ವಿಜಯಪುರ;ತನ್ನೂರಿಗೆ ಪಿಯು ಕಾಲೇಜು ಬೇಕೆಂದು 5 ವರ್ಷಗಳಿಂದ ಹೋರಾಡಿದ್ದ ಯುವಕ ಕೊನೆಗೆ ರಕ್ತದಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದಾನೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ ವಿಜಯರಂಜನ ಜೋಶಿ ಸ್ವಂತ ಊರಿನಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದರು. ಅಧಿಕಾರಿಗಳಿಗೆ ದುಂಬಾಲು
ಬಹುನಿರೀಕ್ಷಿತ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಗಡಿನಾಡು ಗುಂಡ್ಲುಪೇಟೆ ಪಟ್ಟಣದಿಂದ ಆರಂಭವಾಗಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಪಾದಯಾತ್ರೆ ಮುಗಿಸಿ ರಾಜ್ಯಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಗುಂಡ್ಲುಪೇಟೆಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಇಡೀ ರಾಜ್ಯಮಟ್ಟದ ನಾಯಕರು ಹಾಗೂ ರಾಷ್ಟ್ರಮಟ್ಟದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 40 ಸಾವಿರಕ್ಕು ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಈ
ಮಂಜೇಶ್ವರ: ಪ್ಲಸ್ ಒನ್ ವಿದ್ಯಾರ್ಥಿಯನ್ನು ಪ್ಲಸ್ ಟು ವಿದ್ಯಾರ್ಥಿಗಳು ರ್‍ಯಾಗಿಂಗ್ ವಿಚಾರದ ವೀಡಿಯೊದಿದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾದ ಬೆನ್ನಲ್ಲೇ ಕೇರಳದ ಶಿಕ್ಷಣ ಸಚಿವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಆದಷ್ಟು ಬೇಗನೆ ತನಿಖಾ ವರದಿ ನೀಡಲು ನಿರ್ದೇಶಿಸಲಾಗಿದೆ. ಕುಂಬಳೆ ಸಮೀಪದ ಅಂಗಡಿ ಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆ ಬಿಟ್ಟ ಬಳಿಕ ನಡೆದುಕೊಂಡು ಹೋಗುತಿದ್ದ 16ರ ಹರೆಯದ ಪ್ಲಸ್ ಒನ್
ದೇಶದಲ್ಲಿ ಈಗಾಗಲೇ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ನಿಷೇಧವನ್ನು ಹೊರಡಿಸಿರುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ತಿಳಿಸಿದ್ದಾರೆ.ರಾಜ್ಯದಲ್ಲಿ ಪಿಎಫ್ ಐ ಚಟುವಟಿಕೆಗಳನ್ನು ನಡೆಸುವುದಾಗಲಿ, ಆ ಸಂಘಟನೆ ಪರವಾಗಿ ಮಾತನಾಡುವುದಾಗಲೀ ಮಾಡಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೇ ರಾಜ್ಯದ ನಾನಾ
ಬೆಂಗಳೂರು, 27 ಸೆಪ್ಟೆಂಬರ್ 2022: ಕೋಮುವಾದಿ ಫಾಸಿಸ್ಟ್ ಬಿಜೆಪಿ ಸರ್ಕಾರ ತನ್ನ ರಾಜಕೀಯ ಶತ್ರುಗಳನ್ನು ಗುರಿಯಾಗಿಸಿಕೊಂಡು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ವಿರುದ್ಧ ಆರಂಭಿಸಿದ ಅಸಂವಿಧಾನಿಕ ದಾಳಿ ಮತ್ತು ಕಾನೂನುಬಾಹಿರ ಬಂಧನಗಳ ಮುಂದುವರಿದ ಭಾಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ) ಕಾರ್ಯಕರ್ತರನ್ನು ಕೂಡ ಕಾನೂನುಬಾಹಿರವಾಗಿ ಬಂಧಿಸುತ್ತಿದೆ. ಯಾವುದೇ
ಕಣ್ಣೂರು: ಕೋಝಿಕ್ಕೋಡ್‍ನಿಂದ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ ಹೊಡೆದ ಪರಿಣಾಮ, ವಿಮಾನವನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲೇ ಲ್ಯಾಂಡಿಂಗ್ ಮಾಡಿದ ಘಟನೆ ಸೋಮವಾರ ನಡೆದಿದೆ. ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಹಕ್ಕಿ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ವಿಮಾನವನ್ನು ತಪಾಸಣೆ ಮತ್ತು ನಿರ್ವಹಣೆಗಾಗಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. 135 ಮಂದಿ ಪ್ರಯಾಣಿಕರೊಂದಿಗೆ ಕೋಝಿಕ್ಕೋಡ್
ಎಸ್‍ಎಲ್‍ವಿ ಕಲರ್ಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಪರಾಧಿ ನಾನಲ್ಲ ಚಿತ್ರದ ಫಸ್ಟ್ ಲುಕ್ “ಅಪರಾಧಿ ನಾನಲ್ಲ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಬಿಡುಗಡೆ ಕಾರ್ಯಕ್ರಮ ಮೈಸೂರಿನ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ನಡೆಯಿತು. ಮುತಾಲಮಡ ಸ್ನೇಹ ಚಾರಿಟೇಬಲ್ ಟ್ರಸ್ಟ್ ನ ಸುನಿಲ್ ದಾಸ್ ಸ್ವಾಮೀಜಿ ಪೆÇೀಸ್ಟರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಪ್ರಶಾಂತ್ ಆಳ್ವ
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಗಣಪತಿ ಪೂಜೆಯೊಂದಿಗೆ ನವರಾತ್ರಿ ಪರ್ವಕ್ಕೆ ಚಾಲನೆ ನೀಡಿ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು. ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು. 9 ದಿನಗಳ ಕಾಲ ನಡೆಯುವ ಉತ್ಸವಕ್ಕೆ ದೇವಳ ಸಕಲ ಸಿದ್ಧತೆ ಮಾಡಿಕೊಂಡಿದ್ದು ಊರ- ಪರವೂರಿನಿಂದ ಭಕ್ತರಿಗೋಸ್ಕರ
ರಾಜ್ಯ ಸರಕಾರದ ಇಲಾಖೆಗಳಲ್ಲಿ ಶೇ40 ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆ ದಾರರು ಪ್ರಧಾನಿ ಮೋದಿಗೆ ನೀಡಿದ ದೂರಿನ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶ ರ ಮೂಲಕ ತನಿಖೆ ನಡೆಯಲಿ’ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ‘ರಾಜ್ಯದಲ್ಲಿ 40 ಶೇ. ಕಮೀಷನ್ ಪಡೆಯುವ ಆರೋಪ ಹೊಂದಿರುವ ಇಲಾಖೆಗಳ ಮೇಲೆ ಐ.ಟಿ, ಇ.ಡಿ ದಾಳಿ ಏಕೆ ನಡೆಯುತ್ತಿಲ್ಲ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಜನಕ್ಕೆ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಸಂಭ್ರಮ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು.ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸಿದ್ದು, ಬೆಳಿಗ್ಗೆ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ಮೊದಲು ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ತೆರಳಿದ




























