Home ಕರಾವಳಿ Archive by category ಮಂಗಳೂರು (Page 58)

ಶ್ರೀನಗರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ದೇಶದ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದ ಮೋದಿ

ಜಗತ್ತು ಯೋಗವನ್ನು ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ ಎಂಬಂತೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಶ್ಮೀರದ ‘ಶೇರ್ ಇ ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್’ನಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಜನರು ತಮ್ಮ ವೈಯಕ್ತಿಕ ಯೋಗಕ್ಷೇಮಕ್ಕೂ ಸಮಾಜದ ಕಲ್ಯಾಣಕ್ಕೂಸಂಬಂಧವಿದೆ

ಪ್ರಕೃತಿ ಯೋಗ ಕುಟೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮಂಗಳೂರಿನ ಕದ್ರಿ ಕೈಬಟ್ಟಲಿನ ಪ್ರಕೃತಿ ಯೋಗ ಕುಟೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮನೋಹರ್ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯೋಗಾಸನದಿಂದ ಅದ್ಭುತ ಶಕ್ತಿ ಉಂಟಾಗುತ್ತದೆ. ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಎಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಶಾಂತ್ ಮಾರ್ಲ ಅವರು ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ

ಐಎಂರಾಮೋಜಿರಾವ್ ದೂರದೃಷ್ಠಿತ್ವವುಳ್ಳವರು: ಹಿರಿಯ ಪತ್ರಕರ್ತ ಯು ಕೆ ಕುಮಾರ್ ನಾಥ್

ಮಂಗಳೂರು: ರಾಮೋಜಿ ರಾವ್ ಅವರು ದೂರದೃಷ್ಟಿತ್ವವುಳ್ಳವರು. ಉಪ್ಪಿನಕಾಯಿ ಮೂಲಕ ಒಂದು ಬೃಹತ್ ಉದ್ಯಮ ಆರಂಭಿಸಬಹುದು ಎಂದು ಬಹಳಷ್ಟು ವರ್ಷಗಳ ಹಿಂದಯೇ ಆಲೋಚನೆ ಮಾಡಿದವರು ಎಂದು ವಿಜಯಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ , ಹಿರಿಯ ಪತ್ರಕರ್ತ ಕುಮಾರನಾಥ್ ಹೇಳಿದರು. ನಗರದ ಎ.ಬಿ.ಶೆಟ್ಟಿ ವೃತ್ತದ ಬಳಿಯಿರುವ ಮಾರ್ಗದರ್ಶಿ ಚಿಟ್ಸ್ ಫ್ರೈ. ಲಿಮಿಟೆಡ್ ಕಚೇರಿಯಲ್ಲಿ ನಡೆದ ರಾಮೋಜಿ ರಾವ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ

ಪ್ರಖರ ಎಲ್‌ಇಡಿ ಬೆಳಕು ಹಾಕಿ ದಂಡಕ್ಕೆ ಸಿಗಬೇಡಿ: ಪೋ.ಮ.ನಿ.ಅಲೋಕ್‌ಕುಮಾರ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಚೆಲ್ಲುವ ಎಲ್‌ಇಡಿ ಬೆಳಕುಗಳೊಡನೆ ವಾಹನಗಳು ಸಂಚರಿಸುತ್ತಿದ್ದು, ಇದು ಎದುರು ಬದಿಯ ವಾಹನಗಳವರನ್ನು ಕಕ್ಕಾಬಿಕ್ಕಿ ಮಾಡಿ ಅಪಘಾತಕ್ಕೆ ಕಾರಣ ಆಗುತ್ತಿವೆ. ಇದನ್ನು ಮುಂದುವರಿಸಿದರೆ ದಂಡ ವಿಧಿಸಲಾಗುವುದು ಎಂದು ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು. ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತಾ ವ್ಯವಸ್ಥೆಯ ಹೆಚ್ಚುವರಿ ಪೋಲೀಸು ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಎಲ್ಲ ಪೋಲೀಸು ಇಲಾಖೆಯವರಿಗೆ ಮತ್ತು ವಾಹನ ಹೊಂದಿರುವವರಿಗೆ

ಮಂಗಳೂರು : ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ತೈಲ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಮಂಗಳೂರಿನ ಪಿವಿಎಸ್ ವೃತ್ತದ ಬಳಿ ಬಿಜೆಪಿ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಲೋಕಸಭೆ ಚುನಾವಣೆಯ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಸಿ ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ಬಡವರ ಜೇಬಿಗೆ ಕತ್ತರಿ ಹಾಕುವಂತಹ ನಿರ್ಣಯ ಸರಿಯಲ್ಲ.

ಧರ್ಮಜಾಗೃತಿಯಿಂದ ಹಿಂದುತ್ವಕ್ಕೆ ಶಕ್ತಿ ಕೊಡುವ ಕಾರ್ಯ ಆಗಬೇಕು:ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿಕೆ

ಉಳ್ಳಾಲ: ದೇವಸ್ಥಾನಗಳ ಮುಖಾಂತರ ಧರ್ಮಕೇಂದ್ರದ ಚಟುವಟಿಕೆಗಳು ಹಾಗೂ ಧರ್ಮಜಾಗೃತಿಯ ಮುಖೇನ ಹಿಂದುತ್ವಕ್ಕೆ ಶಕ್ತಿ ಕೊಡುವ ಕಾರ್ಯಗಳಾಗಬೇಕಿದೆ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಅಭಿಪ್ರಾಯಪಟ್ಟರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ತನ್ನ ಕುಟುಂಬದ ದೊಡ್ಡಮನೆಗೆ ನೂತನ ಸಂಸದರಾಗಿ ಆಯ್ಕೆಗೊಂಡು ಆಶೀರ್ವಾದ ಪಡೆಯಲು ಬಂದವರು ತಲಪಾಡಿ ದೇವಸ್ಥಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಶೇ. 30% ಮುಸಲ್ಮಾನರಿದ್ದು,

