Home ಕರಾವಳಿ Archive by category ಉಳ್ಳಾಳ (Page 33)

ಸಮುದ್ರಕ್ಕೆ ಬಿದ್ದ ವ್ಯಕ್ತಿ : ರಕ್ಷಿಸಿದ ಸ್ವೀಡನ್ ಪ್ರಜೆ

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದ ವ್ಯಕ್ತಿಯನ್ನು ವಿದೇಶಿ ಪ್ರವಾಸಿಗ ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.ಸೋಮೇಶ್ವರ ರೈಲ್ವೇ ನಿಲ್ದಾಣದ ಬಳಿಯ ಬಾಡಿಗೆ ಮನೆ ನಿವಾಸಿ ಪ್ರವೀಣ್ ಚೆಟ್ಟಿಯಾರ್(41) ರಕ್ಷಿಸಲ್ಪಟ್ಟ ವ್ಯಕ್ತಿ.ಸ್ವೀಡನ್ ದೇಶದ ಪ್ರವಾಸಿಗ ಆಡಮ್ ರಕ್ಷಿಸಿದವರು. ಇಂದು ಮಧ್ಯಾಹ್ನದ ವೇಳೆ ಪ್ರವೀಣ್ ಅವರು

ಮಗುವಿನ ನೆರವಿಗೆ ನಿಂತ ಉಳ್ಳಾಲದ ಟೀಂ ಹನುಮಾನ್

ಉಳ್ಳಾಲ: ಐದು ವರ್ಷದ ಹಿಂದೆ ಸಮಾಜಮುಖಿ ಕಾರ್ಯಗಳಿಗೆ ವೇದಿಕೆಯಾಗಿ ಸ್ಥಾಪನೆಗೊಂಡ ಉಳ್ಳಾಲದ ಟೀಂ ಹನುಮಾನ್ 20 ಮಂದಿ ಯುವಕರ ತಂಡ ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ದಸರಾ ಉತ್ಸವದ ವೇಳೆ ವಿವಿಧ ರೀತಿಯ ವೇಷ ಧರಿಸಿ ಜನರಿಂದ ಸಂಗ್ರಹಿಸಿದ ಹಣವನ್ನು ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ನೀಡಿ ಮಾದರಿಯಾಗಿದ್ದಾರೆ. ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡಬಿದ್ರೆಯ ಒಂದೂವರೆ ವರ್ಷದ ಶ್ರೀಯಾ ಹೆಸರಿನ ಮಗುವಿನ

ತೊಕ್ಕೊಟ್ಟು – ಕುಂಪಲ ಬೈಪಾಸ್ : ಸರ್ವೀಸ್ ರಸ್ತೆಗೆ ಒತ್ತಾಯ : ತೀವ್ರ ಹೋರಾಟಕ್ಕೆ ನಿರ್ಧಾರ

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ಸಾರ್ವಜನಿಕ ಹೋರಾಟ ಸಮಿತಿಯು ಆಗ್ರಹಿಸಿದೆ. ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸಭೆಯು ಸೋಮವಾರ ಸಂಜೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಸಮಿತಿಯ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೊರಾಟ ಸಮಿತಿಯ ಸಭೆಯಲ್ಲಿ ಸರ್ವ ಪಕ್ಷಗಳ ಮುಖಂಡರು

ತೊಕ್ಕೊಟ್ಟು : ಒಂದು ದಿನದ ಗಂಡುಮಗು ರಸ್ತೆ ಬದಿಯಲ್ಲಿ ಪತ್ತೆ

ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಎಂಬವರ ಮನೆಯ ಎದುರುಗಡೆ ಗೇಟಿನ ಹೊರಗಡೆ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆಮಂದಿ ಬೆಳಿಗ್ಗೆ ಏಳುವಾಗ ಮಗು ಕೂಗುತ್ತಿರುವುದನ್ನು ಗಮನಿಸಿ ಹೊರಹೋದಾಗ ಕಾರಿನ ಕೆಳಗಡೆ ಬಿಳಿ

ತೊಕ್ಕೊಟ್ಟು-ಕಾಪಿಕಾಡ್ ಹೆದ್ದಾರಿಯಲ್ಲಿ ಅವೈಜ್ಞಾನಿಕ ಯೂಟರ್ನ್ : ಪ್ರತಿನಿತ್ಯ ಅಪಘಾತ – ಪ್ರಾಣ ಭಯದಲ್ಲಿ ಸ್ಥಳೀಯರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್‍ನಿಂದ ಕುಂಪಲ ಬೈಪಾಸ್ ತನಕ ಸರ್ವಿಸ್ ರಸ್ತೆಯನ್ನು ವಿಸ್ತರಿಸಬೇಕು. ಹಾಗೂ ಕಾಪಿಕಾಡ್ ಬಳಿ ಇರುವ ಅವೈಜ್ಞಾನಿಕ ಯೂಟರ್ನ್ ಓಪನ್ ರಸ್ತೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಜಿಲ್ಲಾಡಳಿತÀ ಹಾಗೂ ಹೆದ್ದಾರಿ ಇಲಾಖೆಗೆ ಮನವಿ ಮಾಡಿದೆ. ಮನವಿ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ

ಉಳ್ಳಾಲ: ಸಂಚಾರಿ ಪೇದೆಗೆ ಕಾರು ಢಿಕ್ಕಿ ಹೊಡೆದು ಪರಾರಿ

ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಪೇದೆಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು, ಅವರು ತಲೆಗೆ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲಬೈಲ್ ರಸ್ತೆಯಲ್ಲಿ ಸಂಭವಿಸಿದ್ದು, ಶಿವಮೊಗ್ಗ ನಿವಾಸಿ ಲೋಕೇಶ್ (35) ಗಾಯಾಳು ಪೇದೆ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್ ವಾಹನದಲ್ಲಿ ಚಾಲಕನಾಗಿದ್ದ ಇವರು ಉಳ್ಳಾಲಬೈಲ್ ಬಳಿ ತಪಾಸಣೆಗೈಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ.

