ಕುಂದಾಪುರದ ಜಾಲಾಡಿ ಸಮೀಪದ ರಾ.ಹೆದ್ದಾರಿ 66 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಕಾರು ಅಪಘಾತಕ್ಕೀಡಾಗಿದೆ. ಸೋಮವಾರ ಬೆಳಿಗ್ಗೆ ಪತ್ನಿಯೊಂದಿಗೆ ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿರುದ್ದ ಧಿಕ್ಕಿನಿಂದ ಏಕಾಏಕಿ
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.12, 13ರಂದು ಅಮ್ಮುಂಜೆ ಅನುದಾನಿತ ಶಾಲೆಯಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಬಾಲಕೃಷ್ಣ ಗಟ್ಟಿ ಅವರನ್ನು ಅಧಿಕೃತವಾಗಿ ಆಮಂತ್ರಿಸಲಾಯಿತು. ಈ ಸಂದರ್ಭ ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್ ಮತ್ತು ರಮಾನಂದ ನೂಜಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗೀತಾ ಎಸ್.ಕೊಂಕೋಡಿ, ವಿಟ್ಲ ಹೋಬಳಿ ಅಧ್ಯಕ್ಷರಾದ ಗಣೇಶ
ಎಸ್‌ಡಿಎಂ ಕಾನೂನು ಕಾಲೇಜು ಆಯೋಜಿಸಿದ ಸ್ಕ್ರಿಪ್ಟ್ ರೈಟಿಂಗ್ ಸ್ಪರ್ಧೆಯಲ್ಲಿ ಸತ್ಯಾತ್ಮ ಭಟ್ ಕುಂಟಿನಿ , ೨ನೇ ವರ್ಷ ಬಿ.ಎ. ಎಲ್ ಎಲ್ ಬಿ ಶಿಕ್ಷಣವನ್ನು ಪಡೆಯುತ್ತಿರುವ ಇವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.ಹಾಗೆಯೇ ಇವರು ಬರೆದ ” ಸ್ವಪ್ನ ಕಥಾ ” ಎಂಬ ಕಥೆಯನ್ನು ಬೀದಿ ನಾಟಕವಾಗಿ ಮಂಗಳೂರಿನ ನಿರ್ಮಾರ್ಗ ಪಂಚಾಯತ್ ಮುಂಭಾಗದಲ್ಲಿ ಹಾಗೂ ಸ್ಟೇಟ್ ಬ್ಯಾಂಕ್ ಬಸ್ಟ್ಯಾಂಡಿನಲ್ಲಿ ಬೀದಿ ನಾಟಕವಾಗಿ ಪ್ರದರ್ಶಿಸಲಾಗಿದೆ.ಈ ಕಥೆಯು ಬಾಲ್ಯವಿವಾಹ ವಾಗಿರುವ
ಸುಳ್ಳು ಭರವಸೆಗಳು ಬಿಜೆಪಿ ಜನಪ್ರತಿನಿಧಿಗಳ ಜಾಯಮಾನ ಎಂಬುದು ಇಂದು ಜನರಿಗೆ ಅರ್ಥ ಆಗಿದೆ. ಸುರತ್ಕಲ್ ಟೋಲ್ ಗೇಟ್ ತೆರವಿಗೆ ಸಂಬಂಧಪಟ್ಟು ಜನರ ಸಹನೆ ಮುಗಿದಿದೆ. ಟೋಲ್ ಗೇಟ್ ತೆರವು ಆದೇಶ ಹೊರಡಿಸದೆ ಹಗಲು ರಾತ್ರಿ ಧರಣಿ ನಿಲ್ಲಿಸುವ ಮಾತೇ ಇಲ್ಲ. ಮಹಿಳೆಯರನ್ನು ದೊಡ್ಡ ಸಂಖ್ಯೆಯಲ್ಲಿ ಈ ಹೋರಾಟಕ್ಕಾಗಿ ಸಂಘಟಿಸಿ ಮುಂಚೂಣಿಯಲ್ಲಿ ಇರುತ್ತೇವೆ. ಹೋರಾಟ ಯಶಸ್ಸು ಕಂಡ ನಂತರವೇ ವಿಶ್ರಾಂತಿ ಎಂದು ಹೋರಾಟಗಾರ್ತಿ ಮಂಜುಳಾ ನಾಯಕ್ ಹೇಳಿದರು. ಸುರತ್ಕಲ್ ಟೋಲ್ ಗೇಟ್ ತೆರವಿಗೆ
ಮಂಗಳೂರು: ರಾಜ್ಯ ಸರಕಾರ ಮೇಲ್ಜಾತಿಯವರು ಕೇಳಿದರೆ ನಿಗಮ ಕೊಡುತ್ತಾರೆ. ಹಿಂದುಳಿದ ಈಡಿಗ-ಬಿಲ್ಲವ ಸಮುದಾಯವರು ಕೇಳಿದರೆ ಕೋಶ ಕೊಡುತ್ತಾರೆ. ಇದ್ಯಾವ ನ್ಯಾಯ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.ಸರಕಾರ ನಾರಾಯಣ ಗುರು ಕೋಶ (ಕೋರ್ಪಸ್ ಫಂಡ್) ಘೋಷಿಸಿ ನೀಡಿರುವ ಆದೇಶ ಬೋಗಸ್ ಎಂದು ಸ್ವಾಮೀಜಿಯವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆದೇಶದ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು. ಈಡಿಗ
