Home ಕರಾವಳಿ Archive by category ಮಂಗಳೂರು (Page 69)

ಹಿರಿಯ ಸಮಾಜ ಸೇವಕರೂ, ಭಾಸ್ಕರ್. ಎಂ. ಮಳವೂರು ಅನಾರೋಗ್ಯದಿಂದಾಗಿ ನಿಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರೂ, ಜಿಲ್ಲಾ ಸಂಘಟನಾ ಸಂಚಾಲಕರೂ, ಮಳವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಹಿರಿಯ ಸಮಾಜ ಸೇವಕರೂ ಹಾಗೂ ಜಿಲ್ಲೆಯ ಖ್ಯಾತ ವಾದ್ಯ ಕಲಾವಿದರೂ ಆಗಿರುವ ಶ್ರೀಯುತ ಭಾಸ್ಕರ್. ಎಂ. ಮಳವೂರು ಸಿದ್ಧಾರ್ಥನಗರ ಇವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ

ಕರಾವಳಿ ನದಿ ತೀರಗಳಲ್ಲಿ ಹೆಚ್ಚುತ್ತಿದೆ ಭೂ ಸವೆತ : ನದಿಯ ಒಡಲು ಸೇರಿ ಮಣ್ಣಿನ ನಾಶ

ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮಘಟ್ಟದಿಂದ ಹರಿದು ಬರುವ50 ಕ್ಕೂ ಹೆಚ್ಚು ಜೀವ ನದಿಗಳಿಂದ ವರ್ಷದಿಂದ ವರ್ಷಕ್ಕೆ ನದಿ ತೀರದ ಭೂಮಿಗಳು ಮಳೆಗಾಲದಲ್ಲಿ ಬರುವ ಬಾರೀ ಪ್ರವಾಹದಿಂದ ನದಿ ತೀರದ ಭೂಮಿಗಳು ನದಿಯ ಒಡಲು ಸೇರಿ ಮಣ್ಣು ನಾಶವಾಗುತ್ತಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಭಾಗದಲ್ಲಿ ಹರಿಯುವ 3 ನದಿಗಳಾದ ಸೀತಾ . ಸ್ವರ್ಣಾ ಮತ್ತು ಮಡಿ ಸಾಲು ನದಿಗಳಿಂದ ಕಳೆದ ಹಲವಾರು ವರ್ಷದಿಂದ ನದಿ ತೀರದ ಕೃಷಿ ಭೂಮಿ , ತೆಂಗಿನ ತೋಟ ನದಿಯ ಒಡಲು ಸೇರುತ್ತಿದೆ . ಸೀತಾ […]

ಕಂಬಳಕ್ಕೆ ಸುಪ್ರಿಂಕೋರ್ಟ್ ಮಾನ್ಯತೆ – ಮೇ 18 ಕಂಬಳಕ್ಕೆ ಐತಿಹಾಸಿಕ ದಿನ

ಮೂಡುಬಿದಿರೆ: ಕರಾವಳಿಯ ಜಾನಪದ ಕ್ರೀಡೆ ಕಂಬಳ. ರಾಜ್ಯದಲ್ಲಿ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಂಬಳಕ್ಕೆ ಮಾನ್ಯತೆ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ದಯಾ ಸಂಘಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಕಂಬಳ ಸಮಿತಿ ಸಂತಸ ವ್ಯಕ್ತಪಡಿಸಿದ್ದು, ಈ ದಿನ ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ದಿನ ಎಂದು ಕಂಬಳ ಸಮಿತಿ ಬಣ್ಣಿಸಿದೆ. ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ

ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳವನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ

ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆಯನ್ನು ಖಂಡಿಸಿ,BJP ಸಂಸದ ಬ್ರಿಜ್ ಭೂಷಣ್ ಸಿಂಗ್ ಮತ್ತು BJP ಹರ್ಯಾಣ ಮಂತ್ರಿ ಸಂದೀಪ್ ಸಿಂಗ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಕ್ರೀಡಾಪಟುಗಳ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ ದೇಶದ ರೈತ

ಕಟೀಲು : ಬಸ್‍ಗೆ ಬೆಂಕಿ, ಪ್ರಯಾಣಿಕರು ಹಾಗೂ ಬಸ್ ಚಾಲಕ ಪಾರು

ಚಲಿಸುತ್ತಿದ್ದ ಬಸ್‍ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಕಟೀಲು ದೇವಸ್ಥಾನದ ಮುಂಭಾಗದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಹಾಗೂ ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.ಕಟೀಲು ದೇವಸ್ಥಾನದ ಮುಂಭಾಗದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಹಾಗೂ ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ದೇವಸ್ಥಾನದ ಮುಂಭಾಗವೇ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಬಸ್ ನಲ್ಲಿ ಇಬ್ಬರ ಮಹಿಳೆಯರು ಮತ್ತು ಬಸ್ ಚಾಲಕ ಇದ್ದರು ಎಂದು ಹೇಳಲಾಗಿದ್ದು, ಮೂವರು

ಬೈಕಂಪಾಡಿಯಲ್ಲಿ ರೈಲು ಢಿಕ್ಕಿಯಾಗಿ ಬೀಡಾಡಿ ಎಮ್ಮೆಗಳ ಸಾವು : ಜಾನುವಾರುಗಳ ವಿಲೇವಾರಿಗೆ ಮುಂದಾಗದ ಇಲಾಖೆ

