Home Posts tagged #sulya (Page 4)

ಕಡಬ: ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಪರಿಶೀಲನೆ

ಕಡಬದ ಮರ್ದಾಳ ಸಮೀಪ ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಐತ್ತೂರು ಕೋಕಲಾ ಸ್ಥಳವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ನಂತರ ತುಳಿತಕ್ಕೊಳಗಾದ ನೇಲ್ಯಡ್ಕ ನಿವಾಸಿ ಚೋಮ ರವರ ಮನೆಗೆ ಸುಳ್ಯ ಶಾಸಕಿರವರು ಭೇಟಿ ನೀಡಿದರು. ಮನೆಯಲ್ಲಿ ಚೋಮ ರವರ

ಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗಳ ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: 6 ಮಂದಿ ದೋಷಿಗಳೆಂದು ಹೈಕೋರ್ಟ್ ತೀರ್ಪು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್. ರಾಮಕೃಷ್ಣ ಅವರ ಹತ್ಯೆ ಪ್ರಕರಣದ ತೀರ್ಪನ್ನು ರಾಜ್ಯ ಹೈ ಕೊರ್ಟು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್ ಸೇರಿದಂತೆ 6 ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 2011ರ ಏಪ್ರಿಲ್ ತಿಂಗಳಿನಲ್ಲಿ ಎ.ಎಸ್. ರಾಮಕೃಷ್ಣ ಸುಳ್ಯ ನಗರದ ರಸ್ತೆಯೊಂದರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ

ಕಡಬ: ಪಂಚಾಯತ್ ಸಂಪರ್ಕ ರಸ್ತೆ ಬಂದ್ ಮಾಡಿ ದಿಗ್ಬಂಧನ: ತಹಶೀಲ್ದಾರರಿಂದ ತೆರವು

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬದನೆ ಎಂಬಲ್ಲಿ ಪಂಚಾಯತ್ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ವೆಂಕಪ್ಪ ಪೂಜಾರಿ ಮತ್ತು ರೂಪೇಶ್ ಕುಮಾರ್ ಅವರು ಬಂದ್ ಮಾಡಿರುವ ಬಗ್ಗೆ ಇಚ್ಲಂಪಾಡಿ ಗ್ರಾಮದ ಬದನೆ ನಿವಾಸಿ ಶ್ರೀನಿವಾಸ್ ಪೂಜಾರಿಯವರು, ಪುತ್ತೂರು ಸಹಾಯಕ ಆಯುಕ್ತರು, ಕಡಬ ತಹಶೀಲ್ದಾರರು, ಗ್ರಾಮ ಪಂಚಾಯತ್ ಹಾಗೂ ಪೋಲಿಸ್ ಇಲಾಖೆಗೆ ದೂರು ನೀಡಿದ್ದಾರೆ. ಕಡಬ ತಹಶೀಲ್ದಾರರಾದ ಪ್ರಭಾಕರ ಕಜುರೆ, ಕಂದಾಯ ನಿರೀಕ್ಷಕರಾದ ಪೃಥ್ವಿರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ

ಸುಳ್ಯ: ಗ್ರಾ.ಪಂ ಗ್ರಂಥಾಲಯ, ಮಾಹಿತಿ ಕೇಂದ್ರಗಳಿಗೆ ಲ್ಯಾಪ್‍ಟಾಪ್, ಮೋನಿಟರ್ ಕೊಡುಗೆ

ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಪೌಂಡೇಶನ್ ಮತ್ತು ಡೆಲ್ ಟೆಕ್ನಲಾಜಿ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಆಯ್ಕೆಯಾದ ಸುಳ್ಯ ತಾಲೂಕಿನ ಎಂಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಿಗೆ ಕೊಡುಗೆಯಾಗಿ ನೀಡುವ ಲ್ಯಾಪ್‍ಟಾಪ್, ಮೋನಿಟರ್‍ಗಳನ್ನು ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಹಸ್ತಾಂತರಿಸಿದರು. ಸುಳ್ಯ ತಾಲೂಕು

ಸುಳ್ಯ: ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ, ಮೂವರು ಮೃತ್ಯು

ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಸುಳ್ಯದ ಅಡ್ಕಾರಿನಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರಾದ ಚಂದ್ರಪ್ಪ ರೇಗಪ್ಪ, ಮಾಂತೇಶ್ ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಹುಣಸೂರು ಕಡೆಯಿಂದ ಬಂದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ರಸ್ತೆ ಬದಿ ನಿಂತಿದ್ದ ನಾಲ್ವರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದ್ದು, ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಪಕ್ಕದಲ್ಲಿ

