Home Posts tagged #v4newskarnataka (Page 141)

ಕುಂದಾಪುರ: ಲಕ್ಷಾಂತರ ರೂ. ಮೌಲ್ಯದ ಚಿನ್ನ ಕದ್ದ ಆರೋಪಿ ಅಂದರ್

ಕುಂದಾಪುರ: ಕಟುಂಬಿಕರೆಲ್ಲರೂ ತೀರ್ಥ ಯಾತ್ರೆಗೆ ತೆರಳಿದ್ದ ಸಂದರ್ಭ ಮನೆಯ ಹಿಂಬದಿಯ ಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕಳವುಗೈದು ಪರಾರಿಯಾದ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಕುಂದಾಪುರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಮರವಂತೆ ನಿವಾಸಿ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ. 8 ಗ್ರಾಂ

”ಹರ್ ಘರ್ ತಿರಂಗಾ” ಅಭಿಯಾನ: ಉಡುಪಿ ಸಣ್ಣ ಕೈಗಾರಿಕಾ ಸಂಘದಿಂದ ರಾಷ್ಟ್ರಧ್ವಜ ಹಸ್ತಾಂತರ

ಅಜಾದಿ ಕೀ ಅಮೃತ್ ಮಹೋತ್ಸವ್” ಆಚರಿಸುತ್ತಿರುವ ಸಂದರ್ಭದಲ್ಲಿ ದಿನಾಂಕ: 13-08-2022 ರಿಂದ 15-08-2022 ರವರೆಗೆ ದೇಶದಲ್ಲಿ ಹಮ್ಮಿಕೊಂಡಿರುವ ”ಹರ್ ಘರ್ ತಿರಂಗಾ” ಅಭಿಯಾನದಡಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಣಿಪಾಲ, ಉಡುಪಿಯ ವತಿಯಿಂದ 13000 ರಾಷ್ಟ್ರ ಧ್ವಜಗಳನ್ನು ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ.ಎನ್ ಅವರಿಗೆ ಹಸ್ತಾಂತರಿಸಿದರು.ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಕೆ. ಪ್ರಶಾಂತ್

ಪ್ರವೀಣ್ ನೆಟ್ಟಾರು ಹತ್ಯೆ ಮೂವರು ಆರೋಪಿಗಳ ಬಂಧನ

ಕೇರಳ ಗಡಿಭಾಗ ತಲಪಾಡಿಯ ಚೆಕ್‍ಪೋಸ್ಟ್ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಲಾಯಿತು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರ ನೀಡಿದರು. ಬಂಧಿತರನ್ನು ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುವ ವೃತ್ತಿಯಲ್ಲಿದ್ದ. ರಿಯಾಜ್ ಎಂಬಾತ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಚಿಕನ್ ಸಪ್ಲೈ ಕೆಲಸ ಮಾಡುತ್ತಿದ್ದ, ಇನ್ನೋರ್ವ ಬಂಧಿತ

ಕಾಲುಸಂಕದಿಂದ ಬಿದ್ದ ಬಾಲಕಿಯ ಮೃತದೇಹ ಪತ್ತೆ

ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಶಾಲೆಯಿಂದ ಮನೆಗೆ ವಾಪಾಸಾಗುವ ವೇಳೆ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾದ ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿಯವರ ಪುತ್ರಿ, 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ ಕೊನೆಗೂ 48 ಗಂಟೆಯ ಸತತ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ. ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ನಿರಂತರವಾಗಿ ಶೋಧ ಕಾರ್ಯ ನಡೆಸಲಾಗಿತ್ತು.

ಸ್ಕೂಟರ್‍ಗೆ ಟ್ಯಾಂಕರ್ ಢಿಕ್ಕಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತ್ಯು

ಕಾಪು ಕಡೆಯಿಂದ ಬರುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಜಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರ ಸೇತುವೆ ಮೇಲೆ ನಡೆದಿದೆ. ಸ್ಕೂಟರ್ ಸವಾರ ಮಲ್ಲಾರು ಕೋಟೆ ರೋಡ್ ನಿವಾಸಿ ಜಾಫರ್ ಎಂಬವರ ಪುತ್ರ ಕಟಪಾಡಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ಅಲ್ಪಾಜ್ (17). ಈತ ತನ್ನ ಸಹಪಾಠಿಯೊಂದಿಗೆ ಉಡುಪಿ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ವೇಳೆ ಹಿಂಬದಿ ಸವಾರ ಸ್ಕೂಟರಿಂದ

ರಕ್ಷಾ ಬಂಧನ ಹಬ್ಬದ ಹಿಂದಿರುವ ಪೌರಾಣಿಕ ಕಥೆಯನ್ನು ಬಲ್ಲಿರಾ?

