Home Lifestyle Archive by category Health (Page 2)

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ

ಹೆಮ್ಮಾರಿ ಹೆಪಟೈಟಿಸ್:ಜುಲೈ 28 ವಿಶ್ವ ಹೆಪಟೈಟಿಸ್ ದಿನ

ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್ ರೋಗದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ಬಹಳ

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಮೂಡುಬಿದಿರೆ:ಪವರ್ ಫ್ರೆಂಡ್ಸ್, ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪವರ್ ಫ್ರೆಂಡ್ಸ್ ಬೆದ್ರ ಮಹಿಳಾ ಘಟಕ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಕನ್ನಡ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಇನ್ನರ್ ವ್ಹೀಲ್ ಕ್ಲಬ್ ಅದ್ಯಕ್ಷ ಬಿಂದಿಯಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನಮಗೆ ಆರೋಗ್ಯ ಮುಖ್ಯವಾಗಿ ಬೇಕು. ಒಂದೊಂದು ಅಂಗವೂ

ಬೆಂಗಳೂರು ಸಹಿತ ರಾಜ್ಯದಲ್ಲಿ ಹೆಚ್ಚಿದ ಡೆಂಗಿ

ಭಾನುವಾರ 954 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 159 ಮಂದಿ ಡೆಂಗಿ ಹೊಂದಿರುವುದು ದೃಢ ಪಟ್ಟಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ. ಡೆಂಗಿ ಬಾಧಿತರಲ್ಲಿ ಎಲ್ಲ ಪ್ರಾಯದವರೂ ಇದ್ದು ಭಾನುವಾರದ 159 ಪ್ರಕರಣದಲ್ಲಿ 80 ಬೆಂಗಳೂರು ನಗರ ವ್ಯಾಪ್ತಿಯದಾಗಿದೆ. ಸದ್ಯ 301 ಜನರು ಡೆಂಗಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರುಷದ ಒಟ್ಟು ಡೆಂಗಿ ಪ್ರಕರಣ 7,165 ಎಂದು ಆರೋಗ್ಯ ಇಲಾಖೆ ಹೇಳಿದೆ. ಡೆಂಗಿ ಜ್ವರಕ್ಕೆ

ಜಗತ್ತಿನ ಬಹು ಜನರು ಪ್ರೀತಿಸುವ ಹಣ್ಣು ಪಪ್ಪಾಯಿ

ಜಗತ್ತಿನ ಜನರು ಪ್ರೀತಿಸುವ ಹಣ್ಣುಗಳಲ್ಲಿ ಒಂದಾದ ಪಪ್ಪಾಯಿ ಪ್ರತಿ ವರುಷ ಆರು ಕೋಟಿ ಟನ್ ಉತ್ಪಾದನೆ ಆಗುತ್ತದೆ. ಪಪ್ಪಾಯಿಯ ಬೇಸಾಯ ಮತ್ತು ಮೂಲ ತೆಂಕಣ ಮೆಕ್ಸಿಕೋ ಮತ್ತು ಕೋಸ್ಟಾರಿಕಾ ಆಗಿದೆ. ಪಪ್ಪಾಯಿ ಹೆಸರು ಕೂಡ ಅಲ್ಲಿಯದೇ ಆಗಿದೆ. ಇದು ತನ್ನ ಮದ್ಗುಣ ಮತ್ತು ಉತ್ತಮ ಪೋಷಕಾಂಶಗಳಿಂದ ವಾಣಿಜ್ಯ ಮಹತ್ವದ ಹಣ್ಣು ಎನಿಸಿದೆ.ಪಪ್ಪಾಯಿ ಕಾರಿಕಾ ಉಷ್ಣ ವಲಯದ ಹಣ್ಣಾಗಿದೆ. ಇಂಡೋನೇಶಿಯಾದಲ್ಲಿ ಇದರ ಎಲೆಯನ್ನು ಔಷಧಿಯಾಗಿ ಬಳಸುತ್ತಾರೆ. ಪಪ್ಪಾಯಿಯ ಸೊನೆ ಮತ್ತು ಕೆಲವು

