ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಹಗ್ಗ ಜಗ್ಗಾಟದ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಹಾಗೂ ಪುರುಷರ ತಂಡವು ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.ಮಹಿಳೆಯರ ಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮೇ.10ರಂದು ನಡೆಯುವ ವಿಧಾನಸಭೆಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 221 ಮತಗಟ್ಟೆಗಳಲ್ಲಿ 103 ಮತಗಟ್ಟೆಗಳಿಗೆ ವೆಬ್‌ಕಾಸ್ಟ್ ಅಳವಡಿಸಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ಸಹಿತ 62 ವಾಹನಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಮಹೇಶ್ಚಂದ್ರ ಹೇಳಿದರು. ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಕ್ಷೇತ್ರದಲ್ಲಿ ಮತಗಟ್ಟೆ 166ರ ಪೆರ್ಮುದೆ
ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ಹದಿಮೂರನೇ ವರುಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಏಪ್ರಿಲ್ 8ರಂದು ಸಂಜೆ ನಡೆಯಲಿದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಅಶ್ವತ್ಥ್ ಪಣಪಿಲ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. 4 ಎಕರೆ ಜಾಗದಲ್ಲಿ ಕಂಬಳ ನಡೆಯಲಿದ್ದು, ನೂತನವಾಗಿ 133.5 ಮೀ ಉದ್ದದ ಕರೆ ನಿರ್ಮಾಣಗೊಂಡಿದೆ. ಕೋಣಗಳನ್ನು ಕಟ್ಟಲು ತಂಪಾದ ಜಾಗ, ಉತ್ತಮ ನೀರಿನ ವ್ಯವಸ್ಥೆ,
ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ಆದರೆ ಎಸ್. ಸಿ, ಎಸ್. ಟಿ ಸಮುದಾಯದ ಜನರು ಡಿಸಿ ಮನ್ನಾ ಜಾಗದಲ್ಲಿ ಬಿಡಾರ ಹೂಡಿದರೆ ಕೂಡಲೇ ಅಲ್ಲಿಂದ ಎತ್ತಂಗಡಿ ಮಾಡಲು ಇಲಾಖೆಯಿಂದ ಅಧಿಕಾರಿಗಳು ಬರುತ್ತಾರೆ. ಇನ್ನು ಮುಂದೆ ಡಿಸಿ ಮನ್ನಾ ಜಮೀನಿನಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರು ಸಣ್ಣ ಗುಡಿಸಲು ಮಾಡಿ ಮನೆ ಮಾಡಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಓಡಿಸದೇ ಅಸಹಾಯಕ ಜನರಿಗೆ ವಾಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹಿಸಿದರು ಅವರು ಎಸ್
ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‍ನ ಸಮಾರೋಪ ಹಾಗು ಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪ ಏಕಕಾಲದಲ್ಲಿಯೆ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು. ಅವರು ಪರಶುರಾಮ ಥೀಂ ಪಾರ್ಕ್‍ನ ಸಮಾರೋಪ ಸಮಾರಂಭ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಉತ್ಸವಗಳು ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಬೇಕು. ಕಾರ್ಕಳ ಉತ್ಸಾವವು ರಾಜ್ಯದಲ್ಲೆಲ್ಲ
