ಮಂಜೇಶ್ವರ : ಎಲ್ಲವನ್ನೂ ಸರಿಪಡಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇರಳದ ಎಡರಂಗ ಸರಕಾರವು ದಿನನಿತ್ಯ ಒಂದೊಂದು ರೀತಿಯ ತೆರಿಗೆಗಳನ್ನು ಹೇರಿ ಜನತೆಯನ್ನು ಸುಲಿಯುತ್ತಿದ್ದು, ಈ ತುಘಲಕ್ ಸರಕಾರ ತೊಲಗದೆ ಜನತೆ ನೆಮ್ಮದಿ ಕಾಣಲಾರರು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದರು. ರಾಜ್ಯ ಸರಕಾರದ ತೆರಿಗೆ ಸುಲಿಗೆ
ಮಂಜೇಶ್ವರ : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಪೆÇಲೀಸರು ಕೂಡಾ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ.ಕರ್ನಾಟಕ ಭಾಗಕ್ಕೆ ವ್ಯಾಪಾರ, ಚಿಕಿತ್ಸೆ, ಶಿಕ್ಷಣ ಪ್ರವೇಶ ಸೇರಿದಂತೆ ವಿವಿದ ಉದ್ದೇಶಗಳಿಗಾಗಿ ಅನೇಕ ಜನರು ಕೇರಳದಿಂದ ಗಡಿ ದಾಟಿರವರು ಮರಳಿ ಬರುವಾಗ ದೊಡ್ಡ ಮೊತ್ತದ ಹಣ ಜೊತೆಯಾಗಿದ್ದರೆ ಸಾಕಷ್ಟು ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳ ಕೊರತೆಯಿಂದ
ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಎನ್.ಹೆಚ್. 66 ಅಭಿವೃದ್ಧಿಯ ಭಾಗವಾಗಿ ಹಲವೆಡೆ ಅಂಡರ್ ಪಾಸ್, ಸರ್ವಿಸ್ ರೋಡ್‍ನ ವ್ಯವಸ್ಥೆ ನೀಡಲಾಗಿದ್ದರೂ ಕೇರಳದ ಅತಿ ದೊಡ್ಡ ಎರಡನೇ ಚೆಕ್-ಪೋಸ್ಟ್ ಮಂಜೇಶ್ವರಕ್ಕೆ ಸರ್ವಿಸ್ ರೋಡ್ ಆಗಲಿ, ಅಂಡರ್ ಪಾಸ್ ಆಗಲಿ ಯಾವುದನ್ನು ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆಗೆ ಸಿದ್ದತೆ ನಡೆಸುತಿದ್ದಾರೆ. ಇದರ ಮೊದಲ ಹಂತವಾಗಿ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಊರವರು ಗುರುನರಸಿಂಹ ಮಂಟಪದಲ್ಲಿ ಸಭೆ
ಮಂಜೇಶ್ವರ: ಪವಿತ್ರ ರಂಜಾನಿನ 30 ವೃತ್ತಗಳನ್ನು ಆಚರಿಸಿ ಮಂಜೇಶ್ವರದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಅತ್ಯಂತ ಸಡಗರ ಸಂಭ್ರಮದ ಈದುಲ್ ಫಿತ್ರ್ ಆಚರಿಸಿದರು. ಮಂಜೇಶ್ವರದ ವಿವಿಧ ಮಸೀದಿ, ಈದ್ಗಾ ಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಷಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಬೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತರಲಾಯ್ತು. ತೂಮಿನಾಡು ಮಸ್ಜಿದ್ ನೂರ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಅಶ್ಪಾಕ್ ಮಚ್ಚಂಪ್ಪಾಡಿ ಹಾಗೂ
ಕಾಸರಗೋಡು ಆರ್ಯ ಸಮುದಾಯ ಸಂಘ ಇದರ ಪ್ರಥಮ ಮಹಾಸಭೆಯು ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಲ್ಲಿ ನಡೆಯಿತು. ಆರ್ಯ ಸಮಾಜ ಸಂಘ ಮಂಗಳೂರು – ಕಾಸರಗೋಡು ಇದರ ಅಧ್ಯಕ್ಷ ವಾಮನ ರಾವ್ ಮುಳ್ಳಂಗೋಡು ನೂತನ ಸಂಘಟನೆಯನ್ನು ಉದ್ಘಾಟಿಸಿದರು. ಆರ್ಯ ಸಮುದಾಯದ ಸಂಘದ ಅಧ್ಯಕ್ಷೆ ಪ್ರೇಮಲತಾ ವೈ ರಾವ್ ಅಧ್ಯಕ್ಷತೆ ವಹಿಸಿದ್ದರು. ಯತೀಶ್ ಕುಮಾರ್ ಪರಂಗೋಡು ಪ್ರಾಸ್ತಾವಿಕ ಭಾಷಣ ಮಾಡಿದರು. ಆರ್ಯ ಸಮುದಾಯ ಸಂಘದ ಕಾರ್ಯದರ್ಶಿ ಕೃಷ್ಣೋಜಿ ಮಾಸ್ಟರ್ ವರದಿ ವಾಚಿಸಿದರು. ಕೋಶಾಧಿಕಾರಿ
