ನೆಲ್ಯಾಡಿ: ಶಿರಾಡಿ ಘಾಟ್‍ನ ಡಬಲ್ ಟರ್ನ್‍ನಲ್ಲಿ ಹಾಸನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಅಕ್ಕಿ ಸಾಗಾಟದ ಲಾರಿಯೊಂದು ಬೆಂಕಿಗಾಹುತಿ ಆಗಿರುವ ಘಟನೆ ನಡೆದಿದೆ. ಶಿರಾಡಿ ಘಾಟ್‍ನ ಡಬಲ್ ಟರ್ನ್‍ನಲ್ಲಿ ಹಾಸನ ಕಡೆಯಿಂದ ಮಂಗಳೂರಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಾರಿ ಚಾಲಕ ಹಾಗೂ
ನೆಲ್ಯಾಡಿ: ವಲಯ ಅರಣ್ಯಾಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಬೆದರಿಕೆಯನ್ನು ಕೂಡ ಹಾಕಿದ್ದಾರಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ.ಕೆ. ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದೆ. ಧರ್ಮಸ್ಥಳ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ
ನೆಲ್ಯಾಡಿ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಡುವಳಿಕೆ ನೇಮಣ್ಣ ಗೌಡ ಅವರ ಮನೆಗೆ ಸಿಡಿಲು ಬಡಿದುಸಿಡಿಲು ಬಡಿದು ಹಾನಿಗೊಂಡಿರುತ್ತದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಅವರ ಮನೆಗೆ ಭೇಟಿ ನೀಡಿ ಸಿಡಿಲು ಬಡಿದ ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಸಿಡಿಲಿನಿಂದ ಹಾನಿಯಾದ ಮನೆಗೆ ಸರ್ಕಾರದಿಂದ ಪರಿಹಾರವನ್ನು ಶೀಘ್ರವಾಗಿ ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ, ಭಾಸ್ಕರ ಗೌಡ ಇಚಿಲಂಪಾಡಿ,
ನೆಲ್ಯಾಡಿ : ಸೋಮವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಸೌತಡ್ಕ ಸಮೀಪದ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇಲ್ಲಿ ನಿವಾಸಿಗಳಾದ ಜಮೀಲಾ, ಮರಿಯಮ್ಮ, ಪಾರ್ವತಿ, ಸುರೇಶ್ ಪೂಜಾರಿ, ಮೂಸೆ ಕುಂಞಿ, ಜೋಹರ, ಹಮೀದ್ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದ್ದು, ಮನೆಯ ಹೆಂಚು ಮತ್ತು ಶೀಟುಗಳು ಹಾರಿಹೋಗಿವೆ. ಈ ಸಂದರ್ಭ ಕೆಲವು ಮನೆಗಳಲ್ಲಿ ಹಿರಿಯರು ಮತ್ತು ಪುಟ್ಟ ಮಗು ಮನೆಯೊಳಗಿದ್ದು ಅದೃಷ್ಟವಶಾತ್ ಯಾವುದೇ ತೊಂದರೆಯಾಗದೆ
ನೆಲ್ಯಾಡಿ: ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನ್ಯ ದರ್ಶನಕ್ಕೆ ಕಳೆಂಜ ಗ್ರಾಮದ ಮರಕ್ಕಡ ಪ್ರೌಢ ಶಾಲೆಯಿಂದ ವಿದ್ಯಾರ್ಥಿಗಳು ಕುದುರೆಮುಖ, ಶೃಂಗೇರಿ, ಹೊರನಾಡು, ಇತರ ಪರಿಸರಗಳಿಗೆ ಅಧ್ಯಯನ ಪ್ರವಾಸ ಕೈಗೊಂಡರು. ಪ್ರಯಾಣಕ್ಕೆ ಕಳೆಂಜ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಹಸಿರು ನಿಶಾನೆ ತೋರಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ.ಕೆ, ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ, ಅರಣ್ಯ ಪಾಲಕರಾದ ಪ್ರಶಾಂತ್,
