Home Posts tagged #mangaluru (Page 39)

ಪುತ್ತೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ

ಪುತ್ತೂರು: ನಾಡಪ್ರಭು ಕೆಂಪೇಗೌಡರ ಹೆಸರಿನ ಜೊತೆಗೆ ಅವರ ಸಾಧನೆಗೂ ಬಹಳ ಮಹತ್ವವಿದ್ದು, ಅವರ ದೂರದೃಷ್ಟಿ, ಜನಪರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಿದ ಕೆಂಪೇ ಗೌಡರು ಕರ್ನಾಟಕವನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡಿದ್ದಾರೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್

ಶ್ರೀನಿವಾಸ ಹೊಟೇಲ್ ಕಟ್ಟಡದ ಕುಸಿತದ ವದಂತಿ: ಗಾಳಿ ಸುದ್ದಿ ಎಬ್ಬಿಸಿತ್ತು ವಾಟ್ಸಪ್ ಬಿರುಗಾಳಿ

ಮಂಗಳೂರಿನ ಹಂಪನಕಟ್ಟೆಯ ಶ್ರೀನಿವಾಸ ಹೊಟೇಲ್ ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ. ಕಟ್ಟಡ ಕುಸಿಯುವ ಭೀತಿಯಿಂದಾಗಿ ಆ ಭಾಗದಲ್ಲಿ ಪೊಲೀಸರು ರಸ್ತೆ ಸಂಚಾರವನ್ನು ಕಡಿತಗೊಳಿಸಿದ್ದಾರೆ ಎಂಬ ವದಂತಿ ಹರಡಿದೆ. ಈ ಬಗ್ಗೆ ಶ್ರೀನಿವಾಸ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್ಮೆಂಟಿನ ನಿರಂಜನ್ ರಾವ್ ಬಳಿ ಮಾಹಿತಿ ಕೇಳಿದಾಗ, ವಾಟ್ಸಪ್ ನಲ್ಲಿ ಏನೇನೋ ಬರುತ್ತಿರುವುದು ಗಮನಕ್ಕೆ ಬಂದಿದೆ. ಕಟ್ಟಡದ ಕೆಲವು ಕಡೆ ನವೀಕರಣದ ಕಾಮಗಾರಿ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸಕ್ಕೆ

ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಬಗ್ಗೆ ಜನಜಾಗೃತಿ : ಜಗದೀಶ್ ಶೇಣವ

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 26ರ ಸಂಜೆ 4ರಂದು ವೆಬೆಕ್ಸ್ ಮೂಲಕ ವಿಚಾರಗೋಷ್ಠಿಯನ್ನು ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ್ ಶೇಣವ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1975ರಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಹತ್ಯೆ

ಕೋವಿಡ್ ಪ್ಯಾಕೇಜ್‌ಗೆ ಆಗ್ರಹಿಸಿ ತುಳುನಾಡ ದೈವಾರಾಧಕರ ಮನವಿ

ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ ) ಉಡುಪಿ ಜಿಲ್ಲೆಯ ಸರ್ವ ಸದಸ್ಯರುಗಳು ಸೇರಿ ಕೋಟ ಶ್ರೀನಿವಾಸ ಪೂಜಾರಿ ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಭೇಟಿ ಮಾಡಿ ಮನವಿ ಕೊಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ದೈವ ಚಾಕ್ರಿ ವರ್ಗದವರ ಸಮಸ್ಯೆಗಳನ್ನು ಹೇಳಿದರು. ಈಗಾಗಲೇ ಸರ್ಕಾರದ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ನಮ್ಮ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಈ ಲಾಕ್ ಡೌನ್ ತುತ್ತು

ಮಂಗಳೂರಿನಲ್ಲಿ ವಾಹನಗಳ ತಪಾಸಣೆ : ನಿಷೇಧಿತ ಟಿಂಟ್ ತೆಗೆದ ಪೊಲೀಸರು

ಮಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಲಾಕ್‌ಡೌನ್ ವಿನಾಯಿತಿ ಅವಧಿಯಲ್ಲಿ ವಾಹನಗಳ ದಟ್ಟಣೆ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು. ನಗರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದ್ದು, ಈ ಸಮಯದಲ್ಲಿಯೂ ನಗರಾದ್ಯಂತ ವಾಹನಗಳ ಓಡಾಟ ಹೆಚ್ಚಾಗಿತ್ತು. ಇದರಿಂದಾಗಿ ಇಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್,