ಎಪ್ರಿಲ್ 20ರಂದು ಶ್ರೀ ವನಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಮಂಜೇಶ್ವರ ಕೊಡಿಮಾರು ಕುಳೂರಿನ ಶ್ರೀ ವನಶಾಸ್ತಾವೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಹಾಗೂ ನಾಗದರ್ಶನ ಕಾರ್ಯಕ್ರಮದಲ್ಲಿ ಕೊಡುಗೈ ದಾನಿ ಹಾಗೂ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಸ್ಥಾಪಕಾಧ್ಯಕ್ಷರಾದ ಉದ್ಯಮಿ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಇವರಿಗೆ ಎಪ್ರಿಲ್ 20 ಗುರುವಾರದಂದು ರಾತ್ರಿ 8 ಗಂಟೆಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ
ಮಂಜೇಶ್ವರ : ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ನಡೆಯಿತು. “ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ.ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ
ಮಂಜೇಶ್ವರದ ಮಿಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಟತ್ತಮೊಗರುವಿನಲ್ಲಿ ಮೊಗೇರ ದೈವದ ಪವಾಡ ಕಂಡು ಅಲ್ಲಿನ ಜನತೆ ಅಚ್ಚರಿಗೆ ಒಳಗಾಗಿದ್ದಾರೆ. ಮೊಗೇರ ದೈವಗಳ ವರ್ಷಾವಧಿ ನೇಮೋತ್ಸವ ನಡೆಯುತ್ತದೆ. ಈ ಬಾರಿ ದೈವಗಳ ಭಂಡಾರವನ್ನು ಈ ವರ್ಷದ ಉತ್ಸವಕ್ಕೆಂದು ತೆಗೆದಿಡುವಾಗ, ಕಳೆದ ವರ್ಷ ದೈವದ ಭಂಡಾರಕ್ಕೆ ಅರ್ಪಿಸಿದ ಮಲ್ಲಿಗೆ ಹೂ ವರ್ಷ ಕಳೆದರೂ ಇಂದಿಗೂ ಬಾಡದೆ ಹಾಗೆ ಇರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದು ದೈವದ ಕಾರಣಿಕ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
ಮಂಜೇಶ್ವರದ ಮೊರತ್ತಾಣೆ ನಿವಾಸಿ ಬಾಬು ಬೆಳ್ಚಪ್ಪಾಡ ಎಂಬವರ ಪುತ್ರ ರೋಹಿತಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ. ಮಂಜೇಶ್ವರ ಸಮೀಪದ ದೈಗೋಳಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಎಪ್ರಿಲ್ 4ರಂದು ಕೆಲಸಕ್ಕೆಂದು ಹೋದಾವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆತನ ಸಹೋದರ ಗಂಗೂ ಮೊರತ್ತಾಣೆ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ರೋಹಿತಾಕ್ಷನ ಬಗ್ಗೆ ಸುಳಿವು ಸಿಕ್ಕಲ್ಲಿ
ಮಂಜೇಶ್ವರ: ಭಾರತದ ಆಯಕಟ್ಟಿನ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಭಾರೀ ಬಂಡವಾಳದ ಕುಳಗಳಾದ ಅದಾನಿ ಮತ್ತು ಅಂಬಾನಿ ಎಂಬ ಆಧುನಿಕ ಕುಬೇರರ ಪಾದಗಳಿಗೆ ಸಮರ್ಪಿಸಿ ದೇಶದ ಆರ್ಥಿಕತೆಯನ್ನು ಪಾತಾಳಕ್ಕಿಳಿಸಿದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಹಿತವನ್ನು ಸಂಪೂರ್ಣವಾಗಿ ಮರೆತಿದೆ. ಜನವಿರೋಧಿ, ಭ್ರಷ್ಟ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಹೋರಾಟ ಮುಂದುವರಿಸಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ




























