ಉಳ್ಳಾಲ: ಲಾರಿ ಅಪಘಾತಕ್ಕೀಡಾಗಿ ಪಾದಚಾರಿ ಮುಳ್ಳೇರಿಯ ಆದೂರು ನಿವಾಸಿ ವಸಂತ್ ಕುಮಾರ್ ರೈ (55) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್ ಗೇಟ್ ಸಮೀಪ ಸೋಮವಾರ ಸಂಜೆ ಸಂಭವಿಸಿದೆ. ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟುವ ಸಂದರ್ಭ ಕೇರಳದ ಕಡೆಯಿಂದ ಅತಿವೇಗದಿಂದ ಧಾವಿಸುತ್ತಿದ್ದ ಕಲ್ಲು ಲೋಡ್ ಇದ್ದ
ಉಳ್ಳಾಲ: ಬಿಜೆಪಿಯವರ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಎದ್ದು ನಿಂತು ಹೋರಾಡಬೇಕು. ಚುನಾವಣೆ ಬರುವವರೆಗೂ ಕಾಯದೇ, ಈಗಿನಿಂದಲೇ ತಯಾರಾಗುವ ವಿಚಾರಗಳಾಗಲಿ. ವೋಟರ್ ಲಿಸ್ಟ್ ಸರಿಯಾಗಿದ್ದಲ್ಲಿ ಅಲ್ಲಿ ಯಶಸ್ವೀ ಕಾರ್ಯನಿರ್ವಹಿಸಲು ಸಾಧ್ಯ. ಡಿಲೀಷನ್ ಲಿಸ್ಟ್‍ನಲ್ಲಿ ಇರುವಂತಹ ಹೆಸರುಗಳನ್ನು ಕೌಂಟರ್ ಚೆಕ್ ಮಾಡಬೇಕಿದೆ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಂಗಳೂರು
ಉಳ್ಳಾಲ: ಹರೇಕಳ ಗ್ರಾಮಕ್ಕೆ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆ ಪೂರ್ತಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಚಿತ್ರವನ್ನು ರಚಿಸುವ ಮೂಲಕ ಗ್ರಾಮದ ಹೆಸರನ್ನು ಜಗತ್ತಿಗೆ ಪಸರಿಸಿದ ಅಕ್ಷರ ಸಂತನಿಗೆ ಗೌರವ ನೀಡಲಾಗಿದೆ. ಶಾಸಕರ ವಿಶೇಷ ಹಾಗೂ ವಿವಿಧ ಅನುದಾನದಡಿ ಹರೇಕಳ ಗ್ರಾಮಕ್ಕೆ ಬಾವಲಿಗುರಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಕಾಮಗಾರಿ ಇದೀಗ ಸಮಾರೋಪಾದಿಯಲ್ಲಿದ್ದು, ಶೀಘ್ರದಲ್ಲೇ
ಗೋವಿಗಾಗಿ ಮೇವು ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಮುಂದೆ ನಿಂತು ಅಶಾಂತಿಗೆ ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನ.6 ರಂದು ಸಂಜೆ 4.30 ರ ವೇಳೆಗೆ ಕುತ್ತಾರು ಮದನಿನಗರ ಜುಮಾ ಮಸೀದಿ ಎದುರುಗಡೆ ವಾಹನಗಳನ್ನು ನಿಲ್ಲಿಸಿದ ಕಿಡಿಗೇಡಿಗಳು ಮುಸ್ಲಿಂ ಬಾಂಧವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬಾವುಟವನ್ನು ಪ್ರದರ್ಶಿಸಿ ಶಾಂತಿಭAಗ ಹಾಗೂ
ಉಳ್ಳಾಲ: ತಲಪಾಡಿ ಆರ್ ಟಿ ಓ ಕಚೇರಿಗೆ ಲೋಕಾಯುಕ್ತ ಎಸ್.ಪಿ ಲಕ್ಷ್ಮೀಗಣೇಶ್ ನೇತೃತ್ವದ ತಂಡ ದಾಳಿ ನಡೆಸಿ ಸತತ ಮೂರು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಕೇರಳ – ಕರ್ನಾಟಕ ಗಡಿಭಾಗ ಮೇಲಿನ ತಲಪಾಡಿಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಲಪಾಡಿ ತನಿಖಾ ಠಾಣೆಗೆ ಲೋಕಾಯುಕ್ತ ದಾಳಿ ನಡೆಸಿದೆ. ಲಾರಿ ಚಾಲಕರಿಂದ ಲಂಚ ಪಡೆಯುವ ಆರೋಪಗಳು ಈ ಹಿಂದೆ ಹಲವು ಬಾರಿ ವ್ಯಕ್ತವಾಗಿತ್ತು. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ
ಉಳ್ಳಾಲ: ರಾ.ಹೆ. 66 ರಲ್ಲಿ ಸಂಚರಿಸುತ್ತಿದ್ದ ಸ್ಕೂಟರಿಗೆ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಹೊರಬರುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಜೆಪ್ಪು ತಂದೊಳಿಗೆ ನಿವಾಸಿ ಗಂಗಾಧರ್ (45 ಹಾಗೂ ಕೊಣಾಜೆ ಪಜೀರು ನಿವಾಸಿ ನೇತ್ರಾವತಿ(48) ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ಬಳಿ ಸಂಭವಿಸಿದೆ. ಸ್ಕೂಟರಿನಲ್ಲಿದ್ದ ಮೃತ ನೇತ್ರಾವತಿ ಅವರ ಮಗಳು ಮೋಕ್ಷಾ(4), ಹಾಗೂ ಅಕ್ಕನ ಮಗ ಜ್ಞಾನೇಶ್ ಗಂಭೀರ ಗಾಯಗೊಂಡಿದ್ದಾರೆ. ಗಂಗಾಧರ್ ಅವರು ಪರಿಚಯದ
ಮಸೀದಿಗೆ ನುಗ್ಗಿದ ಕಳ್ಳರು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿರುವ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬದ್ರಿಯಾ ಜುಮಾ ಮಸೀದಿ ಯಲ್ಲಿ ಘಟನೆ ನಡೆದಿದೆ. ಮಸೀದಿ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾರೆ. ಮಸೀದಿ ವಠಾರದಲ್ಲಿ ಅಳವಡಿಸಿದ್ದ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ಹಾಕಲಾಗಿದೆ. ಮಸೀದಿಯನ್ನು ದೋಚುವulala ಮುನ್ನ ಅಥವಾ ನಂತರ ಕಳ್ಳರು
ಉಳ್ಳಾಲ: ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಇಂದು ಮದ್ಯಾಹ್ನ ವೇಳೆ ಬೆಳಕಿಗೆ ಬಂದಿದೆ. ಪಿಲಾರು ನಿವಾಸಿ ಶಿವಾನಂದ ಪೂಜಾರಿ ಮೃತದೇಹ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರರೆ ಪತ್ನಿ ಶೋಭಾ ಪೂಜಾರಿ ಮೃತದೇಹ ಮನೆಯ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧ್ಯಾಹ್ನ ಪುತ್ರ ಕಾರ್ತಿಕ್ ಎಂಬವರು ತಾಯಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಮೀಪದ ಮಹಿಳೆಯಲ್ಲಿ
ವೃದ್ಧರೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ಧ ಅವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ಎಂಬಲ್ಲಿ ನಡೆದಿದೆ.ಉಚ್ಚಿಲ ನಿವಾಸಿ ನಾರಾಯಣ ಪೂಜಾರಿ(82) ಮೃತ ದುರ್ಧೈವಿ ಆಗಿದ್ದು, ಶುಕ್ರವಾರ ಸಂಜೆ ರಸ್ತೆ ದಾಟುತ್ತಿರುವಾಗ ಕೇರಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ನಾರಾಯಣ ಪೂಜಾರಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗಿದೆ
ಮಂಜೇಶ್ವರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿರುವ ಮಂಜೇಶ್ವರ ಗೋವಿಂದ ಪೈ ಕಾಲೇಜು ಹಾಗೂ ರಾಗಂ ಜಂಕ್ಷನ್ ಮಧ್ಯ ಅಂಡರ್ ಪಾಸ್ ನಿರ್ಮಿಸಬೇಕೆಂಬ ಬೇಡಿಕೆಯೊಂದಿಗೆ ಊರ ನಾಗರೀಕರು ಸಮಿತಿ ರಚಿಸಿ ಸಂಬಂಧಪಟ್ಟವರಿಗೆ ಮನವಿ ನೀಡಲು ತೀರ್ಮಾನಿಸಿದ್ದಾರೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಿರುವ ಹಾಗೂ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಸೇರಿದಂತೆ ಇತರ ಹಲವು ಶಾಲೆಗಳನ್ನು ಕೂಡಾ ಸಂಪರ್ಕದ ರಸ್ತೆ ಇರುವ ಗೋವಿಂದ ಪೈ ಕಾಲೇಜು, ಮತ್ತೊಂದು ಭಾಗದಲ್ಲಿ




























