Home Posts tagged #puttur

ಸೇವಾಭಾರತಿ ಕನ್ಯಾಡಿ ಹೊಸ ವಿಶ್ವಸ್ಥ ಮಂಡಳಿ ರಚನೆ – ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಕನ್ಯಾಡಿ

ಕೊಕ್ಕಡ:2026 ರಿಂದ 2029ರ ಅವಧಿಗೆ ಹೊಸ ವಿಶ್ವಸ್ಥ ಮಂಡಳಿ ರಚನೆಯ ಕಾರ್ಯಕ್ರಮವನ್ನು ಮಂಗಳವಾರದಂದು ಸೌತಡ್ಕದಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಸರಳವಾಗಿ ನಡೆಸಲಾಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ, ಕೋಶಾಧಿಕಾರಿಯಾಗಿ ಜೈ

ಮೀಟರ್ ರೀಡರ್ ಮೇಲೆ ನಾಯಿ ದಾಳಿ, ಕಿತ್ತು ಬಂದ ಕೈಯ ಮಾಂಸ

ಬಂಟ್ವಾಳ: ಕರ್ತವ್ಯದ ವೇಳೆ ಮೆಸ್ಕಾಂನ ಮೀಟರ್ ರೀಡರ್ ಒಬ್ಬರಿಗೆ ಸಾಕು ನಾಯಿಯೊಂದು ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಗ್ರಾಮದ ಕೈತ್ರೋಡಿ ಕ್ವಾಟ್ರಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಾ ಗ್ರಾಮದ ನಿವಾಸಿಯಾಗಿರುವ ಸಂಪತ್ ಆರ್. ಶೆಟ್ಟಿ ನಾಯಿ ಕಡಿತಕ್ಕೊಳಗಾಗಿದ್ದು ಕೈಗೆ ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸಂಪತ್ ಅವರು ಕೈತ್ರೋಡಿ ಕ್ವಾಟ್ರಸ್ ಬಳಿ ಮೀಟರ್ ರೀಡಿಂಗ್ ಮುಗಿಸಿ ಮುಖ್ಯ

ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026”

ಸುಳ್ಯದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026” ಕಾರ್ಯಕ್ರಮವು ಫೆ.10 ರಂದು ಸುಳ್ಯದ ಲಯನ್ಸ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಭಾಗವಹಿಸಿ, ಮಾತನಾಡಿ ಮಕ್ಕಳೊಂದಿಗೆ ತಂದೆ ತಾಯಿಯ ಬಾಂಧವ್ಯ ಯಾವ ರೀತಿ ಇರಬೇಕೆಂದು ತಿಳಿ ಹೇಳಿ, ಶುಭ ಹಾರೈಸಿದರು. ಗೌರವಾನ್ವಿತ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯದ ವೆಂಕಟರಮಣ ಸಹಕಾರಿ ಸಂಘದ ಸಿಇಒ

ಕಡಬ : ‘ಅನ್ವೇಷಣೆ–2026’ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆ

ಕಡಬ, ಫೆ.10: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ಇಲ್ಲಿನ ವಿಜ್ಞಾನ ಸಂಘದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ‘ಅನ್ವೇಷಣೆ–2026’ ಎಂಬ ಶೀರ್ಷಿಕೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ, ರಂಗೋಲಿ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯದ ನಿವೃತ್ತ ಮುಖ್ಯಗುರುಗಳಾದ ಶ್ರೀ ಕೆ. ಯಶವಂತ ರೈ

26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ಶಿಪ್. (ಪುರುಷ ಮತ್ತು ಮಹಿಳಾ) ಕರ್ನಾಟಕ ರಾಜ್ಯ ವಾಲಿಬಾಲ್ ಮಹಿಳಾ ವಾಲಿ ಬಾಲ್ ತಂಡದ ಆಯ್ಕೆ ಪ್ರಕ್ರಿಯೆ .

ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯ ಆದೇಶ ಪ್ರಕಾರ ಮಾರ್ಚ್ 15ರಿಂದ 20ರವರೆಗೆ ಭುವನೇಶ್ವರ ಒಡಿಸ್ಸಾದಲ್ಲಿ ನಡೆಯಲಿರುವ , 26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್ (ಪುರುಷ ಮತ್ತು ಮಹಿಳಾ) ನಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ಮಹಿಳಾ ಯೂತ್ ವಾಲಿಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ, ಜಯನಗರ 3ನೇ ಬ್ಲಾಕ್, , ಬೆಂಗಳೂರು ನಲ್ಲಿ ಫೆಬ್ರವರಿ 13, 2026 (ಶುಕ್ರವಾರ) ಬೆಳಗ್ಗೆ 9:30 ಸರಿಯಾಗಿ

ಪುತ್ತೂರು: ಅಜಿತ್ ರೈ ಹೊಸಮನೆ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಕೆ : ವಿಚಾರಣೆಗೆ ಹಾಜರಾಗುವಂತೆ ನೋಟೀಸ್

