ಪುತ್ತೂರು: ಪ್ರಸ್ತುತ ದೇಶದಾದ್ಯಂತ ಚಲಾವಣೆಯಲ್ಲಿರುವ 10 ರೂ. ಮೌಲ್ಯದ ಕಾಯಿನ್ ಆರ್‍ಬಿಐ ಸಂಯೋಜಿತ ಅಧಿಕೃತ ಚಲಾವಣೆಯಾಗಿದ್ದು, ಯಾರೂ ಅಪಪ್ರಚಾರಕ್ಕೆ ಕಿವಿಗೊಡದೆ ಮುಕ್ತವಾಗಿ ದೈನಂದಿನ ಹಣಕಾಸು ವ್ಯವಹಾರದಲ್ಲಿ ಬಳಸಬೇಕು ಎಂದು ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋ ಡಿಸೋಜ ಹಾಗೂ ಕೆನರಾ ಬ್ಯಾಂಕ್ ಪುತ್ತೂರು ವಿಭಾಗೀಯ ಮ್ಯಾನೇಜರ್ ನರೇಂದ್ರ ರೆಡ್ಡಿ
ಶ್ರೀಗಣೇಶೋತ್ಸವದ ಪ್ರಯುಕ್ತ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯು ನಡೆಸುವ ಚಿತ್ರಕಲೆ ಹಾಗೂ ಕರಕುಶಲ ಕಲೆಯ ಪ್ರದರ್ಶನ ಹಮ್ಮಿಕೊಂಡಿದೆ. ಆಗಸ್ಟ್ 27 ಮತ್ತು 28 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯ ತನಕ ಕಾವೆರಿ ಕಾಂಪ್ಲೆಕ್ಸ್,ಕಲ್ಲಾರೆ, ಮುಖ್ಯರಸ್ತೆ, ಪುತ್ತೂರು, ಇದರಲ್ಲಿ ಗಣೇಶನ ನಾನಾ ರೀತಿ ಯ ಕರಕುಶಲ ಕಲೆ, ಕ್ಲೇ ಮೊಡೆಲಿಂಗ್ ಚಿತ್ರಕಲೆಗಳು ಇವೆ. ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಚಿತ್ರಕಲೆ ಹಾಗೂ ಕ್ಲೇ ಮೊಡೆಲಿಂಗ್
ಪುತ್ತೂರು ಮತ್ತು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ಪುತ್ತೂರು – ದರ್ಬೆಯಿಂದ ವಿಟ್ಲದ ತನಕ ನಡೆದ ಸ್ವಾತಂತ್ರ್ಯೋತ್ಸವ ನಡಿಗೆಯ ಸಮಾರೋಪ ಸಮಾರಂಭ ವಿಟ್ಲದಲ್ಲಿ ನಡೆಯಿತು.ಕೆಪಿಸಿಸಿ ವಕ್ತಾರ ನಿಕೇತ್‍ರಾಜ್ ಮೌರ್ಯ ಅವರು ಸಮಾರೋಪ ಭಾಷಣ ಮಾಡಿ, ಮಾತನಾಡಿ .ದೇಶವನ್ನು ಭಾಷೆ, ಜಾತಿ ಹೆಸರಿನಲ್ಲಿ ಒಡೆಯುವ ಕೆಲಸವಾಗುತ್ತಿದೆ.ದೇಶದಲ್ಲಿ ಜನರಿಗೆ ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವ
ಪುತ್ತೂರು : ಪುತ್ತೂರು ಉಪ ವಿಭಾಗದ ಡಿವೈಎಸ್ಪಿಯಾಗಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಆ 19 ರಂದು ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ. 2020ರ ಸೆಪ್ಟಂಬರ್ ತಿಂಗಳಿನಲ್ಲಿ ಡಾ.ಗಾನಾ ಪಿ.ಕುಮಾರ್ ಅವರು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ
ಪುತ್ತೂರು: ಪುತ್ತೂರಿನ ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿಯ ವತಿಯಿಂದ ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ನಡೆಯುವ `ಶ್ರೀಕೃಷ್ಣ ಲೋಕ’ 24ನೇ ವರ್ಷದ ಕಾರ್ಯಕ್ರಮವು ಜರುಗಿತು. ಬೆಳಿಗ್ಗೆ ಮಕ್ಕಳಿಂದ ಪ್ರಾರ್ಥನೆ ನಡೆದ ಬಳಿಕ ಕೃಷ್ಣ, ರಾಧೆಯರ ನೊಂದಾವಣೆಯು ಪ್ರಾರಂಭಗೊಂಡಿತು. ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಭಜನೆ ಜರುಗಿತು. ನಂತರ ತೊಟ್ಟಲ ಸಂಭ್ರಮದ ಮಗುವಿನ
ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ವತಿಯಿಂದ ಕೊರಗರ ಭೂಮಿ ಹಬ್ಬ ’ನಮ್ಮ ಭೂಮಿ ನಮ್ಮ ಹಕ್ಕು’ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಕೊರಗರ ಬಲೆಪುವಿನಲ್ಲಿ ಗುರುವಾರ ನಡೆಯಿತು.ಬಳ್ಕುಂಜೆ ತಾಲ್ಯಾನ್ ಮನೆತನ ಗುರಿಕಾರರಾದ ಜಬ್ಬ ಕೊರಗ ಅವರು ಹಬ್ಬದ ಜ್ಯೋತಿ ಬೆಳಗಿಸಿ ಧ್ವಜಾರೋಹಣ ನೆವೇರಿಸಿದರು. ಕೊರಗ ಸಮುದಾಯದ ಹಿರಿಯ ಮಹಿಳೆ ಕಾಳಿ ಅವರು ಹಬ್ಬದ ಸಿಹಿಜೇನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಮಂಗಳೂರು:- ಸ್ವಾತಂತ್ರ್ಯದ ಅಮೃತೋತ್ಸವದ ಪ್ರಯುಕ್ತ ಮಂಗಳೂರು ಹೊರವಲಯದ ಅಡ್ಡೂರಿನಲ್ಲಿ ಸನ್ ಶೈನ್ ಫ್ರೆಂಡ್ಸ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಮುಖ್ಯ ಅತಿಥಿಗಳಾದ ಎಂ.ಜಿ ಹೆಗ್ಡೆ ( ಶಿಕ್ಷಣತಜ್ಞರು ) ಹಾಗೂ ಯು.ಪಿ ಇಬ್ರಾಹಿಂ ಇವರು ನೆರವೇರಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ ಶೈನ್ ಫ್ರೆಂಡ್ಸ್ ಅಡ್ಡೂರು ಇದರ ಅಧ್ಯಕ್ಷ ಎ ಕೆ ಹನೀಫ್ ಅವರು ವಹಿಸಿದ್ದರು. ಡಾ ಇ ಕೆ ಎ ಸಿದ್ದೀಕ್ ಅಡ್ಡೂರು, ಜನಾಬ್ ಅಹ್ಮದ್ ಬಾವ
ಪುತ್ತೂರು: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ವ್ಯಕ್ತಿಯಾಗಿರದೆ ರಾಷ್ಟ್ರಕ್ಕೆ ಶಕ್ತಿಯಾಗಿದ್ದರು. ರಾಜಕೀಯವಾಗಿ ಜನಪ್ರತಿನಿಧಿ, ಕಾರ್ಯಕರ್ತ ಹೇಗಿರಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ನುಡಿನಮನ ಸಲ್ಲಿಸಿದರು. ವಾಜಪೇಯಿ ಅವರದ್ದು ಅಪರೂಪದ
ಕುಂದಾಪುರ: ಕಟುಂಬಿಕರೆಲ್ಲರೂ ತೀರ್ಥ ಯಾತ್ರೆಗೆ ತೆರಳಿದ್ದ ಸಂದರ್ಭ ಮನೆಯ ಹಿಂಬದಿಯ ಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕಳವುಗೈದು ಪರಾರಿಯಾದ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಕುಂದಾಪುರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಮರವಂತೆ ನಿವಾಸಿ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ. 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್, 4 ಗ್ರಾಂ, 3 ಗ್ರಾಂ
ಕೇರಳ ಗಡಿಭಾಗ ತಲಪಾಡಿಯ ಚೆಕ್‍ಪೋಸ್ಟ್ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಲಾಯಿತು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರ ನೀಡಿದರು. ಬಂಧಿತರನ್ನು ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುವ ವೃತ್ತಿಯಲ್ಲಿದ್ದ. ರಿಯಾಜ್ ಎಂಬಾತ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಚಿಕನ್ ಸಪ್ಲೈ ಕೆಲಸ ಮಾಡುತ್ತಿದ್ದ, ಇನ್ನೋರ್ವ ಬಂಧಿತ



























