Home Archive by category ರಾಜಕೀಯ (Page 16)

370ನೇ ವಿಧಿ ರದ್ದನ್ನು ಕರಾಳ ದಿನ ಎಂದದ್ದು ತಪ್ಪಲ್ಲ: ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ: ಸುಪ್ರೀಂ

ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ಕರಾಳ ದಿನ ಎಂದು ಕರೆದದ್ದು ತಪ್ಪಲ್ಲ. ಅದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸರ್ವೋಚ್ಚ  ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಸರಕಾರದ ಕ್ರಮಗಳನ್ನು ಟೀಕಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಪ್ರಜೆಗೆ ಇದೆ ಎಂದೂ ಅದು ಹೇಳಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಸಹ ಸುಪ್ರೀಂ ಕೋರ್ಟು ಹೇಳಿದೆ.

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಬಿಜೆಪಿಗೆ

ಕಲ್ಕತ್ತಾ ಹೈಕೋರ್ಟಿನ ನ್ಯಾಯಮೂರ್ತಿ ಗಂಗೋಪಾಧ್ಯಾಯರು ನ್ಯಾಯಾಲಯ ಬಿಟ್ಟು, ಬಿಜೆಪಿಯ ರಾಜಕೀಯ ಮಾಡಲು ಹೊರಟಿದ್ದಾರೆ. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ ಎಂದರೆ ಅದು ಪೂರ್ಣ ಸುಳ್ಳಲ್ಲ.ಭಾರತದ ಪ್ರಜಾಪ್ರಭುತ್ವ ಹಲವು ಅಪಾಯಗಳಿಂದ ಪಾರಾಗಿ ಬಂದಿದೆ. ಆದರೆ ಪ್ರಜಾಪ್ರಭುತ್ವದ ಹೆಸರಲ್ಲೇ ನಿರಂಕುಶ ಅಧಿಕಾರದ ಅಮಲು ಈಗ ಸ್ಪಷ್ಟವಾಗಿದೆ. ಅದಾನಿ, ಅಂಬಾನಿ ಮಂದಿ ಪ್ರಧಾನಿ ಕಚೇರಿಯಲ್ಲಿ ಧಾರಾಳವಾಗಿ ಸಿಗುತ್ತಾರೆ. ಜಾರಿ ನಿರ್ದೇಶನಾಲಯ ಪ್ರತಿಪಕ್ಷಗಳನ್ನು ಮಾತ್ರ

ತಮಿಳುನಾಡು ಸೇರದ ಜಯಲಲಿತಾ ಚಿನ್ನಾಭರಣ

ಕರ್ನಾಟಕದ ವಶ ಇರುವ ದಿವಂಗತ ಜಯಲಲಿತಾರಿಗೆ ಸೇರಿದ ಚಿನ್ನಾಭರಣಗಳನ್ನು ತಮಿಳುನಾಡು ಸರಕಾರಕ್ಕೆ ಒಪ್ಪಿಸುವುದಕ್ಕೆ ಹೈಕೋರ್ಟ್ ಮಧ್ಯಾವಧಿ ತಡೆ ನೀಡಿತು. ಇವುಗಳಲ್ಲಿ ಹೆಚ್ಚಿನ ಆಭರಣಗಳು ನನ್ನ ಅಜ್ಜಿ ನಟಿ ಸಂಧ್ಯಾರಿಗೆ ಸೇರಿದ್ದು ಎಂದು ಜಯಲಲಿತಾರ ಸಹೋದರನ ಮಗಳು ಜೆ. ದೀಪಾ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರು ಚಿನ್ನಾಭರಣ ಹಸ್ತಾಂತರಕ್ಕೆ ತಾತ್ಕಾಲಿಕ ತಡೆ ನೀಡಿದರು.

