ಕನಸು ಯಾರಿಗಿಲ್ಲ,ಕೋಟಿ ಗಟ್ಟಲೆ ಆಸ್ತಿ ಮಾಡುವ ಕನಸಲ್ಲ ,ನಮ್ಮ ನಾಳೆಯ ಸುಂದರ ಕನಸಿಗಾಗಿ,ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಹೌದಲ್ವಾ,ಜೀವನ ತುಂಬಾ ಚಿಕ್ಕದು ಸುಂದರ ಜೀವನಕ್ಕಾಗಿ ಜೀವನವಿಡೀ ಕಷ್ಟಪಡುತ್ತಾ ಇದ್ದರೂ ಜೀವನಕ್ಕೆ ಸಾಕಾಗಲ್ಲ, ಎಷ್ಟೇ ದುಡಿದರೂ ದುಂದು ವೆಚ್ಚ ಆಗ್ತಾ ಇರುತ್ತೆ,ಹಣ ಕೈಯಲ್ಲಿ ಬರುತ್ತೆ ಅಷ್ಟೆ ವೇಗವಾಗಿ ಹೊರಟೋಗುತ್ತೆ, ಆಗ ನಮ್ಮ ಕನಸುಗಳು
ಕಡಬ :ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನವನ್ನು (Science Model) ಏರ್ಪಡಿಸಲಾಗಿತ್ತು.ಕುಮಾರಸ್ವಾಮಿ ಪಿ ಯು ಕಾಲೇಜ್, ಸುಬ್ರಮ್ಮಣ್ಯ ಇದರ ಪ್ರಾಂಶುಪಾಲರಾದ ಡಾ l ಸಂಕೀರ್ತ್ ಹೆಬ್ಬಾರ್ ಇವರು ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸುವುದರೊಂದಿಗೆ ವಿಜ್ಞಾನದ ಕುರಿತು ಸಂವಾದ ಕಾರ್ಯಕ್ರಮವನ್ನು
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಫೆ.4ರಂದು ರಾತ್ರಿ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.ಕೆಮ್ಮಿಂಜೆ ಬೈಲು ದಿ.ಪುರುಷೋತ್ತಮ ಎಂಬವರ ಪುತ್ರ ಚೇತನ್(46ವ)ರವರು ಮೃತಪಟ್ಟವರು. ಘಟನೆಯಿಂದ ಬೈಕ್‍ನಲ್ಲಿ ಸಹಸವಾರ ಮನೀಷ್(10ವ)ರವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ತೌಸಿಕ್ ಅವರು ಗಾಯಗೊಂಡಿದ್ದಾರೆ.
ಪುತ್ತೂರು : ಇದೇ ಜನವರಿ 28 ರಿಂದ ಫೆಬ್ರವರಿ 1 ರ ತನಕ ಉತ್ತರಾಖಂಡ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟಿಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಪುರುಷರ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್ ಇವರು ಆಯ್ಕೆಯಾಗಿದ್ದಾರೆ. ಖೋಖೋ ಕೋಚಿಂಗ್‌ನಲ್ಲಿ ಎನ್.ಐ.ಎಸ್ ಅರ್ಹತೆ ಇರುವ ತರಬೇತುದಾರರಾಗಿರುವ ಇವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಇವರು
ಕಡಬ ಸಿ.ಎ.ಕಡಬ, ಜ. 19 ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಮತ್ತೆ ಆಡಳಿತದ ಅಧಿಕಾರದ ಉಳಿಸಿಕೊಂಡಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿದ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್ ಕಲ್ಪುರೆ, ಸಾಲಗಾರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಇಲ್ಲಗೊಂಜಿ ಗೇನೊದ ಬಂಡಾರ’ ( ಮನೆಗೊಂದು ತುಳು ಗ್ರಂಥಾಲಯ) ಅಭಿಯಾನಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕೋಡಿಂಬಾಡಿಯ ಮನೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಅಕಾಡೆಮಿ ಪ್ರಕಟಿಸಿದ ಹಾಗೂ ಇತರ ತುಳು ಪುಸ್ತಕಗಳು ಸೇರಿದಂತೆ ಹತ್ತು ಸಾವಿರ ರೂಪಾಯಿ ಮೌಲ್ಯದ 150 ಕೃತಿಗಳನ್ನು ಖರೀದಿಸುವ ಮೂಲಕ ಅಶೋಕ್ ರೈ ಅವರು ‘ಇಲ್ಲಗೊಂಜಿ ಗೇನೊದ ಬಂಡಾರ’ ಅಭಿಯಾನಕ್ಕೆ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕೊಡಮಾಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಖ್ಯಾತ ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆಯಾಗಿದ್ದಾರೆ. ಪುತ್ತೂರು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಇವರು ಬಹುಮುಖ ಪ್ರತಿಭಾವಂತ ಯುವ ಸಾಧಕರು.ರಂಗ
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ವನ್ನು ಪಡೆದುಕೊಂಡಿರುತ್ತಾರೆ. ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ , ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನ ವನ್ನು ನೀಡಿ ಗೆಲುವಿಗೆ ಪಾತ್ರರಾದರು. ಹಿಬಾ ಉತ್ತಮ
ಬೈಂದೂರು: ಪ್ರಸ್ತುತ ರಾಜ್ಯದಲ್ಲಿ ಕೆಂಪು ಕಲ್ಲು ಲಭ್ಯತೆ ಇಲ್ಲದೆ ಅಥವಾ ಪೂರಕ ದಾಸ್ತಾನು ಇಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಡಕಾಗುತ್ತಿರುವುದು ಸರಕಾರದ ಗಮನದಲ್ಲಿದೆ. ಸಮರ್ಪಕವಾಗಿ ಜನಸಾಮಾನ್ಯರಿಗೆ ಕೆಂಪು ಕಲ್ಲು ಪೂರೈಕೆಗೆ ಸಹಕಾರಿ ಆಗುವಂತೆ ನಿಯಮದಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.ಉಡುಪಿ ಜಿಲ್ಲೆ ಸಹಿತ ಬೈಂದೂರು ವಿಧಾನಸಭಾ ಕ್ಷೇತ್ರ
ಸಮುದಾಯ ಅಭಿವೃದ್ಧಿಯ ಗುರಿಯೊಂದಿಗೆ ಯುವಕರಲ್ಲಿ ನಾಯಕತ್ವ ಗುಣ ತುಂಬಿಸಿ ಜೇಸಿ ಸಂಸ್ಥೆಯು ಸಮಾಜಮುಖಿ ಚಿಂತನೆ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಜೇಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷ ಚಂದ್ರಹಾಸ ರೈ ಹೇಳಿದರು.ಅವರು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಜೇಸಿಐ ಬೆಳ್ಳಾರೆ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಬೆಳ್ಳಾರೆ ಜೇಸಿಐ ಘಟಕದ 2025ನೇ




























