Home Archive by category Lifestyle (Page 3)

ಭಾರತದಲ್ಲಿ ಆನ್‍ಲೈನ್ ಗೇಮಿಂಗ್,ಪ್ರತಿ ವರುಷ 20,000 ಕೋಟಿ ನಷ್ಟ

ಭಾರತದಲ್ಲಿ ಪ್ರತಿ ವರುಷ ಆನ್‍ಲೈನ್ ಗೇಮ್ ಆಡಿ 45 ಕೋಟಿ ಭಾರತೀಯರು 20,000 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕಳೆದೊಂದು ದಶಕದಿಂದ ಭಾರತದಲ್ಲಿ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈಗ ಕಾನೂನು ಮೂಲಕ ಆನ್‍ಲೈನ್ ಗೇಮಿಂಗ್ ತಡೆಯಲು ನಿಯಮಾವಳಿ ತರಲಾಗುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿ

ಸ್ವೀಟ್ ಕಾರ್ನ್ ರಫ್ತುಮಾಡುವ ಪ್ರಮುಖ ದೇಶ ?

ಜಾಗತಿಕವಾಗಿ ಯುಎಸ್‌ಎ, ಯೂರೋಪಿನಲ್ಲಿ ಹಂಗೆರಿ, ಏಶಿಯಾದಲ್ಲಿ ತಾಯ್‌ಲ್ಯಾಂಡ್ ಪ್ರಮುಖ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತಿ ಹೆಚ್ಚು ಸಿಹಿ ಮೆಕ್ಕೆಜೋಳ ಬೆಳೆಯುವ ದೇಶವಾಗಿದೆ. ಮೆಕ್ಕೆಜೋಳವನ್ನು ಶೀತಲವಾಗಿಸಿ ಯುಎಸ್‌ಎ ಬಹಳಷ್ಟು ದೇಶಗಳಿಗೆ ರಫ್ತು ಮಾಡುತ್ತದೆ. ಪ್ರತಿ ವರುಷ ಈ ದೇಶದ ಸ್ವೀಟ್ ಕಾರ್ನ್ ರಫ್ತುವ್ಯವಹಾರ 10 ಕೋಟಿ ಡಾಲರ್‌ನಷ್ಟು ಇರುತ್ತದೆ. ಹಂಗೆರಿ ದೇಶವು ಎರಡನೆಯ ಸ್ಥಾನದಲ್ಲಿದೆ. ಇದು

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ;

ಹೆಮ್ಮಾರಿ ಹೆಪಟೈಟಿಸ್:ಜುಲೈ 28 ವಿಶ್ವ ಹೆಪಟೈಟಿಸ್ ದಿನ

ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್ ರೋಗದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ಬಹಳ

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಮೂಡುಬಿದಿರೆ:ಪವರ್ ಫ್ರೆಂಡ್ಸ್, ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪವರ್ ಫ್ರೆಂಡ್ಸ್ ಬೆದ್ರ ಮಹಿಳಾ ಘಟಕ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಕನ್ನಡ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಇನ್ನರ್ ವ್ಹೀಲ್ ಕ್ಲಬ್ ಅದ್ಯಕ್ಷ ಬಿಂದಿಯಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನಮಗೆ ಆರೋಗ್ಯ ಮುಖ್ಯವಾಗಿ ಬೇಕು. ಒಂದೊಂದು ಅಂಗವೂ

ಜನಸಂಖ್ಯೆ ತೀವ್ರ ಇಳಿಕೆಯ ಆತಂಕದಲ್ಲಿ ಜಪಾನ್

ನೀವು ಏಕೆ ಮದುವೆ ಆಗುವುದಿಲ್ಲ ಎಂದು ಪ್ರಶ್ನಿಸುತ್ತಿದೆ ಜಪಾನ್ ಸರಕಾರ.ನಿಮ್ಮ ತುಮುಲ ತಿಳಿದರೆ ನಾವು ಕೃತಜ್ಞರು ಎನ್ನುತ್ತ ಜಪಾನ್ ಮಕ್ಕಳು ಮತ್ತು ಕಲ್ಯಾಣ ಸಚಿವೆ ಆಯುಕೋ ಕತೋ ಅವರು ಯುವ ಜನಾಂಗವನ್ನು ಕೇಳುತ್ತ ದೇಶದ ಜನಸಂಖ್ಯೆ ಇಳಿಮುಖವಾಗಿರುವುದಕ್ಕೆ ಪರಿಹಾರ ಹುಡುಕುತ್ತಿದ್ದಾರೆ. ಚಿಲ್ಡ್ರನ್ ಆಂಡ್ ಫ್ಯಾಮಿಲೀಸ್ ಏಜೆನ್ಸಿ ಮೂಲಕ ಜಪಾನ್ ಸರಕಾರವು ಅಲ್ಲಿನ ಯುವ ಜನಾಂಗವು ನಿಮಗೆ ಮದುವೆ ಆಗಲು ಇರುವ ಸಮಸ್ಯೆ ಏನು ಎಂದು ಪ್ರಶ್ನಿಸುತ್ತಿದೆ. ಡೇಟಿಂಗ್, ಮ್ಯಾಚ್

ಮಡಿಕೇರಿ-ಸಂಪಾಜೆ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಭಾಗದಲ್ಲಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ, ಸಾರ್ವಜನಿಕರ ಹಿತಾಸಕ್ತಿಯಿಂದ ಜು.18 ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275 ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕಿ.ಮೀ. 90.05 ರಿಂದ 90.10ರ

ಕಾರ್ಕಳದ ಕ್ರೈಸ್ಟ್‌ಕಿಂಗ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ-v4 ನ್ಯೂಸ್ ವಾಹಿನಿಯ ಪತ್ರಕರ್ತ ಖಲೀಲ್ ಅವರಿಗೆ ಸನ್ಮಾನ

ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಹಾಗೂ ಕೃಷಿಬಿಂಬ ಪತ್ರಿಕೆಯ ಸಂಪಾದಕರಾದ ರಾಧಾಕೃಷ್ಣ ತೋಡಿಕಾನ ಅವರು ಆಗಮಿಸಿದ್ದು, ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದಾಗಿ ಇಂದು ಸಮಾಜದಲ್ಲಿ ಜಾಗೃತಿ ಮೂಡಲು ಸಾಧ್ಯವಾಗಿದೆ. ಪತ್ರಿಕೆಗಳು ಸಮಾಜ, ಆಡಳಿತ ವ್ಯವಸ್ಥೆ