Home Posts tagged #moodabidre (Page 13)

ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ : ಧ್ವಜಸ್ತಂಭದ ಭವ್ಯ ಮೆರವಣಿಗೆ ವಾಹನ ಜಾಥಾ

ಮೂಡುಬಿದಿರೆ: ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ ದರೆಗುಡ್ಡೆ ಇಲ್ಲಿಗೆ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ಸುಳ್ಯದಿಂದ ತಂದಿರುವ ಕೊಡಿಮರವನ್ನು ಮೂಡುಬಿದಿರೆ ಜೈನ ಪ.ಪೂ.ಕಾಲೇಜು ಮೈದಾನದ ಬಳಿ ಸ್ವಾಗತಿಸಲಾಯಿತು. ನಂತರ ಕೊಂಬು, ಚೆಂಡೆ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೂಲಕ ಕಲಾ ತಂಡಗಳು,ಭಜನಾ ತಂಡಗಳೊಂದಿಗೆ ದರೆಗುಡ್ಡೆಗೆ ಹೊರಟ “ಧ್ವಜಸ್ತಂಭದ

ಮೂಡುಬಿದರೆ: ನ.10ರಂದು ಕಿಸಾನ್ ಸಂಘದಿಂದ ಬೃಹತ್ ಹಕ್ಕೊತ್ತಾಯ ಜಾಥಾ

ಮೂಡುಬಿದಿರೆ: ದ.ಕ ಜಿಲ್ಲೆಯ ರೈತರಿಗೆ ಕುಮ್ಕಿ ಹಕ್ಕಿಗೆ  ಆತನೇ ಹಕ್ಕುದಾರನೆಂದು ಘೋಷಿಸಿ ಹಕ್ಕುಪತ್ರವನ್ನು ನೀಡಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸಬೇಕೆಂದು  ಒತ್ತಾಯಿಸಿ ನ.10 ರಂದು ಮೂಡುಬಿದಿರೆ ತಾಲೂಕಿನಾದ್ಯಾಂತ ರೈತರ ಬೃಹತ್ ಹಕ್ಕೊತ್ತಾಯ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ.ಕ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಜಾಥದಲ್ಲಿ ಮೂಡುಬಿದಿರೆಯ 25

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ಮರದಿಂದ ಬಿದ್ದು ಸಾವು

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ಮೂರ್ತೆದಾರ ಮೃತಪಟ್ಟ ಘಟನೆ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ವರ್ಣಬೆಟ್ಟು ಪಂಜಿಗುರಿಯ ನಿವಾಸಿ ಸುರೇಶ್ ಪೂಜಾರಿ(42ವ) ಸಾವನ್ನಪ್ಪಿದ ವ್ಯಕ್ತಿ. ಇವರು ಮಧ್ಯಾಹ್ನದ ವೇಳೆಗೆ ಶೇಂದಿ ತೆಗೆಯಲೆಂದು ಮನೆಯ ಹಿಂಭಾಗದಲ್ಲಿದ್ದ ತಾಳೆ ಮರಕ್ಕೆ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿರುವುದರಿಂದ ಮನೆಯವರು ಹುಡುಕಿಕೊಂಡು

ಬಡಗಮಿಜಾರು : ಚಿರತೆ ದಾಳಿಗೆ ಕರು ಸಾವು

ಮೂಡುಬಿದಿರೆ: ಚಿರತೆಯೊಂದು ದನದ ಕರುವಿನ ಮೇಲೆರಗಿ ತಿಂದು ಸಾಯಿಸಿದ ಘಟನೆ ಬಡಗ ಮಿಜಾರಿನಲ್ಲಿ ನಡೆದಿದೆ.ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಪಂಜುರ್ಲಿ ಗುಡ್ಡೆಯ ದಿನೇಶ್ ಅವರ ಮನೆಯ ಒಂದೂವರೆ ತಿಂಗಳಿನ ಕರುಇದಾಗಿದೆ. ಇವರು ತೋಟದಲ್ಲಿ ಕರು ಮೇಯಲು ಕಟ್ಟಿದ್ದು ಅಲ್ಲಿಯೆ ಚಿರತೆ ಕರುವಿನ ಮೇಲೆರಗಿ ತಿಂದಿದೆ.ಮೂಡುಬಿದಿರೆ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಧನದ ಭರವಸೆಯನ್ನು ನೀಡಿದ್ದಾರೆ.

