ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಪಕ್ಷಿಕೆರೆಯಿಂದ ಪಂಜ ಮೂಲಕ ಸುರತ್ಕಲ್ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆ ತೀವ್ರ ಕೆಟ್ಟು ಹೋಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯ ಕೆಮ್ರಾಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ದಿ.ಶಾಂತರಾಮ ಶೆಟ್ಟಿ ಶಾಲೆಯ ಬಳಿ ತೀವ್ರ ಹದಗೆಟ್ಟಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ
ಭಾನುವಾರ 954 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 159 ಮಂದಿ ಡೆಂಗಿ ಹೊಂದಿರುವುದು ದೃಢ ಪಟ್ಟಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ. ಡೆಂಗಿ ಬಾಧಿತರಲ್ಲಿ ಎಲ್ಲ ಪ್ರಾಯದವರೂ ಇದ್ದು ಭಾನುವಾರದ 159 ಪ್ರಕರಣದಲ್ಲಿ 80 ಬೆಂಗಳೂರು ನಗರ ವ್ಯಾಪ್ತಿಯದಾಗಿದೆ. ಸದ್ಯ 301 ಜನರು ಡೆಂಗಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರುಷದ ಒಟ್ಟು ಡೆಂಗಿ ಪ್ರಕರಣ 7,165 ಎಂದು ಆರೋಗ್ಯ ಇಲಾಖೆ ಹೇಳಿದೆ. ಡೆಂಗಿ ಜ್ವರಕ್ಕೆ
ಪುರಿ ಜಗನ್ನಾಥ ದೇವಾಲಯದ ರಥೋತ್ಸವದಲ್ಲಿ ನೂಕು ನುಗ್ಗಲಿನಲ್ಲಿ ಒಬ್ಬ ಸತ್ತುದರಿಂದ ತೇರು ಎಳೆಯುವುದನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ತೇರು ಎಳೆಯುವ ಸಮಯದಲ್ಲಿ ಹೆಚ್ಚು ಭಕ್ತರು ಸೇರಿದ್ದರು. ರಥ ಎಳೆಯಲು ಮುನ್ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಒಬ್ಬ ಉಸಿರು ಕಟ್ಟಿ ಸತ್ತರೆ ಹಲವರು ಕೆಳಕ್ಕೆ ಬಿದ್ದು ಗಾಯಗೊಂಡರು. ಒಬ್ಬಿಬ್ಬರು ಗಂಭೀರ ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್
ಜಗತ್ತಿನ ಜನರು ಪ್ರೀತಿಸುವ ಹಣ್ಣುಗಳಲ್ಲಿ ಒಂದಾದ ಪಪ್ಪಾಯಿ ಪ್ರತಿ ವರುಷ ಆರು ಕೋಟಿ ಟನ್ ಉತ್ಪಾದನೆ ಆಗುತ್ತದೆ. ಪಪ್ಪಾಯಿಯ ಬೇಸಾಯ ಮತ್ತು ಮೂಲ ತೆಂಕಣ ಮೆಕ್ಸಿಕೋ ಮತ್ತು ಕೋಸ್ಟಾರಿಕಾ ಆಗಿದೆ. ಪಪ್ಪಾಯಿ ಹೆಸರು ಕೂಡ ಅಲ್ಲಿಯದೇ ಆಗಿದೆ. ಇದು ತನ್ನ ಮದ್ಗುಣ ಮತ್ತು ಉತ್ತಮ ಪೋಷಕಾಂಶಗಳಿಂದ ವಾಣಿಜ್ಯ ಮಹತ್ವದ ಹಣ್ಣು ಎನಿಸಿದೆ.ಪಪ್ಪಾಯಿ ಕಾರಿಕಾ ಉಷ್ಣ ವಲಯದ ಹಣ್ಣಾಗಿದೆ. ಇಂಡೋನೇಶಿಯಾದಲ್ಲಿ ಇದರ ಎಲೆಯನ್ನು ಔಷಧಿಯಾಗಿ ಬಳಸುತ್ತಾರೆ. ಪಪ್ಪಾಯಿಯ ಸೊನೆ ಮತ್ತು ಕೆಲವು
