Home Posts tagged #bantwala (Page 30)

ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನ: ಆಟಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ತೀರ್ಥ ಸ್ನಾನ

ಪುರಾಣ ಪ್ರಸಿದ್ದ ಪರ್ವತ ಕ್ಷೇತ್ರ ಬಂಟ್ವಾಳ ತಾಲೂಕಿನ ನರಹರಿ ಪರ್ವತದ ಮೇಲಿರುವ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಯ ಪ್ರಯುಕ್ತ ವಿಶೇಷ ತೀರ್ಥ ಸ್ನಾನ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ದೇವಸ್ಥಾನದ ತೀರ್ಥ ಬಾವಿಗಳಾದ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಿಗೆ ವೀಳ್ಯ ಅಡಿಕೆಯ ಭಾಗಿನ ಬಿಟ್ಟು ತೀರ್ಥ ನೀರು ಮಿಂದು ಪುನೀತರಾದರು.

ವಿಟ್ಲಕಾರಿನಲ್ಲಿಅಕ್ರಮ ಗೋ ಸಾಗಾಟ ಪತ್ತೆ

ವಿಟ್ಲ: ಕೇಪು ಕಲ್ಲಂಗಳದಿಂದ ತೋರಣಕಟ್ಟೆ ಸಂಪರ್ಕ ರಸ್ತೆಯ ಒಳ ರಸ್ತೆಯೊಂದರಲ್ಲಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿದ್ದು ಪತ್ತೆಯಾಗಿದೆ.ಕಾರಿನ ಹಿಂಭಾಗದಲ್ಲಿ ಎರಡು ಗೋವಿದ್ದು, ಕಾರಿದ ಹಿಂಭಾಗ ಹಾಗೂ ಮುಂಭಾಗದ ಗಾಜು ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೋಲೀಸರು ತೆರಳಿದ್ದು, ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಈ ರಸ್ತೆ ಸಾರಡ್ಕ ಚೆಕ್ ಪೋಸ್ಟ್ ಸಂಪರ್ಕಹೊಂದಿದ್ದು, ಚೆಕ್ ಪೋಸ್ಟ್ ಮೂಲಕವೇ ಗೋವು ಸಾಗಾಟ ಮಾಡಲಾಗುತ್ತಿತ್ತಾ ಎಂಬ ಅನುಮಾನ ಮೂಡುತ್ತಿದೆ.

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ರಮಾನಾಥ ರೈ ಭೇಟಿ

ಬಂಟ್ವಾಳ: ಬಾರಿ ಮಳೆಯಿಂದ ತಾಲೂಕಿನ ಅರಳ, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಕಾವಳಮೂಡೂರು, ಪಂಜಿಕಲ್ಲು, ಗೂಡಿನ ಬಳಿಯಲ್ಲಿ ಭೂ ಕುಸಿತ ಉಂಟಾಗಿ ಮನೆ, ರಸ್ತೆಗಳಿಗೆ ವ್ಯಾಪಕ ಹಾನಿ ಉಂಟಾಗಿರುವ ಹಿನ್ನಲೆಯಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವ ನೀಡಿದರು. ಈ ಸಂದರ್ಭ ಹಾನೀಗೀಡಾದ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮನವಿ ಮಾಡಿಕೊಂಡರು. ಈ ಸಂದರ್ಭ