ಪುರಸಭಾಧಿವೇಶನಲ್ಲಿ ಸದಸ್ಯನಿಂದ ಅರೆನಗ್ನ ಪ್ರತಿಭಟನೆ

ಮೂಡುಬಿದಿರೆ: ತಾನು ನೀಡಿದ ಅಭಿವೃದ್ಧಿ ಕಾಮಗಾರಿಯ ಅರ್ಜಿ ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿ ಸದಸ್ಯ ಕೊರಗಪ್ಪ ಅವರು ಬಟ್ಟೆ ತೆಗೆದು ಅರೆನಗ್ನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಸೋಮವಾರ ಪುರಸಭೆಯಲ್ಲಿ ನಡೆಯಿತು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರಗಪ್ಪ ಅವರು ತಾನು ಅರ್ಜಿ ಕೊಟ್ಟಿರುವುದು ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿದರು. ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟಿಸಿರುವುದನ್ನು ಆಡಳಿತ ಪಕ್ಷದ ಸದಸ್ಯರು ತೀವೃವಾಗಿ

ಜೈನಕಾಶಿಗೆ ಆಗಮಿಸಿದ ಕೆಂಪೇಗೌಡ ರಥಯಾತ್ರೆ

ಮೂಡುಬಿದಿರೆ: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಲು ರಾಜ್ಯದೆಲ್ಲೆಡೆಯಲ್ಲಿ ಪವಿತ್ರ ಮಣ್ಣು ಮತ್ತು ಜಲ ಸಂಗ್ರಹಣೆ ವಿಶಿಷ್ಟ ಅಭಿಯಾನವನ್ನು “ಬನ್ನಿ ನಾಡ ಕಟ್ಟೋಣ” ಎಂಬ ಘೋಷ ವಾಕ್ಯದೊಂದಿಗೆ 15 ದಿನಗಳ ವರೆಗೆ ಹಮ್ಮಿಕೊಂಡ ರಥಯಾತ್ರೆಯು ಜೈನಕಾಶಿ ಮೂಡುಬಿದಿರೆಗೆ ಆಗಮಿಸಿತು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ತಾಲೂಕು

ಮೂಡುಬಿದರೆ ಸಾವಿರ ಕಂಬದ ಬಸದಿಯಲ್ಲಿ ಕೋಟಿ ಕಂಠ ಗಾಯನ

ಮೂಡುಬಿದಿರೆ: ದ.ಕ ಜಿಲ್ಲಾಡಳಿತ ವತಿಯಿಂದ ತಾಲೂಕು ಶಿಕ್ಷಣ ಇಲಾಖೆ ಮೂಡುಬಿದಿರೆ,ಮೂಡುಬಿದಿರೆ ಪುರಸಭೆ ಹಾಗೂ ತಾಲೂಕು ತಹಶೀಲ್ದಾರ್ ಇವುಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿಕಂಠ ಗಾಯನವು ಜೈನ್ ಪೇಟೆಯ ಸಾವಿರ ಕಂಬದ ಬಸದಿಯಲ್ಲಿ ನಡೆಯಿತು. ನಂತರ ಆರ್ಶೀವಾಚಿಸಿ ಮಾತನಾಡಿದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕನ್ನಡವನ್ನು ಭಾಷವಾರು ಕ್ರಾಂತಿಗಳ ವಿಭಜನೆಯಾಗುವ ಮೊದಲೇ ಉತ್ತಮ ಸಂಕಲ್ಪವನ್ನು ಮಾಡಿ, ಪ್ರಥಮವಾಗಿ ಕನ್ನಡ ಬಾಷೆಗೆ ಆದ್ಯತೆಯನ್ನು

