Home Posts tagged #puttur (Page 46)

ಪ್ರವೀಣ್‌ ಹತ್ಯೆ ಮೂವರು ಹಂತಕರು ಪೊಲೀಸ್‌ ಬಲೆಗೆ ?

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಲ್ಲಿ ಭಾಗಿಯಾದ ಮೂವರು ಹಂತಕರನ್ನು ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಜು 26 ರಂದು ಸಂಜೆ ಬೆಳ್ಳಾರೆಯ ಮಾಸ್ತಿ ಕಟ್ಟೆ ಬಳಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕಡಿದು ಕೊಲೆ ಮಾಡಿದ್ದರು. ಈ ಬಗ್ಗೆ

ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ತುರ್ತು ಸಭೆ

ಬೆಳ್ಳಾರೆ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆಯುತ್ತಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎನ್.ಐ.ಎ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರುವುದಾಗಿ ತಿಳಿದುಬಂದಿದೆ.

ಮಂಗಳೂರು ರಾತ್ರಿ : ನಿರ್ಬಂಧ ವಾಪಸ್

ಕನ್ನಡ ಜಿಲ್ಲೆಯಲ್ಲಿ ಕಡೆಗೂ ರಾತ್ರಿ ನಿರ್ಬಂಧ ವಾಪಸ್ , ಮದ್ಯದಂಗಡಿ ಸೇರಿದಂತೆ ಎಲ್ಲ ವ್ಯಾಪಾರ ಕೇಂದ್ರಗಳಿಗೂ ನಿರ್ಬಂಧ ಮುಕ್ತ, ರಾತ್ರಿ 9 ಗಂಟೆ ಬಳಿಕದ ನಿರ್ಬಂಧ ಆದೇಶ ಹಿಂಪಡೆದ ದ.ಕ. ಜಿಲ್ಲಾಧಿಕಾರಿ

ಬಿಗ್‍ಬಾಸ್ ಒಟಿಟಿ ಸೀಸನ್-1, ಕರಾವಳಿಯ ಕುವರ ನಟ ರೂಪೇಶ್ ಶೆಟ್ಟಿ ಎಂಟ್ರಿ

ಕಿರುತೆರೆ ಲೋಕದ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಒಟಿಟಿ ಸೀಸನ್-1 ಆರಂಭಗೊಂಡಿದೆ. ಈ ಬಾರಿ ಕರಾವಳಿಯ ಕುವರ ನಟ ಹಾಗೂ ನಿರೂಪಕ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರೂಪೇಶ್ ಶೆಟ್ಟಿ ಅವರ ತುಳು ಮೂವಿ ಆಗಿರುವ ಗಿರಿಗಿಟ್ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡಿದೆ. ಸದ್ಯದಲ್ಲೇ ಸರ್ಕಸ್ ತುಳು ಮೂವಿ ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ.. ಕಲರ್ಸ್ ವಾಹಿನಿಯ ಬಿಗ್ ಬಾಸ್ ಕನ್ನಡದ ಒಟಿಟಿ

ಫಾಝಿಲ್ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ

ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಮಂಗಳಪೇಟೆ ಸ್ಮರಣಾರ್ಥವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯಿಂದ ಆ. 7 ರಂದು ಆದಿತ್ಯವಾರ ಜಿಲ್ಲೆಯ ವಿವಿಧೆಡೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸ್ವತಃ ರಕ್ತದಾನಿಯಾಗಿದ್ದ ಮೃತ ಫಾಝಿಲ್ ಅವರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸಕ್ರಿಯ ಸದಸ್ಯನಾಗಿದ್ದುಕೊಂಡು ತುರ್ತು ಸಂದರ್ಭ ರಕ್ತ ಪೂರೈಕೆಯಲ್ಲಿ ಮೂಂಚೂಣಿಯಲ್ಲಿದ್ದರು. ಅವರ ಸ್ಮರಣಾರ್ಥವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್‍ಐಎ ತನಿಖೆಗೆ ಆದೇಶಿ

ರಾಜ್ಯಾದ್ಯಂತ ಸಂಚಲನ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಆದೇಶಿಸಿದೆ. ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಅ .3 ರಂದು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಾಗಿ ಪತ್ರ ಬರೆದು ಆದೇಶಿಸಿದ್ದಾರೆ. ಭಾರತ ಸರಕಾರದ

ಪುತ್ತೂರು : ಪ್ಲಾಸ್ಟಿಕ್ ಧ್ವಜ ಬಳಸದಂತೆ ಮನವಿ

ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜವನ್ನು ಮಾರಾಟ ಮಾಡುವುದಾಗಲಿ, ಬಳಸುವುದಾಗಲಿ, ಬೇಕರಿಗಳಲ್ಲಿ ರಾಷ್ಟ್ರಧ್ವಜದ ಕೇಕ್ ತಯಾರಿಸುವುದಾಗಲಿ ಮಾಡಬಾರದು ಎಂದು ಇಲ್ಲಿಯ ಹಿಂದೂ ಜನಜಾಗೃತಿ ವೇದಿಕೆ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಲಾಯಿತು. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ75ನೇ ವರ್ಷದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಕೆ ಮಾಡಿದ ಬಳಿಕ ಎಲ್ಲೆಂದರಲ್ಲಿ

ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಠಾಣೆಗೆ ಭೇಟಿ

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆಯಲ್ಲಿ ಪೊಲೀಸ್ ಇಲಾಖೆ ತೊಡಗಿದೆ. ಈ ಮಧ್ಯೆ ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಠಾಣೆಗೆ ಭೇಟಿ ನೀಡಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಡಿವೈಎಸ್ಪಿ ಗಾನ ಪಿ. ಕುಮಾರ್, ಬೆಳ್ಳಾರೆ ಠಾಣಾ ಎಸ್.ಐ ಸುಹಾಸ್ ಅವರೊಂದಿಗೆ ತನಿಖೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ “ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕುರಿತ ಪ್ರಕರಣದ ಪ್ರಗತಿ ಯಾವ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ಆದೇಶದಲ್ಲಿ ಸಡಿಲಿಕೆ

ದ.ಕ. ಜಿಲ್ಲೆಯಾದ್ಯಂತ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಸಂಜೆ 6ರಿಂದ ಬೆಳಗ್ಗೆ 6ರವರೆಗಿನ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಆಗಸ್ಟ್ 5ರ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೂರು ದಿನಗಳ ಕಾಲ ಈ ನಿರ್ಬಂಧ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಈ ದಿನಗಳಲ್ಲಿ ರಾತ್ರಿ 9 ಗಂಟೆಯಿಂದ ಅಂಗಡಿ ಮುಂಗಟ್ಟುಗಳು ಮುಚ್ಚಲಿದೆ. ಆ. 5ರಿಂದ ಮದ್ಯದಂಗಡಿಗಳು ಸಂಜೆ 6