ಉಡುಪಿಯ ಪುತ್ತೂರಿನಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ

ಅಭಿ, ಪ್ರವೀಣ್ ಕಟಪಾಡಿ, ದೇಶರಾಜ್ ಎಂಬುವರೇ ಬಂಧಿತ ಅರೋಪಿಗಳು. ಉಡುಪಿಯ ಪುತ್ತೂರಿನಲ್ಲಿ ಜೂನ್ 15 ರ ರಾತ್ರಿ ಈ ಘಟನೆ ನಡೆದಿತ್ತು. ಶಬರಿ ಎಂಬಾತನಿಗೆ ಸೆಲೂನ್ ನೌಕರ ಚರಣ್ ಬೈದಿದ್ದ. ಇದೇ ವಿಚಾರವಾಗಿ ಮಾತುಕತೆಗೆ ಕರೆದು ಕೊಲೆ ಯತ್ನ ನಡೆಸಲಾಗಿತ್ತು. ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಕರೆದಿದ್ದ ಪ್ರವೀಣ್ ಮತ್ತು ತಂಡ ಚರಣ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರು ಬೀಸಿದ್ದರು. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಸಂಗಡಿಗರು ಬೈಕ್ ಬಿಟ್ಟು

ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂದುವರಿದ ಗೋವುಗಳ ಕಳ್ಳತನ

ನಿನ್ನೆ ರಾತ್ರಿ ಸುಮಾರು 10-30 ಗಂಟೆಗೆ ಭಟ್ಕಳದಿಂದ ಶಿರೂರು ಮಾರ್ಗವಾಗಿ ಅಕ್ರಮವಾಗಿ ಸಾಗಿಸುತ್ತಿರುವ ಗೋವನ್ನು ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರ ಅದನ್ನು ಪೋಲಿಸರಿಗೆ ಮಾಹಿತಿ ನೀಡಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಗೋಕಳ್ಳರನ್ನು ಶಿರೂರಿನ ಕರ್ಕಿಕಳಿ ಕೇರಿ ವಠಾರದಲ್ಲಿ ವಾಹನವನ್ನು ಬಿಟ್ಟು ಗೋಕಳ್ಳರು ಪರಾರಿಯಾಗಿರುತ್ತಾರೆ , ರಾತ್ರಿ ಆ ಸಮಯದಲ್ಲಿ ವಿಷಯವನ್ನು ತಿಳಿದಂತ ಸುಧಾಕರ್ ಶೆಟ್ಟಿ ನೆಲ್ಯಾಡಿ , ಹಿಂದೂ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಆಗಮಿಸಿ

ವಿಟ್ಲ ಲಯನ್ಸ್ ಕ್ಲಬ್ ಪದಾಧಿಕಾರಿಗಳ ನೂತನ ಅಧ್ಯಕ್ಷರಾಗಿ ರಜಿತ್ ಆಳ್ವ ಎರ್ಮೆನಿಲೆ ಪದಗ್ರಹಣ

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ರಜಿತ್ ಆಳ್ವ ಎರ್ಮೆನಿಲೆ, ಕಾರ್ಯದರ್ಶಿಯಾಗಿ ಅರವಿಂದ ರೈ ಮೂರ್ಜೆಬೆಟ್ಟು, ಕೋಶಾಧಿಕಾರಿಯಾಗಿ ಮನೋಜ್ ಕುಮಾರ್ ರೈ ಮತ್ತು ಪದಾಧಿಕಾರಿಗಳಿಗೆ ಲಯನ್ಸ್ ಪ್ರಥಮ ಉಪರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಅವರು ಪದಗ್ರಹಣ ನಡೆಸಿಕೊಟ್ಟರು.ಬಳಿಕ ಮಾತನಾಡಿದ ಅವರು ವಿಟ್ಲ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಉತ್ತಮ

ಸರಕಾರದಿಂದ ನಾಮನಿರ್ದೇಶನಗೊಂಡ ವಿವಿಧ ಸಮಿತಿಗಳ ಸದಸ್ಯರಿಗೆ ಮಾಹಿತಿ ಕಾರ್ಯಗಾರ

ಸರಕಾರದಿಂದ ನಾಮನಿರ್ದೇಶನಗೊಂಡ ವಿವಿಧ ಸಮಿತಿಗಳ ಸದಸ್ಯರಿಗೆ ಮಾಹಿತಿ ಕಾರ್ಯಗಾರವು ಪುತ್ತೂರು ಶಾಸಕರ ಕಚೇರಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಗಾರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಸರಕಾರದಿಂದ ವಿವಿಧ ಸಮಿತಿಗಳ ರಚನೆ ಮಾಡಲಾಗಿದ್ದು, ಸಮಿತಿಯ ಪ್ರತಿಯೊಬ್ಬ ಸದಸ್ಯರೂ ತಮ್ಮ ಸಮಿತಿಯ ಕಾರ್ಯವೈಖರಿಯನ್ನು ತಿಳಿದುಕೊಂಡು ಕೆಲಸ ಮಾಡಬೇಕು ಎಂದರು. ಸರಕಾರದಿಂದ ನಾಮ