ಮಳೆಗೆ ಬಂಟ್ವಾಳದ ಗೂಡಿನ ಬಳಿ ಗುಡ್ಡ ಕುಸಿತ : ಅಪಾಯ ಎದುರಿಸುತ್ತಿರುವ ಮನೆ ಮಂದಿ

ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ವ್ಯಾಪಕ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯ ಟಿಪ್ಪು ರಸ್ತೆ ಎಂಬಲ್ಲಿ ಗುಡ್ಡ ಕುಸಿದು ಇಲ್ಲಿನ ಮನೆಗಳ ಜನರು ತೀವ್ರ ಅಪಾಯವನ್ನು ಎದುರಿಸುತ್ತಿದ್ದಾರೆ. ವರ್ಷದ ಹಿಂದೆಯೇ ಗುಡ್ಡ ಸ್ವಲ್ಪ ಮಟ್ಟಿಗೆ ಕುಸಿದಿತ್ತು. ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಮತ್ತಷ್ಟು ಕುಸಿದಿದೆ. ಇದರಿಂದ ಟಿಪ್ಪು ರಸ್ತೆ ಸಂಪೂರ್ಣ ಹಾನಿಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ.ಗುಡ್ಡ ಕುಸಿದ ಭಾಗ ಮಳೆಯಿಂದ

ಬಂಟ್ವಾಳದ ಮುಕ್ಕುಡದಲ್ಲಿ ಮತ್ತೆ ಭೂಕುಸಿತ

ಬಂಟ್ವಾಳ: ಇತ್ತಿಚೆಗೆ ಭೂ ಕುಸಿತ ಉಂಟಾಗಿ 3 ಮಂದಿ ಕೇರಳ ಮೂಲದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮೃತಪಟ್ಟ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಹೆನ್ರಿ ಕಾರ್ಲೋ ಅವರ ಮನೆಗೆ ಇದ್ದ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಇತ್ತೀಚೆಗೆ ಭೂ ಕುಸಿತ ಆದ ಸಂದರ್ಭ ಗುಡ್ಡ ಬಿರುಕು ಬಿಟ್ಟಿತ್ತು. ಭಾರಿ ಮಳೆಗೆ ಮಣ್ಣು ಮೆದುಗೊಂಡು ಬಿರಿಕು ಬಿದ್ದ ಜಾಗದಿಂದಲೇ ಗುಡ್ಡ ಕುಸಿದಿದೆ

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. : ನೂತನ ಕೊಡಾಜೆ ಶಾಖೆ ಉದ್ಘಾಟನೆ

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ 10 ನೇ ಕೊಡಾಜೆ ಶಾಖೆಯು ನೇರಳಕಟ್ಟೆ ಬಳಿಯ ಕೊಡಾಜೆಯ ನಿಧಾ ಆರ್ಕೆಡ್ ನಲ್ಲಿ ಶುಭಾರಂಭಗೊಂಡಿತು. ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಶಾಖೆಯನ್ನು ಉದ್ಘಾಟಿಸಿ ದೀಪ ಪ್ರಜ್ವಲಿಸಿದರು.ಪುತ್ತೂರು ನಗರ ಸಭೆ ಅಧ್ಯಕ್ಷ ಜೀವಂದರ್ ಜೈನ್ ಭದ್ರತಾ ಕೊಠಡಿ ಉದ್ಘಾಟಿಸಿದರು. ನೆಟ್ಲಮುಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ ಕಂಪ್ಯೂಟರ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ

ಬಂಟ್ವಾಳದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಅವಲೋಕನ ಸಮಸ್ಯೆಗಳ ಪರಿಹಾರಕ್ಕೆ ಸೂಚನೆ ನೀಡಿದ ಶಾಸಕರು

ಬಂಟ್ವಾಳ : ಕ್ಷೇತ್ರದ 39 ಗ್ರಾ.ಪಂ.ನ ಪಿಡಿಒ, ಗ್ರಾಮಕರಣಿಕರು, ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ತಮ್ಮ ಬಿ.ಸಿ.ರೋಡಿನ ಕಚೇರಿಯಿಂದ ತಹಶೀಲ್ದಾರ್, ತಾ.ಪಂ.ಇಒ ಹಾಗು ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೂಗೂಲ್ ಮೀಟ್ ಮೂಲಕ ಸಂವಾದ ನಡೆಸಿದರು. ಗ್ರಾ.ಪಂ.ವ್ಯಾಪ್ತಿಯಲ್ಲಿರುವ ವಿವಿಧ ಸಮಸ್ಯೆಯನ್ನು ಆಲಿಸಿದ ಶಾಸಕರು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಇಒ ರಾಜಣ್ಣ ಅವರು ಪರಿಹಾರದ ನಿಟ್ಟಿನಲ್ಲಿ ಸೂಕ್ತ ಸಲಹೆ,