ಪುತ್ತೂರು:ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಅವರ ವಿರುದ್ಧ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಪುತ್ತೂರು ತಾಲೂಕು ಒಳಮೊಗ್ರು ಗ್ರಾಮ ಹೊಸಮನೆ ನಿವಾಸಿ ಅಜಿತ್ ರೈ ವಿರುದ್ಧ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಪೊಲೀಸ್‌ ಕಾಯ್ದೆ 1963ರ ಕಲಂ 55ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸುವ ಕುರಿತು ಸಲ್ಲಿಸಿರುವ

ಕೋಳಿಅಂಕ ವಿಚಾರ: ಅಶೋಕ್ ಕುಮಾರ್ ರೈ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

ಕೋಳಿಅಂಕ ವಿಚಾರದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪೋಲೀಸರು ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ. ಪುತ್ತೂರು :ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಢಾಣಾ ವ್ಯಾಪ್ತಿಯ ಕೇಪು ಉಳ್ಳಾಲ್ತಿ ದೈವಸ್ಥಾನದಲ್ಲಿ ಡಿಸೆಂಬರ್ 20, 2025 ರಂದು ಮುರಳೀಧರ ರೈ ಎಂಬವರ ಜಾಗದಲ್ಲಿ ಕಾನೂನುಬಾಹಿರವಾಗಿ ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭದಲ್ಲಿ ವಿಟ್ಲ ಪೋಲೀಸರು ಕೋಳಿ ಅಂಕವನ್ನು ತಡೆಯಲು ಮುಂದಾದ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್

ಫೆ.7 ಭಾರತಿ ಎಂ. ಭರತನಾಟ್ಯ ರಂಗಪ್ರವೇಶ

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್‌ ಶಿಷ್ಯೆ ಭಾರತಿ ಎಂ. ಇವರ ಭರತನಾಟ್ಯ ರಂಗಪ್ರವೇಶ ಫೆ.7 ರಂದು ಪುತ್ತೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ತೆರೆದ ರಂಗಸ್ಥಳದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ. ಸಂಜೆ 5.45ಕ್ಕೆ ನಾಟ್ಯ ನಿಕೇತನ ಕೊಲ್ಯ ಇಲ್ಲಿನ ಕರ್ನಾಟಕ ಕಲಾಶ್ರೀ ಪುರಸ್ಕೃತ ಗುರು ರಾಜಶ್ರೀ ಉಳ್ಳಾಲ್‌ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಬಳಿಕ

ಪುತ್ತೂರು: ಫೆ.5ರಂದು ತಮನ್‌ವಿ ಸಿಲ್ಕ್ಸ್ ಮಳಿಗೆ ಶುಭಾರಂಭ

ಪುತ್ತೂರಿನ ಬಪ್ಪಳಿಗೆ ಬೈಪಾಸ್ ನಲ್ಲಿರುವ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಫೆ.5ರಂದು ಶುಭಾರಂಭಗೊಳ್ಳಲಿದೆ. ತಮನ್‌ವಿ ಸಿಲ್ಕ್ಸ್ ನ ಹೊಸ ಮತ್ತು ವಿಶಾಲ ಶೋರೂಮ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಶಾಲ ಶೋರೂಮ್ – ವಿಶಿಷ್ಟ ಸಂಗ್ರಹ ಶುದ್ಧ ಕಾಂಜೀವರಂ ಹ್ಯಾಂಡ್‌ಲೂಮ್ ಸೀರೆಗಳು,ವಿವಾಹ ವಿಶೇಷ ಸಂಗ್ರಹಗಳು ಹಾಗೂ ಆಯ್ದ ವಿಶಿಷ್ಟ ವಿನ್ಯಾಸಗಳು ಲಭ್ಯ. ಪುತ್ತೂರಿನಲ್ಲಿ ಎರಡನೇ ಮಳಿಗೆ ಶುಭಾರಂಭಗೊಳ್ಳಲಿದೆ.

ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಕಟ್ಟೆಮಾರ್ ಸಿನಿಮಾದ ಪ್ರೀಮಿಯರ್ ಶೋ

ಕೋಸ್ಟಲ್‌ವುಡ್‌ನ ಬಹುನಿರೀಕ್ಷೆಯ ಸಿನಿಮಾ ಕಟ್ಟೆಮಾರ್. ಜನವರಿ ೨೩ರಂದು ಕರಾವಳಿಯಾದ್ಯಂತ ಸಿನಿಮಾ ಬಿಡುಗಡೆಗೊಳಲ್ಲಿದೆ. ಅದಕ್ಕಿಂತ ಮುಂಚಿತವಾಗಿ ಮಂಗಳೂರು, ಪುತ್ತೂರು ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನ ನಡೆಯಲಿದೆ.ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ಆಕ್ಷನ್ ಕಟ್ ನಿರ್ದೇಶನದಲ್ಲಿ ಮೂಡಿ ಬಂದಿದರುವ ಕಟ್ಟೆಮಾರ್ ಈಗಾಗಲೇ ತನ್ನ ಪೋಸ್ಟರ್, ಹಾಡುಗಳಿಂದ ಸಖತ್ ಕುತೂಹಲ ಹುಟ್ಟಿಸಿದೆ. ಕೋಸ್ಟಲ್‌ವುಡ್‌ನಲ್ಲಿ ವಿಭಿನ್ನ ಬಗೆಯ ಕಥೆಯನ್ನು ಹೇಳಲು