ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿಗೂ, ಜಾರ್‌ಕುಮಾರ್ ಅವರ ಪೇರೂರು ಗ್ರಾಮಕ್ಕೂ ಏನು ಸಂಬಂಧ? ಈ ಪ್ರಶ್ನೆ ಹಲವರ ಹುಬ್ಬೇರಿಸಬಹುದು. ಪೇರೂರು ಪೆರಿಯ ಊರು. ಪೆರಿಯ ಪಿರಿಯ ಪ್ರಾಯದ ಹಳೆಯ ಊರು. ಹಾಗಾಗಿ ತೆಂಕಣ ಭಾರತದ ಇನ್ನೂರಕ್ಕೂ ಹೆಚ್ಚು ಪೇರೂರು (ಕನ್ನಾಡಿನ ಕೆಲವೆಡೆ ಹೇರೂರು ಆಗಿದೆ) ಗ್ರಾಮಗಳು ನದಿಯ ದಡಗಳಲ್ಲಿಯೇ ಇವೆ.ಗಾಜನೂರುಗಳು ಕೂಡ ಹಲವು
Month: November 2023
ಕುಂದಾಪುರ: ಸಾಕಷ್ಟು ಬಲಿಷ್ಠವಾಗಿದ್ದ ಬಿಲ್ಲವ ಸಮಾಜ 26 ಉಪಪಂಗಡಗಳಾಗಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗೂಡಿದರೆ ನಾವು ಇಡೀ ರಾಜ್ಯವನ್ನೇ ಆಳಬಹುದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್. ಆರ್ ಕಳವಳ ವ್ಯಕ್ತಪಡಿಸಿದರು. ನಗರದ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ
ಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಳುನಾಡಿನ ಕಂಬಳ ಆಯೋಜಿಸಿದ್ದ ಸಂಘಟಕರಿಗೆ ಬಿಬಿಎಂಪಿ- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ರೂ. 50,000 ದಂಡ ವಿಧಿಸಿದ್ದಾರೆ. ಅರಮನೆಯ ಕಾಂಪೌಂಡಿನ ಹೊರಗೆ ಹೇಗೆಂದರೆ ಹಾಗೆ ಬ್ಯಾನರ್ ಮತ್ತು ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಇವೆಲ್ಲ ಇದ್ದುದರಿಂದ ಅವಕ್ಕೆ ಬಿಬಿಎಂಪಿ ದಂಡ ವಿಧಿಸಿದೆ. ಅಲ್ಲದೆ
ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣ ಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರಗಳು ಜಂಟಿಯಾಗಿ ನಡೆಸಿದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು 33 ವರುಷಗಳ ಬಳಿಕ ಮತ್ತೆ ಚಾಂಪಿಯನ್ ಅಯಿತು. ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ
ಡಿಸೆಂಬರ್ 9ರಂದು ದೇಶದಾದ್ಯಂತ ನಡೆಯಲಿರುವ ರಾಷ್ಟೀಯ ಲೋಕ ಅದಾಲತ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಚಾರಣೆಗೆ ಬಾಕಿಯಿರುವ ಹಳೆಯ ಪ್ರಕರಣಗಳನ್ನು ಎರಡೂ ಕಕ್ಷಿದಾರರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸದವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ
ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡುವಲ್ಲಿ ವಿಫಲವಾದ ಬೇಸರದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಪುತ್ತೂರಿನ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ(17) ಮೃತಪಟ್ಟವರು. ಎರಡು ವಾರಗಳ
ರಾಜ್ಯದ ಪ್ರಮುಖ ಭಾಷೆಯಾದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ‘ಬೆಂಗಳೂರು ಕಂಬಳನಮ್ಮ ಕಂಬಳ’ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುರಾತನ ಕಾಲದಿಂದ ಬಂದಿರುವ ಕಂಬಳವು ಕರಾವಳಿಯ ಜಾನಪದ ಕಲೆ. ಅದು ಬೆಂಗಳೂರಿನಲ್ಲಿ
ಬೋರ್ ವೆಲ್ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ ೩೩ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಇಂದು ಮುಂಜಾನೆ ಸಂಭವಿಸಿದೆ. ಮೃತರನ್ನು ಬಜ್ಪೆ ಮೂಲದ ಕಿಶೋರ್ ಶೆಟ್ಟಿ(35) ಮತ್ತು ಫಿಲೀಪ್ ಮೇರಿ
ಬಂಟ್ವಾಳ: ತುಳುನಾಡಿನ ಕಾರಣಿಕ ಪ್ರಸಿದ್ದ ದೈವಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ವರ್ಷಾವಧಿ ಕೋಲ ನಡೆಯಿತು. ಬೆಳಿಗ್ಗೆ ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಪುಣ್ಯಾಹ, ಪಂಚಗವ್ಯ ದ್ವಾದಶ ನಾಳಿಕೇರ ಗಣಯಾಗ, ನಾಗತಂಬಿಲ, ಫಲಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ ಪೂಜೆ, ಪಲ್ಲಪೂಜೆ ನಡೆಯಿತು.
ಕಾವೂರಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಿಂದ ನಿರ್ಮಿಸಲಾದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾರುಕಟ್ಟೆಯ ಸಂಕೀರ್ಣ ಖಾಲಿ ಬಿದ್ದಿದ್ದು, ಅಂಗಡಿ ಪಡೆದ ವ್ಯಾಪಾರಸ್ಥರು ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ. ಕಾವೂರಿನಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆ



























