ಅಂತರರಾಷ್ಟ್ರೀಯ ಯೋಗ ದಿನಾಚರಣೆ ಡಾ. ಎನ್ಎಸ್ಎಎಮ್ ಪಿಯು ಕಾಲೇಜಿನಲ್ಲಿ ಆಚರಣೆ

ಮಂಗಳೂರಿನ ನಂತೂರಿನಲ್ಲಿರುವ ಡಾ. ನಿಟ್ಟೆ ಶಂಕರ್ ಅಡ್ಯಂತಾಯ ಮೆಮೋರಿಯಲ್ ಪಿಯು ಕಾಲೇಜಿನ ಎನ್ಎಸ್ಎಸ್ ಯೂನಿಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.
ಕಾಲೇಜಿನ ಅಡಿಟೋರಿಯಂನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷರಾದ ಡಾ. ಜ್ಞಾನೇಶ್ವರ್ ನಾಯಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಯೋಗದ ಪಾತ್ರ ಮಹತ್ವದ್ದು ಎಂದರು.

ಡಾ. ಎನ್ ಎಸ್ಎಎಮ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಶೆಟ್ಟಿ ಕೆ ಅವರು ಮಾತನಾಡಿ, ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ ಎಂಬ ಥೀಮ್ನೊಂದಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗಾಭ್ಯಾಸವು ಆರೋಗ್ಯಕರ ಮನಸನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದರು.ಇದೇ ವೇಳೆ ಕಾಲೇಜಿನ ಮಕ್ಕಳು ಮತ್ತು ಉಪನ್ಯಾಸಕರು ಯೋಗಾಭ್ಯಾಸದಲ್ಲಿ ತೊಡಗಿದರು
.ಈ ಸಂದರ್ಭ ಕಾಲೇಜಿನ ಉಪಪ್ರಾಂಶುಪಾಲರಾದ ಅನ್ನಪೂರ್ಣ ನಾಯಕ್, ಎನ್ಎಸ್ಎಸ್ ಕೊಅರ್ಡಿನೇಟರ್ ಸಂತೋಷ್ ಶೆಟ್ಟಿ, ವೈಶಾಲಿ ಹಾರಾಡಿ ಉಪಸ್ಥಿತರಿದ್ದರು. ಧನುಷಿ ಅವರು ಅತಿಥಿಗಳನ್ನು ಪರಿಚಯಿಸಿದರು. ಪ್ರವೀಣ್ ಸ್ವಾಗತಿಸಿದರು. ರಿಯೋನಾ ಕಾರ್ಯಕ್ರಮ ನಿರೂಪಿಸಿದರು. ನಮನ ಧನ್ಯವಾದ ಸಮರ್ಪಿಸಿದರು.
