ಲಾಕ್ ಡೌನ್‍ನಿಂದಾಗಿ ದುಡಿಮೆ ಇಲ್ಲದೇ ಹಲವು ಕುಟುಂಬಗಳು ಸಂಕಷ್ಟದಲ್ಲಿವೆ. ಹೀಗಾಗಿ ಸಂಕಷ್ಟದ ಕುಟುಂಬಗಳ ಹಸಿವು ನೀಗಿಸುವ ಕೆಲಸವನ್ನು ಸದ್ದಿಲದೇ ಮಾಡುತ್ತಿದೆ. ಉಡುಪಿಯ ಸ್ಪೀಡ್ ಡೆವಿಲ್ಸ್ ಎನ್ನುವ ಹೆಸರಿನ ಯುವಕರು ಸಂಕಷ್ಟದಲ್ಲಿ ಕುಟುಂಬಗಳ ಮನೆ ಮನೆಗೆ ತೆರಳಿ ಹಸಿವು ನೀಗಿಸುತ್ತಿದೆ. ಇಡೀ ದೇಶವೇ ಕೊವಿಡ್ ಮಹಾಮಾರಿ ಯಿಂದ ಹಾಕಲಾಗಿರುವ ಲಾಕ್ ಡೌನ್ ಗೆ ತತ್ತರಿಸಿ
ಹೆದ್ದಾರಿ ಪಕ್ಕದಲ್ಲಿ ಕೋಳಿ ತ್ಯಾಜ್ಯ ಎಸೆದು, ಗ್ರಾಪಂ.ಗೆ ದಂಡ ಕಟ್ಟದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಪ್ರಥಮ ಐದು ಸಾವಿರ ಮುಂದಿನ ಸಲ ಇಪ್ಪತ್ತೈದು ಸಾವಿರ ದಂಡ ವಿಧಿಸಿ ದಂಡ ಕಟ್ಟಲು ವಿಫಲವಾದರೆ ನನ್ನ ಗಮನಕ್ಕೆ ತನ್ನಿ ಎಂಬುದಾಗಿ ಉಡುಪಿ ಡಿ.ಸಿ. ಜಗದೀಶ್ ಹೆಜಮಾಡಿ ಗ್ರಾ.ಪಂ.ಅಧಿಕಾರಿಗಳಿಗೆ ಕಢಕ್ ಸೂಚನೆ ನೀಡಿದ್ದಾರೆ. ಲಾಕ್‍ಡೌನ್ ಪರಿಸ್ಥಿಯನ್ನು ಪರಿಶೀಲನೆ ಮಾಡಿ ಅವ್ಯವಸ್ಥೆಯನ್ನು ಸರಿಪಡಿಸುವಂತ್ತೆ ಗ್ರಾ.ಪಂ.ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ
ಉಡುಪಿಯಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಸುರಿಯುತ್ತಿದ್ದು ಬಿಗ್ ಬಜಾರ್ ಪಾರ್ಕಿಂಗ್ ಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಮಳೆ ನೀರಲ್ಲಿ ಹತ್ತಾರು ಬೈಕ್ ಕಾರುಗಳು ಮುಳುಗಿದ ಘಟನೆ ನಡೆದಿದೆ. ನಿನ್ನೆ ತಡರಾತ್ರಿಯಿಂದ ಉಡುಪಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಬಿಗ್ ಬಜಾರ್ ಕಟ್ಟಡದ ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಕಟ್ಟಡದ ನೆಲ ಮಳಿಗೆಗೆ ಮಳೆ ನೀರು ತುಂಬಿ ಕೊಂಡ ಪರಿಣಾಮ ಪಾರ್ಕಿಂಗ್ ಮಾಡಲಾಗಿದ್ದ,ಆರು
ಮುತ್ತಜ್ಜಿ ….ಮುಗ್ಗ ಮನಸ್ಸಿನ ಈ ಬಡ ಅಜ್ಜಿ ಉಡುಪಿಯ ಪೆರ್ಡೂರು ಬಳಿ ಪಾಡಿಗಾರದ ನಿವಾಸಿ.ಕಳೆದ ಇಪ್ಪತು ವರ್ಷಗಳಿಂದ ಅಜ್ಜಿ ಬದುಕುತ್ತಿರುವ ಮನೆಯನ್ನ ಕಂಡ್ರೆ… ನಿಜಕ್ಕೂ ನೀವು ಮರುಕ ಪಡ್ತೀರಾ.ನಾಲ್ಕು ಕಂಬಗಳಿಗೆ, ಸಿಮೆಂಟ್ ಶೀಟು ಹಾಕಿ, ತೆಂಗಿನ ಗರಿಗಳಿಂದ ಮುಚ್ಚಿದ ಈ ಹಳೆ ಸೂರಲ್ಲಿಯೇ ತನ್ನ ಬದುಕು ಕಳೆದಿದ್ದಾರೆ. ವಯಸ್ಸಾದ ಅಜ್ಜಿಗೆ ಹಿಂದು… ಮುಂದು ಅಂತಾ ಯಾರು ಇಲ್ಲ.ಇರುವ ಒಬ್ಬ ಮಗನೂ ಯಾವುದೇ ಪ್ರಯೋಜನಕ್ಕಿಲ್ಲ. ಪ್ರತಿ ಬಾರಿಯೂ ಬೀಸುವ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕುಂದಾಪುರ ಪರಿಸರದಲ್ಲಿ ಪ್ರತಿದಿನ ಸುಮಾರು 200 ಕ್ಕಿಂತಲೂ ಹೆಚ್ಚು ಕೊವೀಡ್ ವಾರಿಯರ್ಸ್, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಊಟವನ್ನು ನೀಡುತಿದ್ದು ಇವರ ಈ ಕಾರ್ಯಕ್ಕೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕೂಡ ಹಲವು ದಿನಗಳ ಪ್ರಾಯೋಜಕತ್ವವನ್ನು ನೀಡಿದೆ. ಕಳೆದ ಬಾರಿಯೂ ಕೂಡ ಲಾಕ ಡೌನ್ ಸಂದರ್ಭದಲ್ಲಿ ಸುಮಾರು 40ಕ್ಕಿಂತ ಹೆಚ್ಚು ದಿನಗಳಲ್ಲಿಯೂ ಊಟವನ್ನು ನೀಡಿ