Home Posts tagged #v4news (Page 10)

ಅನಾಥ ವೃದ್ಧರಿಗೆ ಆಶ್ರಯ ನೀಡೋರಿಲ್ಲ : ಜಿಲ್ಲಾಧಿಕಾರಿಗಳಿಗೆ ಮೊರೆ ಹೋದ ಸಾಮಾಜಿಕ ಕಾರ್ಯಕರ್ತರು

ಉಡುಪಿ: ಕೋಟ ಠಾಣಾ ವ್ಯಾಪ್ತಿಯಲ್ಲಿ 20 ದಿನಗಳ ಹಿಂದೆ ಕಾಲಿಗೆ ಗಾಯವಾಗಿ, ಅನಾರೋಗ್ಯ ಪೀಡಿತರಾಗಿ ಅನಾಥ ಸ್ಥಿತಿಯಲ್ಲಿದ್ದ ಹಿರಿಯ ವೃದ್ಧರನ್ನು ವಿಶು ಶೆಟ್ಟಿ ಅವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯ ಬಳಿಕ ಗುಣಮುಖರಾಗಿರುವ ಅವರನ್ನು ಎಲ್ಲಿಗೆ ಸೇರಿಸೋದು ಎಂಬ ಧರ್ಮ ಸಂಕಟ ಸಾಮಾಜಿಕ ಕಾರ್ಯಕರ್ತರನ್ನು ಕಾಡುತ್ತಿದೆ ! ವೃದ್ಧರನ್ನು

ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ‘ನನ್ನ ನಾಡು ನನ್ನ ಹಾಡು’ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಕರಾವಳಿಯ ವಿವಿಧ ಭಾಗಗಳಲ್ಲಿ ಅತ್ಯುತ್ತಮವಾಗಿ ನಡೆದಿದೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೋಟಿ ಕಂಠ ಗಾಯನ ‘ನನ್ನ ನಾಡು ನನ್ನ ಹಾಡು’ ಕಾರ್ಯಕ್ರಮ ಜರುಗಿತ್ತು. ಉಡುಪಿ ಅಪರ ಜಿಲ್ಲಾಧಿಕಾರಿಯಾದ ವೀಣಾ ಬಿ ಎಸ್,

ವರಾಹ ರೂಪಂ ಹಾಡಿಗೆ ತಡೆಯಾಜ್ಞೆ

ಬೆಂಗಳೂರು: ಕಾಂತಾರ ಸಿನಿಮಾ ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು. ಇದೀಗ ಈ ಹಾಡು ಬಳಸದಂತೆ ಕೋಯಿಕ್ಕೋಡ್ ಕೋರ್ಟ್ ಸೂಚನೆ ನೀಡಿರೋದು ಚಿತ್ರತಂಡಕ್ಕೆ ಬಿಗ್ ಶಾಕ್ ಕೊಟ್ಟಿದೆ. ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು

ಬಂಟ್ವಾಳದ ದಡ್ಡಲಕಾಡು ಶಾಲೆಯಲ್ಲಿ ಕೋಟಿಕಂಠ ಗಾಯನ

ಬಂಟ್ವಾಳ: ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಇಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್, ಪ್ರೌಢ ವಿಭಾಗದ ಅಧ್ಯಕ್ಷ ಪುರುಷೋತ್ತಮ್ ಅಂಚನ್ ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಉಪಾಧ್ಯಕ್ಷ ಬಾಲಕೃಷ್ಣ, ಎಸ್ ಡಿ ಎಂ ಸಿ ಸದಸ್ಯರಾದ ರಾಮಚಂದ್ರ, ರಾಜೇಶ್ ನೆಕ್ಕರೆ,ಮನ್ಮಥರಾಜ್ ಜೈನ್, ಪ್ರವೀಣ್ ಗೌಡ,ಸರಸ್ವತಿ, ಹರ್ಷಿತ, ಹರಿಣಾಕ್ಷಿ, ಮೌರಿಸ್ ಡಿಸೋಜ, ಮುಖ್ಯ

ತಲೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸಾವು

ಮಂಚಿ ಗ್ರಾಮದ ಮಣ್ಣಗುಳಿ ನಿವಾಸಿ ರತಿ ಕುಲಾಲ್‌ ಅವರ ಮಗಳು ಭವ್ಯಾ (20) ಮೃತಪಟ್ಟ ವಿದ್ಯಾರ್ಥಿನಿ. ವಿದ್ಯಾರ್ಥಿನಿಯು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಔಷಧ ಪಡೆದುಕೊಂಡಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಪೇಪರ್ ಸ್ಟೂಡೆಂಟ್ ತುಳು ಸಿನಿಮಾ – ಡಿಸೆಂಬರ್ 23ರಂದು ಸಿನಿಮಾ ಬಿಡುಗಡೆ

