ಉಳ್ಳಾಲ: ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ ನಡೆದಿದ್ದು ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನು ನಸುಕಿನ ವೇಳೆ ಇಬ್ಬರು ಕಳ್ಳರು ಕಳವು ನಡೆಸಿರುವ ಘಟನೆ ನಡೆದಿದೆ. ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.66 ರ ಉದ್ದಕ್ಕೂ ಹಲವು ಸಮಯದಿಂದ ಸರಣಿಯಾಗಿ ಬೈಕ್ ಕಳವಾಗುತ್ತಿದ್ದರೂ ಕಳ್ಳರ
ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (೪೬) ಎಂಬವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದಿದ್ದರು. ಸುಮಾರು ೨೦ ರಷ್ಟು ನೆಂಟರು ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ
ಉಳ್ಳಾಲ: ರೈತರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ, ಬಡ ರೈತರ ಕುಮ್ಕಿ ಜಾಗದ ಹಕ್ಕನ್ನು ಒತ್ತಾಯಪೂರ್ವಕವಾಗಿ ಕಸಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ರೈತರು ಒಗ್ಗಟ್ಟಾಗಿ ತಮ್ಮ ಹಕ್ಕುಗಳನ್ನು ಪಡೆಯುವ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು. ಅವರು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸರಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ
ಉಳ್ಳಾಲ: ವೈದ್ಯಕೀಯ ಕಾಲೇಜು ಜೊತೆಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೊಂದಿಗೆ ಕೇರಳ ಗಡಿಭಾಗದ ನರಿಂಗಾನ ಗ್ರಾಮ ಸಾಕಷ್ಟು ಅಭಿವೃದ್ಧಿಯನ್ನು ಶಾಸಕರ ಮುತುವರ್ಜಿಯೊಂದಿಗೆ ನಡೆಯುತ್ತಿದ್ದು, ಶೀಘ್ರವೇ ತುಳು ಗ್ರಾಮ ಸ್ಥಾಪನೆಯೊಂದಿಗೆ ಇತಿಹಾಸದ ಪುಟಗಳಲ್ಲಿ ಗ್ರಾಮ ಅಚ್ಚಳಿಯದೆ ನೆಲೆ ನಿಲ್ಲಲಿದೆ ಎಂದು ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಹೇಳಿದ್ದಾರೆ. ಅವರು ನರಿಂಗಾನ ಗ್ರಾಮದ ನೆತ್ತಿಲಕೋಡಿ ರಸ್ತೆ ಕಾಂಕ್ರೀಟಿಕರಣದ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಶಾಸಕರ
ಉಳ್ಳಾಲ: ಕೇರಳದ ಕೊಚ್ಚಿಯಿಂದ ಬೈಕಂಪಾಡಿ ಪೈಂಟ್ ತಯಾರಿಕಾ ಇಂಡಸ್ಟ್ರಿ ಗೆ ರಾಸಾಯನಿಕ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ತಡರಾತ್ರಿ ವೇಳೆ ಸಂಭವಿಸಿದೆ. ಹೆದ್ದಾರಿ ಮದ್ಯೆಯೇ ಪಲ್ಟಿಯಾಗಿ ಬಿದ್ದು ಚಾಲಕ ಮಯೂರ್ (40) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವರನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 1ರ ವರೆಗೆ ನಡೆದ ತೆರವು ಕಾರ್ಯಾಚರಣೆ !ಲಾರಿ ಹಾಗೂ
ಉಳ್ಳಾಲ: ಇವತ್ತು ನಾವು ಇರಬಹುದು, ನಾಳೆ ಇಲ್ಲವಾಗಿರಬಹುದು. ಇದು ಊರವರ ರಸ್ತೆ, ಕಾಮಗಾರಿ ವೇಳೆ ಎಲ್ಲರೂ ಸಹಕರಿಸಿ ಗೊಂದಲಗಳಿದ್ದರೆ ಇಂಜಿನಿಯರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಿ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು. ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀರಿ ಜಂಕ್ಷನ್ನಿನಿಂದ ಉಚ್ಚಿಲ ಬೀಚ್ ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಶಿಲನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಾಣಿಜ್ಯ, ವಸತಿ, ಶಾಲೆಗೆ ಸೇರಿದ ಅನೇಕ
ಉಳ್ಳಾಲ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ಅಬ್ಬಕ್ಕನ ಭವನ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಡರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಕುತ್ತಾರು ರಾಜರಾಜೇಶ್ವರೀ ಸಿದ್ದಿವಿನಾಯಕ ದೇವಸ್ಥಾನದಿಂದ ತೊಕ್ಕುಟ್ಟು ಜಂಕ್ಷನ್‍ವರೆಗೆ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಉಳ್ಳಾಲ ಕ್ಷೇತ್ರದಲ್ಲಿ
ಉಳ್ಳಾಲ ತಾಲೂಕಿನ ಪಿಲಾರ್ ದಾರಂದಬಾಗಿಲಿನಲ್ಲಿ ಮಾರ್ಚ್ 5 ರ ಭಾನುವಾರದಂದು ಪಂಜಂದಾಯ ದೈವದ ನೇಮ ನಡೆಲಿದೆ.ಕುತ್ತಾರ್ ಪಂಜಂದಾಯ ಮೂಲಸಾನದಿಂದ ಶನಿವಾರ ರಾತ್ರಿ ಭಂಡಾರ ಬಂದು ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನ ತನಕ ಪಿಲಾರ್ ದಾರಂದಬಾಗಿಲಿನಲ್ಲಿ ನೇಮ ನಡೆಯಲಿದೆ. ಪಿಲಾರ್ ನೇಮದ ಅಂಗವಾಗಿ ಶನಿವಾರ ರಾತ್ರಿ ಪಿಲಾರ್ ಯುವಕ ಮಂಡಲವು “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ ಆಯೋಜಿಸಿದೆ. ಕೊರಗ ತನಿಯನಿಗೆ ನೆಲೆ ನೀಡಿದ ದೈವವಾಗಿ ಪಂಜಂದಾಯ ದೈವದ ಕಾರ್ಣಿಕವು
ಉಳ್ಳಾಲ: ಎಸ್‍ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಿಯಾಝ್ ಫರಂಗಿಪೇಟೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಉಳ್ಳಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡರು. ಉಳ್ಳಾಲ ನಗರಸಭೆ ಎದುರುಗಡೆಯಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಿಯಾಝ್ ಫರಂಗಿಪೇಟೆ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ ಪಕ್ಷದ ಎಲ್ಲಾ
ಉಳ್ಳಾಲ: ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಆತನ ಮನೆ ಎದುರುಗಡೆಯೇ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಕೊಲೆಯತ್ನಕ್ಕೆ ಒಳಗಾದವರು. ಗಾಯಾಳುವನ್ನು ಗಂಭೀರ ಸ್ಥಿತಿಯಲ್ಲಿ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂಬವರು ಇನ್ನಿಬ್ಬರನ್ನು ಸೇರಿಸಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಇಬ್ಬರಿಗಾಗಿ




























