Home Archive by category Fresh News (Page 382)

ಕದ್ರಿ ಕಾಳಭೈರವ ದೇವಸ್ಥಾನ: ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

ಮಂಗಳೂರು: ಮಂಗಳೂರಿನ ಶ್ರೀ ಕಾಲಭೈರವ ದೇವಸ್ಥಾನ ಸುವರ್ಣ ಕದಳೀ ಶ್ರೀ ಯೋಗೇಶ್ವರ ಮಠದ ಮಠಾಧೀಶರಾದ ರಾಜರಾಜೇಶ್ವರತಪೋನಿಧಿ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರ ಮಾರ್ಗದರ್ಶನದಲ್ಲಿ, ವೇದವಿದ್ವಾನ್ ದೇರೆಬೈಲು ವಿಠಲ್‌ದಾಸ್ ತಂತ್ರಿಗಳ ನೇತೃತ್ವದಲ್ಲಿ ಕದ್ರಿ ಸಿದ್ಧ ಪೀಠದೊಡೆಯ ಶ್ರೀ ಕಾಲಬೈರವ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಇಂದು ನಾಥ ಪಂಥದ

ಕಾಲಭೈರವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಸಂ. ಕ. ಸಮಾಚಾರ, ಮಂಗಳೂರು: ಧರ್ಮ, ಸಂಸ್ಕøತಿಯೊಂದಿಗೆ ಪರಿಸರವನ್ನು ರಕ್ಷಿಸಿ ಉಳಿಸುವ ಮೂಲಕ ಜಗತ್ತನ್ನು ಉಳಿಸುವ ಕೆಲಸವಾಗಬೇಕಿದೆ ಎಂದು ಜಿ. ಆರ್. ಮೆಡಿಕಲ್ ಕಾಲೇಜು ಹಾಗೂ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.ನಗರದ ಕದ್ರಿಯಲ್ಲಿರುವ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಸಂಜೆ ಗೋರಕ್ಷನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ

ಸಾಹಿತ್ಯ ಸಮ್ಮೇಳನದಲ್ಲಿ ಮನಸೆಳೆದ ನೃತ್ಯೋತ್ಸವ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಇಪ್ಪತ್ತೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಶುಕ್ರವಾರದಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ತಂಡ ನೃತ್ಯ ರೂಪಕದ ಮೂಲಕ ಕಲಾ ಆರಾಧಕರನ್ನು ಮೂಕವಿಸ್ಮಿತರನ್ನಾಗಿಸಿತು. ವಿದುಷಿ ಶಾಲಿನಿ ಆತ್ಮಭೂಷಣ ನಿರ್ದೇಶನದಲ್ಲಿ ಹತ್ತೊಂಬತ್ತು ಮಂದಿ ಕಲಾವಿದರು ತಂಡ ತಂಡವಾಗಿ ‘ನೃತ್ಯೋsಹಂ’ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.   ಸರ್ವ ದೇವರ ಸಂತೃಪ್ತಿಗೆಂದು ಪುಷ್ಪಾಂಜಲಿ

ಪ್ರಾದೇಶಿಕ ಅಸ್ಮಿತೆ ಬಿಂಬಿಸಿದ ರಂಗ ವೈಖರಿ ಗೋಷ್ಠಿ

ಉಜಿರೆ, ಫೆ.5: ಯಕ್ಷಗಾನ ಭಕ್ತಿ ಪರಂಪರೆಯಿಂದ ಬೆಳೆದು ಬಂದ ಕಲೆ. ಇದು ನಾಟ್ಯಧರ್ಮೀಯ ಹಾಗೂ ಲೋಕಧರ್ಮೀಯ ನೆಲೆಗಳನ್ನು ಹೊಂದಿದೆ ಎಂದು  ಹವ್ಯಾಸಿ ಯಕ್ಷಗಾನ ಕಲಾವಿದ ಮತ್ತು ಉಪನ್ಯಾಸಕ ಸುನಿಲ್ ಪಲ್ಲಮಜಲು ಹೇಳಿದರು. ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ‘ಸಾರಾ ಅಬೂಬಕ್ಕರ್ ವೇದಿಕೆ’ಯಲ್ಲಿ ನಡೆಯುತ್ತಿರುವ 25ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ 4ನೇ ಗೋಷ್ಠಿಯ ‘ರಂಗವೈಖರಿ’ ಕಾರ್ಯಕ್ರಮದಲ್ಲಿ ‘ಯಕ್ಷಗಾನ’ ಕುರಿತು ವಿಶೇಷ ಉಪನ್ಯಾಸಕರಾಗಿ

