ರೈಂಡರ್ ಗೆ ಸಿಲುಕಿ ದುರಂತ ಸಂಭವಿಸಿದೆ. ಹುಟ್ಟು ಹಬ್ಬದ ದಿನವಾದ ಹಿನ್ನೆಲೆಯಲ್ಲಿ

ಮಂಜೇಶ್ವರ : ವಿವಿಧ ಬೇಡಿಕೆ ಮುಂದಿಟ್ಟು ಪಡಿತರ ವರ್ತಕರಿಂದ ಧರಣಿ

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ವರ್ತಕರು ಮಂಜೇಶ್ವರಂ ತಾಲೂಕು ಕಚೇರಿಯಲ್ಲಿ ಧರಣಿ ನಡೆಸಿದರು.ಇ-ಪೆÇೀಸ್ ಮಿಷನ್ ಸರಿಯಾಗಿ ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸಬೇಕು, ಪಡಿತರ ವರ್ತಕರು ಇ- ಪೋಸ್ ಮಿಷನ್ ಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಕೇರಳ ವಿಧಾನಸಭೆಯಲ್ಲಿ ಸಚಿವರ ದಿಕ್ಕು ತಪ್ಪಿಸುವ ಹೇಳಿಕೆ ಹಿಂಪಡೆಯಬೇಕು, ಪಡಿತರ ವರ್ತಕರ ವೇತನ ಪರಿಷ್ಕರಣೆ ಮಾಡಬೇಕು, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕಮಿಷನ್ ನೀಡದೆ ಕಿಟ್ ಕಮಿಷನ್ ವಿಳಂಬ ಮಾಡುವುದನ್ನು

ಕೇರಳಕ್ಕಿಂತ ಕಡಿಮೆ ದರದಲ್ಲಿ ಇಂಧನ ಸಿಗುತ್ತಿದೆ ಎಂಬ ಪ್ಲೆಕ್ಸ್ : ಕೇರಳದಲ್ಲಿ ಭಾರೀ ಪ್ರತಿಭಟನೆ

ಮಂಜೇಶ್ವರ: ಗಡಿಪ್ರದೇಶವಾದ ಕರ್ನಾಟಕ ಪೆಟ್ರೋಲ್ ಪಂಪ್ ಎದುರು ಹಾಕಿರುವ ಪ್ಲೆಕ್ಸ್ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳಕ್ಕಿಂತ 8 ರೂಪಾಯಿ ಕಡಿಮೆ ದರದಲ್ಲಿ ಇಂಧನ ಸಿಗುತ್ತದೆ ಎಂಬುದಾಗಿ ಫಲಕ ಹಾಕಿರುವುದು ಇದೀಗ ವೈರಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಡೀಸೆಲ್ ದರ 8 ರೂ. ಹಾಗೂ ಪೆಟ್ರೋಲ್ 5 ರೂಪಾಯಿ ಕಡಿಮೆಯಾಗಿದೆ. ಕೇರಳ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ಹೇರಲಾಗಿದೆ. ಇದು ಏಪ್ರಿಲ್ ನಿಂದ

ಮಂಜೇಶ್ವರ: ಸಾರ್ವಜನಿಕ ಸ್ಥಳಗಳಲ್ಲಿ ತಂದು ತ್ಯಾಜ್ಯ ಸುರಿಯುತ್ತಿರುವ ವಿಚಾರ, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತು ವ್ಯಾಪ್ತಿಯ 5 ಹಾಗೂ 7ನೇ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ತಂದು ಹಾಕಲಾಗುತ್ತಿದೆ. ಯತೀಂ ಖಾನ-ಗೇರುಕಟ್ಟೆ ರಸ್ತೆಯ ಅಂಬಿತ್ತಡಿ, ಹಾರ್ವಾರ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಜನಸಂಚಾರವಿಲ್ಲದ ರಾತ್ರಿ ಸಮಯಗಳಲ್ಲಿ ಇಲ್ಲಿ ತ್ಯಾಜ್ಯಗಳನ್ನು ತಂದು ಹಾಕಲಾಗುತ್ತಿದೆ. ಸಾರ್ವಜನಿಕ ಸ್ಥಳ ಹಾಗೂ ರಸ್ತೆ ಬದಿಗಳಲ್ಲಿ ವ್ಯಾಪಕವಾಗಿ ತ್ಯಾಜ್ಯಗಳು

ತಲಪಾಡಿ ಟೋಲ್ ಗೇಟ್‍ನಲ್ಲಿ ಹಲ್ಲೆ : ಪ್ರತಿಭಟನೆಗೆ ಸಜ್ಜಾಗುತ್ತಿರುವ ಸ್ಥಳೀಯರು

ಮಂಜೇಶ್ವರ: ತಲಪ್ಪಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಗೇಟ್ ಸಿಬ್ಬಂದಿಯಿಂದ ಕಾರು ಚಾಲಕನ ಮೇಲೆ ಹಲ್ಲೆಗೈಯುತ್ತಿರುವ ವೀಡಿಯೋ ವೈರಲಾಗುತ್ತಿದ್ದಂತೆಯೇ ಗಡಿಪ್ರದೇಶದ ಜನರು ಟೋಲ್ ಅಧಿಕೃತರ ವಿರುದ್ಧ ಪ್ರತಿಭಟನೆಗೆ ಸಜ್ಜಾಗುತಿದ್ದಾರೆ.ಟೋಲ್ ಗೇಟಿನಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವ ಉದ್ಯೋಗಿಗಳನ್ನು ಕೂಡಲೇ ವಜಾಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಸಂಘಟನೆಗಳು ಪ್ರತಿಭಟನೆಗೆ ತಯಾರಿ ನಡೆಸುತ್ತಿದೆ.ಈ ಬಗ್ಗೆ ಉಳ್ಳಾಲ ಪೆÇಲೀಸರು ವೀಡಿಯೋ ಪರಿಶೀಲಿಸಿ ಸುಮಟೋ ಕೇಸು ದಾಖಲಿಸಿ

