ಉಳ್ಳಾಲ :ಪ್ರಕರಣವೊಂದರ ಮಹಜರಿಗೆ ತೆರಳುವ ವೇಳೆ ಪೆÇಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ ರೌಡಿಶೀಟರ್ ಓರ್ವನಿಗೆಪೊಲೀಸ್ ಫೈರಿಂಗ್ ನಡೆದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ನಡೆದಿದೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 14 ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ನಡೆದಿದೆ. ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿ
ಯುಎನ್‍ಡಿಪಿ ಮತ್ತು ಎಎಲ್‍ಸಿ ಇಂಡಿಯಾ ಸಂಸ್ಥೆಯ ವತಿಯಿಂದ 5 ದಿನದ ಉದ್ಯಮಶಿಲತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಕುಂಪಲದಲ್ಲಿ ಉದ್ಘಾಟನೆಗೊಂಡಿತು. ಮಹಿಳಾ ಉದ್ಯಮಿ ಗಳನ್ನು ಪ್ರೋತ್ಸಾಹಿಸಿ ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದೊಂದಿಗೆ ಸ್ತ್ರೀ ಶಕ್ತಿ ಗುಂಪಿನ ಆಸಕ್ತ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿದರು. ನಾರಾಯಣ ಕುಂಪಲ ಅವರು
ಉಳ್ಳಾಲ: ಕಡಲ್ಕೊರೆತ ಶಾಶ್ವತ ತಡೆಗಾಗಿ ಸೀವಿಯರ್ ಬ್ರೇಕರ್ ಟೆಕ್ನಾಲಜಿ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಉಳ್ಳಾಲದ ಬಟ್ಟಪ್ಪಾಡಿಯಲ್ಲಿ ಹೊಸ ವಿಧಾನದ ಶಾಶ್ವತ ತಡೆಯನ್ನು ನಿರ್ಮಿಸಲು ಅನುಮತಿಯನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಅವರು ಕಡಲ್ಕೊರೆತಕ್ಕೀಡಾದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದ ಜತೆಗೆ ಮಾತನಾಡಿದರು.ಕಳೆದ ಬಾರಿ 800 ಮೀ ದೂರ ಕಡಲ್ಕೊರೆತ ಸಂಭವಿಸಿದ್ದರೆ ಈ
ಉಳ್ಳಾಲ: ರಾಜ್ಯದ ಏಳು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಿದ್ದು, ಇಲ್ಲಿ ಸಂಪೂರ್ಣ ಹಾನಿಗೀಡಾದ ಮನೆಯವರಿಗೆ ತಕ್ಷಣ ರೂ. 5 ಲಕ್ಷ ಪರಿಹಾರ ನೀಡುವಂತೆ ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಅವರು ಕಡಲ್ಕೊರೆತಕ್ಕೀಡಾದ ಉಳ್ಳಾಲ ತಾಲೂಕಿನ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಹಾಗೂ ಮೊಗವೀರಪಟ್ನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಹಾಗೂ ಮೀನುಗಾರಿಕಾ ಸಚಿವರುಗಳ ಜೊತೆಗೆ ಭೇಟಿ
ಸ್ವಾಮಿ ವಿವೇಕಾನಂದರು ಕಂಡಂತಹ ಭಾರತವನ್ನು ನಾವು ನಿರ್ಮಾಣ ಮಾಡುವತ್ತ ಮುಂದುವರಿಯಬೇಕಿದ್ದು ಪ್ರಸ್ತುತದ ದಿನಗಳು ದೇಶಾದ್ಯಂತ ಅದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಬೋಳಿಯಾರಿನ ಅಮರ್ ದೀಪ್ ಸಭಾಂಗಣದಲ್ಲಿ ಬೆಂಗಳೂರಿನ ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಸಾಂಸ್ಥಿಕ ಸಾಮಾಜಿಕ ಜವಬ್ದಾರಿ(ಸಮೈಸೂರುಆರ್ ) ಯಡಿಯಲ್ಲಿ ಚೇರ್
