Home Posts tagged #v4stream (Page 100)

ದ.ಕ ಜಿಲ್ಲೆ : 11 ಪಿಎಫ್ ಐ ನಾಯಕರ ಬಂಧನ

ದ.ಕ ಜಿಲ್ಲೆಯಾದ್ಯಂತ ಈವರೆಗೆ 11 ಪಿಎಫ್ ಐ ನಾಯಕರ ಬಂಧನ ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್, ಇಸ್ಮಾಯಿಲ್ ಬಜಪೆ, ನಜೀರ್ ಬಜಪೆ ಸೇರಿ 11 ಮಂದಿ ವಶಕ್ಕೆ ಮಂಗಳೂರು ಕಮಿಷನರೇಟ್ ಮತ್ತು ದ.ಕ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಸಿಆರ್ ಪಿಸಿ 107 ಮತ್ತು 151ರಡಿ ವಶಕ್ಕೆ ಪಡೆದ ಪೊಲೀಸರು ಪ್ರತಿಭಟನೆ ಮತ್ತು

ನಳಿನ್ ಕುಮಾರ್ ಕಟೀಲ್‍ಗೆ ಮೆದುಳು ಇದ್ಯೋ ಗೊತ್ತಿಲ್ಲ : ಎಂ.ಬಿ. ಪಾಟೀಲ್ ಕಿಡಿ

ರಾಜ್ಯ ಸರಕಾರದ ಇಲಾಖೆಗಳಲ್ಲಿ ಶೇ40 ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆ ದಾರರು ಪ್ರಧಾನಿ ಮೋದಿಗೆ ನೀಡಿದ ದೂರಿನ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶ ರ ಮೂಲಕ ತನಿಖೆ ನಡೆಯಲಿ’ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ‘ರಾಜ್ಯದಲ್ಲಿ 40 ಶೇ. ಕಮೀಷನ್ ಪಡೆಯುವ ಆರೋಪ ಹೊಂದಿರುವ ಇಲಾಖೆಗಳ ಮೇಲೆ ಐ.ಟಿ, ಇ.ಡಿ ದಾಳಿ ಏಕೆ ನಡೆಯುತ್ತಿಲ್ಲ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಜನಕ್ಕೆ

ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು : ದಸರಾಕ್ಕೆ ಅದ್ಧೂರಿ ಚಾಲನೆ

ಮಂಗಳೂರಿನ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ಇಂದು ಸಡಗರದಿಂದ ಚಾಲನೆ ಸಿಕ್ಕಿತ್ತು.ಕ್ಷೇತ್ರದ ದಸರಾ ದರ್ಬಾರು ಸ್ವರ್ಣಮಯ ಕಲಾ ಮಂಟಪದಲ್ಲಿ ನವದುರ್ಗೆಯರು ಹಾಗೂ ಗಣಪತಿ ದೇವರ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ, ನವರಾತ್ರಿ ಉತ್ಸವದ ವಿಶೇಷ ಆಕರ್ಷಣೆ ಹಾಗೂ 9 ದಿನಗಳ ಕಾಲ ವಿಶೇಷವಾಗಿ ಆರಾಧಿಸ್ಪಡುವ ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ, ಕೇಂದ್ರದ ಮಾಜಿ ಸಚಿವ

ಉಳ್ಳಾಲ : 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆ

ದೇರಳಕಟ್ಟೆ, : ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ)ಯ ವತಿಯಿಂದ ದೇರಳಕಟ್ಟೆಯ ‘ಕಣಚೂರು ಪಬ್ಲಿಕ್ ಸ್ಕೂಲ್’ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 15ರಂದು ನಡೆಯುವ ಉಳ್ಳಾಲ ತಾಲೂಕು 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕ, ಸಂಘಟಕ, ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆಯಾಗಿದ್ದಾರೆ. ಪರಿಚಯ: 1965ರ ಜುಲೈ 1ರಂದು ಬಿ.ಎಂ. ಅಬ್ದುಲ್ ರಹ್ಮಾನ್-ಖತೀಜಾ ದಂಪತಿಯ ಪುತ್ರನಾಗಿ ಜನಿಸಿದ ಬಿ.ಎ. ಮುಹಮ್ಮದ್ ಹನೀಫ್ ಬೆಳ್ತಂಗಡಿ ತಾಲೂಕಿನ

ಪುತ್ತೂರು : ಜೋಸ್ ಅಲುಕ್ಕಾಸ್ ಚಿನ್ನಾಭರಣ ಸಂಸ್ಥೆ ನಾಲ್ಕನೇ ವರ್ಷದ ಸಂಭ್ರಮ

ಹೆಸರಾಂತ ಸ್ವರ್ಣಾಭರಣ ಸಂಸ್ಥೆಯಾದ ಜೋಸ್‍ಅಲುಕ್ಕಾಸ್‍ನ ಪುತ್ತೂರಿನ ಶಾಖೆಯು ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿದ್ದು ಇದರ ವಾರ್ಷಿಕೋತ್ಸವ ಸಂಭ್ರಮವನ್ನು ಮಳಿಗೆಯಲ್ಲಿ ಆಚರಿಸಿದರು. ಕಾರ್ಯಕ್ರಮವನ್ನು ಪುತ್ತೂರು ವಿಧಾನಾಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಖ್ಯಾತ ತುಳು ಚಿತ್ರದ ನಟಿ ರಂಗ ಕಲಾವಿದೆ ಎಕ್ಕ ಸಕ್ಕ ಮತ್ತು ರಾಜ್ ಸೌಂಡ್ಸ್ ಖ್ಯಾತಿಯ ಚೈತ್ರ ಶೆಟ್ಟಿ ಹಾಗೂ ಈ ವರ್ಷದ

