ತೆಂಕ ಎರ್ಮಾಳು ಎಂಬಲ್ಲಿ ಅಕ್ರಮವಾಗಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಮೂವರು ಸಹಿತ ಏಳು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಪಣಿಯೂರು ನಿವಾಸಿಗಳಾದ ಸುರೇಶ್, ಸುಕೇಶ್ ಹಾಗೂ ಕಾಪು ನಿವಾಸಿ ನಾಗೇಶ್ ಬಂಧಿತರು. ಬಹಳಷ್ಟು ಮಂದಿ ಪೊಲೀಸ್ ದಾಳಿಯ ವಿಷಯ ತಿಳಿದು ಪಲಾಯನ ಮಾಡಿದ್ದು ಅವರ ಗುರುತು ಪತ್ತೆಯಾಗಿದೆ. ಅವರನ್ನು ಶೀಘ್ರವಾಗಿ
ಪಡುಬಿದ್ರಿ: ಚಾಲಕನ ನಿಯಂತ್ರಣ ಕಳೆದುಕೊಂಡು ಢಿಕ್ಕಿಯಾದ ಕಾರು: ನಜ್ಜುಗುಜ್ಜಾದ ಕಾರು, ಪ್ರಯಾಣಿಕರು ಅಪಾಯದಿಂದ ಪಾರು ಅತೀ ವೇಗದ ಚಾಲನೆಯಿಂದಾಗಿ ನಿಯಂತ್ರಣ ಕಳೆದುಕೊಂಡ ಕಾರೊಂದು ಸರಣಿ ಢಿಕ್ಕಿಯಾಗಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆ ಪಡುಬಿದ್ರಿ ಸೇತುವೆ ಬಳಿ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ವಾಯುವೇಗದಲ್ಲಿ ಮುಂದೆ ಸಾಗಿ ತೆಂಗಿನ ಮರಕ್ಕೆ ಡಿಕ್ಕಿಯಾಗಿ ಅಲ್ಲಿಂದ ಹಿಮ್ಮುಖವಾಗಿ ಚಲಿಸಿ ಮತ್ತೊಂದು
ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನ ನಿಲುಗಡೆ ಪರಿಪಾಠ ಹೊಂದಿರುವ ಪಡುಬಿದ್ರಿ ಪೇಟೆ ಪ್ರದೇಶದಲ್ಲಿ ಟ್ಯಾಂಕರ್ ನಡಿಗೆ ಬಿದ್ದ ಯುವಕನೊರ್ವ ದಾರುಣವಾಗಿ ಮೃತಪಟ್ಟ ಘಟನೆ ಘಟಿಸಿದೆ. ಮೃತ ಯುವಕ ಪಡುಬಿದ್ರಿ ಕಂಚಿನಡ್ಕ ನಿವಾಸಿ ರಮೇಶ್ ಪೂಜಾರಿ ಎಂಬವರ ಪುತ್ರ ಪ್ರಜ್ವಲ್ ಪೂಜಾರಿ (19) ಈತ ಎಲ್ಲೂರಿನಲ್ಲಿ ಐಟಿಐ ಕೋರ್ಸ್ ನಡೆಸುತ್ತಿದ್ದು, ಇವರ ಸಂಬಂಧಿಗಳು ಮೃತಪಟ್ಟ ಹಿನ್ನಲೆಯಲ್ಲಿ ಈತನ ಮನೆಮಂದಿ ಕಿನ್ನಿಗೋಳಿಯ ಅಂಗರಗುಡ್ಡೆಗೆ ಹೋದ ಕಾರಣ ಈತನೂ ಅಲ್ಲಿಗೆ ಹೊರಟು
ಜನರಿಗೆ ಸಮಸ್ಯೆಯೊಡ್ಡುತ್ತಿರುವ ಸುಜ್ಲಾನ್ ಕಂಪನಿಯ ಸಮೀಪದ ಜೈಹಿಂದ್ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ಸಿಡಿದ್ದೇದ್ದ ಜನರು ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಇಪ್ಪತ್ತು ದಿನದೊಳಗೆ ಸಮಸ್ಯೆ ಇತ್ಯರ್ಥ ಮಾಡದೇ ಇದ್ದಲ್ಲಿ ಕಂಪನಿಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಪಡುಬಿದ್ರಿ-ಹೆಜಮಾಡಿ ಗಡಿಭಾಗದಲ್ಲಿ ಇರುವ ಈ ಕಂಪನಿಗೆ ಪರವಾನಿಗೆ ಯಾರು ನೀಡ ಬೇಕೆಂಬ ಸ್ಪಷ್ಟತೆ ಇಲ್ಲ, ಸ್ಥಳೀಯರು ಅವಳಿ ಗ್ರಾಮ
ಪರರ ನೋವಿಗೆ ಸ್ಪಂದಿಸುವ ಮನಸ್ಸು ನಮ್ಮಲ್ಲಿದ್ದರೆ ಜಾತಿ ಮತ ಭೇದಕ್ಕೆ ಜಾಗವೇ ಇಲ್ಲ ಎಂಬುದನ್ನು ಪಡುಬಿದ್ರಿಯ ಯುವಕರ ತಂಡವೊಂದು ತೋರಿಸಿಕೊಟ್ಟಿದ್ದಾರೆ. ಪುಟ್ಟ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗಾಗಿ ಬಣ್ಣ ಹಚ್ಚಿ ಅದರಿಂದ ಸಂಗ್ರಹಗೊಂಡ ಹಣನ್ನು ಆ ಮಗುವಿನ ಕುಟುಂಬಕ್ಕೆ ಹಸ್ತಾಂತರ ಮಾಡುವ ಮೂಲಕ ಸಾಭೀತು ಪಡಿಸಿದ್ದಾರೆ. ಮರವಂತೆಯ ಬಡ ಕುಟುಂಬದ ಶಂಕರ ಪೂಜಾರಿ ಎಂಬವರ ಏಳರ ಹರೆಯದ ಪುಟ್ಟ ಬಾಲೆ ವೈಷ್ಣವಿಗೆ ಕಾಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರಲ್ಲಿ