ವೆಲ್ಪೇರ್ ಅಸೋಸಿಯೇಷನ್ ರಾಣಿಪುರ ವಾರ್ಷಿಕೋತ್ಸವ : ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ

ಉಳ್ಳಾಲ: ವೆಲ್ಫೇರ್ ಅಸೋಸಿಯೇಷನ್ ರಾಣಿ ಪುರ (ರಿ)ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮುನ್ನೂರು ಗ್ರಾಮ ಪಂಚಾಯತ್ ಮುನ್ನೂರು ಮತ್ತು ಮಂಗಳೂರಿನ ಫಾದರ್ ಮುಲ್ಲರ್ ಅಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯಾ ತಪಾಸಣಾ ಶಿಬಿರ ರಾಣಿ ಪುರ ಶಾಲಾ ವಠಾರದಲ್ಲಿ ನಡೆಯಿತು. ರಾಣಿಪುರ ಮೇರಿ ವಿಶ್ವ ಮಾತೆ ದೇವಾಲಯ ಧರ್ಮಗುರು ಫಾದರ್ ಜಯಪ್ರಕಾಶ್ ಡಿ ಸೋಜ ಉಚಿತ ವೈದ್ಯಕೀಯಾ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ದೇಶದ ಜನರು ಪರಸ್ಪರ ಇತರರ

ಎಸ್‍ಡಿಪಿಐ ನಿಷೇಧಿಸಲು ಗೃಹ ಸಚಿವರು ಮಾಡಿದ ಗೂಡಂಗಡಿಯಲ್ಲ : ಅನ್ವರ್ ಸಾದತ್ ಬಜತ್ತೂರು ಆಕ್ರೋಶ

ತೊಕ್ಕೊಟ್ಟು : ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರು ಎಸ್ ಡಿಪಿಯನ್ನು ನಿಷೇಧಿಸಲಾಗುವುದು ಎಂದು ಹೇಳುತ್ತಿದ್ದು ನಿಷೇಧಿಸಲು ಇದೇನೂ ಗೂಡಂಗಡಿಯಲ್ಲ. ಇದು ಚುನಾವಣಾ ಆಯೋಗದಲ್ಲಿ ನೋಂದಾಯಿತವಾದ ಒಂದು ರಾಜಕೀಯ ಪಕ್ಷ ಎಂದು ಎಸ್ ಡಿಪಿ ಐ ದ. ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ ಡಿಪಿ ಐ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯ ಮೇಲೆ ರಾಷ್ಟ್ರೀಯ ತನಿಖಾ ದಳ ನಡೆಸಿದ ಅತಿಕ್ರಮಣದ ದಾಳಿ ಮತ್ತು ಪಾಪ್ಯುಲರ್ ಫ್ರಂಟ್

ಉಳ್ಳಾಲ: ಅಕ್ರಮ ಮರಳು ದಾಸ್ತಾನು:ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ

ಉಳ್ಳಾಲ: ಅಕ್ರಮ ಮರಳು ದಾಸ್ತಾನಿರಿಸಿದ ಪ್ರದೇಶಕ್ಕೆ ದಾಳಿ ನಡೆಸಿದ ತಹಸೀಲ್ದಾರ್ ನೇತೃತ್ವದ ತಂಡ ಎರಡು ಲೋಡ್ ಮರಳನ್ನು ವಶಪಡಿಸಿಕೊಂಡಿದೆ.ಅಂಬ್ಲಮೊಗರು ಗ್ರಾಮದ ಕುಂಡೂರು ಮಸೀದಿ ಬಳಿ ದಾಸ್ತಾನಿರಿಸಿದ ಮರಳು ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ತಹಸೀಲ್ದಾರ್ ಡಿ.ಎ ಪುಟ್ಟರಾಜು ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಹೆಚ್, ಪಿಡಿಓ ರವೀಂದ್ರ ನಾಯಕ್, ಗ್ರಾಮಕರಣಿಕೆ ನಯನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮಾಡೂರು ತಲವಾರು – ದೊಣ್ಣೆ ತೋರಿಸಿ ಜಾನುವಾರು ಕಳವು ನಡೆಸಿದ ಮೂವರ ಬಂಧನ

ಉಳ್ಳಾಲ:ಮಾಡೂರು ಸೈಟ್ ನಲ್ಲಿ ತಲವಾರು ದೊಣ್ಣೆ ತೋರಿಸಿ ಜೀವಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಎಸಿಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಟ್ವಾಳ ಕಸಬಾ ಗ್ರಾಮದ ಟಿಪ್ಪುನಗರ ದ ಜಾಬೀರ್ (24), ಫರಂಗಿಪೇಟೆ ಅಮ್ಮೆಮ್ಮಾರ್ ಮಸೀದಿ ಬಳಿಯ ಹೈದರಾಲಿ(24), ಬಂಟ್ವಾಳ ಸಿದ್ದಕಟ್ಟೆಯ ಸಂಗಬೆಟ್ಟುವಿನ