Home Posts tagged #v4news karnataka (Page 85)

ರಾಜ್ಯೋತ್ಸವ ಪ್ರಶಸ್ತಿ- ಹೈಕೋರ್ಟ್ ಆದೇಶ ಪರಿಗಣಿಸದ ಸರ್ಕಾರ :ಹಿರಿಯ ಸಾಹಿತಿ ಬಿ.ವಿ. ಸತ್ಯನಾರಾಯಣ ರಾವ್

ಬೆಂಗಳೂರು, ಅ, 31: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಿದ್ದು, ಹೈಕೋರ್ಟ್ ಆದೇಶದಂತೆ ತಮ್ಮ ಹೆಸರನ್ನು ಪರಿಗಣಿಸುವಂತೆ ಹಿರಿಯ ಸಾಹಿತಿ ಬಿ. ವಿ. ಸತ್ಯನಾರಾಯಣ ರಾವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ತಾವು ರಚಿಸಿರುವ 108 ಸಾಹಿತ್ಯ ಕೃತಿಗಳನ್ನು ಮುಂದಿಟ್ಟುಕೊಂಡು ನವೆಂಬರ್ 1 ರಂದು ಸಂಜೆ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯ ವಿಶೇಷ ಸಭೆ

ಉಡುಪಿ ಜಿಲ್ಲಾ ಸಮಿತಿಯ ವಿಶೇಷ ಸಭೆಯು ಉಚ್ಚಿಲದ ಏಸ್‌.ಡಿ.ಪಿ.ಐ. ಕಚೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಮಜೀದ್ ಮೈಸೂರು ಅವರು ವಹಿಸಿದ್ದರು. ಸಭೆಯಲ್ಲಿ ಮುಂಬರುವ ಚುನಾವಣೆಯನ್ನು ದೂರ ದೃಷ್ಟಿಯಲ್ಲಿ ಇಟ್ಟು ಕೊಂಡು ಪಕ್ಷವನ್ನು ಭೂತ್ ಮಟ್ಟದಿಂದ ಸಂಘಟಿಸುವ ಬಗ್ಗೆ ಚರ್ಚೆ ವಿಮರ್ಶೆಗಳು ನಡೆದವು. ಅದಕ್ಕಾಗಿ ಕಾರ್ಯಕರ್ತರು ಈಗಿಂದಲೇ ಕಾರ್ಯಪ್ರವೃತ್ತರಾಗಿ ಕೆಲಸಗಳನ್ನು ಮಾಡಬೇಕು ಎಂದು ರಾಜ್ಯಾಧ್ಯಕ್ಷರು ಕಿವಿಮಾತು ಹೇಳಿದರು. ಜಿಲ್ಲಾ

ದೈವಾರಾಧನೆಯ ಕುರಿತು ಅಶ್ಲೀಲವಾಗಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಸಮರ

ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆ, ದೈವಾರಾಧನೆಯ ಕುರಿತು ಅಶ್ಲೀಲವಾಗಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಕಾನೂನು ಸಮರಕ್ಕೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷಿಗರನ್ನು, ದೈವಾರಾಧನೆ, ತುಳು ಕಲಾವಿದರ ಕುರಿತು ಅಶ್ಲೀಲ ಪದ ಬಳಕೆ ಮಾಡಿರುವ ಕನ್ನಡಿಗ ಶಿವರಾಜ್ ಎಂಬವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಪ್ರಮುಖರಿಗೆ ಸಕಾರಾತ್ಮಕವಾಗಿ

ಉದ್ಯಮಿ ಜಯರಾಂ ಬನನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಪ್ರಸ್ತುತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯರಾಂ ಬನನ್ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜರಾಗಿದ್ದಾರೆ. ದೆಹಲಿ ಸೇರಿದಂತೆ ದೇಶದ ಉದ್ದಕ್ಕೂ ಹೋಟೆಲ್ ಉದ್ಯಮ ನಡೆಸುತ್ತಿರುವ ಕಾರ್ಕಳದ ಮಠದಬೆಟ್ಟುವಿನ ಹೊಟೇಲ್ ಉದ್ಯಮಿ ಸಮಾಜ ಸೇವಕ ಜಯರಾಂ ಬನನ್ ಅವರಿಗೆ ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. 13ನೇ ವಯಸ್ಸಿನಲ್ಲಿ

ಕಾವೂರಿನಲ್ಲಿ ಜನಸ್ಪಂದನಾ ಕಾರ್ಯಕ್ರಮ

ಕಾವೂರಿನಲ್ಲಿ ನಾಗರಿಕರಿಗಾಗಿ ಸರಕಾರಿ ಸೇವಾ ಸೌಲಭ್ಯಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು. ಇದೇ ವೇಳೆ ಹಕ್ಕು ಪತ್ರ, ಮಂಜೂರಾತಿ ಪತ್ರ ಸಹಿತ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ನಡೆಯಿತು. ಜನಸ್ಪಂದನಾ ಕಾರ್ಯಕ್ರಮದಲ್ಲಿ , ಮನೆ ಮಂಜೂರಾತಿ ಪತ್ರ, ಹಕ್ಕುಪತ್ರ, ಪರಿಹಾರ ಧನ,ವೃದ್ದಾಪ್ಯ ದಾಖಲೆ ವಿತರಣೆ ಮಾಡಲಾಯಿತಲ್ಲದೆ ,ಅಭಾ ಕಾರ್ಡ್ ಸಹಿತ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆ ಇರುವ ಸರಕಾರದ ಅನೇಕ ಯೋಜನೆಗಳ ಬಗ್ಗೆ ಜಾಗೃತಿ