ನಾಮ್ಕಾವಸ್ಥೆಗೋ ಎಂಬಂತ್ತೆ ಸಮಾಜ ಕಲ್ಯಾಣ ಇಲಾಖೆ ಪಡುಬಿದ್ರಿಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಕೇಳಲಾದ ಪ್ರಶ್ನೆಗೆ ಸ್ವತಃ ಅಧಿಕಾರಿಗಳೇ ಉತ್ತರಿಸಲಾಗದೆ ತಡವರಿಸಿದ ಘಟನೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಉಡುಪಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆ ಜಂಟಿಯಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದ ಸಭಾ ವೇದಿಕೆಗೆ ಹಾಕಲಾದ ಬ್ಯಾನರ್ ನಲ್ಲಿ ಅಸಾಮಾನತೆಯ ಬದಲಿಗೆ ದಲಿತರನ್ನು ನಿಂದಿಸುವ ಶಬ್ದ ಬಳಕೆ ಮಾಡಿದ್ದು ಸರಿಯೆ… ಎಂದು
ಅಕ್ರಮವಾಗಿ ಪಿಡಬ್ಲ್ಯೂಡಿ ರಸ್ತೆಯಂಚಿನಲ್ಲಿ ನಿರ್ಮಾಣ ನಡೆಸುತ್ತಿದ್ದ ನಾಲ್ಕು ಕಟ್ಟಡ ಪ್ರದೇಶಕ್ಕೆ ಸ್ವತಃ ಪಿಡಬ್ಲ್ಯೂಡಿ ಅಧಿಕಾರಿಗಳೇ ಸ್ಥಳಕ್ಕೆ ಬಂದು ಪರಿಶೀಲಿಸಿ ಕಾಮಗಾರಿ ನಡೆಸದಂತೆ ಕಟ್ಟಡ ಕಾಮಗಾರಿ ತಡೆಯೊಡ್ಡಿದ ಘಟನೆ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಅಕ್ರಮಕ್ಕೆ ಸ್ವತಃ ಗ್ರಾ.ಪಂ. ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬುದಾಗಿ ಸಾರ್ವಜನಿಕ ಲಿಖಿತ ದೂರು ಜಿಲ್ಲಾಧಿಕಾರಿಗಳು ಸಹಿತ ಎಲ್ಲಾ ಇಲಾಖೆಗಳಿಗೂ ರವಾನೆ ಆಗಿದೆ. ಸದ್ಯಕ್ಕೆ
ಕಾಲುಗಳಿಗಿಲ್ಲ ತನ್ನ ಬೇಕು ಬೇಡಗಳನ್ನು ಪೂರೈಸುವ ಶಕ್ತಿ… ಆದರೆ ಜನರ ಉದ್ಧಾರಕ್ಕೂ ಎಂಬಂತೆ ತನ್ನೆಲ್ಲಾ ಸುಖ ಸಂತೋಷಗಳನ್ನು ಬದಿಗೊತ್ತಿ,.. ತನ್ನಲ್ಲಿ ಅಡಕವಾಗಿರುವ ನೋವುಗಳನ್ನು ಮರೆತು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಇದೀಗ ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಒಂದು ಮನೆಯಲ್ಲಿ ಜನರ ಸೇವೆಗೆ ಲಭ್ಯವಿದ್ದಾರೆ. ಕೇರಳ ಮೂಲದ “ಶೇಷಾನಂದ” ವಯಸ್ಸು ಕೇವಲ ಮೂವತ್ತ ನಾಲ್ಕು, ವಿದ್ಯಾಭ್ಯಾಸ ರಹಿತವಾಗಿರುವ ಇವರು ಕನ್ನಡ, ಹಿಂದಿ, ಮಲಯಾಳಂ ಸಹಿತ
ನಾಗಬನ ಮತ್ತು ಮನೆಯ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ನಡೆದಿದೆ. ಬಿಹಾರ -ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ. ಕರಂದಾಡಿ ದೇವಸ್ಥಾನದ ಬಳಿ ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿತ್ತು. ಇದರಿಂದಾಗಿ ಮೂವರು
ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಸಮಾಜದ ಆರ್ಥಿಕ ದುರ್ಬಲರಿಗೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸಹಾಯಧನವನ್ನು ಅಕ್ಟೋಬರ್ 1ರಂದು ವಿತರಿಸಲಾಗುವುದು ಎಂದು ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಅವರು ಪಡುಬಿದ್ರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸುಮಾರು ರೂ. 20 ಲಕ್ಷ