Home Posts tagged #bantwala (Page 27)

ಬಂಟ್ವಾಳ : ಕಣಜಗಳ ಹಿಂಡು ದಾಳಿ ; ಮಹಿಳೆ ಸಾವು

ಬಂಟ್ವಾಳ ತಾಲೂಕಿನಲ್ಲಿ ಕಡಜಗಳ ಹಿಂಡು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೆÇಲೀಸರು ಸೋಮವಾರ ತಿಳಿಸಿದ್ದಾರೆ ದಿನಗೂಲಿ ನೌಕರರಾದ ಮೀನಾಕ್ಷಿ ಎಂಬುವವರು ಎರಡು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಒಣ ಕೊಂಬೆಗಳನ್ನು ಸಂಗ್ರಹಿಸುತ್ತಿದ್ದಾಗ ಕಣಜಗಳ ದಾಳಿಗೆ ಒಳಗಾಗಿದ್ದರು. ಆಕೆ ಸಂಗ್ರಹಿಸಿದ ಕೊಂಬೆಗಳಲ್ಲಿದ್ದ ಕಡಜಗಳ ಹಿಂಡು ಆಕೆಯ ಮೇಲೆ ದಾಳಿ

ಬಂಟ್ವಾಳ ಮಣಿಹಳ್ಳದಲ್ಲಿ ಸರಣಿ ಅಪಘಾತ: ಮೆಸ್ಕಾಂ ಎಇಇ ಪ್ರವೀಣ್ ಜೋಶಿ ಮೃತ್ಯು

ಬಂಟ್ವಾಳ: ಮಣಿಹಳ್ಳದಲ್ಲಿ ಕಾರು ಮತ್ತು ಬಸ್ಸಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವಿಟ್ಲ ಮೆಸ್ಕಾಂನ ಎಇಇ ಪ್ರವೀಣ್ ಜೋಶಿ ಅವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ಎರಡು ಕಾರು ಹಾಗೂ ಬಸ್‍ಗಳ ನಡುವೆ ಅಪಘಾತ ನಡೆದಿದ್ದು, ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ವಗ್ಗದ ಮದ್ವ ಮನೆಯಿಂದ

ಶಾಸಕ ಹರೀಶ್ ಪೂಂಜರಿಗೆ ಜೀವ ಬೆದರಿಕೆ ಒಡ್ಡಿದ ಆರೋಪಿಯ ಬಂಧನ

ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ರಾತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಅವರು, ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಫಳ್ನೀರು ನಿವಾಸಿ ರಿಯಾಜ್ (38) ಎಂಬಾತನನ್ನು ಬಂಧಿಸಲಾಗಿದ್ದು, ಘಟನೆಗೆ ಸಂಬಂಧಿಸಿ

ಬಿ.ಸಿ. ರೋಡ್‍ನಲ್ಲಿ ನಿರ್ಮಾಣ ಹಂತದ ಪಿಲ್ಲರ್ ಕುಸಿತ

ಬಂಟ್ವಾಳ : ಬಿ ಸಿ ರೋಡು-ಹಾಸನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯ ನಿರ್ಮಾಣ ಹಂತದ ಪಿಲ್ಲರ್ ಗುರುವಾರ ಮಧ್ಯಾಹ್ನ ವೇಳೆ ಹಠಾತ್ ಕುಸಿತಗೊಂಡ ಘಟನೆ ನಡೆದಿದೆ.ಕಲ್ಲಡ್ಕ ಪೇಟೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮೊದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ತೀರಾ

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ನಾರಾಯಣ್ ಸಿ. ಪೆರ್ನೆ ಮರು ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ 2022 -23ನೇ ಸಾಲಿನ ಅಧ್ಯಕ್ಷರಾಗಿ ನಾರಾಯಣ್ ಸಿ. ಪೆರ್ನೆ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಧಾಕ್ರಷ್ಣ ಬಂಟ್ವಾಳ, ಪ್ರಧಾನಕಾರ್ಯದರ್ಶಿಯಾಗಿ ಕೇಶವ ಮಾಸ್ಟರ್, ಕೋಶಾಧಿಕಾರಿಯಾಗಿ ನಾಗೇಶ ಬಾಳೆಹಿತ್ಲು, ಜತೆಕಾರ್ಯದರ್ಶಿಯಾಗಿ ಜಯಗಣೇಶ್, ಮೀನಾಕ್ಷಿ ಪದ್ಮನಾಭ, ಸಂಘಟನಾಕಾರ್ಯದರ್ಶಿ ಸತೀಶ್ ಸಂಪಾಜೆ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ , ದಾಮೋದರ ಏರ್ಯ, ಯೋಗೀಶ್ ಬಂಗೇರ, ಮನೋಹರ ನೇರಂಬೋಳು, ದಯಾನಂದ

ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ 100ನೇ ವರ್ಷದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಯಾತ್ರೆ ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಸರಸ್ವತಿ ಕಲಾ ಮಂಟಪದಲ್ಲಿ ಬೆಳಗ್ಗಿನಿಂದ ಸೇವಾರೂಪದಲ್ಲಿ ಪ್ರತೀ ವರ್ಷದಂತೆ ಶಾರದಾ ಹುಲಿವೇಷಧಾರಿಗಳಿಂದ ಹುಲಿವೇಷ ಕುಣಿತ ನಡೆಯಿತು. ರಾತ್ರಿ ಮಹಾಮಂಗಳಾರತಿ ಆಗಿ ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ನಡೆಯಿತು. ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಯಾತ್ರೆಯೂ

ಡಾ. ಎಸ್. ಎಂ. ಗೋಪಾಲಕೃಷ್ಣ ಆಚಾರ್ಯರಿಗೆ ನುಡಿನಮನ

ಬಂಟ್ವಾಳ: ಡಾ. ಎಸ್.ಎಂ ಗೋಪಾಲಕೃಷ್ಣ ಆಚಾರ್ಯ ಅವರು ಎಲ್ಲಾ ಜಾತಿ, ಧರ್ಮ ಪಂಗಡದ ಜನರಿಗೆ ನೆರವಾಗುವ ಮೂಲಕ ಸಮಾಜದ ಆಸ್ತಿಯಾಗಿದ್ದರು ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು. ಇತ್ತೀಚೆಗೆ ನಿಧನರಾದ ಮಾರ್ನಬೈಲು ಬಜಾರ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ ಡಾ. ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಅವರ ಉತ್ತರಕ್ರಿಯೆಯ ಪೂರ್ವಭಾವಿಯಾಗಿ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ

ಲಯನ್ ಸೇವಾ ಸಂಸ್ಥೆಯ ಪ್ರಾಂತೀಯ ಸಮ್ಮೇಳನ ‘ಧನ್ಯ’ : ಕಂದೂರಿನಲ್ಲಿರುವ ಬಜಾರ್ ಅಡಿಟೋರಿಯಂನಲ್ಲಿ ಕಾರ್ಯಕ್ರಮ

ಬಂಟ್ವಾಳ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಇದರ ಪ್ರಾಂತೀಯ ಸಮ್ಮೇಳನ “ಧನ್ಯ” ನ. 26ರಂದು ಸಜೀಪಮೂಡದ ಕಂದೂರಿನಲ್ಲಿರುವ ಬಜಾರ್ ಆಡಿಟೋರಿಯಂನಲ್ಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು.ಲಯನ್ಸ್ ಮಲ್ಟಿಪಲ್ ಕೌನ್ಸಿಲ್‍ನ ಚೆಯರ್‍ಪರ್ಸನ್ ವಸಂತ್ ಕುಮಾರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಲಯನ್ಸ್

ನೈನಾಡು ಸ್ನೇಹಗಿರಿ ರಸ್ತೆಯಲ್ಲಿ ಪಿಎಫ್‍ಐ ಬೆಂಬಲಿಸಿ ಬರಹ

ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ನಯನಾಡು ಗೊಳಿಯಂಗಡಿ ಸಂಪರ್ಕ ರಸ್ತೆಯಲ್ಲಿ “ಚಡ್ಡಿಗಳೆ ಎಚ್ಚರಿಕೆ ಪಿಎಫ್‍ಐ ನಾವು ಮರಳಿ ಬರುತ್ತೇವೆ “ಎಂದು ಬಿಳಿ ಬಣ್ಣದ ಸ್ಪ್ರೆ ಪೈಂಟಿನಿಂದ ಬೆದರಿಕೆ ಬರಹ ಬರೆದಿದ್ದಾರೆ. ಈ ಬಗ್ಗೆ ಬಿಜೆಪಿ ಯುವ ಮೋರ್ಚಾದವರು ದೂರು ನೀಡಿದ್ದಾರೆ. ಸಮಾಜದ ಸಾಮಾಜಿಕ ಅಶಾಂತಿಗೆ ಕೋಮು ದ್ವೇಷಕ್ಕೆ ಕಾರಣವಾದ ಈ ಬರಹದ ಹಿಂದಿರುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣವೆ ಪತ್ತೆ ಹಚ್ಚಿ ಸೂಕ್ತ

ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ

ಬಂಟ್ವಾಳ: 2025ಕ್ಕೆ ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದ್ದು ಸೇವಾ ಸಂಸ್ಥೆಗಳು ಕ್ಷಯರೋಗಿಗಳನ್ನು ದತ್ತು ಪಡೆದು ಆರೈಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯನ್ವಯ ಕ್ಷಯರೋಗಿಗಳಿಗೆ ವರದಾನವಾಗಿರುವ ನಿಕ್ಷಯ ಮಿತ್ರ ಯೋಜನೆಯಂಗವಾಗಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನವು ಮಂಗಳೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಕೆಲವು ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದು ಸೋಮವಾರ