ಕುಂಜತ್ತೂರು : ಪೊಲೀಸರಿಂದ ವಿದ್ಯಾರ್ಥಿಗಳಿಗೆ ಸಂರಕ್ಷಣೆಯ ಪಾಠ

ಮಂಜೇಶ್ವರ: ಕುಂಜತ್ತೂರು ಮಹಾಲಿಂಗೇಶ್ವರ ವಿದ್ಯಾನಿಕೇತನ ವಿದ್ಯಾರ್ಥಿಗಳು ಮಂಜೇಶ್ವರ ಪೆÇಲೀಸ್ ಠಾಣೆಗೆ ಬೇಟಿ ನೀಡಿ ಎಸ್‍ಐ ಸುಮೇಶ್ ಹಾಗೂ ಸಜಿಮನ್ ರವರೊಂದಿಗೆ ಸ್ವಯಂ ರಕ್ಷಣೆ ಕುರಿತಂತೆ ಪಾಠ ಕಲಿತರು. ವಿದ್ಯಾರ್ಥಿಗಳ ಪ್ರತಿಯೊಂದು ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಉತ್ತರವನ್ನು ನೀಡಿದ ಠಾಣೆ ಎಸ್.ಐ ಸುಮೇಶ್ ಹಾಗೂ ಸಜಿಮನ್ , ವಿದ್ಯಾರ್ಥಿನೀಯರ ಮೇಲೆ ಅತ್ಯಾಚಾರ,ಬಲತ್ಕಾರಗಳು ಸಮಾಜದಲ್ಲಿ ನಡೆಯುತ್ತಿರುವ ಅನೇಕ ಉದಾಹರಣೆಗಳಿದ್ದು ಇವುಗಳನ್ನು ತಡೆಯಲು

ರಸ್ತೆಯುದ್ಧಕ್ಕೂ ಚೆಲ್ಲುತ್ತಿರುವ ಮೀನಿನ ದುರ್ವಾಸನೆಯುಕ್ತ ನೀರು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಮಂಜೇಶ್ವರ : ಮೀನುಗಳನ್ನು ಬಾಕ್ಸ್ ಗಳಲ್ಲಿ ತುಂಬಿಕೊಂಡು ಹೆದ್ದಾರಿಯಲ್ಲಿ ಬೇರೆಡೆಗೆ ಸಾಗುವ ಮೀನು ಲಾರಿಗಳು ದುರ್ವಾಸನೆಯನ್ನು ಬೀರಿ ಅವಾಂತರ ಸೃಷ್ಟಿಸಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ವ್ಯಕ್ತವಾಗುತ್ತಿದೆ. ಮೀನು ಸಾಗಾಟ ಮಾಡುವ ಲಾರಿಗಳು ಐಸ್ ತುಂಬಿದ ಬಾಕ್ಸ್ ಗಳಲ್ಲಿ ಮೀನುಗಳನ್ನು ಹಾಕಿಕೊಂಡು ಕಾಸರಗೋಡು ಭಾಗದಿಂದ ಕೇರಳದ ವಿವಿಧಡೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುತ್ತಿದೆ. ಆದರೆ ಲಾರಿಗಳಲ್ಲಿ ಐಸ್ ಕರಗಿದ ನೀರು ರಸ್ತೆಯ ಮೇಲೆ ಬೀಳದಂತೆ ಸೇಪ್ಟಿ

ತಲಪಾಡಿಯಿಂದ ಕಾಸರಗೋಡಿವರೆಗೆ ಷಟ್ಪಥ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ

ಮಂಜೇಶ್ವರ: ತಲಪ್ಪಾಡಿಯಿಂದ ಕಾಸರಗೋಡುವರೆಗಿನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ತಲಪ್ಪಾಡಿ ಕಾಸರಗೋಡು ರಸ್ತೆಯ ಚಿತ್ರಣವೇ ಬದಲಾಗುತ್ತಿದೆ. ರಸ್ತೆ ಬದಿಯ ಹಳೆಯ ಕಟ್ಟಡಗಳು ನೆಲಸಮಗೊಂಡು ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿರುವುದರಿಂದ ಇಲ್ಲಿ ಹೊಸ ಪ್ರಯಾಣದ ಅನುಭವವಾಗುತ್ತಿದೆ. ವಿವಿಧೆಡೆ ಕಾಮಗಾರಿ ಮುಗಿದ ಭಾಗಗಳನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಿ ಸರ್ವೀಸ್ ರಸ್ತೆಗಳ ಮೂಲಕ ವಾಹನಗಳನ್ನು ಸಾಗಿಸಲಾಗುತ್ತಿದೆ.ತೂಮಿನಾಡುವರೆಗಿನ