ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್- 2023 ಆಗಿ ಹೊರಹೊಮ್ಮಿದರು. ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾದಿಂದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ – 2023
17ನೇ ಲೋಕ ಸಭೆಯು 88% ನಿಗದಿತ ಕೆಲಸ ಮಾಡಿದೆ ಎಂದು ವರದಿ ಆಗಿದೆ. ಆದರೆ ಅವರೆಲ್ಲ ಲೋಕಸಭೆಯಲ್ಲಿ ಗದ್ದಲ ಮಾಡಿದ್ದರ ಬಗೆಗೇ ಮಾಧ್ಯಮಗಳಲ್ಲಿ ಹೆಚ್ಚು ವರದಿಯಾಗಿತ್ತು. ಗದ್ದಲ ಮಾಡಿದ, ಕೂಗಾಡಿದ, ಕಲಾಪ ಮುಂದೂಡಿದ, ಹೊರ ನಡೆದ, ಹಾಜರಿ ಹಾಕಿ ಭತ್ಯೆ ಪಡೆದು ಕ್ಯಾಂಟೀನ್‍ನಲ್ಲಿ ಕುಳಿತ ಕಾಲ ಎಷ್ಟು ಎಂದು ಲೆಕ್ಕ ಸಿಕ್ಕಿಲ್ಲ. ಬಹುತೇಕ ಸಂಸದರು ತಮ್ಮ ಅನುಕೂಲದ ಹೊರತಾಗಿ ಬೇರೆಯದರ ಬಗೆಗೆ ತಲೆ ಕೆಡಿಸಿಕೊಂಡುದು, ತಲೆ ಓಡಿಸಿದ್ದು ಕಡಿಮೆ. ಹಾಲಿ ಲೋಕ ಸಭೆಯ ಅವಧಿ ಮುಗಿಯಲು
ಮುಂಬೈನಲ್ಲಿ ನಡೆದ 19 ನೆಯ ಬ್ಯಾಂಕಿಂಗ್ ತಂತ್ರಜ್ಞಾನ ಸಮ್ಮೇಳನದಲ್ಲಿ *ಪ್ರತಿಷ್ಠಿತ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ನಿಂದ ಭಾರತ್ ಕೋ-ಅಪರೇಟಿವ್ ಬ್ಯಾಂಕ್ “ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿ” ಯನ್ನು ಪಡೆದುಕೊಂಡಿದೆ. ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಪರವಾಗಿ *ಶ್ರೀ ಭಾಸ್ಕರ್ ರಾವ್ ( CISO) ಅವರು RBI ನ ಗವರ್ನರ್ ಶ್ರೀ ಟಿ.ರಬಿ ಶಂಕರ್ ಮತ್ತು ಶ್ರೀ ಎ.ಕೆ. ಗೋಯೆಲ್,(ಪಂಜಾಬ್
ದಿಲ್ಲಿಗೆ ಪ್ರತಿಭಟನೆ ಮಾಡಲು ಬಂದ ರೈತರಿಗೆ ಗೃಹ ಮಂತ್ರಿ ಅಮಿತ್ ಶಾ ನಿರ್ವಹಣೆಯ ಪೊಲೀಸ್ರು ನೀವು ಊಟ ಕೊಟ್ರೆ ನಾವು ಲಾಠಿ ಬೀಸ್ತೀವಿ ಎಂದಿದ್ದಾರೆ. ಕೊಟ್ಟ ಊಟಕ್ಕೆ ನ್ಯಾಯ ಬೆಲೆ ಕೇಳಿದರೆ ಡ್ರೋಣ್ ಮೂಲಕ ಹೊಗೆ ಬಾಂಬು ಸಿಡಿಸಿ ಕಣ್ಣೀರು ತರಿಸ್ತೀವಿ ಎಂದೂ ಹೊಸ ಸಂಶೋಧನೆ ಮಾಡಿ ತೋರಿಸಿದ್ದಾರೆ. ಗದ್ದೆಯಲ್ಲಿ ಇರಬೇಕಾದವರು ದಿಲ್ಲಿಗೆ ಬಂದ್ರೆ ನಾವು ಎಲ್ಲಿಗೆ ಹೋಗಬೇಕು, 144 ಸೆಕ್ಷನ್ ತಿಂಗಳುಗಟ್ಟಲೆ ಹಾಕ್ತೀವಿ ಎಂದು ಮೋದಿಯವರ ಸರಕಾರ ಪಣ ತೊಟ್ಟಂತಿದೆ. ಸದ್ಯ
ಭಾರತ ರತ್ನ ಪ್ರಶಸ್ತಿಯ ಬಗೆಗೆ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಹೆಸರು ಸೂಚಿಸುತ್ತಾರೆ. ಅದಕ್ಕೆ ರಾಷ್ಟ್ರಪತಿ ಅವರು ಅಂಗೀಕಾರ ಮುದ್ರೆ ಒತ್ತುತ್ತಾರೆ. ಹಿಂದೆಲ್ಲ ಸಮಿತಿ ರಚನೆ, ಅಭಿಪ್ರಾಯ, ಮಂತ್ರಿ ಮಂಡಲದಲ್ಲಿ ಚರ್ಚೆ ಮೂಲಕ ಹೆಸರನ್ನು ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಿದ್ದರು. ಈಗ ಪ್ರಧಾನಿ ಮೋದಿಯವರು ಕಿಸೆಯಿಂದ ತೆಗೆದುಕೊಟ್ಟಂತೆ ಭಾರತ ರತ್ನ ಎಂದು ಸದ್ದು ಮಾಡಿದ್ದಾರೆ. ಕ್ರಮ ಪ್ರಕಾರ ಕರ್ಪೂರಿ ಠಾಕೂರ್, ಆಮೇಲೆ ಲಾಲ್ ಕೃಷ್ಣ ಅಡ್ವಾಣಿ,
ಇದೇ ಫೆಬ್ರವರಿ 24ರಂದು ನಿವೃತ್ತರಾಗುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕನ್ನಡಿಗರೆ ಆದ ದಿನೇಶ್ ಕುಮಾರ್ ಅವರ ಜಾಗಕ್ಕೆ ಎನ್. ವಿ. ಅಂಜಾರಿಯಾ ಅವರನ್ನು ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಮುಖ್ಯ ನ್ಯಾಯಮೂರ್ತಿ ಆಯ್ಕೆಯನ್ನು ಸೂಚಿಸಿದೆ. ಗುಜರಾತ್ ರಾಜ್ಯದವರಾದ ಎನ್. ವಿ. ಅಂಜಾರಿಯಾ ಅವರು ಸದ್ಯ ಗುಜರಾತ್ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿ ಇದ್ದಾರೆ.
