Home Posts tagged #v4news karnataka (Page 53)

ಬೈಂದೂರು ತಾಲೂಕಿಗೆ ಸರ್ಕಾರಿ ಆಸ್ಪತ್ರೆ ಮಂಜೂರಿಗೆ ಕಾರ್ಡ್ ಚಳುವಳಿ

ಬೈಂದೂರು ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ಮಂಜೂರಿಗಾಗಿ ಆಗ್ರಹಿಸಿ ಕಾರ್ಡ್ ಚಲೋ ಚಳುವಳಿಯನ್ನು ಆರಂಭಿಸಿದ್ದಾರೆ. ವಕೀಲರಾದ ಧನಂಜಯ ಶೆಟ್ಟಿ ಶಿರೂರು ಮತ್ತು ಬೈಂದೂರು ನಾಗರಿಕ ಸೇವಾ ವೇದಿಕೆಯ ಅಧ್ಯಕ್ಷರಾದ ಅಶ್ವಥ್ ನಾರಾಯಣ ಅವರು ಶೀಘ್ರದಲ್ಲೇ ಆಸ್ಪತ್ರೆ ಮಂಜೂರುಗೊಳಿಸುವಂತೆ ಒತ್ತಾಯಿಸಿದ್ದಾರೆ. ಬೈಂದೂರು ತಾಲೂಕು ಕೇಂದ್ರದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯಲ್ಲಿ

ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ, ಚಾಲಕನಿಗೆ ಗಾಯ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿರುವ ಘಟನೆ ರಾ.ಹೆ66 ರ ಕೋಟೆಕಾರು ಬೀರಿ ಸಮೀಪ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಸ್ಥಳೀಯ ಯುವಕರ ತಂಡ ತಕ್ಷಣ ಕಾರು ಚಾಲಕನನ್ನು ಹೊರಗೆಳೆದು ರಕ್ಷಿಸಿ ಮಾನವೀಯತೆ ಮೆರೆದಿರುವ ವೀಡಿಯೋ ವೈರಲ್ ಆಗಿದೆ. ಹಳೆಯಂಗಡಿ ನಿವಾಸಿ ನೌಫಾಲ್ ಗಾಯಗೊಂಡವರು. ತಲಪಾಡಿ ಕಡೆಯಿಂದ ಹಳೆಯಂಗಡಿಯತ್ತ ತೆರಳುವ ವೇಳೆ ಕಾರು ನಿಯಂತ್ರಣ ಕಳೆದು ರಾ.ಹೆ. ಬಳಿಯ ವಿಭಜಕ

ಹಿರಿಯ ಸಾಹಿತಿ, ಲೇಖಕಿ ಡಾ ಸಾರಾ ಅಬೂಬಕರ್ ನಿಧನ

ಮಂಗಳೂರು: ಹಿರಿಯ ಸಾಹಿತಿ, ಲೇಖಕಿ ಡಾ ಸಾರಾ ಅಬೂಬಕರ್ (87) ಇಂದು ನಿಧನರಾಗಿದ್ದಾರೆ. ಕೆಲವು ಸಮಯಗಳಿಂದ ವಯೋಸಜಹ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಲೇಡಿ ಹಿಲ್ ಬಳಿಯಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಮೂಲತಃ ಕಾಸರಗೋಡಿನ ಚಂದ್ರಗಿರಿ ತೀರದವರಾದ ಸಾರಾ ವಿವಾಹವಾದ ಬಳಿಕ ಮಂಗಳೂರಿನಲ್ಲಿ ವಾಸವಿದ್ದರು. ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ

ಬ್ರಹ್ಮಮೊಗೇರ್ ಯಕ್ಷಗಾನ ಬಯಲಾಟ, ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಬ್ರಹ್ಮಮೊಗೇರ ಆರಾಧನಾ ಟ್ರಸ್ಟ್‍ನ ವತಿಯಿಂದ ಬ್ರಹ್ಮಮೊಗೇರೆರ್ ಯಕ್ಷಗಾನ ಬಯಲಾಟ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮೊಗೇರ ದೈವಗಳ ದರ್ಶನ ಪಾತ್ರಿಗಳ ಸನ್ಮಾನ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಗದ್ದೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತುಳು ನಾಡು ಎಂಬುದು ಒಂದು

ಬಳಕೆದಾರರ ಜಾಗೃತಿ ವೇದಿಕೆ-ಅಧ್ಯಕ್ಷರಾಗಿ ಅರುಣ್ ಪ್ರಕಾಶ್ ಶೆಟ್ಟಿ ಆಯ್ಕೆ

ಮೂಡುಬಿದಿರೆ: ಮೂಲ್ಕಿ ತಾಲೂಕು ಹಾಗೂ ಮೂಡುಬಿದಿರೆ ತಾಲೂಕುಗಳನ್ನು ಒಳಗೊಂಡ ಬಳಕೆದಾರರ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಮೂಡುಬಿದಿರೆಯ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಡಾ.ಶಿವರಾಜ್ ಅರಸು ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳು: ಯು ಪದ್ಮನಾಭ ಶೆಟ್ಟಿ( ಗೌರವಾಧ್ಯಕ್ಷರು), ಕೆ.ವೇದವ್ಯಾಸ ಉಡುಪ, ಜೈಸನ್ ತಾಕೋಡೆ(ಉಪಾಧ್ಯಕ್ಷರು), ಡಾ.ರವೀಶ್ ಕುಮಾರ್ ಎಂ.( ಸಂಚಾಲಕರು), ದಯಾನಂದ ನಾಯ್ಕ್( ಜೊತೆ ಕಾರ್ಯದರ್ಶಿ), ಅಶೋಕ್ ಕಟೀಲ್( ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.

