Home Posts tagged #padubidre (Page 5)

ಮೋದಿ ಮಂಗಳೂರು ಭೇಟಿ ಹಿನ್ನಲೆ: ಪಡುಬಿದ್ರಿಯಿಂದ ಘನ ವಾಹನಗಳಿಗೆ ಪ್ರವೇಶ ನಿಷೇಧ

ಉಡುಪಿ ಕಡೆಯಿಂದ ಮಂಗಳೂರು ಕಡೆ ಪ್ರಯಾಣಿಸುವ ಘನ ವಾಹನಗಳ ಸಹಿತ ಗೂಡ್ಸ್ ವಾಹನಗಳಿಗೆ ಪ್ರವೇಶ ನಿರಾಕರಿಸಿ ಕಾರ್ಕಳ ರಸ್ತೆಯಾಗಿ ಪ್ರಯಾಣ ಮುಂದುವರಿಸಲು ಪೊಲೀಸರು ಸೂಚನೆ ನೀಡಿದ್ದರೂ ಸುತ್ತು ಬಳಸಿ ಹೋಗುವುದನ್ನು ತಪ್ಪಿಸಲು ಬ್ರಹತ್ ಟ್ರಕ್ ಗಳು ಕಾರ್ಕಳ ರಸ್ತೆಯುದ್ಧಕ್ಕೂ ಹೆದ್ದಾರಿಗಂಟಿಕೊಂಡೇ ನಿಂತಿರುವುದರಿಂದ ಮತ್ತೊಂದು ಸಮಸ್ಯೆ ಸೃಷ್ಠಿಗೆ ಸಿದ್ದತೆ

ಶತ ದಿನೋತ್ಸವದ ಸಂಭ್ರಮದಲ್ಲಿ ರಾಜ್ ಸೌಂಡ್ಸ್ ಮತ್ತು ಲೈಟ್ಸ್

ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ “ರಾಜ್ ಸೌಂಡ್ಸ್ ಮತ್ತು ಲ್ಯೆಟ್ಸ್” ತುಳು ಚಲನಚಿತ್ರದ ಶತದಿನೋತ್ಸವದ ಸಂಭ್ರಮ ವನ್ನು ಪಡುಬಿದ್ರಿ ಭಾರತ್ ಮಾಲ್ ಮುಂಭಾಗದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಪಡುಬಿದ್ರಿ ಪೇಟೆಯಿಂದ ಭಾರತ್ ಮಾಲ್ ವರಗೆ ಕಾಲ್ನಡಿಗೆ ಜಾಥ ನಡೆಯಿತು..ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದರು.. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ ಸಾಲ್ಯಾನ್,

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಟಫ್ ರೂಲ್ಸ್

ಎಲ್ಲೆಲ್ಲೋ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಗಳು ಆಗುತ್ತಿದಂತೆ, ಅಮಲು ಪದಾರ್ಥ ಸೇವಿಸುವವರಿಗೆ ಹಾಗೂ ಸಂಘಟಕರಿಗೆ ಪೊಲೀಸ್ ಎಚ್ಚರಿಕೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿ ಕಾರ್ಯಕ್ರಮಕ್ಕೆ ಭಾಗವಹಿಸುವಂತಿಲ್ಲ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ನೀಡಿದ್ದಾರೆ. ಗಣೇಶೋತ್ಸವ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣೆಯಲ್ಲಿ ಕರೆದ ಸರ್ವದರ್ಮಿಯರ ಸಭೆಯಲ್ಲಿ

ತೆಂಕ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಮುಕ್ತಾರ್

ಪಡುಬಿದ್ರಿ: ತೆಂಕ ಎರ್ಮಾಳು ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಮುಕ್ತಾರ್ ಅಹಮದ್ ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ್ ಎರ್ಮಾಳ್, ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಕಾರ್ಯದರ್ಶಿಯಾಗಿ ಭರತ್ ಜಿ. ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ಶೇಕ್ ಲಿಯಾಕತ್, ಉಪ ಕೋಶಾಧಿಕಾರಿಯಾಗಿ ಅಬ್ದುಲ್ ನದೀಮ್ ಇವರನ್ನು ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಹೊಂಡ ತಪ್ಪಿಸಲು ಹೋಗಿ ಕಾರಿಗೆ ಢಿಕ್ಕಿಯಾಗಿ ಡೈವರ್ಷನ್ ಏರಿದ ಲಾರಿ

ರಾಷ್ಟ್ರೀಯ ಹೆದ್ದಾರಿ 66 ಹಾಲಿಮಾ ಸಾಬ್ಜು ಸಭಾಂಗಣದ ಮುಂಭಾಗದಲ್ಲಿ ಹೆದ್ದಾರಿಯ ಗುಂಡಿ ತಪ್ಪಿಸಲು ಹೋಗಿ ಕಂಟೇನರ್ ಕಾರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆ.ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊಂಡಮಯವಾಗಿದ್ದು ಹೆದ್ದಾರಿ ತಪ್ಪಿಸಲು ಹೋಗಿ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಸಂಪೂರ್ಣ ಹಿಂಭಾಗ ಜಖಂ ಗೊಂಡಿದೆ ಹಾಗೂ ಕಂಟೇನರ್ ರಾಷ್ಟ್ರೀಯ ಹೆದ್ದಾರಿಯ ಡೈವರ್ಷನ್ ಏರಿ ನಿಂತ ಘಟನೆ ನಡೆದಿದೆ.