ಸಹೋದರ ಹಾಗೂ ಸಹೋದರಿಯ ನಡುವಿನ ಬಾಂಧವ್ಯ ಅತ್ಯಂತ ಅಮೂಲ್ಯವಾದದ್ದು. ಹಿಂದೂ ಧರ್ಮದಲ್ಲಿಯೂ ಈ ಸಂಬಂಧಕ್ಕೆಂದೇ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಪ್ರತಿ ವರ್ಷ ಹಿಂದೂ ಜನತೆ ಅತ್ಯಂತ ಉತ್ಸಾಹದಿಂದ ರಕ್ಷಾ ಬಂಧನವನ್ನು ಆಚರಿಸುತ್ತಾರೆ.ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ಆತನ ಆರೋಗ್ಯ ಹಾಗೂ ಆಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ಜೀವಮಾನವಿಡೀ ಸಹೋದರಿಗೆ ರಕ್ಷಣೆಯಾಗಿ ನಿಲ್ಲುವ ಪ್ರತಿಜ್ಞೆಯನ್ನು ಮಾಡುತ್ತಾರೆ.

ಪ್ರವೀಣ್‌ ಹತ್ಯೆ ಮೂವರು ಹಂತಕರು ಪೊಲೀಸ್‌ ಬಲೆಗೆ ?

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಲ್ಲಿ ಭಾಗಿಯಾದ ಮೂವರು ಹಂತಕರನ್ನು ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಜು 26 ರಂದು ಸಂಜೆ ಬೆಳ್ಳಾರೆಯ ಮಾಸ್ತಿ ಕಟ್ಟೆ ಬಳಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕಡಿದು ಕೊಲೆ ಮಾಡಿದ್ದರು. ಈ ಬಗ್ಗೆ ಈಗಾಗಾಲೇ ಒಟ್ಟು 7 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದರು . ಆದರೇ ಹತ್ಯೆಯ ಪ್ರಮುಖ

ರಾಂಗ್ ಸೈಡ್ ಸಂಚಾರ : ಸವಾರರಿಗೆ ಗಂಭೀರ ಗಾಯ

ಉಳ್ಳಾಲ ಕಾಪಿಕಾಡ್ ನಲ್ಲಿ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಿಂದ ಬಂದ ಬೈಕ್ ಗೆ ಡಿಕ್ಕಿಯಾದ ಕಾರು ಹೆದ್ದಾರಿಯಿಂದ ಕೆಳಕ್ಕುರುಳಿತು. ಬೈಕ್ ಕೆಳಕ್ಕೆ ಎಸೆಯಲ್ಪಟ್ಟು ಸವಾರರಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಕಾರಿನಲ್ಲಿದ್ದವರು ಯಾವುದೆ ಗಾಯಗಳಿಲ್ಲದೆ ಬಚಾವಾಗಿದ್ದಾರೆ.

ಇಂದು ಜಂತುಹುಳ ನಿವಾರಣ ದಿನಾಚರಣೆ

ಪ್ರತೀ ವರ್ಷ, ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ. ಹೊಟ್ಟೆ ಹುಳಗಳ ನಿರ್ಮೂಲನೆಗಾಗಿ ಸರಕಾರವು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸುತ್ತದೆ. ಈ ವರ್ಷ ಆಗಸ್ಟ್‌ 10ರಂದು 1ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳು ಹಾಗೂ ಹದಿಹರೆಯದವರಿಗೆ ಆರೋಗ್ಯ ಕಾರ್ಯಕರ್ತರು, ಶಾಲಾ ಶಿಕ್ಷಕರು ಮತ್ತುಅಂಗನವಾಡಿ ಕಾರ್ಯಕರ್ತೆಯರು ಜಂತು ಹುಳ ನಿವಾರಣೆಗಾಗಿ, ವಯಸ್ಸಿಗೆ ಅನುಗುಣವಾಗಿ ಸೂಕ್ತ ಪ್ರಮಾಣದ ಡೋಸೇಜ್‌ ಪ್ರಕಾರ ಅಲ್ಬೆಂಡಜೋಲ್‌

ಪಡುಬಿದ್ರಿ : ಪೆಟ್ ಶೋಪ್ ನಲ್ಲಿ ವಿದ್ಯುತ್ ಆಕಸ್ಮಿಕ ಸುಟ್ಟು ಕರಕಲಾದ ಹಕ್ಕಿ , ಮೀನು

ವಿದ್ಯುತ್ ಅವಘಢದಿಂದ ಮುಚ್ಚಿದ ಅಂಗಡಿಯ ಒಳಗೆ ಬೆಂಕಿ ಕಾಣಿಸಿಕೊಂಡು ಅಕ್ವೇರಿಯಂಗಳ ಸಹಿತ ವಿವಿಧ ಜಾತಿಗಳ ಹಕ್ಕಿ ಸಹಿತ ವಿವಿಧ ಜಾತಿಗಳ ಮೀನುಗಳು ಬೆಂಕಿಯಲ್ಲಿ ಸಿಲುಕಿ ಭಸ್ಮವಾದ ಘಟನೆ ನಡೆದಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯ ಪೊಲೀಸ್ ಠಾಣಾ ಸಮೀಪದ ಗ್ರಾ.ಪಂ. ಕಟ್ಟಡದ ಅವಿಘ್ನ ಅಕ್ವೇರಿಯಂ ಮಾರಾಟದಂಗಡಿಯಲ್ಲಿ ಮುಂಜಾನೆ ಹೊಗೆ ಕಾಣಿಸಿಕೊಂಡಿದ್ದು ಇದನ್ನು ಕಂಡ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