ನಗರದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.11ರಿಂದ 18ರವರೆಗೆ ಭಾರೀ ವಿಜೃಂಭಣೆಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು ಅದರ ಪೂರ್ವಸಿದ್ಧತೆಯ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಮಹಾನಗರ ಪಾಲಿಕೆ, ಆರೋಗ್ಯ, ಪೊಲೀಸ್ ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು. ಈ ಬಾರಿ ಬ್ರಹ್ಮಕಲಶೋತ್ಸವಕ್ಕೆ ಹೆಚ್ಚಿನ
ಮೂಡುಬಿದಿರೆ: ಶಿವತತ್ವ ಶ್ರೇಷ್ಠವಾದುದು. ಶಿವ ಅದಿ-ಅಂತ್ಯ ರಹಿತವಾದ ದೇವರು. ಆತ ನಮ್ಮ ಹೃದಯದೊಳಗೆ ಇದ್ದಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ. ಹೊರಗಡೆ ಬಂದಾಗ ಆತ ಒಬ್ಬನೇ ಆದ್ದರಿಂದ ಆತ ನಮ್ಮೊಳಗಡೆ ಇರುವಾಗಲೇ ಜಾಗೃತಿಯನ್ನು ಹೊಂದಬೇಕು ಎಂದು ಒಡಿಯೂರು ಗುರುದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಿರ್ತಾಡಿ ಶ್ರೀ ಕ್ಷೇತ್ರ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ
ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಮಂಗಳವಾರದಿಂದ 48 ದಿನಗಳ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಮಂಡಲೋತ್ಸವ ಆರಂಭಗೊಂಡಿದೆ. ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ ಚಾಮರಸೇವೆ ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು.ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ ,ವಿಷ್ಣುಮೂರ್ತಿ
ಉಡುಪಿಯಲ್ಲಿ ರಾಮ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ ನಡೆಯಿತು. ಬ್ರಹ್ಮರಥ, ಚಿನ್ನದ ರಥ ಮಹಾಪೂಜಾ ರಥ, ಬೆಳ್ಳಿರಥ ಹಾಗೂ ನವರತ್ನ ರಥವನ್ನು ರಥ ಬೀದಿಗೆ ಪ್ರದಕ್ಷಿಣೆ ತರಲಾಯಿತು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ರಾತ್ರಿ ನಡೆದ ಉತ್ಸವದಲ್ಲಿ ರಾಮಾಯಣ ಸಹಿತ ಕೃಷ್ಣದೇವರ ಉತ್ಸವ ನಡೆಸಲಾಯಿತು. ಮಹೋತ್ಸವಕ್ಕೂ ಮುನ್ನ ಮಧ್ವ ಸರೋವರದಲ್ಲಿ ತೆಪೋತ್ಸವ ನಡೆಯಿತು. ಈ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆಚರಿಸಲಿರುವ ದೀಪೋತ್ಸವ, ಕುಣಿತ ಭಜನೆ, ಪ್ರಯುಕ್ತ ಸೋಮವಾರ ಸಂಜೆ ಆರು ಗಂಟೆಗೆ ದೇವರ ಎದುರು ಪ್ರಾರ್ಥಿಸಿ ಶಂಖನಾದದಿಂದ ಆರಂಭವಾಗಲಿದೆ. ಈ ಪ್ರಯುಕ್ತ ಸಾದ್ಯವಾದಷ್ಟು ಮಂದಿ ಶಂಖದೊಂದಿಗೆ ಸಂಜೆ ಆರು ಗಂಟೆಗೆ ಉಪಸ್ಥಿತರಿದ್ದು ತಾವೂ ಶಂಖನಾದ ಸೇವೆ ನಡೆಸಿ ರಾಮನ ಸೇವೆಯನಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿಮಂಡಳಿಯವರು ವಿನಂತಿಕೊಂಡಿದ್ದಾರೆ.