ಶಾಸಕ ಡಾ.ಭರತ್ ಶೆಟ್ಟಿಯವರ ನೇತೃತ್ವದಲ್ಲಿಕೋವಿಡ್ ಲಸಿಕೆ ಅಭಿಯಾನ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಭಾಗದಲ್ಲಿರುವ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಆಶಯ ಮತ್ತು ನೇತೃತ್ವದಲ್ಲಿ ಅದೇ ಪ್ರದೇಶದಲ್ಲಿ ಕೋವಿಡ್ ಲಸಿಕಾ ಸೌಲಭ್ಯ ನೀಡುವ ಅಂಗವಾಗಿ ಗುರುಪುರ- ಕೈಕಂಬದ ಮಾತೃಭೂಮಿ ಸಭಾಂಗಣದಲ್ಲಿ ಮಂಗಳವಾರ ಲಸಿಕಾ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಭಾಜಪಾ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ತಾಲೂಕು ಪಂಚಾಯತ್ ಮಾಜಿ

ಕೋವಿಡ್ ಲಸಿಕೆ ವ್ಯಾಪರೀಕರಣದ ವಸ್ತುವಾಗಬಾರದು: ಐವನ್ ಡಿಸೋಜ

ಕೋವಿಡ್ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕು. ಲಸಿಕೆ ವ್ಯಾಪರೀಕರಣದ ವಸ್ತುವಾಗಬಾರದು. ಸರ್ಕಾರವೇ ಲಸಿಕೆಯನ್ನು ಭರಿಸಿ ಉಚಿತವಾಗಿ ಎಲ್ಲರಿಗೂ ಉಚಿತವಾಗಿ ನೀಡಬೇಕು ಎಂದು ಮಾಜಿ ಎಂಎಲ್‌ಸಿ ಐವನ್ ಡಿಸೋಜಾ ಆಗ್ರಹಿಸಿದರು.ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಅದಕ್ಕಾಗಿಯೇ 35,000 ಕೋಟಿ ರೂಪಾಯಿ ತೆರಿಗೆಯ ಹಣವನ್ನು

ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನಲ್ಲಿ ಉಚಿತ ಲಸಿಕೆ ವಿತರಣೆ

ಮಂಗಳೂರಿನ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್‌ನ ಕೇಬಲ್ ಆಪರೇಟರ್ ಹಾಗೂ ಸಿಬ್ಬಂದಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಯೆಯ್ಯಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್‌ನಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ| ಸುಷ್ಮಾ ಜಾಸ್ಮಿನ್ ಅವರು ಚಾಲನೆ ನೀಡಿದ್ರು. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಆರೋಗ್ಯ ಇಲಾಖೆ , ಮಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ

ಶರಣ್ ಪಂಪ್‍ವೆಲ್ ಹಾಗೂ ದುರ್ಗಾವಾಹಿನಿ ಸಂಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾ ಸಂದೇಶ ರವಾನೆ ಪ್ರಕರಣ : ನಾಲ್ವರ ಬಂಧನ

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‍ವೆಲ್ ಹಾಗೂ ದುರ್ಗಾವಾಹಿನಿ ಸಂಘಟನೆಯ ಬಗ್ಗೆ ವಾಟ್ಸ್ ಆಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶವನ್ನು ರವಾನಿಸಿರುವ ದೂರಿನ ಕುರಿತಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಬಂಧಿತರನ್ನು ಸುಳ್ಯ ಕಸಬಾ ತಾಲೂಕಿನ ಭವಾನಿ ಶಂಕರ್ (32), ಬಜಾಲ್‍ನ ನೌಶಾದ್ (27), ಕಾವೂರಿನ ರವಿ ಅಲಿಯಾಸ್ ಟಿಕ್ಕಿ ರವಿ (38), ಹಾಗೂ ಮೂಡಬಿದ್ರೆಯ ಜಯಕುಮಾರ್ (33) ಎಂದು