ಮೂಡುಬಿದರೆ – ಮಾರ್ಕೆಟ್‍ನಲ್ಲಿ ರಾಶಿ ಹಾಕಿರುವ ಗುಜರಿ ವಸ್ತು ತೆರವುಗೊಳಿಸಲು ಕ್ರಮ : ಪುರಸಭಾ ಸದಸ್ಯ ರಾಜೇಶ್ ನಾಯ್ಕ್

ಮೂಡುಬಿದಿರೆ: ಸ್ವರಾಜ್ಯ ಮೈದಾನದ ಮಾರ್ಕೆಟ್ ನಲ್ಲಿ ಗುಜರಿ ಅಂಗಡಿಯಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿದೆ. ರಾಶಿ ಹಾಕಿರುವ ಗುಜರಿ ವಸ್ತುಗಳನ್ನು ತೆರವುಗೊಳಿಸುವಂತೆ ಸದಸ್ಯ ರಾಜೇಶ್ ನಾಯ್ಕ್ ಪುರಸಭಾ ಸಾಮಾನ್ಯ ಸಭೆಯಲ್ಲಿ ತಿಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭಾ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದರು.

ಕೊಡಗು ಜಿಲ್ಲಾ ಬಂಟರ ಅಧ್ಯಕ್ಷರಾಗಿ ವಕೀಲ ರತ್ನಾಕರ್ ಶೆಟ್ಟಿ ಅವಿರೋಧ ಆಯ್ಕೆ

ವಿರಾಜಪೇಟೆ ಸಮೀಪದ ಮಗ್ಗುಲದ ಅಗ್ನೋನಿಮಾ ರೆಸಾರ್ಟ್ ನಲ್ಲಿನ ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ವಿರಾಜಪೇಟೆಯ ಹಿರಿಯ ವಕೀಲರು, ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ ಆರ್ ರತ್ನಾಕರ ಶೆಟ್ಟಿ ಅವರನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ, ಹಾಗೂ ನಾರಾಯಣ್ ರೈ ಯವರನ್ನು

ಪುತ್ತೂರಿನ ಪುಷ್ಪರೇಖಾಗೆ ಪಿಎಚ್‍ಡಿ ಪದವಿ.

ಪುತ್ತೂರು :ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ, ಪ್ರಸ್ತುತ ವಿವಾಹಿತರಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಪುಷ್ಪರೇಖಾ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ. ಪುಷ್ಪರೇಖಾ ಅವರು ರಸಾಯನ ಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಪ್ರೊ. ಬಿ.ಕೆ. ಸರೋಜಿನಿ ಅವರ ಮಾರ್ಗದರ್ಶನದಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ

ಬೈಕ್ ನಲ್ಲಿ ಗಾಂಜಾ ಸಾಗಾಟ : ಓರ್ವ ಬಂಧನ, ಇನ್ನೋರ್ವ ಪರಾರಿ

ಉಳ್ಳಾಲ: ಬೈಕಿನಲ್ಲಿ ಗೋಣಿಚೀಲದಲ್ಲಿ ರೂ.40,000 ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿ ತಚ್ಚಣಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಸ್ಗರ್ ತಲೆಮರೆಸಿಕೊಂಡಿದ್ದಾನೆ. ಇಬ್ಬರು ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದರು.

ಗಾಂಧಿ ವಿಚಾರ ವೇದಿಕೆಯಿಂದ ಮಿನುಗು ನೋಟ ಅನಾವರಣ ಕಾರ್ಯಕ್ರಮ

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಿನುಗು ನೋಟ ಎಮ್.ಜಿ. ಹೆಗ್ಡೆಯವರು ಬರೆದಿರುವ ಗಾಂಧೀಜಿಯವರ ಕುರಿತ ಪ್ರಶ್ನೆಗಳಿಗೆ ಉತ್ತರದ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕದ್ರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀಧರ್ ಜಿ. ಭಿಡೆ ವಹಿಸಲಿದ್ದಾರೆ. ಪುಸ್ತಕವನ್ನು ಪ್ರಸಿದ್ಧ ಅಂಕಣಕಾರರಾದ ಸುಧೀಂದ್ರ ಕುಲಕರ್ಣಿ ಅವರು ಅನಾವರಣ ಮಾಡಲಿದ್ದಾರೆ.