Home Posts tagged #v4newskarnataka (Page 140)

ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಆಚರಣೆ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮ, ಸಡಗರಿಂದ ಆಚರಿಸಲಾಯಿತು.ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಗೌತಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಮ್.ಎಸ್. ಡಿಎಸ್‍ಎಮ್ ಕಿಶನ್ ಕುಮಾರ್, ಲಯನ್ 317 ಡಿ ಡಿಸ್ಟ್ರಿಕ್ ಸತೀಶನ್ ಡಿ, ಯುಎಸ್‍ಎಯ ಟೆಥರ್ಪಿಯ

ಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮನವಿ

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮೂಡುಬಿದಿರೆಯ ರಿಂಗ್ ರೋಡ್ ಪ್ರೀತಮ್ ಗಾರ್ಡನ್ ಬಳಿ, ಅಥವಾ ರಿಂಗ್ ರೋಡ್ ಒಂಟಿಕಟ್ಟೆ/ಅಲಂಗಾರ್ ಜಂಕ್ಷನ್ ನಲ್ಲಿ ಅವಕಾಶ ಮಾಡಿಕೊಡಬೇಕೆಂದು ಮೂಡುಬಿದಿರೆ ತಾಲೂಕು ಹಿಂದು ಜಾಗರಣಾ ವೇದಿಕೆಯು ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ,

ಸೆ.10 -11 ಬಿಎನ್‍ಐ ಮಂಗಳೂರು ಚಾಪ್ಟರ್‍ನ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ- 2022

ಬಿಎನ್‍ಐ ಮಂಗಳೂರು ಮೊದಲ ಆವೃತ್ತಿಯ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋವನ್ನು ಸೆಪ್ಟಂಬರ್ 10 ಮತ್ತು 11ರಂದು ಮಂಗಳೂರಿನ ಟಿಎಮ್‍ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸುತ್ತಿದ್ದು, ಒಟ್ಟು 80 ಸ್ಟಾಲ್‍ಗಳು ಎಕ್ಸ್‍ಪೋದಲ್ಲಿ ಪಾಲ್ಗೊಳ್ಳಲಿವೆ.ಬಿಎನ್‍ಐ ಕಳೆದ 37 ವರ್ಷಗಳಿಂದ 75 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ವ್ಯಾಪಾರ ಉಲ್ಲೇಖಿತ ಸಂಸ್ಥೆಯಾಗಿದೆ. ಇದೀಗ ಮಂಗಳೂರಿನಲ್ಲಿ ಮೊದಲ

ಇ-ಖಾತಾ ನೀಡಿಕೆ ಸರಳೀಕರಣ : ಮೇಯರ್ ಪ್ರೇಮಾನಂದ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆ ಆನ್‍ಲೈನ್ ನಲ್ಲಿ ಉದ್ದಿಮೆ ಪರವಾನಿಗೆ, ಆಸ್ತಿ ತೆರಿಗೆ ಆರಂಭಿಸಿದ ಬಳಿಕ ಇ-ಖಾತಾ ನೀಡಿಕೆಯನ್ನು ಡಿಎಂಡಿಎಸ್‍ನಿಂದ ಇ-ಗವರ್ನೆನ್ಸ್‍ಗೆ ವರ್ಗಾಯಿಸಿ ಇನ್ನಷ್ಟು ಸರಳೀಕರಣ ಮಾಡಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು. 2020ರಲ್ಲಿ ಜಾರಿಗೆ ಬಂದ ಇ-ಖಾತಾದಲ್ಲಿ ಕೆಲವೊಂದು ತಾಂತ್ರಿಕ ಆಡಚಣೆ ಹಿನ್ನೆಲೆಯಲ್ಲಿ ಖಾತಾ ನೀಡುವಲ್ಲಿ ವಿಳಂಬವಾಗಿತ್ತು. ಆದರೂ ಈಗಾಗಲೇ 23000 ಇ_ಖಾತಾಗಳನ್ನು ವಿತರಿಸಿ ರಾಜ್ಯದ

ಮೂಡುಬಿದಿರೆ : ಮಾರೂರಿನಲ್ಲಿ ನಿವೇಶನ ಹಂಚಿಕೆಯಲ್ಲಿ 6 ಫಲಾನುಭವಿಗಳಿಗೆ ತಡೆ

ಮೂಡುಬಿದಿರೆ: ಮಾರೂರು ಗ್ರಾಮದಲ್ಲಿ 36 ಫಲಾನುಭವಿಗಳ ಪೈಕಿ 30 ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಿ ಉಳಿದ 6 ಫಲಾನುಭವಿಗಳ ಅರ್ಜಿಯನ್ನು ತಡೆಹಿಡಿದ ಮಂಗಳೂರಿನ ಹೌಸಿಂಗ್ ಕನ್ಸಲ್ಟೆಂಟ್ ಅಧಿಕಾರಿ ಗಿರೀಶ್ ಅವರನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದರಲ್ಲದೆ ಈ ವಿಷಯವನ್ನು ನೀವು ಕೂಡ ಫಾಲೊಅಪ್ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಅವರಿಗೆ

