ಉಳ್ಳಾಲ: ಭ್ರಷ್ಟಾಚಾರ, ಕರ್ತವ್ಯಲೋಪ, ಕಡತ ವಿಲೇವಾರಿಯಲ್ಲಿ ಹಿನ್ನೆಡೆ ದೂರುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ನಾಟೆಕಲ್‌ನಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಇಬ್ಬರು ಸರ್ವೇಯರ್‌ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ತನಿಖೆಗೆ ಪಡೆದುಕೊಂಡಿದ್ದಾರೆ.
ಉಳ್ಳಾಲ: ದೇವಸ್ಥಾನಗಳ ಮುಖಾಂತರ ಧರ್ಮಕೇಂದ್ರದ ಚಟುವಟಿಕೆಗಳು ಹಾಗೂ ಧರ್ಮಜಾಗೃತಿಯ ಮುಖೇನ ಹಿಂದುತ್ವಕ್ಕೆ ಶಕ್ತಿ ಕೊಡುವ ಕಾರ್ಯಗಳಾಗಬೇಕಿದೆ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಅಭಿಪ್ರಾಯಪಟ್ಟರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ತನ್ನ ಕುಟುಂಬದ ದೊಡ್ಡಮನೆಗೆ ನೂತನ ಸಂಸದರಾಗಿ ಆಯ್ಕೆಗೊಂಡು ಆಶೀರ್ವಾದ ಪಡೆಯಲು ಬಂದವರು ತಲಪಾಡಿ ದೇವಸ್ಥಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಶೇ. 30% ಮುಸಲ್ಮಾನರಿದ್ದು,
ಉಳ್ಳಾಲ: ಖಾಲಿಯಿರುವ ಗುಡ್ಡಪ್ರದೇಶಗಳನ್ನು ಉಪಯೋಗಿಸಿ ಗೇರು ಬೆಳೆ ಬೆಳೆಸುವ ಕಾರ್ಯಕ್ಕೆ ಮುಂದಾಗಿರಿ. ಕ್ಯಾಷ್ಯೂ ಕಾರ್ಖಾನೆಗಳು ಅನೇಕ ಇದ್ದರೂ ದೇಶಕ್ಕೆ ವಿದೇಶಗಳಿಂದ ಗೋಡಂಬಿ ಆಮದು ಮಾಡಲಾಗುತ್ತಿದೆ. ಶೀಘ್ರವೇ ಮನೆಗೊಂದು ಗೇರುಗಿಡ ಯೋಜನೆಯನ್ನು ನಿಗಮದಿಂದ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಹೇಳಿದರು. ಅವರು ತೊಕ್ಕೊಟ್ಟುವಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಲಾದ ತಿಂಗಳ
ಉಳ್ಳಾಲ : ನಮ್ಮ ನಾಡ ಒಕ್ಕೂಟ ಇದರ ಆಶ್ರಯದಲ್ಲಿ ಮಂಗಳೂರು ಕಮ್ಯುನಿಟಿ ಸೆಂಟರ್ ತೊಕ್ಕೊಟ್ಟುವಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಆರಂಭಗೊಂಡಿತು. ವಿಧಾನ ಸಭಾ ಸ್ವೀಕರ್ ಯು ಟಿ ಖಾದರ್ ಫರೀದ್ ಮಂಗಳೂರು ಕಮ್ಯುನಿಟಿ ಸೆಂಟರ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜನರಿಗೆ ಮೂಲಭೂತ ಸೌಕರ್ಯ ಗಳನ್ನು ಪಡೆಯಲು ಇಂತಹ ಸೇವೆ ಅವಶ್ಯಕತೆ ಇದೆ.ಶಿಕ್ಷಣ, ಉದ್ಯೋಗ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಅಗತ್ಯ ಇರುತ್ತದೆ.ಇದನ್ನು ನಮ್ಮ ನಾಡ ಒಕ್ಕೂಟ ಉಚಿತ ವಾಗಿ
ಉಳ್ಳಾಲ: ಇಲ್ಲಿನ ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದ ಆಂದ್ರಪ್ರದೇಶ ಮೂಲದ ನಾಲ್ವರು ಮಹಿಳೆಯರಲ್ಲಿ ಒಬ್ಬಾಕೆ ಸಮುದ್ರಪಾಲಾಗಿದ್ದು, ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.ಆಂದ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್ ಪ್ರಸನ್ನ ಎಂಬವರ ಪತ್ನಿ ಪರಿಮೀ ರತ್ನ ಕುಮಾರಿ (57) ಸಾವನ್ನಪ್ಪಿದವರು. ಉಳ್ಳಾಲ ಬೀಚ್ ಸಮುದ್ರದಲ್ಲಿ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ಎಳೆದೊಯ್ದಿತ್ತು.