ನೆಲ್ಯಾಡಿ: ಕೊಣಾಲು ದಿಯುವಾಂಜಲಿಸ್ಟಿಕ್ ಅಸೋಸಿಯೇಷನ್ ಆಫ್ ದ ಈಸ್ಟ್ ಇದರ ಅದೀನದಲ್ಲಿರುವ ಸಂತ ತೋಮಸ್ ಯಾಕೋಬಾಯ ಸುರಿಯಾನಿ ಚರ್ಚಿನಲ್ಲಿ ತಾಯಂದಿರಿಗೋಸ್ಕರ ಕೊಯಿನೋನಿಯಾ ಮದರ್ಸ್ ಡಿವೋಷನಲ್ ಫೆಲೋಶಿಪ್ ಕಾರ್ಯಕ್ರಮ ಮರ್ತ ಮರಿಯಾಮ್ ಮಹಿಳಾ ಸಮಾಜದ ನಿರ್ದೇಶಕರಾಗಿರುವ ವೆರಿ.ರೇ. ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪೋ ಅವರ ನಿರ್ದೇಶನದಲ್ಲಿ ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ತೋಮೊಸರ ದೇವಾಲಯದ ವಿಕಾರ್ ಆಗಿರುವ ರೇ.ಫಾ.ಅನೀಶ್ ಪಾರಾಶೆರಿಲ್
ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎನ್.ಎಚ್. 75ರ ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿ ಅಕೇಶಿಯಾ ಉರುವಲು ಸಾಗಾಟ ಮಾಡುತ್ತಿದ್ದ ಕೆಎ21 ಬಿ 3478 ಸಂಖ್ಯೆಯ ಲಾರಿಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೊಕ್ಕಡ ಸಾಹುಲ್ ಹಮೀದ್ ಪರಾರಿಯಾಗಿದ್ದಾನೆ. ರೆಖ್ಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತದಲಗಿ, ಬೀಟ್ ಫಾರೆಸ್ಟರ್‌ಗಳಾದ ನಿಂಗಪ್ಪ ಅವರಿ, ಸುನೀಲ್ ನಾಯ್ಕ್ ಕಾರ್ಯಾಚರಣೆಯಲ್ಲಿದ್ದರು.
ನೆಲ್ಯಾಡಿ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಮೆಚೂರ್ ಕ್ರೀಡಾಕೂಟದಲ್ಲಿ ಆದರ್ಶ್ ಶೆಟ್ಟಿ ಇವರು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತೆಲಂಗಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಕರಾದ ಏಲಿಯಸ್ ಪಿಂಟೋ, ರಾಜೇಶ್ ಮೂಲ್ಯ ಹಾಗೂ ಪುಷ್ಪರಾಜ್ ಇವರಿಗೆ ತರಬೇತಿಯನ್ನು ನೀಡಿದ್ದಾರೆ. ಪ್ರಸ್ತುತ ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ.
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಸಮೀಪ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಗಾಯಾಳುವನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಿಬ್ಬಂದಿ ಎಂದು ಹೇಳಲಾಗುತ್ತಿದ್ದು ಬಿಹಾರ್ ಮೂಲದವರ ಕಾರು ಇದಾಗಿದ್ದು, ಕಾರು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಟಾಣೆ ಹೆಡ್ ಕಾನ್ಸ್ಟೇಬಲ್ ಕುಶಾಲಪ್ಪ ಭೇಟಿ ನೀಡಿ
ಕೊಕ್ಕಡ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಡಿ ಶಿಶಿಲ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧೀನ್ ಡಿ., ಉಪಾಧ್ಯಕ್ಷ ಯತೀಶ್ ಯಳಚಿತ್ತಾಯ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಆಟೋ ಚಾಲಕ ವೃಂದ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಅಂಗಡಿ ಮಾಲಕರು, ಹಾಗೂ ಸ್ಥಳೀಯ ನಿವಾಸಿಗಳು ಸ್ವಚ್ಛತಾ ಕಾರ್ಯದಲ್ಲಿ