ಉಳ್ಳಾಲ: ಮಳೆಯಿಂದ ಹಾನಿಗೀಡಾದ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತುರ್ತು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಬೋರುಗುಡ್ಡೆ ಎರಡು ಮನೆಗಳ ಮೇಲೆ ಗುಡ್ಡೆ ಜರಿತವಾಗಿ ಹಾನಿ, ರೆಂಜಾಡಿಯ ಪಾಲೆದಡಿ ಮಸೀದಿ ಬಳಿ ಹಾನಿ, ಕೊಳಕೆಬೈಲ್ ಗುಡ್ಡ ಜರಿತ ಹಾಗೂ ಕಾನಕೆರೆ ಬಳಿ ಪೆಟ್ರೋಲ್ ಪಂಪ್ ಹಿಂಭಾಗದ ಒಂದು ಭಾಗ ಜರಿತ ಉಂಟಾಗಿದೆ. ಇವೆಲ್ಲವನ್ನು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ
ಉಳ್ಳಾಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡು ವ್ಯಾಪಕ ಹಾನಿಯುಂಟು ಮಾಡಿದೆ. ಒಂದು ರೆಸಾರ್ಟ್ ಸಂಪೂರ್ಣ ಸಮುದ್ರಪಾಲಾಗುವ ಹಂತದಲ್ಲಿದೆ. ಮೂರು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭಿಸಿದೆ. 1 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ 20 ಮನೆಮಂದಿಗೆ ಮುಖ್ಯ ರಸ್ತೆಯ ಸಂಪರ್ಕ ಕಡಿತವಾಗಿದೆ. ಸಿರಿಯಾ ಹಡಗು ಮುಳುಗಡೆಯೂ ಇದೇ
ಉಳ್ಳಾಲ: ದೇವಿ ಮಹಾಂಕಾಳಿಯನ್ನು ಅವಹೇಳನಕಾರಿಯಾಗಿ , ಹಿಂದೂಗಳ ಧಾರ್ಮಿಕ ಭಾವನಗಳಿಗೆ ಧಕ್ಕೆ ತರುವ ರೂಪದಲ್ಲಿ ಚಿತ್ರಿಸಿರುವ ಡಾಕ್ಯುಮೆಂಟರಿ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಸರಕಾರ ಶೀಘ್ರವೇ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಒತ್ತಾಯಿಸಿದ್ದಾರೆ. ದುಷ್ಟರನ್ನು ಸಂಹರಿಸುವ ದೇವಿ ಮಹಾಕಾಳಿ. ಹಿಂದೂಗಳು ಬಹಳಷ್ಟು ನಂಬುವ ದೇವಿಗೆ ಅವಹೇಳ ನಡೆಸಿರುವುದು ಸಮಸ್ತ ಹಿಂದೂ ಸಮಾಜಕ್ಕೆ
ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ಅಚ ವೈದ್ಯರ ದಿನಾಚರಣೆ ಪ್ರಯುಕ್ತ ನಿಸ್ವಾರ್ಥ ಸಾಧಕ ವೈದ್ಯ ಡಾ. ಗೋಪಾಲ್ ಅವರಿಗೆ ಸನ್ಮಾನಿಸಲಾಯಿತು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚೇರ್ ಮೆನ್ ಯು.ಕೆ. ಮೋನು ಸನ್ಮಾನಿಸಿ ಮಾತನಾಡಿ, ಸನಾತನ ಧರ್ಮದಲ್ಲಿ ಅನೇಕ ಮಹಾತ್ಮರನ್ನು ಇನ್ನಿತರ ಧರ್ಮದಲ್ಲೂ ಅವರ ಜನ್ಮ ದಿನದ ಮೂಲಕ ಭಾರತೀಯರಾದ ನಾವು ಕೊಂಡಾಡುತ್ತಿದ್ದು ಸೇವಾ ವೃತ್ತಿ
ದಕ್ಷಿಣ ಭಾರತದ ಅಜ್ಮಿರ್ ಎಂದೇ ಪ್ರಸಿದ್ಧಗೊಂಡ ಇತಿಹಾಸ ಪ್ರಸಿದ್ಧ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖುತುಬುಝಮಾನ್ ಸಯ್ಯದ್ ಶರೀಫುಲ್ ಮದನಿ ರವರ ಹೆಸರಲ್ಲಿ 21ನೇ ಉರೂಸ್ ಸಮಾರಂಭ ಡಿಸೆಂಬರ್ 23 ರಂದು ನಡೆಯಲಿದ್ದು, ಇದರ ಪ್ರಚಾರ ಸಮಾರಂಭ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಜನತಾದಳ ರಾಷ್ಟ್ರೀಯ ಕಾರ್ಯಾಧ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಬಿ. ಎಂ ಫಾರೂಕ್ ರವರು ಹಾಗೂ ಶಾಸಕರಾದ ಯು. ಟಿ ಖಾದರ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು, ಈ