ಪುತ್ತೂರು ಫೆ 5 : ಕೃಷಿಕರೊಬ್ಬರು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ 15 ರಂದು ನಡೆದಿದೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಸೇಡಿಯಾಪು ನಿವಾಸಿ ದಿ. ಈಶ್ವರ ಗೌಡ ರವರ ಪುತ್ರ ಜತ್ತಪ್ಪ ಗೌಡ ( 68 ವ) ಆತ್ಮಹತ್ಯೆ ಮಾಡಿಕೊಂಡವರು. ವಿಪರೀತದ ಕುಡಿತದ ಚಟ ಹೊಂದಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ ಜತ್ತಪ್ಪ ಗೌಡರವರು ಸಂಜೆ 6.30ರ ಸುಮಾರಿಗೆ
ಪುತ್ತೂರು: ಪುತ್ತೂರಿನ ಸಂಟ್ಯಾರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ನಿಡ್ಪಳ್ಳಿ ನಿವಾಸಿ ದಿ. ಶ್ರೀಧರ ಭಟ್ ಎಂಬವರ ಪುತ್ರ ಮುರಳಿ ಕೃಷ್ಣ ಭಟ್ ( 35) ಮೃತಪಟ್ಟವರು. ಇವರು ನಿಡ್ಪಳ್ಳಿ ಬಜರಂಗದಳದ ಮಾಜಿ ಸಂಚಾಲಕ ಹಾಗೂ ವಿಹಿಂಪ ಅಧ್ಯಕ್ಷರಾಗಿದ್ದರು. ಸಂಟ್ಯಾರು-ಬೆಟ್ಟಂಪಾಡಿ ರಸ್ತೆಯ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದ್ದು, ಕಾರು ಎರಡು ವಿದ್ಯುತ್ ಕಂಬಕ್ಕೆ ಗುದ್ದಿ 50 ಅಡಿ ಆಳದ ತೋಟಕ್ಕೆ ಬಿದ್ದಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಪಂಚಾಯತ್ ನ ಉಪ ಚುನಾವಣೆ ಗೆ ಭಾಜಪಾ ಕಡೆಯಿಂದ ಯತೀಶ್ ಡಿ.ಬಿ ನಾಮಪತ್ರ ಸಲ್ಲಿಕೆ
ಆರ್ಯಾಪು ಚುನಾವಣೆ ಅಧಿಕಾರಿ ತ್ರಿವೇಣಿ ರಾವ್ ರವರಿಗೆ ನಾಮಪತ್ರ ಸಲ್ಲಿಸಿದರು… ಈ ಸಂದರ್ಭದಲ್ಲಿ ಭಾಜಪಾ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್ ಕುಮಾರ್ ಶಾಂತಿವನ,ಆರ್ಯಾಪು ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಮೇಗಿನ ಪಂಜ,ಜಿಲ್ಲಾ
ಕೇಂದ್ರ ಗೃಹಸಚಿವ ಹಾಗು ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಇಂದು ಭೇಟಿ ನೀಡುತ್ತಿದ್ದು, ಭೇಟಿಯ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಫ್ಕೋ ದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಅಮಿತ್ ಶಾ ಗೆ ಸ್ವಾಗತ ಕೋರುವ ಬ್ಯಾನರ್, ಬಂಟಿಕ್ಸ್‍ಗಳು ನಗರ ತುಂಬಾ ರಾರಾಜಿಸುತ್ತಿದೆ. ಗೃಹ ಸಚಿವ ಹಾಗು ದೇಶದ ಮೊದಲ ಕೇಂದ್ರ ಸಹಕಾರಿ ಸಚಿವರೂ
ಪುತ್ತೂರು : ಕ್ಯಾಂಪ್ಕೋ ಲಿಮಿಟೆಡ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ 5ನೇ ಬೃಹತ್ ಕೃಷಿ ಯಂತ್ರಮೇಳ ಮತ್ತು ಕನಸಿನ ಮನೆ ಉದ್ಘಾಟನಾ ಸಮಾರಂಭಕ್ಕೆ ನೆಹರೂನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೃಷಿಯಂತ್ರ ಮೇಳವನ್ನು ದೀಪ
ಪುತ್ತೂರು : ಅಮಿತ್ ಶಾ ಫೆ.11 ರಂದು ಪುತ್ತೂರಿಗೆ ಆಗಮಿಸಿ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ ಸಮಾವೇಶ ನಡೆಯಲಿರುವ ಹಿನ್ನಲೆಯಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಹಾಗೂ ಬರುವವರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅನುಗ್ರಹಿಸಲು
ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆಬ್ರವರಿ 10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿರುವ 5 ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನಕ್ಕೆ ಎಲ್ಲಾ ಸಿದ್ದತೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಕ್ಯಾಂಪೆÇ್ಕೀ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು
ಪುತ್ತೂರು:- ಕರ್ನಾಟಕ ರಾಜ್ಯದಲ್ಲಿ ಮುಂಬರಲಿರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆದರೂ ನಾವೆಲ್ಲರೂ ಪಕ್ಷ ಮುಖ್ಯ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಾಮಾಣಿಕವಾಗಿ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ ಮತ್ತು ಸಂಘಟಿತರಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಮಾಜಿ ಮಾಧ್ಯಮ ವಕ್ತಾರ ಜಿ.ಎ ಶಂಸುದ್ದೀನ್
ಪುತ್ತೂರಿನಲ್ಲಿ ಫೆ.10 ರಿಂದ ನಡೆಯುವ ಕೃಷಿಯಂತ್ರ ಮೇಳ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ವೇದಿಕೆಗೆ ಗುದ್ದಲಿಪೂಜೆ ಚಪ್ಪರ ಮುಹೂರ್ತ ಸೋಮವಾರ ನಡೆಯಿತು. ಪುತ್ತೂರು ಶಾಸಕಸಂಜಿವ ಮಠಂದೂರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲ
ಪುತ್ತೂರು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೆÇ್ಕೀದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಪೂರಕ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಮತ್ತು ದ.ಕ ಎಸ್ಪಿ ಡಾ.ಅಮಟೆ ವಿಕ್ರಮ್‍ರವರು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾವೇಶ




