ಮಾರ್ಚ್ 10ರಂದು ದೇಶದೆಲ್ಲೆಡೆ ರೈಲು ತಡೆ

ದಿಲ್ಲಿ : ಮಾರ್ಚ್ 10ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ದೇಶದ ಎಲ್ಲೆಡೆ ರೈಲು ತಡೆ ನಡೆಸಲಾಗುತ್ತದೆ ಎಂದು ದಿಲ್ಲಿ ಚಲೋ ಪ್ರತಿಭಟನೆಯ ರೈತರು ತಿಳಿಸಿದ್ದಾರೆ. ಸಂಯುಕ್ತ ಕಿಸಾನ್ ಸಂಘಟನೆ ಕೂಟವು ಈ ಬಗೆಗೆ ಹೇಳಿಕೆ ನೀಡಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ರೈತ ಸಂಘಟನೆಯವರು ಮಾರ್ಚ್ 6ರಂದು ದಿಲ್ಲಿ ಮುತ್ತಿಗೆ ಹಾಕುವುದಾಗಿಯೂ ಹೇಳಿದೆ. ಮೋದಿಯವರ ಸರಕಾರವು ರೈತರ ಚಳವಳಿ ಹೊಸಕುವುದು ಸಾಧ್ಯವಿಲ್ಲ ಎಂದು ಟಿಕಾಯತ್ ತಿಳಿಸಿದ್ದಾರೆ.

ಬಿಜೆಪಿ ಟಿಕೆಟ್ ಸಿಕ್ಕಿದೆ ಆದರೆ ಸ್ಪರ್ಧಿಸುವುದಿಲ್ಲ : ಭೋಜಪುರಿ ನಟ, ಗಾಯಕ ಪವನ್ ಸಿಂಗ್

ಬಿಜೆಪಿಯವರ ನಂಬಿಕೆಗೆ ಅಭಾರಿ. ಆದರೆ ಅವರು ಟಿಕೆಟ್ ನೀಡಿದ್ದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖ್ಯಾತ ಭೋಜಪುರಿ ನಟ, ಗಾಯಕ ಪವನ್ ಸಿಂಗ್ ಹೇಳಿದ್ದಾರೆ. ಬಿಜೆಪಿಯ ಲೋಕಸಭಾ ಸ್ಪರ್ಧಿಗಳ ಮೊದಲ ಪಟ್ಟಿಯಲ್ಲಿ ಪವನ್ ಸಿಂಗ್‌ರಿಗೆ ಅಸನ್ಸೋಲ್ ಟಿಕೆಟ್ ನೀಡಲಾಗಿದೆ. ಆದರೆ ಅವರು ನೇರ ರಾಜಕೀಯ ಪ್ರವೇಶ ಇಲ್ಲ ಎಂದಿದ್ದಾರೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೇಮಾಮಾಲಿನಿ ಸಹಿತ ಹಲವು ನಟ ನಟಿಯರು ಸ್ಪರ್ಧಿಸಲು ಕ್ಷೇತ್ರ ಪಡೆದಿದ್ದಾರೆ. ಭೋಜಪುರಿ ಭಾಷೆಯ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ

ಹಣವಂತರ ನಡುವಣ ಹೆಣವಂತ ಸಮುದಾಯ

ಭಾರತದಲ್ಲಿ ಅತೀ ಸಿರಿವಂತರ ಸಂಖ್ಯೆಯು 13,230ಕ್ಕೆ ಏರಿಕೆಯಾಗಿದೆ. 141 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ ಅಭಿವೃದ್ಧಿಶೀಲ ಹೆಸರು ಹಲಗೆ ಕಳಚಿಕೊಳ್ಳಲಾಗದ, 40 ಕೋಟಿಯಷ್ಟು ಬಡವರನ್ನು ಹೊಂದಿರುವ ಭಾರತದಲ್ಲಿ ಬಡವರ ಸಂಖ್ಯೆ ಇಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಜನಸಂಖ್ಯೆ ಏರಿದಂತೆಯೇ ಬಡವರ ಸಂಖ್ಯೆಯೂ ಏರುತ್ತ ನಡೆದಿದೆ. 1970ನೇ ಇಸವಿಯಲ್ಲಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದ ವ್ಯಕ್ತಿಯು ಈಗ ತಿಂಗಳಿಗೆ 13,000