ಮಂಗಳೂರು : ವೆಂಕಟರಮಣ ದೇವರಿಗೆ ಸ್ವರ್ಣ ಕವಚ ಸಮರ್ಪಣೆ

ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಪೂಜಿಸಲ್ಪಡುವ ಶ್ರೀ ಮೂಲ ವೆಂಕಟರಮಣ , ಗೋಪಾಲಕೃಷ್ಣ ಹಾಗೂ ಹಯಗ್ರೀವ ದೇವರಿಗೆ ಸಮಾಜ ಭಾಂದವರಿಂದ ಸೇವಾರೂಪದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವರ್ಣ ಕವಚಗಳನ್ನು ನವರಾತ್ರಿಯ ಪರ್ವ ದಿನವಾದ ಇಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು ,

ಖಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಮಹಾಸಭೆ

ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಸ್.ಪ್ರಕಾಶ್‍ಚಂದ್ರ ಶೆಟ್ಟಿ ಮಾತನಾಡಿ ಸಾರ್ವಜನಿಕ ಸೇವೆಯಲ್ಲಿ ಸಂಘವು ವರ್ಷದಲ್ಲಿ ಎಲ್ಲ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ವರದಿ ವರ್ಷದಲ್ಲಿ ಸಂಘವು ರು.4.69ಕೋಟಿ ಲಾಭಗಳಿಸಿದ್ದು ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಿ, ತಾಲೂಕು ವ್ಯಾಪ್ತಿಗೆ

ಮೂಡುಬಿದರೆ : ಸ್ವಚ್ಛತಾ ಕಾರ್ಯಕ್ರಮ, ಸೆಂಚುರಿ ವಾರ ಪೂರೈಸಿದ ನೇತಾಜಿ ಬ್ರಿಗೇಡ್

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಡುಬಿದಿರೆಯನ್ನು ತ್ಯಾಜ್ಯ ಮುಕ್ತ ಸ್ವಚ್ಛ -ಸುಂದರ ನಗರವನ್ನಾಗಿಸಲು ಹೊರಟಿರುವ ನೇತಾಜಿ ಬಿಗ್ರೇಡ್ (ರಿ) ಸಂಘಟನೆಯು ದಸರಾ ಹಬ್ಬದ ಪ್ರಯುಕ್ತ ಭಾನುವಾರದಂದು ಸ್ವರಾಜ್ಯ ಮೈದಾನದಲ್ಲಿರುವ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆಯ ಕೈಂಕರ್ಯವನ್ನು ಕೈಗೊಂಡು ಸಂಚುರಿ (100) ವಾರವನ್ನು ಪೂರೈಸಿದೆ. ನೇತಾಜಿ

ಕಾರ್ಕಳ : ವಿಶ್ವ ಹೃದಯ ದಿನಾಚರಣೆ, ಹೃದಯಕ್ಕಾಗಿ ನಡಿಗೆ ,ಓಟ

ಕಾರ್ಕಳ ರೋಟರಿ ಕ್ಲಬ್ ರಾಕ್ ಸಿಟಿ ಡಾ. ಟಿಎಂಎ. ಆಸ್ಪತ್ರೆ ಕಾರ್ಕಳ ಇವರ ಆಶ್ರಯದಲ್ಲಿ ವಿಶ್ವ ಹೃದಯ ಆರೋಗ್ಯ ದಿನದ ಅಂಗವಾಗಿ ನೂರಾರು ಶಾಲಾ ವಿದ್ಯಾರ್ಥಿಗಳು ಹಲವಾರು ಸಂಘಟನೆಗಳು ಅನಂತಶಯನ ವೃತ್ತದಿಂದ ಕಾರ್ಕಳ ಬಂಡಿ ಮಠ ಬಸು ನಿಲ್ದಾಣದವರೆಗೆ ಹೃದಯಕ್ಕಾಗಿ ನಡಿಗೆ ಓಟವನ್ನು ಆಯೋಜಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾತನಾಡಿದ ಡಾ. ಭರತೇಶ್ ವಿಶ್ವದಾದ್ಯಂತ ವಿಶ್ವ ಹೃದಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಜಗತ್ತಿನಲ್ಲಿ 18

ಮಂಗಳೂರು ರಥಬೀದಿ ಶ್ರೀ ಶಾರದಾ ಮಹೋತ್ಸವ: ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ

ನಗರದ ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವದ ಪರ್ವ ಕಾಲದಲ್ಲಿ ಇಂದು (ಸೆ.26) ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ಹಸ್ತದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು. ಈ ಪುಣ್ಯಪ್ರದ ಸಂದರ್ಭದಲ್ಲಿ ಶ್ರೀ ಶಾರದಾ ಮಾತೆಗೆ ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಅಲ್ಲದೇ ಇತರ ಸ್ವರ್ಣಾಭರಣಗಳೊಂದಿಗೆ ಸರ್ವಾಲಂಕಾರಭೂಷಿತಳಾದ ಶ್ರೀ ಮಾತೆಗೆ ಆರತಿಯನ್ನು ಬೆಳಗಲಾಯಿತು.ಈ