ಪುತ್ತೂರು ಐಕ್ಯತಾ ಯಾತ್ರೆಗೆ ಚಾಲನೆ

ದೇಶದ ಐಕ್ಯತೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರು ವಯನಾಡು ಸಂಸದರು ರಾಹುಲ್ ಗಾಂಧೀಜಿಯವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 6 ತಿಂಗಳ ಕಾಲ ಸುಮಾರು 3574 ಕಿಮೀ ಭಾರತ ಐಕ್ಯತಾ ಯಾತ್ರೆ ಪಾದಯಾತ್ರೆ ಇಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿದೆ. ಈ ಯಾತ್ರೆಯ ಯಶಸ್ಸಿಗಾಗಿ ಸರ್ವ ಧರ್ಮಗಳ ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಡಿ ಕೆ ಶಿವಕುಮಾರ್ ಸೂಚನೆ ಮೇರೆಗೆ

ಸೇವಾ ಸಾಗರ ಟ್ರಸ್ಟ್ ನಿಂದ ನೂತನ ಕಟ್ಟಡ

ಸೇವಾಸಾಗರ ಟ್ರಸ್ಟ್ ಸಾಗರದ ನೂತನ ಕಟ್ಟಡದ ಶಿಲಾನ್ಯಾಸವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ಸೇವೆಗಾಗಿ ಸೇವಸಾಗರ ಟ್ರಸ್ಟ್ ಮುಂದೆ ಬಂದಿದ್ದು, ಇದೀಗ ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಹೆಚ್ ಹರತಾಳು ಹಾಲಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹರಾದ ಪಟ್ಟಾಭಿರಾಮ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್

ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಓಣಂ ಹಬ್ಬವನ್ನು ಸಂಭ್ರಮಿಸಿ

ಓಣಂ ಹಬ್ಬ ಕೇರಳದ ಜನರ ಪ್ರೀತಿಯ ಹಬ್ಬ,ಎಲ್ಲೆಡೆಯು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದ್ದು, ಮಂಜೇಶ್ವರದಲ್ಲಿರುವ ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಸಂಸ್ಕೃತಿ, ಸಂಪ್ರದಾಯದ ಪ್ರತಿರೂಪವೇ ಓಣಂ ಹಬ್ಬ. ಕೇರಳದ ಜನತೆ ಬಹಳ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಓಣಂ ಅನೇಕ ಆಸಕ್ತಿದಾಯಕ ಆಚರಣೆಗಳನ್ನು ಹೊಂದಿದೆ. ಅತ್ಯಂತ ವರ್ಣರಂಜಿತ ಓಣಂ ಆಚರಣೆಗಳಲ್ಲಿ ಒಂದು ಹೂವಿನ ರಂಗೋಲಿಗಳು

ನಾವುಂದ ಲಯನ್ಸ್ ಕ್ಲಬ್,ವೈದ್ಯರ ಕಾರ್ಯ ವೈಖರಿಗೆ ಶ್ಲಾಘನೆ

ವೈದ್ಯರ ಕಾರ್ಯ ವೈಖರಿಯನ್ನು ಗಮನಿಸಿ ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಆಯುರ್ವೇದಿಕ್ ಚಿಕಿತ್ಸಾಲಯ ಇಲ್ಲಿನ ಪಿಹೆಚ್‍ಸಿ ವೈದ್ಯರಾದ ವಿನಯ ವೈದ್ಯ ಸಾಕ್ಷಿಯಾಗಿದ್ದಾರೆ. ನಾಲ್ಕೈದು ಗ್ರಾಮಕ್ಕೆ ವಿನಯ ಡಾಕ್ಟರ್ ಎಂದರೆ ಹೆಸರುವಾಸಿ ನಗುಮುಖದಿಂದ ಚಿಕಿತ್ಸೆ ನೀಡುವ ವ್ಯಕ್ತಿತ್ವದ್ದು ಇವರದ್ದು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಲಯನ್ಸ್

ಗಂಟಾಲ್ ಕಟ್ಟೆ ಚರ್ಚಿನಲ್ಲಿ ಸಂಭ್ರಮದ ಮೊಂತಿ ಫೆಸ್ತ್

ಮೂಡುಬಿದಿರೆಯ ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ ಇಲ್ಲಿ ಮೊಂತಿ ಫೆಸ್ತ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರು ರೆ/ಫಾ ರೊನಾಲ್ಡ್ ಡಿ’ಸೋಜಾ ಹಾಗೂ ಅತಿಥಿ ಧರ್ಮಗುರು ರಾಕೇಶ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಹಬ್ಬದ ಸಂದೇಶವನ್ನು ನೀಡಿದರು. ನಂತರ ಮನೆ ಮನೆಗೆ ಭತ್ತವನ್ನು ನೀಡಲಾಯಿತು. ಧರ್ಮಗುರು ರಾಕೇಶ್ ಮಥಾಯಿಸ್ ಭಾಗವಹಿಸಿದ್ದರು.