ಪ್ರಥಮ ಫಿಲಮ್ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ತಯಾರಾದ ವಾದಿರಾಜ ಕೆ ಉಪ್ಪೂರು ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ ಪೇಪರ್ ಸ್ಟೂಡೆಂಟ್ ತುಳು ಸಿನಿಮಾ ಡಿಸೆಂಬರ್ 23ರಂದು ಬೆಂಗಳೂರು, ಕರಾವಳಿ ಸೇರಿದಂತೆ ಮುಂಬೈ. ಗಲ್ಫ್ ರಾಷ್ಟಗಳಲ್ಲೂ ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ದೇಶಕ ವಾದಿರಾಜ್ ಕೆ ಉಪ್ಪೂರು ಅವರು ಮಾತನಾಡಿ ಪೇಪರ್ ಸ್ಟೂಡೆಂಟ್ ಎಂಬ ಚಲನಚಿತ್ರವು ಸ್ನೇಹ, ಪರಸ್ಪರ ನಂಬಿಕೆಯನ್ನು ಈ

ಡಿಸೆಂಬರ್ 20 ರ ವೇಳೆಗೆ ಪಿಂಚಣಿ ಬೇಡಿಕೆ ಈಡೇರದಿದ್ದರೆ ಶಾಲಾ-ಕಾಲೇಜು ಬಂದ್ ಮಾಡಿ ತೀವ್ರ ಹೋರಾಟ – ಪಿಂಚಣಿ ವಂಚಿತ ನೌಕರರ ಸಂಘದಿಂದ ಎಚ್ಚರಿಕೆ

ಬೆಂಗಳೂರು, ಅ, 17; ಅನುದಾನಿತ ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ನಿಶ್ಚಿತ ಪಿಂಚಣಿ, ಕಾಲ್ಪನಿಕ ವೇತನ , ಅನುದಾನಿತ ನೌಕರರಿಗೆ ಆರೋಗ್ಯ ಸಂಜೀವಿನಿ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಿಂಚಣಿ ವಂಚಿತ ನೌಕರರ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹ 11 ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ, ಅರೆಬೆತ್ತಲೆ ಪ್ರತಿಭಟನೆ, ರಕ್ತದಾನ ಮತ್ತಿತರ ವಿಧಾನಗಳ ಮೂಲಕ ಹೋರಾಟ ನಡೆಸಿರುವ ಸಂಘದ

ಪುತ್ತೂರಿನಲ್ಲಿ ಆಮ್ ಆದ್ಮಿ ಪಾರ್ಟಿ ಕಚೇರಿ ಉದ್ಘಾಟನೆ

ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಲಯ ಉದ್ಘಾಟನೆ ಮತ್ತು ಕಾರ್ಯಕರ್ತರ ಸಭೆ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‍ನಲ್ಲಿ ನಡೆಯಿತು. ಆಮ್ ಆದ್ಮಿ ಪಾರ್ಟಿ ದ.ಕ.ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ವೇಗವಾಗಿ ಬಲವರ್ಧನೆಗೊಳ್ಳಲಿದೆ ಎಂದು ಅವರು ಹೇಳಿದರು.ಎಎಪಿ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ ,

ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳ ಆಹ್ವಾನ

ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳ ಆಹ್ವಾನ ಮಂಗಳೂರು; ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ ವಾಚಕಿಯರ ಸಂಘವು 2022-23ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗಾಗಿ ಲೇಖಕಿಯರ ಕೃತಿಗಳನ್ನು ಆಹ್ವಾನಿಸಿದೆ. ನವೆಂಬರ್ 10ರೊಳಗೆ ಕೃತಿಗಳನ್ನು ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ. 1) ರಾಜ್ಯ ಮಟ್ಟದ `ಸಾರಾ’ ದತ್ತಿ ಪ್ರಶಸ್ತಿಗಾಗಿ ಉದಯೋನ್ಮುಖ ಬರಹಗಾರ್ತಿಯರ 2020ರ ನಂತರ ಪ್ರಕಟವಾÀದ ಮೊದಲ ಪ್ರಕಟಿತ ಕವನ ಸಂಕಲನ 2)

ಮಂಗಳೂರು ದಸರಾ ಮೆರವಣಿಗೆಗೆ ಕ್ಷಣಗಣನೆ

ಕರಾವಳಿಯೇ ಸಂಭ್ರಮ ಪಡುವ, ಜಗತ್ತಿನ ಕಣ್ಮನ ಸೆಳೆಯುವ ಅತ್ಯಾಕರ್ಷಕ ಹಾಗೂ ಲಕ್ಷಾಂತರ ಜನ ಸಮ್ಮಿಲನದ “ಮಂಗಳೂರು ದಸರಾ’ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ನೆಪದಿಂದ ಸಾಂಕೇತಿಕವಾಗಿ ಆಚರಣೆಯಾಗುತ್ತಿದ್ದ ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಮಂಗಳೂರು ದಸರಾ ನಡೆಯುತ್ತಿದೆ. ಕಳೆದ 9 ದಿನಗಳ ಕಾಲ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪ್ರತಿದಿನ ಪೂಜಾ ಕಾರ್ಯಕ್ರಮಗಳನ್ನು