ಕ್ರಿಸ್ ಮಸ್ ಏಸುಕ್ರಿಸ್ತನ ಜನ್ಮದಿನ. ಪ್ರಪಂಚದಾದ್ಯಂತ ಕ್ರೈಸ್ತರು ಈ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸ್ತಾರೆ. ಅದ್ರಲ್ಲೂ ಕರಾವಳಿಯಲ್ಲಿ ಕ್ರಿಸ್ ಮಸ್ ಹಬ್ಬ ಅಂದ್ರೆ ಮತ್ತಷ್ಟು ವಿಭಿನ್ನ. ಮಂಗಳೂರಿನ ಗ್ರಾಮೀಣ ಭಾಗಗಳಲ್ಲಿ ಕ್ರಿಸ್ ಮಸ್ ಹಬ್ಬದ ತಯಾರಿ ಸಂದೇಶ ಹೇಗಿರುತ್ತೆ ಅಂತಾ ತಿಳ್ಕೋಬೇಕಾ. ಹಾಗಾದ್ರೆ ಈ ಸ್ಟೋರಿ ನೋಡಿ. ನಕ್ಷತ್ರಗಳಿಂದ ಬಣ್ಣ ಬಣ್ಣದ
ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ರಾಷ್ಟ್ರೀಯ ರೈತ ದಿನ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡರು. ರಾಷ್ಟ್ರೀಯ ರೈತರ ದಿನ ಅಂಗವಾಗಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ರೈತರಾದ ರಾಮ ಕೃಷ್ಣ ಶರ್ಮ ಬಂಟಕಲ್,ರಘುಪತಿ ರಾವ್ ಮಾವಿನಕಾಡು,ಸತೀಶ್ ಹೆಗ್ಡೆ ಅಮಾಸೆಬೈಲ್, ಹಾಜಿ ಅಲಿಯಬ್ಬ ಉಚ್ಚಿಲ,ಪ್ರೇಮ ಪೂಜಾರಿ ಕುಂಭಾಷಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಬಂದ ಉಡುಪಿ ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕರಾದ ಮೋಹನ್
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಿಜಿ, ಹಾಸ್ಟೆಲ್, ಹೋಮ್ ಸ್ಟೇ ಇತ್ಯಾದಿಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿ ಮಂಗಳೂರು ನಗರದ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹಾಸ್ಟೆಲ್, ಹೋಂಸ್ಟೇ, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್, ವಾಣಿಜ್ಯ ಉದ್ದೇಶದ ಗೆಸ್ಟ್ ಹೌಸ್, ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳ ಮಾಲಕರು/ಪಾಲುದಾರರು, ಆಡಳಿತ ಮಂಡಳಿಯ ಮುಖ್ಯಸ್ಥರು ಸಂಬಂಧಿಸಿದ
ಮೂಡುಬಿದಿರೆ: ಹಲವು ವಿಶೇಷಗಳಿಗೆ ಮುನ್ನುಡಿ ಬರೆಯಲಿರುವ, ಶೂನ್ಯತ್ಯಾಜ್ಯದತ್ತ ಗಮನವಿರಿಸಿಕೊಂಡು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ 20ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ” ಕೋಟಿ-ಚೆನ್ನಯ” ಜೋಡುಕರೆ ಕಂಬಳವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು.ಚೌಟರ ಅರಮನೆಯ ಕುಲದೀಪ್ ಎಂ ಅವರು ಮುಹೂರ್ತವನ್ನು ನಡೆಸಿಕೊಟ್ಟು,
ಮೂಡುಬಿದಿರೆ : ದೈವಗಳಿಗೆ ಹಾಕಿದ ಹೂವಿನ ಹಾರಗಳನ್ನು ಸಂಗ್ರಹಿಸಿ ಇಡಲು ಅಪೂರ್ವ ಕೆತ್ತನೆಯ ” ಪುಷ್ಪ ದಂಡಿಗೆ ” ಯನ್ನು ತೋಡಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಕಾರಮೊಗರು ಗುತ್ತು ಪ್ರೇಮನಾಥ ಮಾರ್ಲರು ಶುಕ್ರವಾರ ಸೇವಾರೂಪವಾಗಿ ಸಮರ್ಪಿಸಿದರು. ಮೂಡುಬಿದಿರೆ ದೇವಕೀ ಲಕ್ಷ್ಮಿ ಮಿಲ್ ನ ಮಾಲಕರಾಗಿರುವ ಪ್ರೇಮನಾಥ ಮಾರ್ಲ ಅವರು ತಮ್ಮದೇ ಮಿಲ್ ನಲ್ಲಿ ನಿರ್ಮಿಸಿರುವ ಈ ಪುಷ್ಪ ದಂಡಿಗೆಯು
ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಸ್ಕೌಟ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ಸೌತ್ ಕೊರಿಯಾದಿಂದ ತಾಯಿ ಮಗ ಪ್ರತಿನಿಧಿಸಿದ್ದಾರೆ.ಒಟ್ಟು 7 ಜನ ಪ್ರತಿನಿಧಿಗಳು 2 ತಿಂಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿರುವುದಾಗಿ ತಿಳಿಸಿದ ಚಾ ಸಾಂಗೋಕ್, ಇಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಗೈಡ್ಸ್ ನ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ಹಿತವನ್ನು ನೀಡಿದೆ. ಊಟೋಪಚಾರದ
ಜಾಂಬೂರಿಯ ಉತ್ಸವದ ಯಶೋಕಿರಣ ಸಂಕೀರ್ಣ ದಲ್ಲಿ ಟೀಂ ಮಂಗಳೂರು ವತಿಯಿಂದ ಖ್ಯಾತ ಕಲಾವಿದ ದಿನೇಶ್ ಹೊಳ್ಳ ಪರಿಕಲ್ಪನೆ ಯಲ್ಲಿ ನಡೆಯುತ್ತಿದೆ . ಆ ಗಾಳಿಪಟದಲ್ಲಿ ತುಳುನಾಡಿನ ಜನಪದಗಳಾದ ಬಡಗುತಿಟ್ಟು ತೆಂಕುತಿಟ್ಟು ಯಕ್ಷಗಾನ, ಭೂತರಾದನೆ , ಗುತ್ತಿನ ಮನೆ , ಪಿಲಿನಲಿಕೆ, ಸಿರಿತುಪ್ಪೆ, ಪಾರ್ದನ, ಕಂಬಳ, ಅಕ್ಕಿಮುಡಿ, ಆಟಿಕಳೆಂಜ, ಮುಟ್ಟಾಳೆ , ಚೆಂಡೆ ಮದ್ದಳೆ ,ಮೀನುಗಾರಿಕೆ, ಗಗ್ಗರದ ಅನಾವರಣ ವಾಗಿದೆ .ಒಟ್ಟು 1000 ವಿದ್ಯಾರ್ಥಿ ಗಳಿಗೆ ಗಾಳಿಪಟ ತಯಾರಿಕೆಯನ್ನು
ಅದೊಂದು ಕಮ್ಮಾರಿಕೆಯ ಸ್ಟಾಲ್. ಅದರೊಳಗಡೆ ಮಲಗಿಕೊಂಡಿರುವ ಎರಡು ನಾಯಿಗಳು, ಇನ್ನೊಂದು ಕಡೆಯಲ್ಲಿ ಹುಡುಗಿಯೊಬ್ಬಳು ಕತ್ತಿಗಾಗಿ ಮರದ ಕೈಯನ್ನು ತಯಾರಿಸುತ್ತಿರುವುದು, ಇನ್ನೊಂದು ಕಡೆಯಲ್ಲಿ ಮಹಿಳೆಯೊಬ್ಬರು ಕಮ್ಮಾರಿಕೆಗೆ ಬೇಕಾದ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿರುವುದು ಮತ್ತೊಂದು ಕಡೆಯಲ್ಲಿ ಗಂಡಸು ಮತ್ತು ಮಗ ಸೇರಿಕೊಂಡು ಕತ್ತಿಯನ್ನು ರೆಡಿ ಮಾಡುತ್ತಿರುವ ದೃಶ್ಯವೊಂದು ಎಲ್ಲರ ಗಮನ ಸೆಳೆಯುತ್ತಿರುವುದು ಜಾಂಬೂರಿಯಲ್ಲಿ. ಹೀಗೆ ಕಮ್ಮಾರಿಕೆಯಲ್ಲಿ
ಬಜಪೆ : ತುಳುನಾಡಿನ ರೈತರು ಅಪಾರ ದೈವ ನಂಬಿಕೆಯನ್ನು ಹೊಂದಿರುವವರು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವುದೇ ದೈವ ದೇವರುಗಳ ಆರಾಧನೆಯಿಂದ. ತಾವು ಬೆಳೆಯುವ ಮೂರು ಬೆಳೆಗಳ ಮಧ್ಯೆ ಕೃಷಿಯ ಆರಾಧನೆಗಳು ನಡೆಯುತ್ತಾ ಇರುತ್ತದೆ.ಇಂತಹ ಆರಾಧನೆಗಳಲ್ಲಿ ಸುಗ್ಗಿ ಬೆಳೆಯ ಪ್ರಾರಂಭದಲ್ಲಿ ಆಚರಿಸುವ ಪೂಕರೆ ಕಂಬಳವು ಒಂದು. ಅತೀ ಪುರಾತನವಾದ ಪೂಕರೆ ಕಂಬಳವನ್ನು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಎಕ್ಕಾರು ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೂಕ್ತೇಸರರಾದ
ಪುತ್ತೂರು : ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಸಮುದಾಯದ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ ಕಾರ್ಯಕ್ರಮ ಡಿ.25 ರಂದು ಬೆಳಗ್ಗಿನಿಂದ ಸಂಜೆ ತನಕ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿಯ ಸಂಚಾಲಕ ಎ.ವಿ.ನಾರಾಯಣ ಸುದ್ದಿಗೋಷ್ಠಿಯಲಿ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಊರ ಗೌಡರಾದ ಕೊಡಿಪ್ಪಾಡಿಯ ಪಕ್ರು ಗೌಡ




