ಬ್ರಹ್ಮಾವರ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 96.5 ಅಂಕ ಪಡೆದು ಶಿಕ್ಷಣದಲ್ಲಿ ಟೋಪರ್ ಆಗಿ ಚಿತ್ರ ರಚನೆ ಕಲೆಯಲ್ಲಿ ಸೂಪರ್ ಎನಿಸಿಕೊಂಡ ಬಜ್ಪೆಯ ಸಮ್ಯತ ಆಚಾರ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಚಿತ್ರವನ್ನು ರಚಿಸಿ ಕಾರ್ಯಕ್ರಮವೊಂದರಲ್ಲಿ ನೀಡಿ ಬೇಷ್ ಎನಿಸಿಕೊಂಡಿದ್ದಾಳೆ. ಕೋಟೇಶ್ವರದ ಕಾರ್ಯಕ್ರಮವೊಂದರಲ್ಲಿ ಪ್ರತಿಭಾಪುರಸ್ಕಾರಕ್ಕೆ ಬಂದ ಸಮ್ಯತ ಆಚಾರ್ಯ ಉದ್ಘಾಟಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ
ಮೂಡುಬಿದಿರೆ: ವಿಧಾನಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದ ಐವನ್ ಡಿಸೋಜ ಅವರಿಗೆ ಕೆಥೋಲಿಕ್ ಸಭಾ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷನಿಷ್ಠೆ ಯ ಬದ್ಧತೆಯಿಂದ ಕೆಲಸ ಮಾಡಿದ್ದು ತನ್ನ ಸೇವೆಯನ್ನು ಪರಿಗಣಿಸಿ ಎರಡನೇ ಅವಧಿಗೆ ಈ ಸನ್ಮಾನ ಲಭಿಸಿದೆ. ಸಿಕ್ಕಿದ ಅವಕಾಶವನ್ನು ಬಳಸಿ ನೋಂದವರ ಸಹಾಯ ಹಸ್ತ ಒದಗಿಸುವ ಆದ್ಯತೆ
2011ನೇ ಇಸವಿಯಲ್ಲಿ ಇಡೀ ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಸುಮಾರು ಮೂರು ಲಕ್ಷ ಮನೆಗಳಿಗೆ ಸೋಲಾರ್ ದೀಪಗಳ ವ್ಯವಸ್ಥೆ ಮಾಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಧರ್ಮಸ್ಥಳದ ಅನ್ನಪೂರ್ಣ ಚಿತ್ರದಲ್ಲಿ ಸುಮಾರು ೫೦ ಲಕ್ಷ ವ್ಯತ್ಯಾಸದ ಸೆಲ್ಕ್ಕೋ ಫೌಂಡೇಶನ್ ಪ್ರಾಯೋಜತ್ವದಲ್ಲಿ ಅಳವಡಿಸಲಾದ ಉಚಿತ ಸೌರ ವಿದ್ಯುತ್ ಘಟಕದ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಲಾರ್ ಆಳವಡಿಕೆಯಲ್ಲಿ ಶ್ರೀ ಕ್ಷೇತ್ರಕ್ಕೆ
ಮಂಗಳೂರು: “ಜುಲೈ ೯ರಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುಎಸ್‌ಎ ಆಯೋಜನೆಯನ್ನು ಮಾಡುತ್ತಿದೆ. ಅಮೇರಿಕಾದ ೨೦ ರಾಜ್ಯಗಳ ಮುಖ್ಯ ನಗರಗಳಲ್ಲಿ ನಿಶ್ಚಯಿಸಿರುತ್ತಾರೆ” ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಕರಂಡೆಯು ಹುಳಿ ಕಾಡು ಕಾಯಿಯಾಗಿದ್ದು, ಹಣ್ಣಾದಾಗ ನೀಲಿ ದ್ರಾಕ್ಷಿಯ ರುಚಿ ಹೊಂದಿದೆ. ಬ್ರಿಟನ್, ಅಮೆರಿಕದ ಕ್ರಾನ್‌ಬೆರಿ ಇದೇ ರುಚಿಯದು, ತುಸು ದೊಡ್ಡದು.ವ್ಯಾಪಕವಾಗಿ ಬೆಳೆಸಿ ನಾವು ಬಳಸುವಂತೆಯೇ ಬಳಸುತ್ತಾರೆ. ಕರಂಡೆಯನ್ನು ಉಪ್ಪಿನಕಾಯಿ ಹಾಕುತ್ತಾರೆ, ಉಪ್ಪಿನಲ್ಲಿ ಹಾಕಿ ಇಡುತ್ತಾರೆ. ಬೇಯಿಸಿ ಒಣಗಿಸಿಟ್ಟು ಹುಣಸೆ ಹುಳಿಯ ಬದಲು ಬಳಸುತ್ತಾರೆ. ರೈಲಿನಲ್ಲಿ ಪೂನಾ ಮುಂಬಯಿ ನಡುವೆ ಲೋನಾವಳ ಬಳಿ ಇದರ ಹಣ್ಣನ್ನು ಎಲೆಯಲ್ಲಿ ಕಟ್ಟಿ ಮಾರುವ ಬುಡಕಟ್ಟು ಮಹಿಳೆಯರು
ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.ಅವರು ಗುರುವಾರ ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ

