ಅಂಬಿತ್ತಡಿ : ಶೆಡ್‍ನಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರ

ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಅಂಬಿತ್ತಡಿ ಎಂಬಲ್ಲಿ ಶೆಡ್ಡ್‍ನಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ತನಕ ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡಿಲ್ಲ. ಶೀಘ್ರದಲ್ಲೇ ಸುಸಜ್ಜಿತವಾದ ಅಂಗನವಾಡಿ ಕೇಂದ್ರ ನಿರ್ಮಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈಗಾಗಲೇ ಪಂಚಾಯತಿನಿಂದ ಫಂಡ್ ಮಂಜೂರಾಗಿದ್ದರೂ ಪಂಚಾಯತಿನ ಸ್ಥಳ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಊರವರಿಗೆ ಅಂಗನವಾಡಿಯ ಭಾಗ್ಯ ಲಭ್ಯವಾಗಲಿಲ್ಲ.

ಪುರಸಭಾಧಿವೇಶನಲ್ಲಿ ಸದಸ್ಯನಿಂದ ಅರೆನಗ್ನ ಪ್ರತಿಭಟನೆ

ಮೂಡುಬಿದಿರೆ: ತಾನು ನೀಡಿದ ಅಭಿವೃದ್ಧಿ ಕಾಮಗಾರಿಯ ಅರ್ಜಿ ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿ ಸದಸ್ಯ ಕೊರಗಪ್ಪ ಅವರು ಬಟ್ಟೆ ತೆಗೆದು ಅರೆನಗ್ನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಸೋಮವಾರ ಪುರಸಭೆಯಲ್ಲಿ ನಡೆಯಿತು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರಗಪ್ಪ ಅವರು ತಾನು ಅರ್ಜಿ ಕೊಟ್ಟಿರುವುದು ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿದರು. ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟಿಸಿರುವುದನ್ನು ಆಡಳಿತ ಪಕ್ಷದ ಸದಸ್ಯರು ತೀವೃವಾಗಿ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಕೃಷ್ಣಮೂರ್ತಿ ಮಂಜರ ಕಾರು ಅಪಘಾತ

ಕುಂದಾಪುರದ ಜಾಲಾಡಿ ಸಮೀಪದ ರಾ.ಹೆದ್ದಾರಿ 66 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಕಾರು ಅಪಘಾತಕ್ಕೀಡಾಗಿದೆ. ಸೋಮವಾರ ಬೆಳಿಗ್ಗೆ ಪತ್ನಿಯೊಂದಿಗೆ ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿರುದ್ದ ಧಿಕ್ಕಿನಿಂದ ಏಕಾಏಕಿ ಅಡ್ಡಲಾಗಿ ಬಂದ ಬೈಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಕಾರು ಚಾಲಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾದ

ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ : ಅಧ್ಯಕ್ಷರಿಗೆ ಆಹ್ವಾನ

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.12, 13ರಂದು ಅಮ್ಮುಂಜೆ ಅನುದಾನಿತ ಶಾಲೆಯಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಬಾಲಕೃಷ್ಣ ಗಟ್ಟಿ ಅವರನ್ನು ಅಧಿಕೃತವಾಗಿ ‌ಆಮಂತ್ರಿಸಲಾಯಿತು. ಈ ಸಂದರ್ಭ ‌ಕಸಾಪ ತಾಲೂಕು ‌ಅಧ್ಯಕ್ಷ‌ ವಿಶ್ವನಾಥ ಬಂಟ್ವಾಳ, ‌ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್ ಮತ್ತು ರಮಾನಂದ ನೂಜಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗೀತಾ ಎಸ್.ಕೊಂಕೋಡಿ, ವಿಟ್ಲ ಹೋಬಳಿ‌ ಅಧ್ಯಕ್ಷರಾದ ಗಣೇಶ

ಸತ್ಯಾತ್ಮ ಭಟ್ ಕುಂಟಿನಿ ಸ್ಕ್ರಿಪ್ಟ್ ರೈಟಿಂಗ್ನಲ್ಲಿ ಪ್ರಥಮ

ಎಸ್‌ಡಿಎಂ ಕಾನೂನು ಕಾಲೇಜು ಆಯೋಜಿಸಿದ ಸ್ಕ್ರಿಪ್ಟ್ ರೈಟಿಂಗ್ ಸ್ಪರ್ಧೆಯಲ್ಲಿ ಸತ್ಯಾತ್ಮ ಭಟ್ ಕುಂಟಿನಿ , ೨ನೇ ವರ್ಷ ಬಿ.ಎ. ಎಲ್ ಎಲ್ ಬಿ ಶಿಕ್ಷಣವನ್ನು ಪಡೆಯುತ್ತಿರುವ ಇವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.ಹಾಗೆಯೇ ಇವರು ಬರೆದ ” ಸ್ವಪ್ನ ಕಥಾ ” ಎಂಬ ಕಥೆಯನ್ನು ಬೀದಿ ನಾಟಕವಾಗಿ ಮಂಗಳೂರಿನ ನಿರ್ಮಾರ್ಗ ಪಂಚಾಯತ್ ಮುಂಭಾಗದಲ್ಲಿ ಹಾಗೂ ಸ್ಟೇಟ್ ಬ್ಯಾಂಕ್ ಬಸ್ಟ್ಯಾಂಡಿನಲ್ಲಿ ಬೀದಿ ನಾಟಕವಾಗಿ ಪ್ರದರ್ಶಿಸಲಾಗಿದೆ.ಈ ಕಥೆಯು ಬಾಲ್ಯವಿವಾಹ ವಾಗಿರುವ