ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿರುವ, ಹೆಲ್ಮೆಟ್ ಧರಿಸದ, ಚಾಲನ ಅನುಜ್ಞಾ ಪತ್ರವಿಲ್ಲದೆ ಚಾಲನೆಯನ್ನು ಮಾಡುತ್ತಿರುವವರ ವಿರುದ್ಧ ಮೂಡುಬಿದಿರೆ ಪೊಲೀಸರು ಕ್ರಮಕೈಗೊಂಡರು.
ಮೂಡುಬಿದಿರೆ: ಜಿಲ್ಲಾ ಪಂಚಾಯತ್ ದ.ಕ.ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳ ಕಛೇರಿ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಪುರಸಭೆ, ನೇತಾಜಿ ಬ್ರಿಗೇಡ್ ಹಾಗೂ ಜವನೆರ್ ಬೆದ್ರ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಸಮಾಜ ಮಂದಿರದಲ್ಲಿ ಆಚರಿಸಲಾಯಿತು. ಉದ್ಯಮಿ ಸತ್ಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಆಶಿತಾ ರೋಗವಾಹಕ
ಮೂಡುಬಿದಿರೆ: ಸಿಬಿಎಸ್‍ಸಿ 10ನೇ ತರಗತಿಯ ಪರೀಕ್ಷೆಯಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆಯು ಸತತ ಮೂರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹೇಳಿದರು. 173 ಬಾಲಕರು ಮತ್ತು 71 ಬಾಲಕಿಯರು ಸೇರಿದಂತೆ ಒಟ್ಟು 244 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. 8 ವಿದ್ಯಾರ್ಥಿಗಳು ಶೇ 95ಕ್ಕಿಂತಲೂ ಅಧಿಕ ಅಂಕ ಪಡೆದಿದ್ದಾರೆ. ನಿರೀಕ್ಷಾ 480 (ಶೇ.96),
ಮಂಗಳೂರು: ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಫ್ತಿಯ ಮೂಡುಶೆಡ್ಡೆಯಲ್ಲಿ ನಿನ್ನೆ (ಬುಧವಾರ) ನಡೆದ ಅಹಿತಕರ ಘಟನೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಪ್ರಚೋದನಕಾರಿ ನಡವಳಿಕೆಯೇ ಕಾರಣ ಎಂದು ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹೇಳಿದರು. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ನಿನ್ನ ನಡೆದ ಘಟನೆಗಳ ಕುರಿತು ವಾಸ್ತವ ಸಂಗತಿಗಳನ್ನು ವಿವರಿಸಿದರು. ಮೂಡುಶೆಡ್ಡೆ ಮತಗಟ್ಟೆಯಲ್ಲಿ ಮತದಾನ ಮುಗಿದು ಅಧಿಕಾರಿಗಳು
ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಅವರು ಕಿನ್ನಿಗೋಳಿಯ ಸೈಂಟ್ ಮೇರಿಸ್ ಸ್ಕೂಲ್ ನಲ್ಲಿ ಪತ್ನಿಯ ಜೊತೆ ಮತದಾನ ಮಾಡಿದರು.
ಮೂಡುಬಿದಿರೆ: ಮುಲ್ಕಿ -ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಅವರು ಕಾರ್ಯಕರ್ತರೊಂದಿಗೆ ತನ್ನ ವಾಡ್ ೯64ರಲ್ಲಿ ಮತಯಾಚಿಸಿದರು. ಈ ಸಂದರ್ಭ ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಮತ್ತಿತರರಿದ್ದರು.
ಚುನಾವಣೆ ಪ್ರಚಾರ ಇಂದು ಕೊನೆಯ ದಿನವಾಗಿದ್ದು, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಇರುವೈಲು ಗ್ರಾಮದ ಜನರು ಒಕ್ಕೊರಲಿನಿಂದ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 20 ವರ್ಷಗಳಲ್ಲಿ ಆಗದ ಕೆಲಸ ಕಾರ್ಯಗಳು ಕೇವಲ 5 ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಇರುವೈಲು ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ 7 ಕೋಟಿಗೂ ಅಧಿಕ ವೆಚ್ಚದ ಅನುದಾನ ಬಿಡುಗಡೆಗೊಂಡು ಉತ್ತಮ ರೀತಿಯಲ್ಲಿ
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮೂಡುಬಿದಿರೆಯ ವಿವಿಧೆಡೆ ರೋಡ್ ಶೋ ನಡೆಸಿ ಗಮನಸೆಳೆದರು. ಉಮಾನಾಥ ಕೋಟ್ಯಾನ್ ಅವರು ನೀರುಡೆ ಚರ್ಚ್ ಬಳಿಯಿಂದ ಮತಯಾಚನೆ ಆರಂಭಿಸಿದರು. ನೀರುಡೆಯಲ್ಲಿ ಕೃಷಿಕರೇ ಹೆಚ್ಚಿದ್ದು ಈ ಭಾಗದಲ್ಲಿ ತೀವ್ರ ನೀರಿನ ಸಮಸ್ಯೆ ಇತ್ತು. ಇಲ್ಲಿ ಹರಿಯುವ ನೀರಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಈ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದು, ಈ ಭಾಗದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಮುಂದಿನ
ಮೂಡುಬಿದಿರೆ : ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಎಲ್ಲಾ ಸಮುದಾಯಗಳಿಗೂ ಸಮಾನ ಆದ್ಯತೆ ನೀಡಿದ್ದು ಊರಿನ ಪ್ರಗತಿಗಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿಮತ ಬೇಧವಿಲ್ಲದೆ ಸ್ಪಂದಿಸಿದ್ದಾರೆ. ಈಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡದೆ ಆತ್ಮಸಾಕ್ಷಿಯಾಗಿ ಮತಚಲಾಯಿಸಬೇಕು ಎಂದು ಹುನುಮಂತ, ವೆಂಕಟರಮಣ ದೇವಳಗಳ ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ ಹೇಳಿದರು.
ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಮಿಥುನ್ ರೈ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿ, ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪಿ ಹಾಗೂ ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರ ಬಾಂಧವರನ್ನು ಭೇಟಿ ಮಾಡಿ ಮತಯಾಚನೆಯನ್ನು ನಡೆಸಿದರು.




