ಮಂಗಳೂರು : ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಉದ್ಘಾಟನೆ

ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸವಲತ್ತುಗಳಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಕೇರ್ ಸೆಂಟರ್ ಮತ್ತು ಬ್ಲೋಸಮ್ ಡಿಲಕ್ಸ್ ಕೊಠಡಿಗಳನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಸಚಿವರು ಮತ್ತು ಅತಿಥಿಗಳು ನೂತನ, ಸರ್ವಸಜ್ಜಿತ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಕೇರ್ ಸೆಂಟರ್ ಮತ್ತು ಬ್ಲೋಸಮ್ ಡಿಲಕ್ಸ್ ಕೊಠಡಿಗಳನ್ನು

ಹೆಬ್ಬೆರಳು ಚೀಪುವುದು ಯಾಕೆ?

ಸಣ್ಣ ಮಕ್ಕಳು ಬಾಯಲ್ಲಿ ಕೈಬೆರಳು ಹಾಕಿ ಚೀಪುವುದು ಸಾಮಾನ್ಯ ಲಕ್ಷಣ. ಇದೇನೂ ಬಹಳ ದೊಡ್ಡ ಸಮಸ್ಯೆ ಏನಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಸ್ತಾದಾಗ, ಬೇಸರವಾದಾಗ, ನಿದ್ದೆ ಬರುವ ಹೊತ್ತಲ್ಲಿ, ಸಾಂತ್ವನದ ಅವಶ್ಯಕತೆ ಇದ್ದಾಗ ಹೆಬ್ಬೆರಳನ್ನು ಚೀಪುವುದು ಕಂಡು ಬರುತ್ತದೆ. ಈ ಬೆರಳು ಚೀಪುವ ಅಭ್ಯಾಸ ಗರ್ಭಾವಸ್ಥೆಯ (15ನೇ ವಾರದಲ್ಲಿ) ಆರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಗರ್ಭಾಶಯದ ಒಳಗೆ ಮಗು ದಿನಕ್ಕೆ ನೂರಾರು ಬಾರಿ ಆಕಳಿಸುತ್ತದೆ ಎಂದೂ

ಫೋರ್ಡೇಸ್ ಸ್ಪಾಟ್ಸ್

ಫೋರ್ಡೇಸ್ ಸ್ಪಾಟ್ಸ್ ಎನ್ನುವುದು ಬಾಯಿಯ ಒಳಗೆ ಕೆನ್ನೆಯ ಒಳಭಾಗದಲ್ಲಿ, ತುಟಿಗಳ ಒಳಭಾಗದಲ್ಲಿ ಕಂಡು ಬರುವ ಬಿಳಿ ಮತ್ತು ಹಳದಿ ಮಿಶ್ರಿತ ಚಿಕ್ಕದಾದ ಉಬ್ಬುಗಳಾಗಿರುತ್ತದೆ. ನೋಡಲು ಒಂದು ರೀತಿಯಲ್ಲಿ ಅಸಹ್ಯವಾಗಿ ಕಾಣುವ ಈ ಸ್ಪಾಟ್‍ಗಳು, ರೋಗಿಗಳನ್ನು ಕೆಲವೊಮ್ಮೆ ದಿಗಿಲುಗೊಳಿಸಿ ಕ್ಯಾನ್ಸರ್ ಎಂದು ತಲೆÀಕೆಡಿಸಿಕೊಂಡು ದಂತ ವೈದ್ಯರನ್ನು ಸತಾಯಿಸುವುದು ಕಂಡುಬಂದಿದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳ ಬಾಯಿಯೊಳಗಿನ ಕೆನ್ನೆಯ ಒಳಭಾಗ, ತುಟಿಗಳ ಒ¼ಭಾಗ