ಉಳ್ಳಾಲದ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಢ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ, ವ್ಯಾಪಾರಸ್ಥರಿಗೆ ಕೋಟ್ಯಂತರ ರೂ ನಷ್ಟ ಉಂಟಾಗಿದೆ. ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿನ ನವೀದ್ ಮಾಲೀಕತ್ವದ ಎಸ್.ಎನ್ ಫ್ರೂಟ್ಸ್ ಸುಹೈಲ್ ಎಂಬವರಿಗೆ ಸೇರಿದ ಕೆಎಫ್ ಕೆ, ಲತೀಫ್ ಎಂಬವರ ಕೆ.ಕೆ.ಫ್ರೂಟ್ಸ್, ಇಂಡಿಯನ್, ಸಲಾಂ ಅವರ ಬಿ.ಎಸ್.ಆರ್, ಝುಲ್ಫೀಕರ್ ಅವರ ಪಿಕೆಎಸ್, ನಾಸೀರ್
ಉಳ್ಳಾಲ: ನೇಪಾಳ ಮೂಲದ ಅಪ್ರಾಪ್ತೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೊಕ್ಕೊಟ್ಟು,ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ಇಂದು ಬೆಳಕಿಗೆ ಬಂದಿದೆ.ನೇಪಾಳ ಮೂಲದ ರಬೀನ ಬಿ.ಕೆ (16)ಮೃತ ಅಪ್ರಾಪ್ತೆ.ತೊಕ್ಕೊಟ್ಟು ವೃಂದಾವನ ಹೊಟೇಲಿನ ಪಕ್ಕದಲ್ಲಿ ಫಾಸ್ಟ್ ಫುಡ್ ಕಮ್ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್ ಎಂಬವರು ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ತೊಕ್ಕೊಟ್ಟು, ಚೆಂಬುಗುಡ್ಡೆಯ ರೀಟಾ ಡಿ ಸೋಜ ಎಂಬವರ ಮನೆಯಲ್ಲಿ ಬಾಡಿಗೆಗೆ
ಉಳ್ಳಾಲ: ನೈರುತ್ಯ ಕ್ಷೇತ್ರ ಶಿಕ್ಷಣ ಕಾಶಿಯಾಗಿಯೇ ಮುಂದುವರಿಯುತ್ತಿದೆ ಹೊರತು ಉದ್ಯೋಗ ನೀಡುವ ಯಾವುದೇ ಸಂಸ್ಥೆಗಳು ಇಲ್ಲಿ ಆರಂಭವಾಗುತ್ತಿಲ್ಲ. ಪದವೀಧರರಿಗೆ ನಿರುದ್ಯೋಗದ ಸಮಸ್ಯೆ ಜ್ವಲಂತ ಇದ್ದರೂ ವಿಧಾನಸಭೆಯಲ್ಲಿ ಚರ್ಚೆಗಳೇ ಆಗದೇ ಅನಾವಶ್ಯಕ ವಿಚಾರಗಳೇ ಮೇಳೈಸುತ್ತಿವೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿನಕರ್ ಉಳ್ಳಾಲ್ ಹೇಳಿದರು. ಕುತ್ತಾರು ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ, ಜಾತಿ,
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ದೊಡ್ಡ ದೊಡ್ಡ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಮೊಗವೀರಪಟ್ಟಣದಲ್ಲಿ ಮೀನುಗಾರಿಕೆಗೆಂದು ಹಾಕಿದ್ದ ಬಲೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ಕಲ್ಲಿಗೆ ಸಿಲುಕಿ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿತ್ತು. ಈ ನಡುವೆ ಸ್ಥಳೀಯ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಲಿದ್ದ ಕೆಲವು ದೋನಿಗಳು ಸಮುದ್ರದ ಅಲೆಗಳ ಕಾರಣದಿಂದ ಸಮುದ್ರದದ ದಡಕ್ಕೆ
ದೇರಳಕಟ್ಟೆ ಯೇನೆಪೊಯ ಆಸ್ಪತ್ರೆ ಬಳಿ ಮರದ ಮಿಲ್ಲೊಂದರ ಆವರಣ ಗೋಡೆ ಕುಸಿದು ಎರಡು ಕಾರು ಮತ್ತು ಒಂದು ಕೈಗಾಡಿಗೆ ಹಾನಿಯಾದ ಘಟನೆ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿದ್ದು, ಎತ್ತರದ ಹಳೆ ಗೋಡೆಯಾಗಿದ್ದು, ಕುಸಿದು ಬಿದ್ದಿದೆ. ಯೇನೆಪೊಯ ವೈದ್ಯರಿಗೆ



