ಮೂಡುಬಿದಿರೆ: ಪುರಸಭೆಯ ಷರತ್ತು ಉಲ್ಲಂಘನೆ ಮಾಡಿ ಸರಕಾರದ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೇ ಕಾನೂನು ಬಾಹಿರವಾಗಿ ಜರಾತುಲ್ ಕುರಾನ್ ಕುರಾನಿಕ್ ಫ್ರೀ ಸ್ಕೂಲ್ ಮತ್ತು ಆಲ್ ಮಫಾಝ್ ವುಮೆನ್ಸ್ ಶೆರಿಯತ್ ಕಾಲೇಜನ್ನು ನಿರ್ಮಾಣ ಮಾಡಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯು ಮೂಡುಬಿದಿರೆ ಪುರಸಭೆಗೆ ಮನವಿ ನೀಡಿದರು. ಹಿಂ.ಜಾ.ವೇದಿಕೆಯ ಜಿಲ್ಲಾ ಸಹ ಸಂಯೋಜಕ್
ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ವಿಶೇಷ ಕಾರ್ಯಕಾರಿಣಿಯು ಕನ್ನಡ ಭವನದಲ್ಲಿ ಮಂಗಳವಾರ ನಡೆಯಿತು.ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೆ. ಆರ್ ಪಂಡಿತ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಕಸ್ತೂರಿ ಪಂಜ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಹಾಗೂ ವಿವಿಧ ಮೊರ್ಚಾ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡುಬಿದಿರೆ ಪ್ರಖಂಡ ಶ್ರೀ ಬ್ರಹ್ಮ ಘಟಕ ಜೋಗೊಟ್ಟು- ಆನೆಗುಡ್ಡೆ ಇವರ ವತಿಯಿಂದ ದೀಪಾವಳಿ ಪ್ರಯುಕ್ತ ಗೋ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷರಾದ ಪ್ರದೀಪ್ ಕುಮಾರ್, ಸದಸ್ಯೆ ಭವಾನಿ ಜೆ.ಸಾಲ್ಯಾನ್, ಜೋಗೊಟ್ಟು- ಆನೆಗುಡ್ಡೆ ಶ್ರೀ ಬ್ರಹ್ಮ ಘಟಕದ ಕಾರ್ಯದರ್ಶಿ ಅಭಿಷೇಕ್, ಸಂಯೋಜಕರಾದ ಶರತ್, ಸಹ ಸಂಯೋಜಕರಾದ ದಯಾನಂದ ಶೆಟ್ಟಿ, ಗೋರಕ್ಷ ಪ್ರಮುಖರಾದ ಕೌಶಿಕ್ ಮತ್ತು ಉದಯ ಶೆಟ್ಟಿ ಈ ಸಂದರ್ಭದಲ್ಲಿ
ಆಟೋ ರಿಕ್ಷಾ ಚಾಲಕ ಮಾಲಿಕರ ಸಂಘ(ರಿ) ಮೂಡುಬಿದಿರೆ ತಾಲೂಕು ಇದರ ವತಿಯಿಂದ ಶ್ರೀ ಧನಲಕ್ಷ್ಮೀ ಪೂಜೆ ಮತ್ತು ವಾಹನ ಪೂಜೆಯು ಆಲಂಗಾರು ಶ್ರೀ ಬಡಗು ಮಹಾಲೀಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಸಮಾಜ ಮಂದಿರದ ರಿಕ್ಷಾ ಪಾರ್ಕ್ ಬಳಿ ನಡೆಯಿತು. ಸಭಾ ಕಾರ್ಯಕ್ರಮ ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಿಕ್ಷಾ ಚಾಲಕರು ಆಪತ್ಬಾಂಧವರು. ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಕ್ಷಿತವಾಗಿ
ನೇತಾಜಿ ಬ್ರಿಗೇಡ್ ಮೂಡುಬಿದಿರೆ ಇದರ ಮೂರನೇ ವರ್ಷದ ದೀಪಾವಳಿ ಉತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದ ಬಳಿ ಇರುವ ಚಿಣ್ಣರ ಉದ್ಯಾನವನದಲ್ಲಿ ಮೊದಲ ಬಾರಿ “ತುಳುನಾಡ ಕೊಡಿ ಧ್ವಜಸ್ಥಂಭವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಸೋಮವಾರ ಲೋಕಾರ್ಪಣಿಗೊಳಿಸಿದರು. ತುಳು ಭಾಷೆಯನ್ನು ಸಂವಿಧಾನದ ಆರ್ಟಿಕಲ್ 347 ಪ್ರಕಾರ ಅಧಿಕೃತ ಮಾಡುವ ಬಗ್ಗೆ ಮತ್ತು ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡುವ ವಿಧೇಯಕವನ್ನು ಜಿಲ್ಲೆಯ ಎಲ್ಲಾ ಶಾಸಕರುಗಳು ಮುಂದಿನ ಅಧಿವೇಶನದಲ್ಲಿ




























