Home Posts tagged #death news (Page 6)

ಉಡುಪಿ: ಕಾಣೆಯಾಗಿದ್ದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ಶವವಾಗಿ ಪತ್ತೆ

ಶಿರೂರು : ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ಯೋಜನಾನಗರದ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿ ವಾಸಿಸುವ ಶಾನ್ ಮುಹಮ್ಮದ್ ಶಫಾನ್ (13) ‌ ಮೃತ ವಿದ್ಯಾರ್ಥಿಗಳು. ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿ ಇಬ್ಬರು ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು

ಮೂಡುಬಿದಿರೆ: ಮಾಜಿ ಸೈನಿಕ ನಿಧನ

ಮೂಡುಬಿದಿರೆ: ಮಾಜಿ ಸೈನಿಕ ಹೆನ್ರಿ ಲೋಬೋ (80) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಮಾಸ್ತಿಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.15 ವರ್ಷಗಳ ಸೈನಿಕನಾಗಿ ಸೇವೆ ಸಲ್ಲಿಸಿದ ಅವರು ನಂತರ 23 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಅವರು ಪತ್ನಿ ಅಲಿಸಾ ಲೋಬೋ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ಮೂಡುಬಿದಿರೆ : ಉದ್ಯಮಿ ಸುರೇಶ್ ಶೆಟ್ಟಿ ನಿಧನ

ಮೂಡುಬಿದಿರೆ : ಹೊಟೇಲ್ ಉದ್ಯಮಿ, ಕಡಲಕೆರೆ ಸೃಷ್ಟಿ ಮಲ್ಟಿ ಪರ್ಪಸ್ ಹಾಲ್ ನ ಮಾಲಕ ಸುರೇಶ್ ಶೆಟ್ಟಿ ಅವರು ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅಲಂಗಾರು ಬಂಗೇರಬೆಟ್ಟು ನಿವಾಸಿಯಾಗಿರುವ ಸುರೇಶ್ ಶೆಟ್ಟಿ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕೆಲವು ದಿನಗಳ ಹಿಂದೆ ಅಸೌಖ್ಯಕ್ಕೊಳಗಾದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ

ಉಡುಪಿ: ಪಿಎಸ್ಐ ಹೃದಯಾಘಾತದಿಂದ ಸಾವು

ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ಉಪನಿರೀಕ್ಷಕ ನಿತ್ಯಾನಂದ(51) ಶಿರ್ವ ಗ್ರಾಮದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕಳೆದ 3 ವರ್ಷಗಳಿಂದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಸೆ.16ರಂದು ಬೆಳಗ್ಗೆ ಪಾಳಿ ಕರ್ತವ್ಯ ಮುಗಿಸಿ ವಿಶ್ರಾಂತಿಗೆ ತೆರಳಿದ್ದರು. ರಾತ್ರಿ ಮನೆಯಲ್ಲಿ ಊಟದ ನಂತರ ಮಲಗಿದ್ದ ಇವರು, ಬೆಳಗ್ಗೆ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು.ಮೃತರು ಪತ್ನಿ,

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಗ್ರಂಥಾಲಯ ಸಹಾಯಕಿಯಾಗಿದ್ದ ಹೇಮಲತಾ ನಿಧನ

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು, ಗ್ರಂಥಾಲಯ ಸಹಾಯಕಿಯಾಗಿದ್ದ ಶ್ರೀಮತಿ ಹೇಮಲತಾ (49) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಸೆ 2ರಂದು ನಿಧನ ಹೊಂದಿದರು. ಅವರು ಪತಿಯನ್ನು ಅಗಲಿದ್ದಾರೆ. ಕಳೆದ 10 ವರ್ಷಗಳಿಂದ ಅವರು ಕಾಲೇಜಿನ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ಮಹಾವೀರ ಕಾಲೇಜು ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.