ಸುಳ್ಯ: ತಾಲೂಕು ಮಟ್ಟದ ಚೆನ್ನೆಮಣೆ ಆಟದ ಸ್ಪರ್ಧೆ

ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಚೆನ್ನೆಮಣೆ ಆಟ ಇಂದು ನಶಿಸಿ ಹೋಗುವ ಹಂತದಲ್ಲಿದೆ. ಚೆನ್ನೆಮಣೆ ಆಟದ ಬಗ್ಗೆ ಹಿರಿಯರು, ಪೋಷಕರು ಇಂದಿನ ಮಕ್ಕಳಿಗೆ ತಿಳಿಸುವ ಜೊತೆಗೆ ಆಟವನ್ನು ಕಲಿಸುವ ಮೂಲಕ ಚೆನ್ನೆಮಣೆ ಆಟದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಸರಕಾರಿ ನೌಕರರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಹೇಳಿದರು. ಅವರು ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸುಳ್ಯ ತಾಲೂಕು ಶಾಲಾ ಶಿಕ್ಷಣ ಇಲಾಖೆ, ಸಿ.ಸಿ.ಆರ್.ಟಿ. ಗ್ರೂಪ್ ಸುಳ್ಯ

ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ವರ್ಗಾವಣೆ

ಸುಳ್ಯ: ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಉಡುಪಿ ಸಿ.ಇ.ಎನ್. ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಕಳೆದ ಮೂರೂವರೆ ವರ್ಷಗಳಿಂದ‌ ನವೀನ್ ಚಂದ್ರ ಅವರು ಸುಳ್ಯ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ರಾಜ್ಯದಲ್ಲಿ 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆ.1ರಂದು ಆದೇಶ ಮಾಡಿದೆ ಎಂದು ತಿಳಿದು ಬಂದಿದೆ.

ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷದ ಹಿನ್ನಲೆ ಸ್ಮೃತಿ ದಿನ ಹಾಗೂ ರಕ್ತದಾನ ಶಿಬಿರ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಸ್ಮೃತಿ ದಿನ ಹಾಗೂ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರವನ್ನು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಧಾಕೃಷ್ಣ ರೈ, ಬೂಡಿಯಾರು, ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಗುರುದತ್ ನಾಯಕ್, ಕೃಷ್ಣ, ರಾಕೇಶ್ ರೈ ಕೆಡೆಂಜಿ

ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಹೂವಪ್ಪ ವಿಧಿವಶ

ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಕೇನ್ಯ ಗ್ರಾಮದ ಕಣ್ಕಲ್ ಹೂವಪ್ಪರು ಜು. 25ರಂದು ನರ ಸಂಬಂಧಿ ಕಾಯಿಲೆಯಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಅಂದಾಜು 55 ವರ್ಷ ವಯಸ್ಸಾಗಿತ್ತು. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಹೂವಪ್ಪರ ನಿಧನಕ್ಕೆ ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಡಾ ಮುರಲಿ ಮೋಹನ್ ಚೂಂತಾರು ಸಂತಾಪ ವ್ಯಕ್ತಪಡಿಸಿಹೂವಪ್ಪರು ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರೆಂದು

ಸುಳ್ಯ : ಹೊಳೆ ದಾಟುವಾಗ ಹೊಳೆಗೆ ಬಿದ್ದು ವ್ಯಕ್ತಿ ನಾಪತ್ತೆ

ಸುಳ್ಯದ ಅಲೆಟ್ಟಿ ಎಂಬಲ್ಲಿ ವ್ಯಕ್ತಿ ಯೋರ್ವರು ಹೊಳೆ ದಾಟುವಾಗ ಹೊಳೆಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸುಳ್ಯ ಪೊಲೀಸರೊಂದಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‍ಡಿಆರ್‍ಎಫ್ ತಂಡ, ಸ್ಥಳೀಯ ಈಜುಗಾರರ ತಂಡ ಸುಳ್ಯ ಪೊಲೀಸರು ರಾತ್ರಿವರೆಗೂ ಹುಡುಕಾಟ ನಡೆಸಿದ್ದಾರೆ. ನಾಪತ್ತೆಯಾಗಿರುವ ವ್ಯಕ್ತಿ ಇನ್ನೂ ಪತ್ತೆಯಾಗಿರುವುದಿಲ್ಲ. ನಾಪತ್ತೆಯಾಗಿರುವ ವ್ಯಕ್ತಿ