ಕಾರ್ಕಳ : ಕಾಂಗ್ರೇಸ್ ಪಕ್ಷ ಕಾರ್ಕಳ ಕ್ಷೇತ್ರದಲ್ಲಿ ಸೋತಿರಬಹುದು. ಮತ್ತೆ ಪಕ್ಷ ಬಲಪಡಿಸಿ ಕಾರ್ಯ ಮುಂದುವರೆಯಲಿದೆ. ಕಾರ್ಯಕರ್ತರ ದನಿಗೆ ಜೊತೆಯಾಗುವೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕಾರ್ಕಳ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಬಿಜೆಪಿ ಪಕ್ಷದ ಹಣಹಂಚಿ ವಾಮಮಾರ್ಗದ ಮೂಲಕ ಗೆದ್ದಿದೆ
ಕಾರ್ಕಳ: ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕಾರ್ಕಳ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಕಳ ತಾಲೂಕು ಕಚೇರಿ ಸಮೀಪದ ಬಂಗ್ಲೆಗುಡ್ಡೆ ಕೆಎಂಇಎಸ್ ಶಾಲೆ ಎದುರಿನ ನಿವಾಸಿ ನಸೀಬಾ ಬಾನು(33) ಎಂಬವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಮನೆಯ ಬಾವಿಗೆ ಬಿದ್ದಾಗ ಆಕೆಯ ಗಂಡ ಹುಸೇನ್ ಎಂಬವರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದರು.ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ
ಕಾರ್ಕಳ: ಅಪ್ರಾಪ್ತ ಬಾಲಕನೋರ್ವ ನಕಲಿ ಮತದಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆ ಬುಧವಾರ ರಾತ್ರಿ ನಡೆದಿದೆ. ಈ ಬಗ್ಗೆ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಸಂಚರಿಸಬೆಕಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪೊಲೀಸರ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,9061 ಮತದಾರರಿದ್ದು, ನಾಳೆ ಜರಗಲಿರುವ 29 ಮತಗಟ್ಟೆಗಳಿಗೆ ಚುನಾವಣೆ ಕರ್ತವ್ಯಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ಕಳಿಸಲು ಕಾರ್ಕಳ ಮಂಜುನಾಥ ಪೈ ಕಾಲೇಜಿನಿಂದ ವ್ಯವಸ್ಥೆ ಮಾಡಲಾಗಿದ್ದು ಬೆಳಗಿನಿಂದಲೇ ಪೆÇಲೀಸ್, ಅರೆ ಸೈನಿಕ ಪಡೆ, ಸ್ಥಳದಲ್ಲಿ ಹಾಜರಿದ್ದು, ಬೀಗು ಭದ್ರತೆಯೊಂದಿಗೆ ಚುನಾವಣೆ ಯಂತ್ರಗಳನ್ನು ಚುನಾವಣೆ ಕೇಂದ್ರಗಳಿಗೆ ಕಳುಹಿಸುವ ಕೆಲಸ
ಕಾರ್ಕಳ: ನೈಜ ಹಿಂದುತ್ವದ ಮೂಲಕ ಹಿಂದು ಕಾರ್ಯಕರ್ತರಿಗೆ ಧ್ವನಿಯಾಗುವ ನಾಯಕ , ಪ್ರಮಾಣಿಕತೆ ಸಾಕ್ಷಿಯಾಗಿರುವ ಪ್ರಮೋದ್ ಮುತಾಲಿಕ್ ಅವರನ್ನು ಗೆಲ್ಲಿಸುವಂತೆ ಖ್ಯಾತ ವಾಗ್ಮಿ ವಿಖ್ಯಾತ ರಾವ್ ಅವರು ಮನವಿ ಮಾಡಿಕೊಂಡರು. ಅವರು ಕಾರ್ಕಳ ತಾಲೂಕಿನ ಹೊಸ್ಮಾರ್ ನಲ್ಲಿ ನಡೆದ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ ವತಿಯಿಂದ ನಡೆದ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಸುನೀಲ್ ಕುಮಾರ್ ಪಕ್ಷ ವಿರೋಧಿಗಳ ಬಳಿ ಕಾಲು ಹಿಡಿಯುವ ಬದಲು ನೀವು
” ಕೊಲ್ಲುವ ಮನಸ್ಥಿತಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಒಂಬತ್ತು ಪುಟಗಳ ಕ್ರಿಮಿನಲ್ ಕೇಸುಗಳ ವರದಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ ಉಡುಪಿಯ ಶಾಸಕನಾಗುತ್ತಾನೆಂದರೆ ಅದು ಉಡುಪಿಯ ಸ್ವಾಭಿಮಾನದ ಪ್ರಶ್ನೆ.” ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ. ಅವರು ನಿನ್ನೆ ಪರ್ಕಳದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿ ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಕಳ : ಕಾರ್ಕಳದ ಇತಿಹಾಸ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಸ್ಥಾನದ ಒಳಗೆ ಬಾವಿಯನ್ನು ತೋಡಲು ರಫೀಕ್ ಎನ್ನುವ ಹಿಂದೂಯೇತರರಿಗೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸಚಿವ ಸುನೀಲ್ ಕುಮಾರ್ ಅವರು ಬಾವಿ ನಿರ್ಮಾಣ ಮಾಡಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ . ಅವರು ಕಾರ್ಕಳ ಪರಪ್ಪು ಸಮೀಪದ ಪಾಂಚಜನ್ಯಾ ತಮ್ಮ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಫೀಕ್ ಗೋ
ಕಾರ್ಕಳ : ಸಾರ್ವತ್ರಿಕ ಚುನಾವಣೆ ನಡೆಯುವ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ, ಕುಮ್ಮಕ್ಕಿನ ಮೇರೆಗೆ ಅವರ ಅನುಯಾಯಿಗಳು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ವಾತವರಣವನ್ನು ಕಳುಷಿತಗೊಳಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕುರಿತು ಕಾರ್ಕಳ ಬಿಜೆಪಿ ಅಧ್ಯಕ್ಷ. ಮಹಾವೀರ ಹೆಗ್ಡೆ ಚುನಾವಣಾಧಿಕಾರಿಗಳಿಗೆ ಮೇ 3ರಂದು ದೂರು ನೀಡಿದ್ದಾರೆ. ಕಾಂಗ್ರೆಸಿನ ಅಭ್ಯರ್ಥಿ ಉದಯ ಶೆಟ್ಟಿಯವರ ಅನುಯಾಯಿಗಳು, ಉದಯ
ಕಾರ್ಕಳ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ವೇಗವನ್ನು ಹೆಚ್ಚಿಸಿದೆ. ಇಂದು ಕಾರ್ಕಳದಲ್ಲಿ 210 ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಏಕಕಾಲದಲ್ಲಿ ಬೂತ್ ಮಟ್ಟದಲ್ಲಿ ಮತಯಾಚನೆಯಲ್ಲಿ ತೊಡಗಿದರು.
ಕಾರ್ಕಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ನರಸಿಂಹ ನಾಯಕ್ ಅವರ ಪುತ್ರ ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯಕ್ ಅವರು ಸುನಿಲ್ ಕುಮಾರ್ ರವರ ವಿಕಾಸ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.ಅವರ ಜೊತೆ ಹಲವರು ಕಾಂಗ್ರೆಸಿನ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡಿಕೊಂಡರು. ಸುನಿಲ್ ಕುಮಾರ್ ಅವರು ಬಿಜೆಪಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ



