ಬಂಟ್ವಾಳ: ಕಾರ್ಮಿಕರು ಉಳಿದುಕೊಂಡಿದ್ದ ಶೆಡ್ ಮೇಲೆ ಗುಡ್ಡ ಕುಸಿತ: ಮೃತಪಟ್ಟವರ ಸಂಖ್ಯೆ 3ಕ್ಕೇರಿಕೆ

ಪಂಜಿಕಲ್ಲು ಗ್ರಾಮದಲ್ಲಿ ಕಾರ್ಮಿಕರು ಉಳಿದುಕೊಂಡಿದ್ದ ಶೆಡ್ ಮೇಲೆ ಬುಧವಾರ ಗುಡ್ಡ ಕುಸಿತದಿಂದ ಮಣ್ಣಿನಡಿಗೆ ಸಿಲುಕಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಓರ್ವ ರಾತ್ರಿ ಮೃತಪಟ್ಟಿದ್ದರೆ, ಇನ್ನೋರ್ವ ಮುಂಜಾವ ಕೊನೆಯುಸಿರೆಳೆದಿದ್ದಾನೆ. ಓರ್ವ ಬಂಟ್ವಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಣ್ಣಿನಡಿಯಿಂದ ರಕ್ಷಿಸಲ್ಪಟ್ಟು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ

ನೇತ್ರಾವತಿ ನದಿಯಲ್ಲಿ ನೀರುಪಾಲಾದ ಯುವಕನ ಶವ ಕೋಟೆಪುರದಲ್ಲಿ ಪತ್ತೆ

ಉಳ್ಳಾಲ: ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಅಶ್ವಿತ್(೧೯) ನೀರುಪಾಲಾಗಿದ್ದು, ಆತನ ಮೃತದೇಹ ಬುಧವಾರ ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಪೊಲೀಸ್, ಅಗ್ನಿಶಾಮಕ ದಳ ಸ್ಥಳೀಯರ ಸಹಾಯದಿಂದ ಹುಡುಕಾಟವನ್ನು ಸತತ ಮೂರು ದಿನಗಳಿಂದ ನಡೆಸಲಾಗುತ್ತಿತ್ತು. ಸಜಿಪಪಡುವಿನ ತಲೆಮೊಗರು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ

ದಟ್ಟ ಕಾನನದ ನಡುವೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಜಲಪಾತ

ಬಂಟ್ವಾಳ: ಮಳೆಗಾಲ ಆರಂಭವಾದಾಗ ಅನೇಕ ಜಲಪಾತಗಳು ಮೈದುಂಬಿಕೊಂಡು ಹರಿಯಲಾಂಭಿಸುತ್ತವೆ. ದಟ್ಟ ಅರಣ್ಯಗಳ ಮಧ್ಯೆ ಅದೆಷ್ಟೋ ಸುಂದರವಾದ ಜಲಪಾತಗಳು ಇದ್ದರೂ ಹೊರ ಜಗತ್ತಿಗೆ ತಿಳಿಯದೇ ಅಜ್ಞಾತವಾಗಿಯೇ ಉಳಿಯುತ್ತವೆ. ಈ ಪೈಕಿ ತಾಲೂಕಿನ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ದಟ್ಟ ಅರಣ್ಯದ ಮಧ್ಯೆ, ಪ್ರಕೃತಿ ರಮಣೀಯ ಸ್ಥಳದಲ್ಲಿ ಇರುವ ಜಲಪಾತವೊಂದು ಬಂಡೆಕಲ್ಲುಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.