ಜಿಎಸ್‍ಟಿ ವಂಚನೆಯಲ್ಲಿ ಗುಜರಾತ್ ಮತ್ತು ಮುಂಬಯಿಯ ಗುಜರಾತ್ ಉದ್ಯಮಿಗಳೇ ಮೊದಲ ಸ್ಥಾನದಲ್ಲಿರುವುದು ವರದಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರವು ಒಕ್ಕೂಟ ಸರಕಾರವು ತನಗೆ ಮಾಡಿರುವ ಹಣಕಾಸು ವಂಚನೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ನಡುವೆ ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ತೆರಿಗೆ ಪಾಲು ನೀಡಿಕೆ ಮತ್ತು ಅನುದಾನ ಕೊಡುವುದರಲ್ಲಿ ಬಿಜೆಪಿಯೇತರ ಸರಕಾರಗಳನ್ನು ಒಕ್ಕೂಟ ಸರಕಾರವು ವಂಚಿಸಿದೆ ಎಂದು ಆಳುವವರನ್ನು
ತಮಿಳು ನಟ ವಿಜಯ್ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಹೆಸರಿನ ಅರ್ಥ ತಮಿಳುನಾಡು ವಿಜಯ ಸಂಘಟನೆ. ವಿಜಯ್ ಎಂದರೆ ಗೆಲುವು, ವೆಟ್ರಿ ಎಂದೇ ಅರ್ಥ. ನಟಿಸುತ್ತಿರುವ ಎರಡು ಸಿನಿಮಾ ಮುಗಿಸಿ ಚಿತ್ರ ರಂಗಕ್ಕೆ ವಿದಾಯ ಹೇಳುವುದಾಗಿ ಸಹ ವಿಜಯ್ ಹೇಳಿದ್ದಾರೆ. ಕ್ರಿಶ್ಚಿಯನ್ ತಂದೆ ಎಸ್. ಎ. ಚಂದ್ರಶೇಖರ್, ಹಿಂದೂ ತಾಯಿ ಶೋಭಾ ಪುತ್ರ ವಿಜಯ್‍ರ ಮಡದಿ ಶ್ರೀಲಂಕಾ ತಮಿಳದಿ. ಹುಟ್ಟು ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ವಿಜಯ್ ರಾಜಕೀಯ ಪಕ್ಷ
ಚುನಾವಣಾ ಪೂರ್ವ ಮಧ್ಯಾವಧಿ ಆಯವ್ಯಯ ಮಂಡನೆ ಆಗಿದೆ. ಸಂಸದ ಶಶಿ ತರೂರ್ ಪ್ರಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅಂಕಿ ಅಂಶಗಳಿಗಿಂತ ಹೆಚ್ಚಾಗಿ ಗಿಲೀಟಿನ ಮಾಮೂಲಿ ಶಬ್ದಗಳದ್ದಾಗಿದೆ. ಈ ಮಾತನ್ನು ನಿರ್ಮಲಾರ ಗಂಡ ಪರಕಾಲ ಪ್ರಭಾಕರ್ ಅವರು ಬಿಜೆಪಿ ಸರಕಾರದ ಒಟ್ಟಾರೆ ಶಬ್ದಗಳ ಕಸರತ್ತು ಗಮನಿಸಿ ಹಿಂದೆಯೇ ಟೀಕಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಸಂಸದರ ಹಾಜರಾತಿ ಕಡಿಮೆ ಇತ್ತು. ಗ್ಯಾಲರಿಯಲ್ಲಿ ನಿರ್ಮಲಾರ ಮಗಳು ವಂಗಮಯಿ ಪರಕಾಲ ಕುಳಿತಿದ್ದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಮೂಲಕ ಬಿಜೆಪಿ ಒಕ್ಕೂಟ ಸರಕಾರದ ಜನಪರ ಯೋಜನೆಗಳು ದೇಶದ ಮೂಲೆ ಮೂಲೆಗೆ ತಲುಪಿದೆ ಎಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳುವುದರ ಮೂಲಕ ಚುನಾವಣಾ ಪೂರ್ವ ತಾತ್ಕಾಲಿಕ ಬಜೆಟ್ ಮಂಡಿಸಿದರು. 2047ಕ್ಕೆ ವಿಕಸಿತ ಭಾರತ್ ಅರಳಲು ತಮ್ಮ ಬಜೆಟ್ ಸಹಾಯಕ ಎಂದು ಅವರು ಹೇಳಿದರು.ತಾತ್ಕಾಲಿಕ ಬಜೆಟ್ಟಿನ ಕೆಲವು ಮುಖ್ಯಾಂಶಗಳು ಮುಂದಿನಂತಿವೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕಳೆದ ಹತ್ತು ವರುಷಗಳಿಂದ ಭಾರತದ