ಮೂಡುಬಿದಿರೆ : ಪ್ರಾಕೃತಿಕ ವಿಕೋಪದಡಿಯಲ್ಲಿ ಹಾನಿಯಾದ ಸಂತ್ರಸ್ಥರಿಗೆ ಪರಿಹಾರ

ಮೂಡುಬಿದಿರೆ: ಪ್ರಾಕೃತಿಕ ವಿಕೋಪದಡಿಯಲ್ಲಿ ಹಾನಿಗೊಳಗಾಗಿರುವ ಮೂಡುಬಿದಿರೆ ತಾಲೂಕಿನ ಒಟ್ಟು 16 ಜನ ಸಂತ್ರಸ್ತರಿಗೆ ರೂ 7,10,700ರೂ. ಮೊತ್ತದ ಪರಿಹಾರದ ಚೆಕ್‌ನ್ನು ಶಾಸಕ ಉಮಾನಾಥ್ ಕೋಟ್ಯಾನ್ ಆಡಳಿತ ಸೌಧದಲ್ಲಿ ವಿತರಿಸಿದರು. ತಾಲೂಕು ತಹಶಿಲ್ದಾರ್ ಸತ್ಯಪ್ಪ ಸಚ್ಚಿದಾನಂದ ಕುಚನೂರು, ಪುರಸಭಾ ಸದಸ್ಯೆ ಸೌಮ್ಯ ಶೆಟ್ಟಿ ಈ ಸಂದರ್ಭದಲ್ಲಿದ್ದರು.

ಮೂಡುಬಿದರೆ: ದಸರಾ ಯೋಗೋತ್ಸವ ಸಮಾರೋಪ

ಮೂಡುಬಿದಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಪಿ.ಟ್ರಸ್ಟ್ (ರಿ), ಮೂಡುಸಿದಿರೆ ಇವುಗಳ ವತಿಯಿಂದ ತಾಲೂಕಿನ ೮೦ ಕೇಂದ್ರಗಳಲ್ಲಿ 7 ದಿನಗಳ ಕಾಲ ಏಕಕಾಲದಲ್ಲಿ ಅನುಭವಿ ಯೋಗ ಶಿಕ್ಷಕರಿಂದ ನಡೆದ ಯೋಗ ಶಿಬಿರ ದಸರಾ ಯೋಗೋತ್ಸವ’ವು ಪಾಲಡ್ಕ, ಬ್ರಹ್ಮಶ್ರೀ ನಾರಾಯಣಗುರು ಜಿಲ್ಲವ ಸಂಘದಲ್ಲಿ ಶನಿವಾರ ಸಮಾಪನಗೊಂಡಿತು.

ಬೆಳುವಾಯಿಯಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ: ಹಲವು ಸಮಸ್ಯೆಗಳು ಇತ್ಯರ್ಥ

ಮೂಡುಬಿದಿರೆ: ಇಲ್ಲಿನ ತಾಲೂಕು ತಹಶೀಲ್ದಾರ್ ತಾಲೂಕು ಸತ್ಯಪ್ಪ ಸಚ್ಚಿದಾನಂದ ಕುಚನೂರು ಅವರು ಬೆಳುವಾಯಿ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಹೂಡಿದರು. ಪಂಚಾಯತ್ ಅಧ್ಯಕ್ಷೆ ಸುಶೀಲಾ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಂಚಾಯತ್‌ನ ಮಾಜಿ ಅಧ್ಯಕ್ಷ ರಾಘು ಪೂಜಾರಿ ಮಾತನಾಡಿ, ಮನೆಗಳ ಬಳಿ ಮರಗಳಿಲ್ಲದಿದ್ದರೂ ಡೀಮ್ಸ್ ಫಾರೆಸ್ಟ್ ಎಂದು ಪಟ್ಟಿಯನ್ನು ಕೊಟ್ಟಿದ್ದಾರೆ, ಇದಲ್ಲದೇ