ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥ ರಸ್ತೆಗೆ ಡಾಮರು :ವಿ4ನ್ಯೂಸ್ನ ವರದಿಗೆ ಎಚ್ಚೆತ್ತ ಹೆದ್ದಾರಿ ಇಲಾಖೆ ಅಧಿಕಾರಿಗಳು

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಉಡುಪಿಯ ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥ ರಸ್ತೆಗೆ ಡಾಮರೀಕರಣ ಮಾಡಲಾಗಿತ್ತು. ಆ ಸಂದರ್ಭದಲ್ಲಿ ರಸ್ತೆಗೆ ಬಿಳಿ ಬಣ್ಣದ ಗುರುತುಗಳಿಲ್ಲದೆ ರಸ್ತೆಯಲ್ಲಿ ಅಪಘಾತಗಳ ಹೆಚ್ಚಳ ಕಾರಣವಾಗಿತ್ತು. ಈ ಬಗ್ಗೆ ವಿ4 ನ್ಯೂಸ್ನಲ್ಲಿ ಸಮಗ್ರ ವರದಿ ಬಿತ್ತರಿಸಲಾಗಿತ್ತು. ವರದಿಗೆ ಎಚ್ಚೆತ್ತುಕೊಂಡ ಹೆದ್ದಾರಿ ಇಲಾಖೆ ರಸ್ತೆಗೆ ಬಿಳಿ ಬಣ್ಣದ ಗುರುತುಗಳನ್ನು ಹಾಕುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೬೬ ಉಡುಪಿ ಜಿಲ್ಲೆಯ ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥ ರಸ್ತೆಗೆ ಮರು ಡಾಮರೀಕರಣ ಕಾರ್ಯ ನಡೆಯುತ್ತಿರುವಾಗ ರಾತ್ರಿ ಸಂಚಾರಕ್ಕೆ ಹೆಚ್ಚು ಉಪಯುಕ್ತವಾಗುವ ಬಿಳಿ ಬಣ್ಣದ ಗುರುತುಗಳು ಹೋಗಿ ಮತ್ತೆ ಹಾಕದ ಕಾರಣ ರಸ್ತೆಯಲ್ಲಿ ಅಪಘಾತದ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕುರಿತು ಕಳೆದ ೩ ದಿನದ ಹಿಂದೆ ವಿ೪ ವರದಿ ಮಾಡಿ ಗಮನಸೆಳೆದಿತ್ತು. ವರದಿಯ ಬಳಿಕ ಎಚ್ಚೆತ್ತುಕೊಂಡ ಹೆದ್ದಾರಿ ಇಲಾಖೆ ರೂರು ಸೇತುವೆ ಬಳಿಯಿಂದ ಬೈಕಾಡಿ ತನಕ ಬಿಳಿ ಬಣ್ಣವನ್ನು ಹಾಕುವ ಚುರುಕು ಕಾರ್ಯ ಆರಂಭಗೊಂಡಿದೆ. ಮಾಬುಕಳದಿಂದ ಕಲ್ಯಾಣಪುರ ತನಕ ಹಲವಾರು ತಿರುವುಗಳು ಇದ್ದ ಕಾರಣ ರಾತ್ರಿಹೊತ್ತು ದ್ವಿಚಕ್ರ ವಾಹನ ಸವಾರರು ಸೇರಿದಂತೆ ಘನವಾಹನ ಸಂಚಾರಕ್ಕೆ ರಸ್ತೆ ದೀಪ ಇಲ್ಲದ ಭಾಗದಲ್ಲಿ ರಸ್ತೆ ಕಾಣದೆ ಡಿವೈಡರ್ ಗಳಿಗೆ ಡಿಕ್ಕಿ ಹೊಡೆದು ಒಂದೇ ತಿಂಗಳಲ್ಲಿ ಹಲವಾರು ಸಾವು ನೋವು ಸಂಭವಿಸಿತ್ತು. ಮಳೆ ಹೆಚ್ಚುತ್ತಿರುವ ಈ ಸಂದರ್ಬದಲ್ಲಿ ಅತೀ ಬೇಗನೆ ಒಣಗುವ ತಂತ್ರಜ್ಞಾನದಿಂದ ಬಣ್ಣವನ್ನು ಹಾಕುತ್ತಿದ್ದು ಕಾಮಗಾರಿಯ ವೇಗ ಹೆಚ್ಚಿ ಸಾರ್ವಜನಿಕರೀಗೆ ಅನುಕೂಲವಾಗಲಿದೆ.