ಪಡುಬಿದ್ರಿಯಲ್ಲಿ ರೈತ ಮಿತ್ರ ನೇಜಿ ನೆಡುವ ಪ್ರಾತ್ಯಕ್ಷಿಕೆ

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ರೈತ ಮಿತ್ರ ಮಿತ್ರ ನೇಜಿ ನೇಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಮಾಜಿ ತಾ.ಪಂ.ಸದಸ್ಯ ನವೀನ್‍ಚಂದ್ರ ಜೆ. ಶೆಟ್ಟಿ ಚಾಲನೆ ನೀಡಿದರು.ಅವರು ಈ ಸಂದರ್ಭ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಬದುಕಿನಲ್ಲಿ ಅರೋಗ್ಯ ವಂತರಾಗಿ ದೀರ್ಘ ಆಯುಷ್ಯರಾಗಿ ಬದುಕಿದವರು. ಅದರೆ, ನಾವು ಇಂದಿನ ಅಧುನಿಕ ಜೀವನ ಶ್ಯೆಲಿಯಲ್ಲಿ ಬದುಕುತ್ತಿರುವುದರಿಂದ ಮದುಮೇಹ ಮತ್ತು ಹೃದಯಾಘಾತ ದಂತಹಾ ಕಾಯಿಲೆಗಳು ಇಳಿ ವಯಸ್ಸಿನಲ್ಲಿ

ಕಡಲು ಕೊರೆತ ಪ್ರದೇಶಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದ್ದು ಎಲ್ಲೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆ ರೂಪಿಸಲಿದೆ. ಸಾರ್ವಜನಿಕ ಆಸ್ತಿ ರಕ್ಷಣೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಮೂಡಬೆಳ್ಳೆ ವ್ಯಾಪ್ತಿಯಲ್ಲಿ ಸಂಪೂರ್ಣ ಬೆಳೆ ನಾಶ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಗದ್ದೆಯಲ್ಲಿ ನೀರು ನಿಂತು ಕಷ್ಟಪಟ್ಟು ಮಾಡಿದ ಸಹಸ್ರಾರು ಎಕ್ರೆ ಕೃಷಿ ನಾಶಗೊಂಡಿದೆ.ಈ ಬಗ್ಗೆ ಮಾತನಾಡಿದ ಉಡುಪಿ ತಾ.ಪಂ. ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಮಳೆಯ ಆರ್ಭಟಕ್ಕೆ ಕೃಷಿ ಭೂಮಿಯಲ್ಲಿ ನೀರು ನಿಂತು ಬಹಳಷ್ಟು ಖರ್ಚು ಮಾಡಿ ಮಾಡಿದ ನಾಟಿ, ನೀರಿನಡಿಯಲ್ಲಿ ಕೊಳೆಯುತ್ತಿದ್ದು, ಕೃಷಿಕರು ಕಂಗ್ಗಲಾಗಿದ್ದಾರೆ. ಅಳಿವಿನ ಹಂತದಲ್ಲಿರುವ ಕೃಷಿ ಚಟುವಟಿಕೆಗಳನ್ನು ನಡೆಸಿ ಕೈ ಸುಟ್ಟುಕೊಂಡಿರುವ ಕೃಷಿಕರ ನೆರವಿಗೆ

ಪಡುಬಿದ್ರಿ ಮಹಾಲಿಂಗೇಶ್ವರನಿಗೆ ದೀಪೋತ್ಸವ ಸಂಭ್ರಮ

ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ ದೀಪೋತ್ಸವ ಸಹಸ್ರಾರು ಭಕ್ತಾದಿಗಳ ಕೂಡುವಿಕೆಯಿಂದ ಬಹಳ ಅದ್ಧೂರಿಯಾಗಿ ನಡೆದು ಸಮಾಪನ ಗೊಂಡಿದೆ. ಪ್ರತೀ ವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆದ ಈ ದೀಪೋತ್ಸವದಲ್ಲಿ ಗ್ರಾಮ ಹಾಗೂ ಸ್ಥಳೀಯ ಗ್ರಾಮಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ ಸ್ವಯಂ ಪ್ರೇರಿತರಾಗಿ ಎಣ್ಣೆದೀಪ ಉರಿಸುವ ಮೂಲಕ ದೀಪೋತ್ಸವದಲ್ಲಿ ತಮ್ಮ ಅಳಿಲ ಸೇವೆ ಪೂರೈಸಿದ್ದಾರೆ. ಈ ಸಂದರ್ಭ

ಮುಳ್ಳು ಹಂದಿಗೆ ಢಿಕ್ಕಿಯಾಗಿ ಕಾರು ಪಲ್ಟಿ

ರಸ್ತೆ ದಾಟುತ್ತಿದ್ದ ಮುಳ್ಳು ಹಂದಿಯೊಂದಕ್ಕೆ ಕಿಯಾ ಕಾರೊಂದು ಡಿಕ್ಕಿಯಾಗಿ ನಿಯಂತ್ರಣ ಕಳೆದು ಕೊಂಡು ಪಕ್ಕದ ತಗ್ಗಿನ ಪೊದೆಯೊಂದಕ್ಕೆ ಸಾಗಿ ಪಲ್ಟಿಯಾಗಿದ ಘಟನೆ ತಡರಾತ್ರಿ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗವಾಗಿ ಸಾಗುತ್ತಿದ್ದ ಮಂಗಳೂರು ನೊಂದಾಣಿ ಸಂಖ್ಯೆಯ ಕಿಯಾ ಕಾರು ತೆಂಕ ಎರ್ಮಾಳು ಗರೋಡಿ ಬಳಿ ಸಾಗುತ್ತಿದಂತೆ ಮಳ್ಳು ಹಂದಿಗೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಸುಮಾರು ನೂರು ಮೀಟರ್ ಸಾಗಿ ತಗ್ಗಿನ ಪೊದೆಗೆ ಉರುಳಿದೆ. ಕಾರಿನಲ್ಲಿ