ತಿರುವನಂತಪುರಂ: ಬ್ರೇಕಪ್ ಮಾಡಿಕೊಳ್ಳುವಂತೆ ಹೇಳಿದರೂ ಆತ ಬ್ರೇಕಪ್ ಮಾಡಿಕೊಳ್ಳಲಿಲ್ಲ. ನನ್ನ ಜಾತಕದಲ್ಲಿ ಮೊದಲ ಗಂಡ ಸಾಯುತ್ತಾನೆ ಎಂದು ಬರೆದಿದೆ ಎಂದು ಸುಳ್ಳು ಹೇಳಿ ಅವನ ಮನಸ್ಸು ಬದಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆಕೆ ತೆಗೆದುಕೊಂಡ ಕೊನೆಯ ದಾರಿ ಮಾತ್ರ ಅತ್ಯಂತ ಕಠೋರವಾಗಿತ್ತು. ಕೇರಳದ ತಿರುವನಂತಪುರಂ ಮೂಲದ ಶರೋನ್ ರಾಜ್ ಎಂಬ ಯುವಕನ ನಿಗೂಢ ಸಾವು ಹೊಸ ತಿರುವು ಪಡೆದುಕೊಂಡಿದ್ದು, ಪ್ರಿಯತಮೆಯೇ ಆತನನ್ನು ಪಾನೀಯದಲ್ಲಿ ವಿಷ ಬೆರೆಸಿ ಹತ್ಯೆ
ಸುರತ್ಕಲ್ ಅಕ್ರಮ ಟೋಲ್ ಗೇಟ್ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತವಾಗಿ ರಾರಾಜಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್ ಕೇಂದ್ರ ಮುಚ್ಚದಿರುವುದರ ಹಿಂದೆ ಭ್ರಷ್ಟಾಚಾರ, ಕಮೀಷನ್, ಖಾಸಗಿ ಕಂಪೆನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು, ಬಿಜೆಪಿ ಸರಕಾರ ಅಂತಹ ನೀತಿಗಳ ಪರ ನಿರ್ಲಜ್ಜವಾಗಿ ನಿಂತಿರುವುದು ಇಂದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಜನಪರ ಕಾರ್ಯಗಳಿಗೆ ಬೆನ್ನು
ದೀಪಾವಳಿಯ ಪ್ರಯುಕ್ತ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ,ಗೋಸಾಕುವ ಕುಟುಂಬಕ್ಕೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಭಾಜಪ ಉಪಾಧ್ಯಕ್ಷ ಶ್ರೀಪ್ರಕಾಶ್ ಶೆಟ್ಟಿಯವರು ಭಾರತಮಾತೆ ಪೂಜೆ ನಡೆಸಿ ಚಾಲನೆ ನೀಡಿದರು. ಮಾತೆಯರಿಂದ ಗೋಪೂಜೆ ನಡೆಸಿ ಪ್ರತಿ ಗೋಸಾಕುವ ಕುಟುಂಬಕ್ಕೆ ಗೌರವಪೂರ್ವಕವಾಗಿ ಸನ್ಮಾನಿಸಿ, ಗೋಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಭಾಜಪ ಅಧ್ಯಕ್ಷರಾದ ಶ್ರೀಕಾಂತ್
ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಮೂರನೇ ದಿನವೇ ಬಲಿಪಾಡ್ಯಮಿ. ಅಂದು ದಾನಶೂರ ಬಲೀಂದ್ರನ ಪೂಜೆಯನ್ನು ದೈವಸ್ಥಾನಗಳಲ್ಲಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ದಾನದಲ್ಲಿ ಬಲೀಂದ್ರ ಪೂಜೆಯನ್ನು ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ
ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡುವ ಬಗ್ಗೆ ಬಿಜೆಪಿ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಕೆಲ ಕಾಲ ಸಭೆ ಮುಂದೂಡಿಕೆಯಾದ ಘಟನೆ ನಡೆಯಿತು. ಪಾಲಿಕೆಯ ಸಭೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಇಳಿದಾಗ, ಬಿಜೆಪಿ ಸದಸ್ಯರು ವೀರ ಸಾವರ್ಕರ್ ಕೀ




