ಬೈಕಂಪಾಡಿಯ ಅಂಗರ ಗುಂಡಿಯಲ್ಲಿ ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಜಾನುವಾರಗಳ ವಿಲೇವಾರಿ ಕಾರ್ಯಾಚರಣೆ ಸ್ಥಳೀಯ ಯುವಕರು ಮತ್ತು ಡಿವೈಎಫ್‍ಐ ಮುಖಂಡರ ಸಹಕಾರದಲ್ಲಿ ನಡೆಯಿತು.ರೈಲು ಹಳಿಯ ಮೇಲೆ ಮೇಯುತ್ತಿದ್ದ 20ಕ್ಕೂ ಅಧಿಕ ಎಮ್ಮೆಗಳು ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದವು. ಬೆಳಿಗ್ಗೆ ಅಪಘಾತ ಸಂಭವಿಸಿದ್ದು ಶವಗಳು ಚೆಲ್ಲಾಪಿಲ್ಲಿಯಾಗಿದ್ದರೂ ಸಂಜೆ ತನಕ ಅವುಗಳ ವಿಲೇವಾರಿ ಮಾಡಲು ಇಲಾಖೆ ಮುಂದಾಗಿರಲಿಲ್ಲ. ಈ ಸಂದರ್ಭ

ಚುನಾವಣಾ ಕಣದಿಂದ ದೂರ ಸರಿದ ರಮಾನಾಥ್ ರೈ

ಚುನಾವಣಾ ರಾಜಕೀಯದಿಂದ ನಿವೃತ್ತಗೊಳ್ಳುತ್ತಿದ್ದೇನೆ. ಪಕ್ಷದ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ರಮಾನಾಥ ರೈ ಘೋಷಿಸಿದ್ದಾರೆ. ಅವರು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗೆ ಶ್ರಮಿಸಿದ ರಾಜ್ಯದ ಜನತೆಗೆ ಹಾಗೂ ನನ್ನ ಕ್ಷೇತ್ರದಲ್ಲಿ ನನಗೆ ಮತ ಚಲಾಯಿಸಿದ ಮತದಾರರಿಗೆ, ಪಕ್ಷದ

ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ನಡೆಸುತ್ತೇವೆ-ಡಿ.ಆರ್.ರಾಜು

ಕಾರ್ಕಳ: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನ ಪಡೆದಿದೆ. ಗೆಲುವಿನ ಹಾಗೂ ಸೋಲಿನ ಅಂತರದ ಕಾರಣದ ಬಗ್ಗೆ ಆತ್ಮಾವಲೋಕನ ನಡೆಸಿ ಉಭಯ ಜಿಲ್ಲೆಯ ನಾಯಕರು ಪಕ್ಷವನ್ನು ಮುಂಬರುವ ಚುನಾವಣೆಗೆ ಸಿದ್ಧಗೊಳಿಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಡಿ.ಆರ್ ರಾಜು ಹೇಳಿದರು. ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪರ ಅಲೆಯಿಂದ 135 ಸೀಟು ಗೆದ್ದಿದೆ. ಆದರೆ ಎರಡು

ಬಸ್ ಚಾಲಕನ ಅಜಾಗರುಕತೆ ಚಾಲನೆಯಿಂದ ಸರಣಿ ಅಪಘಾತ

ಖಾಸಗಿ ಬಸ್ ಚಾಲಕನೊರ್ವ ಏಕಾಏಕಿ ಬಸ್‍ನ್ನು ಹೆದ್ದಾರಿಗಡ್ಡವಾಗಿ ತಿರುಗಿಸಿದ್ದರ ಪರಿಣಾಮ ನಡೆದ ಸರಣಿ ಅಪಘಾತದಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಪಡುಬಿದ್ರಿಯ ಅಪಾಯಕಾರಿ ತಿರುವು ಸಹಿತ ಜಂಕ್ಷನ್‍ನಲ್ಲಿ ಮಂಗಳೂರು ಕಡೆಯಿಂದ ಬಂದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಉಡುಪಿ ಕಡೆಯಿಂದ ಹೆದ್ದಾರಿಯಲ್ಲಿ ವಾಹನಗಳು ಬರುತ್ತಿದ್ದರೂ ಕ್ಯಾರೇ ಎನ್ನದೆ ಏಕಾಏಕಿ ಹೆದ್ದಾರಿಗಡ್ಡವಾಗಿ ಬಸ್ ಚಲಾಯಿಸಿದಾಗ ಹೆದ್ದಾರಿಯಲ್ಲಿ ಬರುತ್ತಿದ್ದ

ತೋಟ ಬೆಂಗ್ರೆ ಜನರಲ್ ಸ್ಟೋರ್ ಗೆ ಬೆಂಕಿ- ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ

ಮಂಗಳೂರಿನ ತೋಟ ಬೆಂಗ್ರೆ ಪರಿಸರದ ಜನರಲ್ ಸ್ಟೋರ್ ಗೆ ಬೆಂಕಿಸರಿಸುಮಾರು 2 ಘಂಟೆ ರಾತ್ರಿ ಜನರಲ್ ಸ್ಟೋರ್‍ಗೆ ಬೆಂಕಿ ಕಾಣಿಸಿದ್ದು ಇದ್ದನ್ನು ಗಮನಿಸಿದ್ದ ಸ್ಥಳೀಯರು ಕದ್ರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಮ್ಮಿಂದ ಆಗುವಷ್ಟು ಸ್ಥಳಿಯರೇ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿದ್ದರು. ಬಳಿಕ ಬಂದ ಕದ್ರಿ ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿಗಳು ಜೊತೆ ಸೇರಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಅಂಗಡಿಯ ವಸ್ತುಗಳೆಲ್ಲಾ ಸಂಪೂರ್ಣ