Home ಕರಾವಳಿ Archive by category ಮಂಗಳೂರು (Page 79)

ಮಂಗಳೂರು: ಖೋಟಾ ನೋಟು ಚಲಾವಣೆ: ಓರ್ವನ ಬಂಧನ

ನಗರದ ಕಂಕನಾಡಿ ಬಳಿ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಜೇಶ್ವರದ ಆಬುಪಡ್ಪು ನಿವಾಸಿ ಪ್ರಶ್ವಿತ್ (25) ಎಂದು ಗುರುತಿಸಲಾಗಿದೆ. ಆರೋಪಿಯು 500 ರೂ., 200 ರೂ., 100 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9ಸಾವಿರ

ಮಂಗಳೂರು: ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ, ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮ, ಮನವಿ ಪತ್ರ, ಲಾಂಛನ, ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ಬೆಂಗ್ರೆಯ ಫೆರಿ ಪಾಯಿಂಟ್‌ನಲ್ಲಿ ನಡೆಯಿತು. ಮೀನುಗಾರಿಕಾ ಇಲಾಖೆಯ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಇದೇ

ಮಂಗಳೂರು: ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0ದಲ್ಲಿ ಪ್ರಥಮ ಸ್ಥಾನ ಪಡೆದ ನೌಮಾನ್ ಪಜೀರ್

ಆತ ಗ್ರಾಮೀಣ ಭಾಗದ 20ರ ಹರೆಯದ ಯುವಕ.  ಕಾಲೇಜು ಮೆಟ್ಟಿಲು ಹತ್ತದೇ, ಕಿರಿ ವಯಸ್ಸಿನಿಂದಲೇ ಸ್ಟಂಟ್‌ನಲ್ಲಿ ಅತೀವ ಹುಮ್ಮಸ್ಸು. ಇಂದು ಅದೇ ಹುಮ್ಮಸ್ಸು ರಾಷ್ಟ್ರದ 25,೦೦೦ ಮಂದಿಯ ಎದುರುಗಡೆ, ೨೮  ಸ್ಪರ್ಧಾಳುಗಳನ್ನು ಸೋಲಿಸಿ ಇಡೀ ಗ್ರಾಮದ ಹೆಸರನ್ನು ಕೀರ್ತಿಪತಾಕೆಗೆ ಏರಿಸಿ ಸಾಧನೆ ಮೆರೆದಿದ್ದಾರೆ. ಪಜೀರು ಗ್ರಾಮದ ನಿವಾಸಿ ನೌಮಾನ್ ಪಜೀರು ಎಂಬವರು ಪ್ರತಿಷ್ಠಿತ ಬಜಾಜ್ ಆಟೋ ಲಿಮಿಟೆಡ್ ಇವರು ಮುಂಬಯಿ ಯಲ್ಲಿ ಆಯೋಜಿಸಿದ  ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0

ಮಂಗಳೂರು : ಡಿ.17ರಂದು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಮಂಗಳೂರಿನ ಉಜ್ಜೋಡಿಯಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಲಾಸಿಕ್- ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರವು ಡಿ.17 ರಂದು ನಡೆಯಲಿದೆ. ಈ ಉಚಿತ ಕಣ್ಣಿನ ತಪಾಸಣಾ ಶಿಬಿರವು ಡಿ.17 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.  18 ವರ್ಷ ಪ್ರಾಯದಿಂದ ಸುಮಾರು 50 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್

ಮಂಗಳೂರು: ಕಂಕನಾಡಿಯ ವೆಸ್ಟ್‌ಕೋಸ್ಟ್ ಶೋರೂಂನಲ್ಲಿ ಕರೀಷ್ಮ ಎಕ್ಸ್‌ಎಂಆರ್ ದ್ವಿಚಕ್ರ ವಾಹನ ಬಿಡುಗಡೆ

ಹೊಸ ಹೊಸ ಮಾದರಿಯ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಮೋಟಾರ್‍ಸ್, ಇದೀಗ ಕರೀಷ್ಮ ಎಕ್ಸ್‌ಎಂಆರ್ ದ್ವಿಚಕ್ರ ವಾಹನವನ್ನು ಕಂಕನಾಡಿಯ ವೆಸ್ಟ್ ಕೋಸ್ಟ್ ಶೋರೂಂನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಕರೀಷ್ಮಾ ೨೧೦ಸಿಸಿಯ ದ್ವಿಚಕ್ರ ವಾಹನವನ್ನು ನಟರಾದ ಅರ್ಜುನ್ ಕಾಪಿಕಾಡ್ ಮತ್ತು ಅನೂಪ್ ಸಾಗರ್‌ರವರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ಗೂಗಲ್ ನಕ್ಷೆಯಲ್ಲಿ ಮಂಗಳಾದೇವಿ ದೇವಾಲಯದ ಹೆಸರು ತಿರುಚು.

ಮಂಗಳೂರು ಬೋಳಾರದ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಭೂಪಟದಲ್ಲಿ ಯಾರೋ ಕಿಡಿಗೇಡಿಗಳು ಪೀರ್ ದರ್ಗಾ ಕಾಂಪೌಂಡ್ ಎಂದು ತಿದ್ದಿರುವುದಾಗಿ ತಿಳಿದು ಬಂದಿದೆ. ಇದನ್ನು ಸರಿಪಡಿಸುವಂತೆ ದೇವಾಲಯದ ಆಡಳಿತ ಮಂಡಳಿಯವರು ದೂರು ದಾಖಲಿಸಿದ್ದಾರೆ. ಇದು ಕುಕೃತ್ಯ ಎಂದೂ ಖಂಡಿಸಿದ್ದಾರೆ.

ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್‍ನಲ್ಲಿ ಜಾಬ್ ವೇಕೆನ್ಸಿ

ಮಂಗಳೂರಿನ ಪ್ರತಿಷ್ಠಿತ ಕಂಪೆನಿಯಾದ ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ ಪ್ರೈವೆಟ್ ಲಿಮಿಟೆಡ್‍ನಲ್ಲಿ ಇಲೆಕ್ಟ್ರಿಷನ್, ಪಿಟ್ಟರ್ಸ್, ಇಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಖಾಲಿ ಹುದ್ದೆಗಳಿದ್ದು, ಡಿ.16ರಂದು ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಡಿಸೆಂಬರ್ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇಮಕಾತಿ ನಡೆಯಲಿದ್ದು, Mail id. [email protected] ಅಥವಾ 0824 4251019 / 4261019 ಗೆ ಸಂಪರ್ಕಿಸಬಹುದು.

ಮಂಗಳೂರು: ಡಿ.15ರಂದು ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಫಾರ್ಮಸಿ ವತಿಯಿಂದ ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ

ಮಂಗಳೂರಿನ ವೆಲೆನ್ಸಿಯದಲ್ಲಿ ಕಾರ್ಯಾಚರಿಸುತ್ತಿರುವ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಫಾರ್ಮಸಿ ವತಿಯಿಂದ ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಡಿ.15 ರಂದು ಹಮ್ಮಿಕೊಂಡಿದ್ದಾರೆ.ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವು ವೆಲೆನ್ಸಿಯಾದ ವೇದಂ ಆರೋಗ್ಯ ಆಸ್ಪತ್ರೆಯಲ್ಲಿ ಡಿ.15 ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಡೆಯಲಿದ್ದು, ವಯಸ್ಸಾದ 35 ವರ್ಷಗಳಿಗೂ ಮೇಲ್ಪಟ್ಟವರಿಗೆ ಎಲ್ಲಾ ರೀತಿಯ ಸಂಧಿವಾತಗಳಿಗೆ

ವಂಚಕ ಕಂಪೆನಿಗಳು ಜನರನ್ನು ದೋಚಲು ಸರಕಾರಗಳ ನೀತಿಗಳೇ ಕಾರಣ – ಮುನೀರ್ ಕಾಟಿಪಳ್ಳ

ಜನಸಾಮಾನ್ಯರ ಮುಗ್ದತೆ, ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಹಣಕಾಸು, ಮಾರ್ಕೆಟಿಂಗ್, ಚೈನ್ ಲಿಂಕ್, ಸ್ಕೀಮ್ ಕಂಪೆನಿಗಳು ಕಾನೂನಿನ ಭಯವಿಲ್ಲದೆ ದಿನಕ್ಕೊಂದರಂತೆ ಮಂಗಳೂರು ನಗರದಲ್ಲಿ ತಲೆ ಎತ್ತುತ್ತಿವೆ. ಇಂತಹ ಕಂಪೆನಿಗಳ ವೈಭವೋಪೇತ ಕಾರ್ಯಕ್ರಮಗಳಲ್ಲಿ ರಾಜಕೀಯ ನೇತಾರರು, ಧಾರ್ಮಿಕ ಕ್ಷೇತ್ರದ ಗಣ್ಯರು ಮುಂದಾಲೋಚನೆ ಇಲ್ಲದೆ ಕಾಣಿಸಿಕೊಳ್ಳುವುದು ವಂಚಕ ಕಂಪೆನಿಗಳಿಗೆ ಜನಸಾಮಾನ್ಯರ ನಡುವೆ ವಿಶ್ವಾಸಾರ್ಹತೆಯನ್ನು ಗಳಿಸಲು ಸಹಾಯ ಮಾಡುತ್ತದೆ‌. ಇಂತಹ

ಮಂಗಳೂರು: ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು

ನವಮಂಗಳೂರು ಬಂದರಿಗೆ ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು ಆಗಮಿಸುವುದರೊಂದಿಗೆ ಈ ಬಾರಿಯ ಕ್ರೋಸ್ ಸೀಸನ್ ಅರಂಭಗೊಂಡಿತು. ನಾರ್ವೆಯ ಒಡೆತನದ, ಬಹಾಮಾಸ್ ಧ್ವಜ ಹೊಂದಿದ್ದು 500 ಪ್ರಯಾಣಿಕರು ಮತ್ತು 350 ಸಿಬಂದಿಯನ್ನು ಹೊಂದಿದೆ. 173 ಮೀಟರ್ ಉದ್ದವಿರುವ ಈ ಹಡಗು ಆಗಿದ್ದು, 28,803 ಟನ್ ಭಾರ, ಮತ್ತು 7.5 ಮೀಟರ್ ಆಳವಿದೆ. ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ ಚೆಂಡೆ ಮತ್ತು ಯಕ್ಷಗಾನ, ಭರತನಾಟ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