ಮಂಗಳೂರು : ಹೆಸರಾಂತ ಗಣಪತಿ ವಿಗ್ರಹಗಳ ತಯಾರಕ ಹಾಲಾಡಿ ದಾಮೋದರ ಶೆಣೈ ನಿಧನ

ಮಂಗಳೂರು :- ಆವೇ ಮಣ್ಣಿನ ಹೆಸರಾಂತ ಗಣಪತಿ ವಿಗ್ರಹಗಳ ತಯಾರಕರಾದ ಹಾಲಾಡಿ ದಾಮೋದರ ಶೆಣೈ (ಗಣಪತಿ ಮಾಮು) ಇವರು ಇಂದು ಬೆಳಿಗ್ಗೆ ಗುಂಡು ರಾವ್ ಲೇನಿನ ಸ್ವಗ್ರಹದಲ್ಲಿ ನಿಧನರಾದರು ಇವರಿಗೆ 85ವರ್ಷ ಇವರು ಕಳೆದ 70ವರ್ಷಗಳಿಂದ ಆವೇ ಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರಿಸಿ ಡಾಕ್ಟರ್ ರಾಜ್ ಕುಮಾರ್ ಪ್ರಶಸ್ತಿ, ವೀರೇಂದ್ರ ಹೆಗ್ಡೆ ಅವರಿಂದ ಪ್ರಶಸ್ತಿ, ಪೇಜಾವರ ಸ್ವಾಮೀಜಿ ಇವರಿಂದ ಪ್ರಶಸ್ತಿ ಹಾಗೂ ಸನ್ಮಾನಗಳಿಸಿರುವರು. ಉತ್ತಮ ಕಲಾವಿದರಾದ ಇವರು ಸುಮಾರು 70

ಉಡುಪಿ: ಉಪತಹಸೀಲ್ದಾರ್ ಅಶ್ವಥ್ ಪಡುಬಿದ್ರಿ ನಿಧನ

ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾ‌ರ್ ಅಶ್ವಥ್ ಪಡುಬಿದ್ರಿ(41) ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರು ಕುಂದಾಪುರ, ಶೃಂಗೇರಿ, ಉಡುಪಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿರುವ ಇವರು, ಇಬ್ಬರು ಸಹೋದರಿ, ತಾಯಿ, ಅಜ್ಜಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೂಡುಬಿದಿರೆ : ಅರ್ಚಕ ಅಡಿಗಳ್ ಶ್ರೀನಿವಾಸ ಭಟ್ ನಿಧನ

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಹಿರಿಯ ಅರ್ಚಕ, ಶತಾಯುಷಿ ಅಡಿಗಳ್ ಶ್ರೀನಿವಾಸ ಭಟ್ (100) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 65 ವರ್ಷಗಳ ಕಾಲ ಸೋಮನಾಥೇಶ್ವರ ಹಾಗೂ ಸಪರಿವಾರ ದೇವರುಗಳ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

ಕಾರ್ಕಳ : ಟಿಪ್ಪರ್ ಬೈಕ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕಾರ್ಕಳ : ಟಿಪ್ಪರ್ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ನಗರ ಠಾಣೆ ವ್ಯಾಪ್ತಿ ಪುಲ್ಕೇರಿ ಎಂಬಲ್ಲಿ ನಡೆದಿದೆ.ಮೃತ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಹಲಕ್ಕೀಕೆರೆ ನಿವಾಸಿ ಕತ್ತರಿ ಸಾಣೆ ಇಮ್ತಿಯಾಜ್ ರವರ ಪುತ್ರ ನಿಜಾಮ್ (22)ಎಂದು ಗುರುತಿಸಲಾಗಿದೆ.ಕಾರ್ಕಳ ಸಾಣೂರು ನಿಂದ ತನ್ನ ಕೆಲಸಕ್ಕೆಂದು ಬೆಳಗ್ಗೆ 10.30ರ ಸುಮಾರಿಗೆ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಪುಲ್ಕೇರಿಯ ಬಳಿ ಮುಂದಿನಿಂದ ಹೋಗುತ್ತಿದ್ದ ರಿಕ್ಷಾವನ್ನು ಓವರ್ಟೇಕ್

ಮೂಡುಬಿದಿರೆ: ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್: ಉಸಿರುಗಟ್ಟಿ ಮೃತಪಟ್ಟ ಯುವಕ

ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್ ಆಗಿ ಸ್ನಾನಗೃಹದಲ್ಲಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.ಕೋಟೆಬಾಗಿಲಿನ ಪ್ಲಾಟ್ ಒಂದರಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ ( 18) ಎಂಬವನೇ ಮೃತಪಟ್ಟ ಯುವಕ.ಪ್ಲಾಟ್ ನಲ್ಲಿ ಶಾರಿಕ್ ಮತ್ತು ಆತನ ತಾಯಿ ವಾಸವಾಗಿದ್ದರು.ರಾತ್ರಿ ಶಾರಿಕ್ ಸ್ನಾನಕ್ಕೆಂದು ಹೋಗಿದ್ದ.ಆತ ಸ್ನಾನ ಮುಗಿಸಿಕೊಂಡು ಬರುವಾಗ ಯಾವತ್ತೂ ತಡವಾಗುತ್ತಿತ್ತೆಂದು ಆತನ