ಸಾಹಿತ್ಯ ಸಮ್ಮೇಳನ: ಸನ್ಮಾನ ಕಾರ್ಯಕ್ರಮ

ಉಜಿರೆ, ಫೆ.4: ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಮ್ಮಾನಿಸುವುದರಿಂದ ಅವರ ಸಾಧನೆಗೆ ಇನ್ನಷ್ಟು ಸ್ಫೂರ್ತಿ ನೀಡಿದಂತಾಗುತ್ತದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು. ಅವರು ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾರಾ ಅಬೂಬಕ್ಕರ್

ವಿಶೇಷ ಉಪನ್ಯಾಸ: ‘ಮಂಕುತಿಮ್ಮನ ಕಗ್ಗ-ಜೀವನ ಮೌಲ್ಯ’

ಉಜಿರೆ, ಫೆ.5: ಉತ್ತಮ ಮೌಲ್ಯಗಳಿಂದ ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಸುಭದ್ರತೆ ಸಾಧ್ಯವಾಗುತ್ತದೆ ಎಂದು ಪ್ರವಚನಕಾರ ಜಿ.ಎಸ್. ನಟೇಶ್ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ

ವೈವಿಧ್ಯಮಯ ವಸ್ತು-ವಿಷಯಗಳಿಗೆ ಸಾಕ್ಷಿಯಾದ ‘ಕವಿಗೋಷ್ಠಿ’

ಉಜಿರೆ, ಫೆ.5: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ನಡೆದ ‘ಕವಿಗೋಷ್ಠಿ’ಯು ವೈವಿಧ್ಯಮಯ ವಸ್ತು-ವಿಷಯಗಳ ಕವನ ವಾಚನಕ್ಕೆ ವೇದಿಕೆಯಾಯಿತು.  ಜಿಲ್ಲೆಯ 20 ಪ್ರಸಿದ್ಧ ಕವಿಗಳು ಹಾಗೂ ಕವಯತ್ರಿಯರು ಭಾಗವಹಿಸಿದ್ದರು. ಪ್ರಸಕ್ತ ರಾಜಕೀಯ

ಸಾಹಿತ್ಯ ಸಮ್ಮೇಳನದಲ್ಲಿ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ

ಉಜಿರೆ, ಫೆ.4: ಸಾಹಿತ್ಯವು ಭಾಷೆ ಮತ್ತು ಅಕ್ಷರದ ಸಮ್ಮಿಶ್ರಣ. ಪತ್ರಕರ್ತರು ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರ ಗುರುತಿಸುವಿಕೆ ಒಂದು ದಿನಕ್ಕೆ ಮುಗಿದರೂ ಸಾಹಿತಿಗಳ ಗುರುತಿಸುವಿಕೆ ತುಂಬಾ ದಿನ ಇರುತ್ತದೆ ಎಂದು ಅಮರಸುಳ್ಯ ಅಧ್ಯಯನ ಕೇಂದ್ರ ಸುಳ್ಯದ ನಿರ್ದೇಶಕ ಡಾ. ಬಿ. ಪ್ರಭಾಕರ ಶಿಶಿಲ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯ ಸಮ್ಮೇಳನ : ಬಹಿರಂಗ ಅಧಿವೇಶನ; ನಿರ್ಣಯ (ಠರಾವು) ಮಂಡನೆ

ಉಜಿರೆ, ಫೆ.5: ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಬಹಿರಂಗ ಅಧಿವೇಶನ ನಡೆಯಿತು.  ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಹಾಗೂ ಗೌರವ ಕೋಶಾಧ್ಯಕ್ಷ ಬಿ. ಐತಪ್ಪನಾಯ್ಕ ಹತ್ತು ನಿರ್ಣಯಗಳನ್ನು ಮಂಡಿಸಿದರು: ಜಿಲ್ಲೆಯಲ್ಲಿ ಮಂಜೂರಾದ ಕನ್ನಡ ಭವನಗಳ

ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ‘ನಗೆಹಬ್ಬ’

ಉಜಿರೆ, ಫೆ.4: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ಖ್ಯಾತ ಹಾಸ್ಯ ಕಲಾವಿದ ಪಟ್ಟಾಭಿರಾಮ ಸುಳ್ಯ ಅವರು ನಡೆಸಿಕೊಟ್ಟ ನಗೆಹಬ್ಬ ಕಾರ್ಯಕ್ರಮವು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ತಮ್ಮ ಅದ್ಭುತವಾದ ಮಿಮಿಕ್ರಿ ಕಲೆಯ ಮೂಲಕ ಹಾಸ್ಯಲೋಕಕ್ಕೆ ಕರೆದೊಯ್ದರು. ದೈನಂದಿನ ಜೀವನದಲ್ಲಿ ಕೇಳಿಬರುವ ಸೈರನ್ ಸದ್ದು, ಆ್ಯಂಬುಲೆನ್ಸ್, ವಿಮಾನ