ಅಡ್ಡ ಮತದಾನ ಬಿಜೆಪಿಗೆ ಭರ್ಜರಿ ಲಾಭ

ಹದಿನೈದು ರಾಜ್ಯಗಳ 66 ರಾಜ್ಯ ಸಭಾ ಸ್ಥಾನಗಳಿಗೆ ವಿಧಾನ ಸಭೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 30 ಸ್ಥಾನ ಗೆದ್ದು 45 ಶೇಕಡಾಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಆದರೆ ಇದರಲ್ಲಿ 6 ಸ್ಥಾನಗಳನ್ನು ಅದು ವಶೀಲಿಬಾಜಿಯಿಂದ, ಖರೀದಿಯಿಂದ, ಹಿಂದಿನ ಬಾಗಿಲಿನಿಂದ ತನ್ನದಾಗಿಸಿಕೊಂಡಿದೆ ಎನ್ನುವುದು ಹಲವರ ಆರೋಪವಾಗಿದೆ. ಆರು ವರುಷ ಸದಸ್ಯಾವಧಿಯ ರಾಜ್ಯ ಸಭೆಯ ಮೂರನೇ ಒಂದು ಭಾಗದ ಸದಸ್ಯರು ಪ್ರತಿ ಎರಡು ವರುಷಕ್ಕೊಮ್ಮೆ

ದಿಲ್ಲಿ: ಮೈತ್ರಿ, ಸೀಟು ಹಂಚಿಕೆ ಬಗೆಗೆ ಸ್ಪಷ್ಟನೆ

ದಿಲ್ಲಿಯ ದಿಲ್ಲಿ ಪಶ್ಚಿಮ, ದಿಲ್ಲಿ ದಕ್ಷಿಣ, ದಿಲ್ಲಿ ಪೂರ್ವ ಮತ್ತು ನವದೆಹಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಶಾನ್ಯ ದಿಲ್ಲಿ, ವಾಯುವ್ಯ ದಿಲ್ಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.ಎಎಪಿಯವರೂ ಇದ್ದ ಮಾಧ್ಯಮ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮಾಹಿತಿ ನೀಡಿದರು.ಗುಜರಾತಿನ 26ರಲ್ಲಿ 24ಕಡೆ ಕಾಂಗ್ರೆಸ್

ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ : ವೈ. ಎಸ್. ಶರ್ಮಿಳಾ ಬಂಧನ

ಜಿಲ್ಲಾ ಆಯ್ಕೆ ಸಮಿತಿಯಿಂದ ಶಿಕ್ಷಕರ ನೇಮಕಾತಿ ಪಟ್ಟಿ ಆಗಿದ್ದರೂ ಸಚಿವಾಲಯವು ಆ ಪಟ್ಟಿ ತಡೆ ಹಿಡಿದಿರುವುದರ ವಿರುದ್ಧ ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ಎಪಿಸಿಸಿ ಅಧ್ಯಕ್ಷೆ ವೈ. ಎಸ್. ಶರ್ಮಿಳಾ ಮತ್ತಿತರರನ್ನು ಪೋಲೀಸರು ವಶಕ್ಕೆ ಪಡೆದರು.ಮನೆಗೆ ಹೋದರೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂದು ರಾತ್ರಿ ಕಾಂಗ್ರೆಸ್ ಕಚೇರಿಯಲ್ಲೇ ಮಲಗಿದ್ದ ಶರ್ಮಿಳಾ ಅವರು ಬೆಳಿಗ್ಗೆ ನೇರ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಶರ್ಮಿಳಾ ಅವರು ಆಂಧ್ರದ