ಮಂಗಳೂರು: ಶಬರಿಮಲೆ ಯಾತ್ರೆಯ ಗೌಜಿ. ಎಲ್ಲೆಲ್ಲಿಂದಲೋ ಶಬರಿಮಾಲೆಗೆ ಆಗಮಿಸುತ್ತಿರುವ ಅಪಾರ ಸಂಖ್ಯೆಯ ಭಕ್ತರು. ಊರೂರಲ್ಲಿ, ಮಂದಿರ, ಗುಡಿ, ಬೀರಿಗಳಲ್ಲಿ ಭಜನೆ, ದೀಪೋತ್ಸವ, ಇರುಮುಡಿ ಕಟ್ಟುವಿಕೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲೆಲ್ಲೂ ಅಯ್ಯಪ್ಪ ವೃತದಾರಿಗಳು…ಇವೆಲ್ಲವೂ ಕಣ್ಣಿಗೆ ಈಗ ನಿತ್ಯ ಕಾಣುವ ದೃಶ್ಯಗಳಾದರೆ ಅಯ್ಯಪ್ಪ ಮಾಲಾಧಾರಣೆಯ ಹಿಂದೆ ಮಹಿಳೆಯರನ್ನು ಮೈಲಿಗೆಯ ನೆಪದಲ್ಲಿ ತೆರೆಮರೆಗೆ ಸರಿಸುವ ವ್ಯವಸ್ಥೆಯೊಂದು ಅಂದಿನಿಂದ ಇಂದಿನವರೆಗೂ ಸದ್ದಿಲ್ಲದೆ
ಮಂಗಳೂರು ಬೋಳಾರದ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಭೂಪಟದಲ್ಲಿ ಯಾರೋ ಕಿಡಿಗೇಡಿಗಳು ಪೀರ್ ದರ್ಗಾ ಕಾಂಪೌಂಡ್ ಎಂದು ತಿದ್ದಿರುವುದಾಗಿ ತಿಳಿದು ಬಂದಿದೆ. ಇದನ್ನು ಸರಿಪಡಿಸುವಂತೆ ದೇವಾಲಯದ ಆಡಳಿತ ಮಂಡಳಿಯವರು ದೂರು ದಾಖಲಿಸಿದ್ದಾರೆ. ಇದು ಕುಕೃತ್ಯ ಎಂದೂ ಖಂಡಿಸಿದ್ದಾರೆ.
‘ಪಡು ತಿರುಪತಿ’ಎಂದೇ ಕೀರ್ತಿ ಪಡೆದ ಕಾರ್ಕಳದಲ್ಲಿ ಸೂರ್ಯೋದಯಕ್ಕೂ ಮೊದಲು ‘ವಿಶ್ವರೂಪ ದರ್ಶನ’ ನೆರವೇರಿದೆ. ಕಾರ್ಕಳದ ಭಕ್ತರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಭಾಗವಹಿಸುವ ಉತ್ಸವ ಇದು. ಕಾರ್ತಿಕ ಮಾಸ ಬಂತೆಂದರೆ ಪಂಡರಾಪುರದ ವಿಠಲ ದೇವಸ್ಥಾನಕ್ಕೆ ಸಾವಿರಾರು ಭಜಕರು ಭಾರತದ ಮೂಲೆಮೂಲೆಗಳಿಂದ ಬಂದು ಸೇರಿ ಕುಣಿತ ಭಜನೆ ಮಾಡುವುದು, ವಿಠಲ ವಿಠಲ ಎಂದು ತಾಳ ಬಡಿಯುತ್ತಾ ಹಾಡುವುದು ತುಂಬಾ ಅದ್ಭುತ. ಆಷಾಢ, ಕಾರ್ತಿಕ ಮಾಸಗಳಲ್ಲಿ
ಮಂಗಳೂರಿನ ವಿ.ಟಿ.ರೋಡ್ ಬಾಲಕ ವೃಂದ, ಶ್ರೀ ಶಾರದಾ ಪೂಜಾ ಸಮಿತಿಯ ವತಿಯಿಂದ ನಗರದ ಶ್ರೀ ವಿಠೋಭ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದ ಸಭಾಗೃಹದಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.23 ರ ವರೆಗೆ ನಡೆಯಲಿದೆ.ಅ.18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಅ.19ರಂದು ದೇವಿಯ ಪ್ರತಿಷ್ಠೆ, ಅ.20ರಂದು ಚಂಡಿಕಾ ಹವನ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿಪೂಜೆ ನಡೆಯಿತು. ಅ.21 ರಂದು ಮಧ್ಯಾಹ್ನ ಪೂಜೆ ನಂತರ ನಂತರ ಸಂಜೆ 6.30ಕ್ಕೆ ವಿಶೇಷ
ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿ ವೇಷ ತಂಡ ಸಿದ್ಧವಾಗಿದೆ. ಈ ಬಾರಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದಲ್ಲಿ ಹೆಣ್ಣು ಮಕ್ಕಳ ತಂಡದ ಹುಲಿವೇಷ ಕುಣಿತ ವಿಶೇಷ ಗಮನ ಸೆಳೆಯಲಿದೆ. ಈ ಮೂಲಕ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷ ಕುಣಿತವನ್ನು ಉಳಿಸಿ ಬೆಳೆಸುವಲ್ಲಿ ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ತಂಡ ಮುಂದಡಿಯಿಟ್ಟಿದೆ. ಈ ಕುರಿತು ದರ್ಪಣ ಸಂಸ್ಥೆಯ ನೃತ್ಯ ನಿರ್ದೇಶಕಿ ರಮ್ಯಾ ಅವರು ಮಾತನಾಡಿ ನಮ್ಮ ದರ್ಪಣ ಸಂಸ್ಥೆಯಲ್ಲಿ ಸುಮಾರು ಏಳು ವರ್ಷಗಳಿಂದ ಮಹಿಳೆಯರು ಹಾಗೂ




























